ಬಾಕ್ಸ್‌ಆಫೀಸ್‌ನಲ್ಲಿ ದರ್ಶನ್‌ -ಧ್ರುವ ಮುಖಾಮುಖಿ! ಯುದ್ಧ ಶುರು ಎನ್ನುತ್ತಲೇ KD ಚಿತ್ರದ ಬಿಗ್‌ ಅಪ್‌ಡೇಟ್‌ ಕೊಟ್ಟ ಪ್ರೇಮ್‌
ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್‌ಆಫೀಸ್‌ನಲ್ಲಿ ದರ್ಶನ್‌ -ಧ್ರುವ ಮುಖಾಮುಖಿ! ಯುದ್ಧ ಶುರು ಎನ್ನುತ್ತಲೇ Kd ಚಿತ್ರದ ಬಿಗ್‌ ಅಪ್‌ಡೇಟ್‌ ಕೊಟ್ಟ ಪ್ರೇಮ್‌

ಬಾಕ್ಸ್‌ಆಫೀಸ್‌ನಲ್ಲಿ ದರ್ಶನ್‌ -ಧ್ರುವ ಮುಖಾಮುಖಿ! ಯುದ್ಧ ಶುರು ಎನ್ನುತ್ತಲೇ KD ಚಿತ್ರದ ಬಿಗ್‌ ಅಪ್‌ಡೇಟ್‌ ಕೊಟ್ಟ ಪ್ರೇಮ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಡೆವಿಲ್‌ ಸಿನಿಮಾ ಈಗಾಗಲೇ ಕ್ರಿಸ್ಮಸ್‌ಗೆ ತೆರೆಗೆ ಬರುತ್ತಿದೆ. ಇದೀಗ ಅದೇ ಡಿಸೆಂಬರ್‌ ತಿಂಗಳಲ್ಲಿಯೇ ನಾವೂ ಬರ್ತಿದ್ದೇವೆ ಎಂಬ ಸುಳಿವು ನೀಡಿದ್ದಾರೆ KD ಚಿತ್ರದ ನಿರ್ದೇಶಕ ಪ್ರೇಮ್.‌

ಬಾಕ್ಸ್‌ಆಫೀಸ್‌ನಲ್ಲಿ ದರ್ಶನ್‌ -ಧ್ರುವ ಮುಖಾಮುಖಿ! ಯುದ್ಧ ಶುರು ಎನ್ನುತ್ತಲೇ KD ಚಿತ್ರದ ಬಿಗ್‌ ಅಪ್‌ಡೇಟ್‌ ಕೊಟ್ಟ ಪ್ರೇಮ್‌
ಬಾಕ್ಸ್‌ಆಫೀಸ್‌ನಲ್ಲಿ ದರ್ಶನ್‌ -ಧ್ರುವ ಮುಖಾಮುಖಿ! ಯುದ್ಧ ಶುರು ಎನ್ನುತ್ತಲೇ KD ಚಿತ್ರದ ಬಿಗ್‌ ಅಪ್‌ಡೇಟ್‌ ಕೊಟ್ಟ ಪ್ರೇಮ್‌

Darshan Devil Vs Dhruva KD: ಸ್ಯಾಂಡಲ್‌ವುಡ್‌ನಲ್ಲೀಗ ಸ್ಟಾರ್‌ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆಯ ಪರ್ವ ಶುರುವಾಗಿದೆ. ಈ ಮೊದಲು ಸ್ಟಾರ್‌ ಸಿನಿಮಾಗಳೇ ಬರ್ತಿಲ್ಲ, ಹಿಂಗೇ ಆದ್ರೆ ಚಿತ್ರಮಂದಿರಗಳೇ ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಒಂದರ್ಥದಲ್ಲಿ ಚಿತ್ರೋದ್ಯಮವನ್ನೇ ಬಂದ್‌ ಮಾಡುವ ವಿಚಾರ ಮುನ್ನೆಲೆಗೆ ಬಂದಿತ್ತು. ಸ್ಟಾರ್‌ಗಳು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಿದರೆ, ಚಿತ್ರಮಂದಿರಗಳೂ ಸೇಫ್‌ ಎಂಬ ಮಾತೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಂಗಳದಿಂದಲೂ ಹೊರಬಿದ್ದಿತ್ತು. ಇದೆಲ್ಲದರ ನಡುವೆಯೇ ಧ್ರುವ ಸರ್ಜಾ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಸ್ಟಾರ್‌ ನಟರಿಂದ ಸಿನಿಮಾ ಸರ್ಪ್ರೈಸ್‌

ಸ್ಯಾಂಡಲ್‌ವುಡ್‌ ಪಾಲಿಗೆ ಈ ವರ್ಷದ ಮೊದಲಾರ್ಧ ಸಿಹಿಯಾಗಿಲ್ಲ. ಬಿಡುಗಡೆಯಾದ ಸಿನಿಮಾಗಳ್ಯಾವವೂ ಲಾಭದತ್ತ ಮುಖ ಮಾಡಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳು ಎವರೇಜ್‌ ಗಳಿಕೆ ಮಾಡಿದ್ದನ್ನು ಬಿಟ್ಟರೆ, ಕೋಟಿ ಕೋಟಿ ಬಾಚಿಕೊಂಡ ಸಿನಿಮಾ ಕಾಣಿಸಿಲ್ಲ. ಇದಕ್ಕೆ ಕಾರಣ ಹುಡುಕಹೊರಟರೆ ಸ್ಟಾರ್‌ ನಟರ ಸಿನಿಮಾಗಳಿಲ್ಲ ಎಂಬ ಉತ್ತರ ಕಾಣಿಸುತ್ತದೆ. ಹೀಗೆ ಸೋತ ಸ್ಯಾಂಡಲ್‌ವುಡ್‌ಗೆ ಇದೀಗ ಮತ್ತೆ ಜೀವಕಳೆ ತುಂಬಲು ಸ್ಟಾರ್‌ ನಟರು ಮುಂದಾಗುತ್ತಿದ್ದಾರೆ. ಅಂದರೆ, ಕನ್ನಡದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಗಳು ಒಂದೊಂದಾಗಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುತ್ತಿವೆ.

ಡಿಸೆಂಬರ್‌ಗೆ ಧ್ರುವ ಸರ್ಜಾ KD ರಿಲೀಸ್‌

ಧ್ರುವ ಸರ್ಜಾ ಮತ್ತು ಪ್ರೇಮ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಕೆಡಿ ಸಿನಿಮಾ, ಈಗಾಗಲೇ ಶೂಟಿಂಗ್‌ ಹಂತದಲ್ಲಿದೆ. ಕೆವಿಎನ್‌ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಕನ್ನಡದ ಸ್ಟಾರ್‌ ನಟರ ದಂಡೇ ಇದೆ. ರೆಟ್ರೋ ಸ್ಟೈಲ್‌ನಲ್ಲಿಯೂ ಈ ಸಿನಿಮಾ ಮೂಡಿಬರುತ್ತಿರುವುದರಿಂದ ಕುತೂಹಲವೂ ದುಪ್ಪಟ್ಟಾಗಿದೆ. ಇದೀಗ ಇದೇ ಸಿನಿಮಾ ತಂಡ, ಇದೇ ವರ್ಷದ ಡಿಸೆಂಬರ್‌ನಲ್ಲಿ ನಾವೂ ಚಿತ್ರಮಂದಿರಕ್ಕೆ ಬರ್ತಿವಿ ಅನ್ನೋ ಸುಳಿವು ನೀಡಿದೆ. ಕೆಡಿ ಚಿತ್ರದ ಅತಿ ದೊಡ್ಡ ಆರ್ಕೆಸ್ಟ್ರಾ ಝಲಕ್‌ ರಿಲೀಸ್‌ ಮಾಡಿ ಈ ವಿಚಾರವನ್ನು ತಿಳಿಸಿದೆ. "ಯುದ್ಧಕ್ಕೆ ರೆಡಿಯಾಗ್ತಿದ್ದೀವಿ. ಇದೇ ಡಿಸೆಂಬರ್‌ನಲ್ಲಿ ವಾರ್‌ ಬಿಗಿನ್ಸ್‌" ಎಂದಿದ್ದಾರೆ ಪ್ರೇಮ್‌.

ದರ್ಶನ್‌ ಡೆವಿಲ್‌ ಸಹ ಡಿಸೆಂಬರ್‌ನಲ್ಲೇ

ಇತ್ತೀಚೆಗಷ್ಟೇ ಡೆವಿಲ್‌ ಸಿನಿಮಾದ ಬಿಡುಗಡೆಯ ದಿನಾಂಕವನ್ನು ನಟ ದರ್ಶನ್‌ ಘೋಷಣೆ ಮಾಡಿದ್ದಾರೆ. ಈ ಮೂಲಕ ಈ ವರ್ಷಾಂತ್ಯಕ್ಕೆ ಮತ್ತೊಮ್ಮೆ ಚಿತ್ರಮಂದಿರಕ್ಕೆ ಬರಲು ದರ್ಶನ್‌ ರೆಡಿಯಾಗಿದ್ದಾರೆ. ಹಾಗಾದರೆ, ಬಿಡುಗಡೆಯ ದಿನ ಯಾವಾಗ? ಇದೇ ವರ್ಷದ ಕ್ರಿಸ್‌ಮಸ್‌ಗೆ ಡೆವಿಲ್‌ ಸಿನಿಮಾ ಬಿಡುಗಡೆ ಆಗಲಿದೆ ಎಂದು ದರ್ಶನ್‌ ಪೋಸ್ಟ್‌ ಹಾಕುತ್ತಿದ್ದಂತೆ, ಫ್ಯಾನ್ಸ್‌ ವಲಯದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. "ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ" ಎಂದಿದ್ದರು ದರ್ಶನ್.‌

ಶ್ರೀ ಜೈಮಾತಾ ಕಂಬೈನ್ಸ್‌ ಮತ್ತು ವೈಷ್ಣೋ ಸ್ಟುಡಿಯೋ ಬ್ಯಾನರ್‌ನಲ್ಲಿ ಜೆ ಜಯಮ್ಮ ಡೆವಿಲ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರಕಾಶ್‌ ವೀರ್‌ (ಮಿಲನಾ ಪ್ರಕಾಶ್)‌ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದರೆ, ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಸುಧಾಕರ್‌ ಎಸ್‌ ರಾಜ್‌ ಅವರ ಛಾಯಾಗ್ರಹಣ, ಮೋಹನ್‌ ಬಿ ಕೆರೆ ಅವರ ಕಲಾ ನಿರ್ದೇಶನ ಈ ಸಿನಿಮಾಕ್ಕಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner