ಕಾಟೇರ ಸಿನಿಮಾದ ಹಾಡು ಬಿಡುಗಡೆ; ಮಾಲಾಶ್ರೀ ಮಗಳ ಡ್ಯಾನ್ಸ್, ಮಂಗ್ಲಿ ಕಂಠಕ್ಕೆ ಬೆರಗಾದ ಫ್ಯಾನ್ಸ್, ಇಲ್ಲಿದೆ ಪಸದಾಂಗವ್ನೆ ಹಾಡಿನ ಲಿರಿಕ್ಸ್
Darshan Kaatera Song Lyrics in Kannada: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಕನ್ನಡ ಲಿರಿಕ್ಸ್ ಇಲ್ಲಿದೆ. ಈ ಹಾಡಿಗೆ ವಿ ಹರಿಕೃಷ್ಣನ್ ಸಂಗೀತ, ಮಂಗ್ಲಿ ಮಧುರ ಕಂಠವಿದೆ. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಡ್ಯಾನ್ಸ್‌ಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಲಿರಿಕಲ್ ಸಾಂಗ್‌ಗೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ ಹಾಡಿನ ಸಾಹಿತ್ಯ ಮಾತ್ರವಲ್ಲದೆ ಹಿನ್ನೆಲೆ ಮ್ಯೂಸಿಕ್ ಸಖತ್ತಾಗಿದ್ದು, ಒಳ್ಳೆಯ ಡ್ಯಾನ್ಸ್ ಸ್ಟೆಪ್‌ಗೆ ಹೇಳಿ ಮಾಡಿಸಿದಂತೆ ಇದೆ. ಈ ಹಾಡಿನಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ಅವರ ಡ್ಯಾನ್ಸ್‌ಗೆ ಸಾಕಷ್ಟು ಜನರು ವಾಹ್ ಎಂದಿದ್ದಾರೆ. ವಿ. ಹರಿಕೃಷ್ಣನ್ ಸಂಗೀತ ಮೋಡಿ ಮಾಡುವಂತೆ ಇದೆ. ಇದನ್ನು ನೋಡಿ: Movie Lyrics: ಧರೆ ನೀ ನೀಡಿದ ಆಸರೆ.. ತೆರೆ ಈ ನೆನಪಿನ ಸೆರೆ; ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಲಿರಿಕ್ಸ್
ಆರಾಧನಾ ಡ್ಯಾನ್ಸ್‌ಗೆ ವಾಹ್ ಎಂದ ಅಭಿಮಾನಿಗಳು
"ಅದ್ಬುತವಾದ ಸಾಹಿತ್ಯ, ಅದ್ಬುತ ಸಂಗೀತ ಸಂಯೋಜನೆ, ನೃತ್ಯ ಹಳ್ಳಿ ಸೊಗಡಿಗೆ ಅದ್ಬುತವಾಗಿದೆ, ದಾಖಲೆ ಸೃಷ್ಟಿಸಲು ಸಜ್ಜಾಗಿದೆ" ಎಂದು ಅಭಿಮಾನಿಯೊಬ್ಬರು ಯೂಟ್ಯೂಬ್‌ನಲ್ಲಿ ಈ ಹಾಡಿನ ಲಿರಿಕಲ್ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. "ತಾಯಿಯನ್ನು ಮೀರಿಸುವ ಟ್ಯಾಲೆಂಟ್, ಆರಾಧನಾಗೆ ಶುಭವಾಗಲಿ" ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. "ಹಾಡು ಪೂರ್ತಿ ಆರಾಧನಾ ತುಂಬಾ ಚೆನ್ನಾಗಿ ಕಾಣ್ತಾರೆ. ಡ್ಯಾನ್ಸ್ ಮೂವ್ಸ್, ಎಕ್ಸ್‌ಪ್ರೆಷನ್ಸ್ ಎಲ್ಲಾ ಮಾಲಾಶ್ರೀ ಮೇಡಮ್ ನೆನಪಿಸ್ತಾರೆ. ಒಳ್ಳೆ ಹೀರೋಯಿನ್ ಆಗೋ ಎಲ್ಲಾ ಲಕ್ಷಣ ಇದೆ. ಡಿಬಾಸ್ ಗೆ ಒಳ್ಳೆ ಜೋಡಿ" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಕಾಡುವ ಮಂಗ್ಲಿ ಧ್ವನಿ
ನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತಿ ಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿ ಎಂಬ ಈ ಹಾಡನ್ನು ಜನಪ್ರಿಯ ಗಾಯಕಿ ಮಂಗ್ಲಿ ಹಾಡಿದ್ದಾರೆ. ದರ್ಶನ್ ಅವರ ರಾಬರ್ಡ್ ಚಿತ್ರದ ಕಣ್ಣೀ ಅದಿರಿಂದಿ ಹಾಡಿಗೂ ಇವರು ಧ್ವನಿಯಾಗಿದ್ದರು. ಒಟ್ಟಾರೆ, ಈ ಹಾಡಿನ ಸಾಹಿತ್ಯ, ಹಾಡಿನ ಧ್ವನಿ, ನೃತ್ಯ ಮತ್ತು ಹಾಡಿನ ಸಂಗೀತ ಅಭಿಮಾನಿಗಳನ್ನು ಸೆಳೆದಿದೆ. ಚೇತನ್ ಕುಮಾರ್ (ಭರ್ಜರಿ) ಈ ಹಾಡಿನ ಸಾಹಿತ್ಯ ರಚನೆಕಾರರು. ಇದನ್ನು ನೋಡಿ: Kaiva Song Lyrics: ಕೈವ ಸಿನಿಮಾದ ಸಂಕ್ರಾಂತಿ ಸಂಜೇಲಿ ಹಚ್ಚಿಟ್ಟ ದೀಪ ಹಾಡಿನ ಲಿರಿಕ್ಸ್ ಇಲ್ಲಿದೆ ನೋಡಿ; ಓ ದೇವರೆ ನೀನಿದ್ದರೆ ನೋಡು
ಕಾಟೇರ ಹಾಡಿನ ಕನ್ನಡ ಲಿರಿಕ್ಸ್ (Darshan Kaatera Song Lyrics in Kannada)
ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತಿ
ನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತಿ
ಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿ
ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ
ನೋಡಿ ನೋಡಿ ನೋಡ್ತ ಇದ್ದಾಂಗೆ ಯಾಕೆ ಹೋಗುತ್ತಿ
ನೋಡಿ ನನ್ನ ನೋಡ್ತಾಂಗೆ ಯಾಕೆ ಹೋಗುತ್ತಿ
ನಿನ್ನ ನೋಡಿ ನಾಚ್ಕೋತ್ತೈ ನನ್ನ ಮೂಗುತಿ
ಪಸದಾಂಗವ್ನೆ ಬಲು ಪಸದಾಂಗವ್ನೆ
ನಕ್ರೆ ಚಂದ ನೋಡಕ್ ಅಂದ
ನನ್ನ ಬಂಗಾರ, ನನ್ನ ಬಂಗಾರ...
ಕ್ವಾಪ ಬಂದ್ರೆ ಅಯ್ಯೋ ಸಿವ್ನೆ ಸುಡೋ ಚಂದಿರಾ...
ರೂಪ ಅಪರೂಪ ನಮ್ಮೂರ ಹಮ್ಮೀರ
ಅಪ್ಪು ತಿನ್ನೋ ಆನೆ ಹಂಗೆ ಪಸಂದಾಗವ್ನೆ
ರಂಗಸ್ವಾಮಿ ತೇರಿನಾಂಗೆ ಪಸದಾಂಗವ್ನೆ
ನೋಡ್ತಾ ನೋಡ್ತಾ ಆಗೋಗೈತೆ ಸ್ಯಾನಿ ಪಿರುತಿ
ಪಕ್ಕದಲ್ಲಿ ನಿಂತರೆ ಸಿವ ನೀನೇ, ನಾನೇ ಪಾರ್ವತಿ
ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ
ಆಕ್ಲ ಹಾಲಿನ್ ಬೆಣ್ಣೆ ಹಂಗೆ
ಕೋಲಾರದ ಹಟ್ಟಿ ಬಂಗಾರದಂಗೆ
ಬೆಳ್ ಬೆಳಗೆ ಫಳ್ ಫಳ್‌ನೇ ಪಸದಾಂಗವ್ನೆ
ಭೂಮಿ ತಾಗಿದ್ ಮುಂಗಾರ್‌ನಾಂಗೆ
ಬೊಂಬೆ ಮೀಟಾಯಿ ಗಮ್‌ನಂಗೆ
ಸಿಹಿಸಿಹಿ ಪಸದಾಂಗವ್ನೆ
ನೀ ನನ್ನ ಪ್ರಾಣ ತಿಳ್ಕ
ನನ್ನ ಚೂರು ಮನಸಲ್ಲಿಟ್ಕಾ....
ನೀ ಹೇಳಿದಕ್ಕೆಲ್ಲ ಹೂ ಅಂತಿನಿ ನನ್ನ ಸಾಹುಕಾರ....
ಜೋಡಿ ಎತ್ತಿನಾಗೆ ಜೊತೆ ಇರ್ತಿನಿ ಜೀವನ ಪೂರ
ಸಂದಗೆ ಬಾಲ ಸಂದಗೆ ಮಾಡ್ತಿನೋ ಸಂಸಾರ
ಸೀತಾಪತಿ ರಾಮಪ್ನಂಗೆ ಪಸದಾಂಗವ್ನೆ
ಅ ಆ ಇ ಈ ಅಕ್ಷರದಾಂಗೆ ಪಸದಾಂಗವ್ನೆ
ನೋಡ್ತ ನೋಡ್ತ ಆಗೋಗೈತೆ ಸ್ಯಾನೆ ಪಿರುತಿ
ನೋಡ್ತ ನಿನ್ನ ಆಗೋಗೈತೆ ಸ್ಯಾನೆ ಪಿರುತಿ
ಪಕ್ಕದಲ್ಲಿ ನಿಂತರೆ ಶಿವ ನೀನೇ, ನಾನೇ ಪಾರ್ವತಿ
ಕಾಟೇರ ಸಿನಿಮಾದ ಹಾಡಿನ ವಿಡಿಯೋ ನೋಡಿ
ಕಾಟೇರ ಸಿನಿಮಾ ಡಿಸೆಂಬರ್ 29ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದರ್ಶನ್ ಜೋಡಯಾಗಿ ಕನ್ನಡದ ಸೂಪರ್‌ಸ್ಟಾರ್ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಾಯಕಿ. ಪಸದಾಂಗವ್ನೆ ಹಾಡಿನ ಮೂಲಕ ಸದ್ಯ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಆರಾಧನಾ ಅವರ ಪ್ರತಿಭೆಯ ಅನಾವರಣವಾಗಿದೆ. ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ಕಾಟೇರ ಸಿನಿಮಾ ನಿರ್ಮಾಣವಾಗಿದೆ.