ಕನ್ನಡ ಸುದ್ದಿ  /  ಮನರಂಜನೆ  /  ‘ಕಟ್ಕೊಂಡವಳಲ್ಲ, ಇಟ್ಕೊಂಡವಳ ಸಲುವಾಗಿ ದರ್ಶನ್‌ ಒಬ್ಬ ವ್ಯಕ್ತಿಯನ್ನ ಕೊಲ್ಲೋದು ಎಷ್ಟು ಸರಿ, ಯಾಕಿಷ್ಟು ಅಹಂ ನಿನಗೆ?’

‘ಕಟ್ಕೊಂಡವಳಲ್ಲ, ಇಟ್ಕೊಂಡವಳ ಸಲುವಾಗಿ ದರ್ಶನ್‌ ಒಬ್ಬ ವ್ಯಕ್ತಿಯನ್ನ ಕೊಲ್ಲೋದು ಎಷ್ಟು ಸರಿ, ಯಾಕಿಷ್ಟು ಅಹಂ ನಿನಗೆ?’

“ನಿನ್ನ ಸಿನಿಮಾಕ್ಕೆ ಹಣ ಹಾಕಿದ ನಿರ್ಮಾಪಕರಿಗೇ ನೀನು ಕೆಟ್ಟ ಪದ ಉಪಯೋಗಿಸುತ್ತೀಯಾ, ಇದೆಷ್ಟರ ಮಟ್ಟಿಗೆ ಸರಿ. ತಗಡು.. ಇನ್ನೊಂದಷ್ಟು ಪದ ಬಳಸೋದು ಶೋಭೆ ಅಲ್ಲ. ಆದರ್ಶಗಳು ಅಂತ ಬಂದಾಗ, ಡಾ. ರಾಜ್‌ಕುಮಾರ್‌ ಅವರು ನಿರ್ಮಾಪಕರನ್ನು ಅನ್ನದಾತ ಅಂತ ಕರೆದ್ರು” ಎಂದೂ ಸಾರಾ ಗೋವಿಂದು ದರ್ಶನ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಕಟ್ಕೊಂಡವಳಲ್ಲ, ಇಟ್ಕೊಂಡವಳ ಸಲುವಾಗಿ ದರ್ಶನ್‌ ಒಬ್ಬ ವ್ಯಕ್ತಿಯನ್ನ ಕೊಲ್ಲೋದು ಎಷ್ಟು ಸರಿ, ಯಾಕಿಷ್ಟು ಅಹಂ ನಿನಗೆ?’
‘ಕಟ್ಕೊಂಡವಳಲ್ಲ, ಇಟ್ಕೊಂಡವಳ ಸಲುವಾಗಿ ದರ್ಶನ್‌ ಒಬ್ಬ ವ್ಯಕ್ತಿಯನ್ನ ಕೊಲ್ಲೋದು ಎಷ್ಟು ಸರಿ, ಯಾಕಿಷ್ಟು ಅಹಂ ನಿನಗೆ?’

Sara Govindu on Darshan Thoogudeepa: ಗೆಳತಿ ಪವಿತ್ರಾ ಗೌಡ ವಿಚಾರವಾಗಿ ನಟ ದರ್ಶನ್‌ ಈ ಹಿಂದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂದಿಗೂ ಅದು ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೆ, ಸ್ವತಃ ಪತ್ನಿ ವಿಜಯಲಕ್ಷ್ಮೀ ಪವಿತ್ರಾ ಗೌಡ ನಡುವೆಯೂ ಸಮರ ನಡೆದಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ಇಲ್ಲಿಯವರೆಗೂ ಅದು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ನಡೆಯುತ್ತಿತ್ತು. ಇದೀಗ ಒಂದು ಕೈ ಮೇಲೆ ಹೋಗಿ ಒಂದು ಜೀವವೇ ಹೋಗುವ ಹಂತಕ್ಕೆ ಬಂದು ನಿಂತಿದೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ನಟ ದರ್ಶನ್‌ ಅಂಡ್‌ ಗ್ಯಾಂಗ್‌ ಹತ್ಯೆ ಮಾಡಿದ ಆರೋಪದ ಮೇಲೆ ಜೈಲು ಸೇರಿದೆ. ಈ ನಡುವೆ ರೇಣುಕಾಸ್ವಾಮಿ ಸಾಚಾ ಅಲ್ಲ, ನಟ ದರ್ಶನ್‌ ಮಾಡಿದ್ದೇ ಸರಿ ಎಂದು ಅವರ ಅಭಿಮಾನಿಗಳು ವಾದಿಸುತ್ತಿದ್ದರೆ, ಇನ್ನು ಕೆಲವರು ಕಾನೂನು ಕೈಗೆ ತೆಗೆದುಕೊಳ್ಳಬಾರದಿತ್ತು ಎಂದೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಇದೀಗ ಇದೇ ಪ್ರಕರಣದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಸಹ ಪ್ರತಿಕ್ರಿಯಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಿರ್ಮಾಪಕರಿಗೆ ತಗಡು ಅನ್ಬೋದಾ?

"ನಿನ್ನ ಸಿನಿಮಾಕ್ಕೆ ಹಣ ಹಾಕಿದ ನಿರ್ಮಾಪಕರಿಗೇ ನೀನು ಕೆಟ್ಟ ಪದ ಉಪಯೋಗಿಸುತ್ತೀಯಾ, ಇದೆಷ್ಟರ ಮಟ್ಟಿಗೆ ಸರಿ. ತಗಡು.. ಇನ್ನೊಂದಷ್ಟು ಪದ ಬಳಸೋದು ಶೋಭೆ ಅಲ್ಲ. ಆದರ್ಶಗಳು ಅಂತ ಬಂದಾಗ, ಡಾ. ರಾಜ್‌ಕುಮಾರ್‌ ಅವರು ನಿರ್ಮಾಪಕರನ್ನು ಅನ್ನದಾತ ಅಂತ ಕರೆದ್ರು. ಸೆಟ್‌ಗೆ ನಿರ್ಮಾಪಕ ಬರ್ತಾ ಇದ್ದಾರೆ ಅಂದ್ರೆ ಎದ್ದು ನಿಂತು ಗೌರವ ಕೊಡುತ್ತಿದ್ದರು. ನನ್ನ ಅನ್ನದಾತರು ಎಂದು ಹೇಳುತ್ತಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಬೇಸರ ಆಗುತ್ತೆ" ಎಂದಿದ್ದಾರೆ ಸಾರಾ ಗೋವಿಂದ್.‌

ಇಟ್ಕೊಂಡವಳಿಗಾಗಿ ಜೀವಕ್ಕೆ ಕುತ್ತು

"ನಟ ದರ್ಶನ್‌ ತುಂಬ ಒಳ್ಳೆಯ ಮನುಷ್ಯ. ಮಾನವೀಯತೆಯ ಎಲ್ಲವೂ ಇದೆ. ಯಾಕೆ ಬದಲಾವಣೆ ಆದೆ? ಯಾಕೇ ಈ ಅಹಂ ಬಂತು. ಯಾಕೆ ನಾನೇ ಎಂದೆ? ಒಂದು ಹೆಣ್ಣಿಗೋಸ್ಕರ.. ಅದು ಕಟ್ಕೊಂಡವಳಲ್ಲ, ಇಟ್ಕೊಂಡವಳ ಸಲುವಾಗಿ ಒಂದು ಜೀವಕ್ಕೆ ಕುತ್ತು ತಂದ್ರಲ್ಲ. ಇದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ. ಸಮಾಜ ಏನು ಹೇಳುತ್ತೆ. ಬೇಕಾದಷ್ಟು ಅಭಿಮಾನಿಗಳು ನಿಮ್ಮ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಾಗುತ್ತ? ಅಷ್ಟು ಹೆಮ್ಮರವಾಗಿ ಬೆಳೆದಿದ್ದೀರಿ, ಯಾಕೆ ಇಷ್ಟು ಅಹಂ ನಿಮಗೆ?" ಎಂದು ಪ್ರಶ್ನೆ ಮಾಡಿದ್ದಾರೆ.

ನೀನು ಸರಿಹೋಗಬೇಕು ಎಂಬುದು ಎಲ್ಲರ ಆಸೆ...

"ಅಭಿಮಾನಿಗಳು ದೂರ ಆಗಲ್ಲ ಬಿಡಿ, ಏಕೆಂದರೆ ಅವರಿಗೂ ಅಹಂ ಬಂದಿದೆ. ದೊಡ್ಡವರು ಏನೇ ಮಾತನಾಡಿದರೂ, ಬಾಯಿಗೆ ಬಂದಂತೆ ಮಾತನಾಡುವಷ್ಟು ಲೆವೆಲ್‌ಗೆ ಬೆಳೆದಿದ್ದಾರೆ. ದರ್ಶನ್‌ ನಿಮ್ಮ ಅಭಿಮಾನಿಗಳಿಗೋಸ್ಕರ, ನೀನು ಸರಿಹೋಗಬೇಕು ಎಂಬುದು ನಮ್ಮ ಆಸೆ. ನಾಲ್ಕು ಜನ ನಾಲ್ಕು ಥರ ಮಾತನಾಡಿದ್ರೆ, ಅದನ್ನೆಲ್ಲ ನೀವು ಗಂಭೀರವಾಗಿ ತೆಗೆದುಕೊಂಡು ಅವರಿಗೆ ಫೋನ್‌ ಮಾಡಿ ಧಮ್ಕಿ ಹಾಕುವುದು ಏಕೆ?" ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಾರಾ ಗೋವಿಂದು.