‘ನಿನ್ನ ಭಾವನೆಯಲ್ಲಿ ಹೆಣ್ಣಂದ್ರೆ ಏನು?’ ಇವತ್ತು ಇವಳು, ನಾಳೆ ಅವಳು ಅನ್ನೋ ದರ್ಶನ್ ಮಾತಿಗೆ ಅಹೋರಾತ್ರ ಕೆಂಡ VIDEO
ನಟ ದರ್ಶನ್, ಸುದೀಪ್ ಸೇರಿ ಸ್ಯಾಂಡಲ್‌ವುಡ್‌ನ ಕೆಲ ಕಲಾವಿದರ ಬಗ್ಗೆ ಅಹೋರಾತ್ರ ಆಗಾಗ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಇದೀಗ ದರ್ಶನ್ ಹೇಳಿಕೆಯನ್ನು ವಿರೋಧಿಸಿ, ತಮ್ಮ ಅನಿಸಿಕೆ ಅಭಿಪ್ರಾಯವನ್ನು ವಿಡಿಯೋ ಮೂಲಕ ಹೊರಹಾಕಿದ್ದಾರೆ. ನಿನ್ನ ಭಾವನೆಯಲ್ಲಿ ಹೆಣ್ಣಂದ್ರೆ ಏನು?’ ಇವತ್ತು ಇವಳು, ನಾಳೆ ಅವಳು ಅನ್ನೋ ದರ್ಶನ್ ಮಾತಿಗೆ ಕಿಡಿ ಕಾರಿದ್ದಾರೆ ಅಹೋರಾತ್ರ.
Ahoratra on Darshan Statement: ಸ್ಯಾಂಡಲ್‌ವುಡ್ ನಟ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 25 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಚಿತ್ರರಂಗದ ಆಪ್ತರು, ಸ್ನೇಹಿತರು ಸೇರಿ ಬೆಳ್ಳಿ ಪರ್ವ ಕಾರ್ಯಕ್ರಮ ಆಯೋಜಿಸಿ ಅಭಿನಂದಿಸಿದ್ದರು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿಯೇ ತಮ್ಮ ಈ ಸುದೀರ್ಘ 25 ವರ್ಷದ ಪಯಣದ ಬಗ್ಗೆ ಅಷ್ಟೇ ಸುದೀರ್ಘವಾಗಿಯೇ ಫಿಲ್ಟರ್ ಇಲ್ಲದೆ ಮಾತನಾಡಿದ್ದರು ದರ್ಶನ್. ಮಾತಿನ ಭರದಲ್ಲಿ ಅವಳು, ಇವಳು ಎಂಬುದೂ ಅವರ ಬಾಯಲ್ಲಿ ಬಂದಿತ್ತು. ಈಗ ಅದೇ ಮಾತು ಮತ್ತೆ ಮುನ್ನೆಲೆಗೆ ಬಂದಿದೆ.
ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ವಿಚಾರವಾಗಿ ಪತ್ನಿ ವಿಜಯಲಕ್ಷ್ಮೀ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ದೊಡ್ಡ ಸಮರವೇ ನಡೆದಿತ್ತು. ದರ್ಶನ್ ಜತೆಗಿನ ಸಂಬಂಧಕ್ಕೆ ಒಂದು ದಶಕ ಎಂದು ಒಂದಷ್ಟು ಫೋಟೋಗಳನ್ನು ಪವಿತ್ರಾ ಶೇರ್ ಮಾಡಿದ್ದರು. ಈ ವಿಚಾರ ವಿಜಯಲಕ್ಷ್ಮೀ ದರ್ಶನ್ ಗಮನಕ್ಕೆ ಬರುತ್ತಿದ್ದಂತೆ, ಪವಿತ್ರಾ ಅವರ ಕೆಲ ಪೋಟೋ ಶೇರ್ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಪ್ರವಿತ್ರಾ ಕಡೆಯಿಂದಲೂ ಅಷ್ಟೇ ಖಡಕ್ ಆಗಿಯೇ ಪ್ರತ್ಯುತ್ತರ ಬಂದಿತ್ತು.
ಹೀಗಿರುವಾಗಲೇ ಈ ಜಡೆ ಜಗಳದ ಬಗ್ಗೆ ನಟ ದರ್ಶನ್ ತುಟಿ ಬಿಚ್ಚಿರಲಿಲ್ಲ. ಬಾಯ್ತಪ್ಪಿಯೂ ಆ ವಿಚಾರದ ಬಗ್ಗೆ ಮಾತನಾಡಿರಲಿಲ್ಲ. ತಮ್ಮ ಬೆಳ್ಳಿ ಪರ್ವದ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ಹೆಸರೆತ್ತದೇ, ಪರೋಕ್ಷವಾಗಿಯೇ ಪ್ರತಿಕ್ರಿಯಿಸಿದ್ದರು. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದಿದ್ದರು ದರ್ಶನ್. ಈಗ ಇದೇ ಮಾತಿಗೆ ಅಹೋರಾತ್ರ ಕೆಂಡಕಾರಿದ್ದಾರೆ.
ನಟ ದರ್ಶನ್, ಸುದೀಪ್ ಸೇರಿ ಸ್ಯಾಂಡಲ್‌ವುಡ್‌ನ ಕೆಲ ಕಲಾವಿದರ ಬಗ್ಗೆ ಅಹೋರಾತ್ರ ಆಗಾಗ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಇದೀಗ ದರ್ಶನ್ ಹೇಳಿಕೆಯನ್ನು ವಿರೋಧಿಸಿ, ತಮ್ಮ ಅನಿಸಿಕೆ ಅಭಿಪ್ರಾಯವನ್ನು ವಿಡಿಯೋ ಮೂಲಕ ಹೊರಹಾಕಿದ್ದಾರೆ. ಹಾಗಾದರೆ ಅಹೋರಾತ್ರ ಹೇಳಿದ್ದೇನು?
ಅಹೋರಾತ್ರ ಹೇಳಿದ್ದೇನು?
"ನೀನು ಹೆಣ್ಣನ್ನು ಅಗೌರವಿಸುವಂಥವನು. ಹೆಣ್ಣು ಮಕ್ಕಳನ್ನು ನಿಂದನೆಗೆ ಬಳಸುವಂಥವನು. ಹೆಣ್ಣನ್ನು ಸೂ* ಎಂದು ಕರೆದವನು ನೀನು. ಹೆಣ್ಣನ್ನು ಗೈಡ್ ಮಾಡು ಅಂದ್ರೆ, ತಲೆ ಹಿಡಿಬೇಡಿ, ತಲೆ ಒಡಿಬೇಡಿ ಅಂತ ಹೇಳಿದವನು ನೀನು. ನೀನೇನು ಸಾಚಾನಾ? ಬುದ್ಧಿ ಹೇಳಲು ನಿನಗೇನು ಅರ್ಹತೆ ಇದೆಯೋ? ನೀನು ಗಂಡಲ್ಲ ಎಂಬುದಕ್ಕೆ ಒಂದೇ ಸಾಕ್ಷಿ, ನೀನು ಹೆಣ್ಣನ್ನು ಅಗೌರವಿಸುತ್ತೀಯಾ ಅಂತ. ಇದು ಚಾಣಾಕ್ಯ ಸಿದ್ಧಾಂತ" ಎಂದಿದ್ದಾರೆ ಅಹೋರಾತ್ರ.
ನಿನ್ನ ಭಾವನೆಯಲ್ಲಿ ಹೆಣ್ಣು ಅಂದರೆ ಏನು?
ಮುಂದುವರಿದು, ಬೆಳ್ಳಿ ಪರ್ವ ವೇದಿಕೆ ಮೇಲೆ ದರ್ಶನ್ ಆಡಿದ ಮಾತನ್ನು ನೆನಪಿಸಿಕೊಂಡ ಅಹೋರಾತ್ರ, "ಸ್ಪೀಚ್‌ನಲ್ಲಿ ನೀನು ಏನೋ ಹೇಳಿದ್ದು ಇವತ್ತು ಅವಳು.. ನಾಳೆ ಇವಳು ಅಂದರೆ, ನಿನ್ನ ಭಾವನೆಯಲ್ಲಿ ಹೆಣ್ಣು ಅಂದರೆ ಏನಲೇ.. ನಿನ್ನ ಸ್ವಂತ ಧರ್ಮ ಪತ್ನಿಗೆ ಗೌರವ ಕೊಡದ ನೀನು ಯಾವ ಗಂಡಾನೋ ಲೇ" ಎಂದು ವಿಡಿಯೋ ಮೂಲಕ ದರ್ಶನ್ ವಿರುದ್ಧ ಮತ್ತೆ ತಿರುಗಿ ಬಿದ್ದಿದ್ದಾರೆ ಅಹೋರಾತ್ರ.
ದರ್ಶನ್ ಹೇಳಿದ್ದೇನು?
‘ಚಿತ್ರರಂಗ, ರಾಜಕೀಯ, ಬಿಜಿನೆಸ್ ಯಾವುದೇ ಆಗಿರಲಿ ಶ್ರಮ ಹಾಕಲೇಬೇಕು. ನನಗೆ ನನ್ನ ಕೆಲಸ, ನನ್ನ ನಿರ್ಮಾಪಕರಷ್ಟೇ ಇಂಪಾರ್ಟೆಂಟ್. ಕೆಲಸದ ವಿಚಾರದಲ್ಲಿ ಫ್ಯಾಮಿಲಿ, ಎಲ್ಲವನ್ನೂ ಬದಿಗಿಟ್ಟು ಇದಕ್ಕೆ ನಿಲ್ತಿನಿ. ನನಗೆ ಸಿನಿಮಾ, ಆ ಸಿನಿಮಾನ ಪ್ರೀತಿಸುವ ನನ್ನ ಸೆಲೆಬ್ರಿಟಿಗಳಷ್ಟೇ ನನಗೆ ಮುಖ್ಯ. ಬೇರೆ ಯಾವುದರ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾಳೆ. ನಾನ್ಯಾಕೆ ತಲೆ ಕೆಡಿಸಿಕೊಂಡು, ಕೂತ್ಕೊಳ್ಳಲಿ ಹೋಗ್ರಯ್ಯ. ನನಗೆ ನನ್ನ ಸಿನಿಮಾ. ನನ್ನ ಮೇಲೆ ದುಡ್ಡು ಹಾಕಿದ ನಿರ್ಮಾಪಕರು, ನಿರ್ದೇಶಕರು ಅವರಿಗಷ್ಟೇ ನಾನು ಸೀಮಿತ.
(You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com)