‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ’; ಕೊನೆಗೂ ದರ್ಶನ್‌ ಬಾಯಿಂದ ಬಂತು ಆ ಮಾತು
ಕನ್ನಡ ಸುದ್ದಿ  /  ಮನರಂಜನೆ  /  ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ’; ಕೊನೆಗೂ ದರ್ಶನ್‌ ಬಾಯಿಂದ ಬಂತು ಆ ಮಾತು

‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ’; ಕೊನೆಗೂ ದರ್ಶನ್‌ ಬಾಯಿಂದ ಬಂತು ಆ ಮಾತು

ಕೆಲ ದಿನಗಳ ಹಿಂದಷ್ಟೇ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಪವಿತ್ರಾ ಗೌಡ ವಿರುದ್ಧ ತಿರುಗಿ ಬಿದ್ದಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಇವರಿಬ್ಬರ ನಡುವಿನ ಸಮರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಇದೇ ಕಾಂಟ್ರವರ್ಸಿ ಬಗ್ಗೆ ದರ್ಶನ್‌ ಮಾತನಾಡಿದ್ದಾರೆ.

‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ’; ಕೊನೆಗೂ ದರ್ಶನ್‌ ಬಾಯಿಂದ ಬಂತು ಆ ಮಾತು
‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ’; ಕೊನೆಗೂ ದರ್ಶನ್‌ ಬಾಯಿಂದ ಬಂತು ಆ ಮಾತು

Darshan: ಸಿನಿಮಾರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ನಟ ದರ್ಶನ್‌ಗೆ ವಿಶೇಷ ಅಭಿನಂದನಾ ಸಮಾರಂಭ ನಡೆಯಿತು. ಸ್ಯಾಂಡಲ್‌ವುಡ್‌ನ ಹಿರಿ ಕಿರಿ ಕಲಾವಿದರು, ಆಪ್ತರು ಒಂದೆಡೆ ಸೇರಿ, ನಟ ದರ್ಶನ್‌ಗೆ ವಿಶೇಷ ಸನ್ಮಾನ ಮಾಡಿದರು. ಅದ್ಧೂರಿ ಕಾರ್ಯಕ್ರಮದಲ್ಲಿ ದರ್ಶನ್‌ ಅವರ ಸಿನಿಮಾ ಹಾಡುಗಳಿಗೆ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಹೆಜ್ಜೆ ಹಾಕಿ ನೆರೆದಿದ್ದವರನ್ನು ರಂಜಿಸಿದರು. ಹಳೇ ಘಟನೆಗಳು, ಚಿತ್ರರಂಗದ ಆರಂಭದ ದಿನಗಳು ಸೇರಿ ಇತ್ತೀಚಿನ ಕೆಲ ವಿವಾದಗಳ ಬಗ್ಗೆಯೂ ದರ್ಶನ್‌ ಮಾತನಾಡಿದರು.

ಮೊದಲು ಅವಮಾನಗಳೇ ಸಿಗೋದು. ಆಮೇಲೆ ಸನ್ಮಾನ ಸಿಗೋದು. ಚಪ್ಪಲಿಯಲ್ಲಿ ಹೊಡೆದ್ರು, ಪರವಾಗಿಲ್ಲ. ಹೊಡೀರಿ. ಹೂವು ಹಾಕಿಸಿಕೊಳ್ಳುವಾಗಲೂ ಅಷ್ಟೇ ಹೆಮ್ಮೆಯಿಂದ ಹಾಕಿಸಿಕೊಳ್ಳಲ್ವಾ ಹಾಗೇ. ಅದನ್ನೂ ಅದೇ ರೀತಿ ಸ್ವೀಕರಿಸೋಣ. ನನ್ನಷ್ಟು ಕಾಂಟ್ರವರ್ಸಿ ಬೇರಾರು ಮಾಡಿಕೊಂಡಿಲ್ಲ. ನಾನು ಬ್ಯಾಡ್‌ ಬಾಯ್ ಎಂದೂ ದರ್ಶನ್‌ ಹೇಳಿಕೊಂಡರು. ಈ ನಡುವೆ ಕೆಲಸದ ವಿಚಾರವನ್ನು ದರ್ಶನ್‌ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಅವರು ನೀಡಿದ ಉತ್ತರ ಹೀಗಿದೆ.

ಇವತ್ತು ಇವಳು, ನಾಳೆ ಅವಳು

‘ಚಿತ್ರರಂಗ, ರಾಜಕೀಯ, ಬಿಜಿನೆಸ್‌ ಯಾವುದೇ ಆಗಿರಲಿ ಶ್ರಮ ಹಾಕಲೇಬೇಕು. ನನಗೆ ನನ್ನ ಕೆಲಸ, ನನ್ನ ನಿರ್ಮಾಪಕರಷ್ಟೇ ಇಂಪಾರ್ಟೆಂಟ್‌. ಕೆಲಸದ ವಿಚಾರದಲ್ಲಿ ಫ್ಯಾಮಿಲಿ, ಎಲ್ಲವನ್ನೂ ಬದಿಗಿಟ್ಟು ಇದಕ್ಕೆ ನಿಲ್ತಿನಿ. ನನಗೆ ಸಿನಿಮಾ, ಆ ಸಿನಿಮಾನ ಪ್ರೀತಿಸುವ ನನ್ನ ಸೆಲೆಬ್ರಿಟಿಗಳಷ್ಟೇ ನನಗೆ ಮುಖ್ಯ. ಬೇರೆ ಯಾವುದರ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾಳೆ. ನಾನ್ಯಾಕೆ ತಲೆ ಕೆಡಿಸಿಕೊಂಡು, ಕೂತ್ಕೊಳ್ಳಲಿ ಹೋಗ್ರಯ್ಯ. ನನಗೆ ನನ್ನ ಸಿನಿಮಾ. ನನ್ನ ಮೇಲೆ ದುಡ್ಡು ಹಾಕಿದ ನಿರ್ಮಾಪಕರು, ನಿರ್ದೇಶಕರು ಅವರಿಗಷ್ಟೇ ನಾನು ಸೀಮಿತ.

ಪವಿತ್ರಾ ಗೌಡ ಬಗ್ಗೆ ಪರೋಕ್ಷ ಮಾತು

ಪವಿತ್ರಾ ಗೌಡ ಮತ್ತು ಪತ್ನಿ ವಿಜಯಲಕ್ಷ್ಮೀ ಅವರ ಬಗ್ಗೆಯೂ ಪರೋಕ್ಷವಾಗಿಯೇ ಮಾತನಾಡಿದ್ದಾರೆ ದರ್ಶನ್. "ಇದೆಲ್ಲದಕ್ಕೂ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ಹೌದೋ ಅಲ್ವೋ. ಇಲ್ಲಾಂದ್ರ 25 ವರ್ಷ ಇಲ್ಲಿಯವರೆಗೂ ಬರೋಕೆ ಆಗ್ತಿರಲಿಲ್ಲ. ನಾನು ಇಷ್ಟ ಪಟ್ಟು, ಕಷ್ಟಪಟ್ಟು ಮಾಡ್ತಿರೋ ಕೆಲಸ ಇದು. ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾಳೆ. ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದಿದ್ದಾರೆ ದರ್ಶನ್‌ ಹೇಳಿದ್ದಾರೆ. ಈ ಮೂಲಕ ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವೆ ಸಮರವೇ ನಡೆದಿತ್ತು. ಇದೀಗ ಇದೇ ಜಗಳದ ಬಗ್ಗೆ ಪರೋಕ್ಷವಾಗಿಯೇ ಪ್ರತಿಕ್ರಿಯಿಸಿದ್ದಾರೆ ದರ್ಶನ್.‌

ನಾನು ಟಾಂಗಾ ಕುದುರೆ

"ಯಾವುದೋ ಟಾಂಗಾಗೆ ಕಟ್ಟಿದ ಕುದುರೆ, ಟಕು ಟಕು ಟಕು ಅಂತ ಹೋಗ್ತಾಯಿತ್ತು. ಆ ಕುದುರೆಯನ್ನ ಯಾರೋ ನೋಡಿದ್ರು. ಓಹ್‌ ಪರವಾಗಿಲ್ಲ, ಹೈಟ್‌ ಇದೆ. ಇದ್ಯಾಕೆ ಇಲ್ಲಿ ಓಡ್ತಿದೆ? ಅಂತ ಒಬ್ಬರು ಆ ಕುದುರೆಯನ್ನು ನೋಡಿದ್ರು. ಅವರಿಗೆ ಪಾಪ ರೇಸ್‌ಕೋರ್ಸ್‌ನ ಗಂಧ ಗಾಳಿಯೂ ಗೊತ್ತಿಲ್ಲ. ತಗೊಂಡು ಹೋಗೋಣ ಅಂತ ಹೇಳಿ ರೇಸ್‌ಕೋರ್ಸ್‌ನಲ್ಲಿ ನಿಲ್ಲಿಸಿಬಿಟ್ರು. ಆಗ ತುಂಬ ದೊಡ್ಡ ದೊಡ್ಡ ಕುದುರೆಗಳೆಲ್ಲ ಓಡ್ತಿದ್ವು. ಗೇಟಿಗೆ ಹಾಕಿದ್ರು. ಆ ಕುದುರೆ ಮಾಲೀಕರು ಬಂದು ನಿರ್ಮಾಪಕ ರಾಮಮೂರ್ತಿ ಅವ್ರು. ಆ ಕುದುರೆಗೆ ಹೇಳೋಕಾಗಲಿ, ಬೈಯೋಕಾಗಲಿ, ಅರ್ಹತೆ, ಯೋಗ್ಯತೆ, ಅಧಿಕಾರ ಇರೋದು ಅವರೊಬ್ಬರಿಗೆ ಎಂ ಜಿ ರಾಮಮೂರ್ತಿ ಅವರಿಗೆ ಮಾತ್ರ!" ಎಂದರು.‌

Whats_app_banner