ಮಗಳು ಪರಿಯ ಮುಖ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ ಮಿಲನಾ ನಾಗರಾಜ್‌; ಮುದ್ದು ಕಂದನನ್ನು ಪರಿಪರಿಯಾಗಿ ಹೊಗಳಿದ ಅಭಿಮಾನಿಗಳು - ವಿಡಿಯೋ-sandalwood news darling krishna milana nagaraj shared daughter pari video kannada film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮಗಳು ಪರಿಯ ಮುಖ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ ಮಿಲನಾ ನಾಗರಾಜ್‌; ಮುದ್ದು ಕಂದನನ್ನು ಪರಿಪರಿಯಾಗಿ ಹೊಗಳಿದ ಅಭಿಮಾನಿಗಳು - ವಿಡಿಯೋ

ಮಗಳು ಪರಿಯ ಮುಖ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ ಮಿಲನಾ ನಾಗರಾಜ್‌; ಮುದ್ದು ಕಂದನನ್ನು ಪರಿಪರಿಯಾಗಿ ಹೊಗಳಿದ ಅಭಿಮಾನಿಗಳು - ವಿಡಿಯೋ

ನಟಿ ಮಿಲನಾ ನಾಗರಾಜ್‌ ಸೆಪ್ಟೆಂಬರ್‌ 5 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿಯನ್ನು ಡಾರ್ಲಿಂಗ್‌ ಕೃಷ್ಣ ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ಈ ಜೋಡಿ ಮಗುವಿನ ಮುಖವನ್ನು ರಿವೀಲ್‌ ಮಾಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಗುವನ್ನು ಮನೆಗೆ ವೆಲ್‌ಕಮ್‌ ಮಾಡುವ ವಿಡಿಯೋವನ್ನು ಕೃಷ್ಣ ಹಂಚಿಕೊಂಡಿದ್ದಾರೆ.

ಮಗಳು ಪರಿಯ ಮುಖ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ ಮಿಲನಾ ನಾಗರಾಜ್‌; ಮುದ್ದು ಕಂದನನ್ನು ಪರಿಪರಿಯಾಗಿ ಹೊಗಳಿದ ಅಭಿಮಾನಿಗಳು - ವಿಡಿಯೋ
ಮಗಳು ಪರಿಯ ಮುಖ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ ಮಿಲನಾ ನಾಗರಾಜ್‌; ಮುದ್ದು ಕಂದನನ್ನು ಪರಿಪರಿಯಾಗಿ ಹೊಗಳಿದ ಅಭಿಮಾನಿಗಳು - ವಿಡಿಯೋ (PC: Darling Krishna Instagram)

ಸ್ಯಾಂಡಲ್‌ವುಡ್‌ ಜೋಡಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಮುದ್ದು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಸೆಪ್ಟೆಂಬರ್‌ 5 ರಂದು ಈ ಜೋಡಿ ತಮಗೆ ಮಗಳು ಜನಿಸಿದ ಸುದ್ದಿಯನ್ನು ಹಂಚಿಕೊಂಡಿದ್ದರು. ಆದಷ್ಟು ಬೇಗ ಮಗಳ ಮುಖ ತೋರಿಸಿ ಎಂದು ಫ್ಯಾನ್ಸ್‌ ಕೂಡಾ ಮನವಿ ಮಾಡಿದ್ದರು. ಇದೀಗ ಡಾರ್ಲಿಂಗ್‌ ಕೃಷ್ಣ ಮಗಳ ಮುಖವನ್ನು ರಿವೀಲ್‌ ಮಾಡಿದ್ದಾರೆ.

ಮಗಳನ್ನು ಮುದ್ದಾಗಿ ಪರಿ ಎಂದು ಕರೆಯುತ್ತಿರುವ ಜೋಡಿ

ಸಾಮಾನ್ಯವಾಗಿ ಸ್ಟಾರ್‌ಗಳು ತಮ್ಮ ಮಕ್ಕಳ ಫೋಟೋ/ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಮಕ್ಕಳಿಗೆ 2-3 ವರ್ಷವಾದ ನಂತರ ಅಪರೂಪಕ್ಕೆ ಎಂಬಂತೆ ಫೋಟೋ ಹಂಚಿಕೊಳ್ಳುತ್ತಾರೆ. ಇಲ್ಲವಾದರೆ ಮಗುವಿನ ಫೋಟೋಗೆ ಏನಾದರೂ ಎಮೋಜಿ ಜೋಡಿಸಿ ಶೇರ್‌ ಮಾಡುತ್ತಾರೆ. ಅದರೆ ಡಾರ್ಲಿಂಗ್‌ ಕೃಷ್ಣ ಜೋಡಿ ಅದ್ಯಾವುದನ್ನೂ ಮಾಡದೆ ನೇರಾ ನೇರ ಮಗುವಿನ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳಿಗೆ ಪರಿ ಎಂದು ಕರೆಯುತ್ತಿದ್ದಾರೆ. ನಮ್ಮ ಹೊಸ ಪ್ರಪಂಚಕ್ಕೆ ಸ್ವಾಗತ ಪರಿ ಎಂದು ಕೃಷ್ಣ, ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದಾರೆ.‌

ಕೇಕ್‌ ಕಟ್‌ ಮಾಡಿ ಮಗಳನ್ನು ಬರಮಾಡಿಕೊಂಡ ಕೃಷ್ಣ-ಮಿಲನಾ

ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆ ತರುವಾಗ ಸೆರೆ ಹಿಡಿದಿರುವ ವಿಡಿಯೋ ಇದು. ಈ ವಿಡಿಯೋದಲ್ಲಿ ಕೃಷ್ಣ ಮಗುವನ್ನು ಎತ್ತಿಕೊಂಡಿದ್ದಾರೆ, ಜೊತೆಗೆ ಮಿಲನಾ ನಾಗರಾಜ್‌ ಕೂಡಾ ಇದ್ದಾರೆ. ಗುಲಾಬಿ ಹೂವಿನ ದಳಗಳಿಂದ ಲವ್‌ ಎಮೋಜಿ ಬಿಡಿಸಿ PARI ಎಂದು ಇಂಗ್ಲೀಷ್‌ ಅಕ್ಷರಗಳಿಂದ ಸಿಂಗಾರ ಮಾಡಲಾಗಿದೆ. ಮನೆಗೆ ಬರುತ್ತಿದ್ದಂತೆ ಅವರ ಮುದ್ದು ನಾಯಿ ಕೂಡಾ ದಂಪತಿಯನ್ನು ಖುಷಿಯಿಂದ ಸ್ವಾಗತಿಸುತ್ತದೆ. ಅದೂ ಕೂಡಾ ಮಗುವನ್ನು ನೋಡಿ ಖುಷಿ ಪಡುತ್ತದೆ. ಕೃಷ್ಣ, ಮಗಳನ್ನು ತೊಡೆ ಮೇಲೆ ಮಲಗಿಸಿಕೊಂಡು ಅದನ್ನು ಮಾತನಾಡಿಸುತ್ತಾರೆ. ಮಗಳ ಕೆನ್ನೆ, ಗಲ್ಲ ಮುಟ್ಟಿ ಖುಷಿ ಪಡುತ್ತಾರೆ. ಕೇಕ್‌ ಕಟ್‌ ಮಾಡಿ ಸಂಭ್ರಮಿಸುತ್ತಾರೆ. ಶ್ವಾನಕ್ಕೂ ಕೇಕ್‌ ತಿನ್ನಿಸುತ್ತಾರೆ. ನಂತರ ಮಗಳನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ. ಒಟ್ಟಿನಲ್ಲಿ ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ ಇಬ್ಬರೂ ಮಗಳನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.

ಖುಷಿ ವ್ಯಕ್ತಪಡಿಸಿದ ಅಭಿಮಾನಿಗಳು

ಕೃಷ್ಣ ಮಿಲನಾ ನಾಗರಾಜ್‌ ಮಗಳ ವಿಡಿಯೋ ನೋಡಿ ನೆಟಿಜನ್ಸ್‌ ಬಹಳ ಖುಷಿ ವ್ಯಕ್ತಪಡಿಸಿದ್ದಾರೆ. ಜನರು ಸೆಲೆಬ್ರಿಟಿಗಳ ಮಕ್ಕಳ ಮುಖ ನೋಡಲು ಬಹಳ ಆಸೆ ಪಡುತ್ತಾರೆ. ಆದರೆ ಕೆಲವರು ರಿವೀಲ್‌ ಮಾಡುವುದಿಲ್ಲ. ಆದರೆ ನೀವು ಇಲ್ಲಿ ಕೂಡಾ ಸರಳತೆ ಮೆರೆದಿದ್ದೀರಿ. ಬಿಲ್ಡಪ್‌ ಕೊಡದೆ ಮಗಳ ವಿಡಿಯೋ ಹಂಚಿಕೊಂಡಿದ್ದೀರಿ, ನೀವು ನಿಜಕ್ಕೂ ಮಾದರಿ ಜೋಡಿ ಎಂದು ಹೊಗಳಿದ್ದಾರೆ. ಅಷ್ಟೇ ಅಲ್ಲ ಮಗುವಿನ ಮುದ್ದು ಮುಖ ನೋಡಿ ದಯವಿಟ್ಟು ದೃಷ್ಟಿ ತೆಗೆಯಿರಿ ಎಂದು ಮನವಿ ಮಾಡುತ್ತಿದ್ದಾರೆ. ಮಗು ಬಹಳ ಮುದ್ದಾಗಿದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

2021 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಲವ್‌ ಮಾಕ್‌ಟೇಲ್‌ ಕಪಲ್

2010 ರಲ್ಲಿ ತೆರೆ ಕಂಡ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಜಾಕಿ ಚಿತ್ರದ ಮೂಲಕ ಕೃಷ್ಣ, ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಚಿತ್ರದ ಒಂದು ಪಾತ್ರದಲ್ಲಿ ಕೂಡಾ ನಟಿಸಿದ್ದರು. ನಂತರ ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ ಕೃಷ್ಣ ನಾಯಕನಾಗಿ ಬಡ್ತಿ ಪಡೆದರು. ಮಿಲನಾ ನಾಗರಾಜ್‌ ನಮ್‌ ದುನಿಯಾ ನಮ್‌ ಸ್ಟೈಲ್‌ ಸಿನಿಮಾ ಮೂಲಕ ಬಂದವರು. ಆ ಚಿತ್ರದಲ್ಲಿ ಒಬ್ಬರಿಗೊಬ್ಬರು ಪರಿಚಯವಾದ ಜೋಡಿ ನಡುವೆ ಕ್ರಮೇಣ ಪ್ರೀತಿ ಚಿಗುರಿದೆ. 14 ಫೆಬ್ರವರಿ 2021 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

mysore-dasara_Entry_Point