Kaatera Trailer: ‌ಮಾಸ್‌+ ಕ್ಲಾಸ್+ ಎಮೋಷನ್ಸ್= ಕಾಟೇರ! ಟ್ರೇಲರ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ದರ್ಶನ್‌
ಕನ್ನಡ ಸುದ್ದಿ  /  ಮನರಂಜನೆ  /  Kaatera Trailer: ‌ಮಾಸ್‌+ ಕ್ಲಾಸ್+ ಎಮೋಷನ್ಸ್= ಕಾಟೇರ! ಟ್ರೇಲರ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ದರ್ಶನ್‌

Kaatera Trailer: ‌ಮಾಸ್‌+ ಕ್ಲಾಸ್+ ಎಮೋಷನ್ಸ್= ಕಾಟೇರ! ಟ್ರೇಲರ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ದರ್ಶನ್‌

ದರ್ಶನ್‌ ನಟನೆಯ ಕಾಟೇರ ಚಿತ್ರದ ಬಹುನಿರೀಕ್ಷಿತ ಟ್ರೇಲರ್‌ ಬಿಡುಗಡೆಯಾಗಿದೆ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕೈಯಿಂದ ಕಾಟೇರ ಚಿತ್ರದ ಟ್ರೇಲರ್‌ ಹೊರಬಂದಿದೆ. ಮಾಸ್‌ ಅವತಾರದಲ್ಲಿ ದರ್ಶನ್‌ ಅಬ್ಬರಿಸಿದ್ದಾರೆ.

Kaatera Trailer: ‌ಮಾಸ್‌+ ಕ್ಲಾಸ್+ ಎಮೋಷನ್ಸ್= ಕಾಟೇರ! ಟ್ರೇಲರ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ದರ್ಶನ್‌
Kaatera Trailer: ‌ಮಾಸ್‌+ ಕ್ಲಾಸ್+ ಎಮೋಷನ್ಸ್= ಕಾಟೇರ! ಟ್ರೇಲರ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ದರ್ಶನ್‌

Kaatera Trailer: ಕಾಟೇರ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಹಳೇ ದರ್ಶನ್‌ ಇಲ್ಲಿ ಹುಡುಕಿದರೂ ಕಾಣಸಿಗುವುದಿಲ್ಲ. ಬದಲಾಗಿ, ಹೊಸ ದರ್ಶನ್‌ ಇಲ್ಲಿ ಅಬ್ಬರಿಸಿದ್ದಾರೆ. ಕೇವಲ ಒಂದೇ ಪಾತ್ರವೇ ಇಡೀ ಟ್ರೇಲರ್‌ ಆಕ್ರಮಿಸಿಲ್ಲ. ಚಿತ್ರದ ಎಲ್ಲ ಪ್ರಮುಖ ಪಾತ್ರಗಳ ಝಲಕ್‌ಅನ್ನು ಟ್ರೇಲರ್‌ನಲ್ಲಿ ಭರ್ತಿಯಾಗಿ ತುಂಬಿಸಿದ್ದಾರೆ ನಿರ್ದೇಶಕರು. 70ರ ಕಾಲಘಟ್ಟದ ಕಥೆಯನ್ನು ಅದೇ ಶೈಲಿಯಲ್ಲಿ ಕಟ್ಟಿಕೊಟ್ಟ ಹೆಗ್ಗಳಿಕೆ ನಿರ್ದೇಶಕರಿಗೆ ಸಲ್ಲಬೇಕು.

ಸಿನಿಮಾ ಸೆಟ್ಟೇರಿದಾಗಲೇ ಇದೊಂದು ನೈಜ ಘಟನೆ ಆಧರಿತ ಸಿನಿಮಾ ಎಂದು ಸಿನಿಮಾ ತಂಡ ಹೇಳಿಕೊಂಡಿತ್ತು. ಅದರಂತೆ, ನೂರಾರು ಮನುಷ್ಯರ ಅಸ್ಥಿಪಂಜರ ಸಿಕ್ಕ ಕಥೆಯನ್ನೇ ಎಳೆಯನ್ನಾಗಿಸಿಕೊಂಡು, ಸಿನಿಮಾ ಮಾಡಿದ್ದಾರೆ ನಿರ್ದೇಶಕ ತರುಣ್‌ ಸುಧೀರ್.‌ ಆದರೆ, ನೈಜತೆಗೆ ಈ ಕಥೆ ಎಷ್ಟು ಹತ್ತಿರ ಎಂಬ ವಿಚಾರ ಸಿನಿಮಾ ರಿಲೀಸ್‌ ಆದ ಬಳಿಕವೇ ಗೊತ್ತಾಗಲಿದೆ.

ಭೀಮನಹಳ್ಳಿಯಲ್ಲಿ ಕುಲುಮೆನೇ ದೇವರು ಅಂದುಕೊಂಡಿರುವ ಕಥಾನಾಯಕನಿಗೆ, ಅದೇ ದೇವರು ಒಂದು ವರ ಕೊಟ್ಟಿರುತ್ತಾನೆ. ಸಾವಿರ ಮಚ್ಚು ನೂರು ಕಡೆ ತಯಾರಾದ್ರೂ, ಅದರಲ್ಲಿ ಆತ ಮಾಡಿದ ಮಚ್ಚು ಯಾವುದು ಅಂತ ಅಷ್ಟೇ ಸಲೀಸಾಗಿ ಗುರ್ತು ಹಿಡಿದು ಬಿಡ್ತಾನೆ ಆತ. ಆ ಮಚ್ಚಿನ ಕಥೆಯೇ ಅಚ್ಚರಿಯ ರೂಪದಲ್ಲಿ ಟ್ರೇಲರ್‌ನಲ್ಲಿ ಕಾಣಿಸಿದೆ. ಎರಡು ಹಳ್ಳಿಗಳ ದೃಶ್ಯವೈಭೋಗದ ಜತೆಗೆ, ಅಪ್ಪಟ ಕರುನಾಡ ಸೊಗಡಿನ ಕಥೆಯನ್ನೇ ಹಿಡಿದು ತಂದಿದ್ದಾರೆ ತರುಣ್‌ ಸುಧೀರ್.‌

ಪ್ರತಿ ಫ್ರೇಮ್‌ನಲ್ಲೂ ಒಂದಷ್ಟು ಹೊಸತನಗಳ ಗುಚ್ಛದ ಜತೆಗೆ ಕೌತುಕಕ್ಕೆ ಒಗ್ಗರಣೆ ಹಾಕುವ ಕೆಲಸವೂ ಟ್ರೇಲರ್‌ನಲ್ಲಿ ಕಾಣಿಸಿದೆ. ಒಂದಷ್ಟು ಪ್ರಶ್ನೆಗಳ ಹುಳವನ್ನು ತಲೆಯಲ್ಲಿ ಬಿಡುವುದರಲ್ಲಿಯೂ ಯಶಸ್ವಿಯಾಗಿದ್ದಾರೆ ನಿರ್ದೇಶಕರು. ಮೇಕಿಂಗ್‌ ವಿಚಾರದಲ್ಲೂ ಟ್ರೇಲರ್‌ ರಿಚ್‌ ಆಗಿಯೇ ಮೂಡಿಬಂದಿದೆ. ಸುಧಾಕರ್‌ ರಾಜ್‌ ಛಾಯಾಗ್ರಹಣ, ಹರಿಕೃಷ್ಣ ಹಿನ್ನೆಲೆ ಸಂಗೀತ, ಮಾಸ್ತಿಯ ಸಂಭಾಷಣೆ ಇಡೀ ಸಿನಿಮಾದ ಹೈಲೈಟ್.‌

ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಟೇರ ಸಿನಿಮಾದಲ್ಲಿ ಬಹುತಾರಾಗಣವೇ ಪ್ರಮುಖ ಆಕರ್ಷಣೆ.‌ ಚಿತ್ರದ ತಾರಾಗಣದಲ್ಲಿ ದರ್ಶನ್‌ ಜತೆಗೆ ತೆಲುಗಿನ ಜಗಪತಿ ಬಾಬು, ಶೃತಿ, ಕುಮಾರ್‌ ಗೋವಿಂದ್‌, ಆರಾಧನಾ, ಮಾಸ್ಟರ್‌ ಲೋಹಿತ್‌, ಅಚ್ಯುತ್‌ ಕುಮಾರ್‌, ಅವಿನಾಶ್‌ ಸೇರಿ ಇನ್ನೂ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ.

ಇದೆಲ್ಲದಕ್ಕಿಂತ ಹೆಚ್ಚಾಗಿ ನೈಜ ಘಟನೆ ಆಧರಿಸಿ ಈ ಸಿನಿಮಾ ಮೂಡಿಬಂದಿದ್ದು ಒಂದೆಡೆಯಾದರೆ, 1970ರ ಕಾಲಘಟ್ಟದಲ್ಲಿ ಇಡೀ ಸಿನಿಮಾ ಚಿತ್ರೀಕರಣಗೊಂಡಿದೆ. ಪಕ್ಕಾ ಲೋಕಲ್‌ ಹಳ್ಳಿ ಹೈದನಾಗಿ ದರ್ಶನ್‌ ಇಲ್ಲಿ ರಗಡ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಸದ್ಯ ಟ್ರೇಲರ್‌ ಮೂಲಕ ಧೂಳೆಬ್ಬಿಸುತ್ತಿರುವ ಈ ಸಿನಿಮಾ ಇದೇ 29ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

Whats_app_banner