Kaatera: ‘ನಾನು ಗೆದ್ದ ಎತ್ತಿನ ಬಾಲ ಹಿಡಿಯಲ್ಲ, ಅದು ಮುಗಿದ ಅಧ್ಯಾಯ!’ ಕಾಟೇರ ತಂಡದ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಸ್ಪಷ್ಟನೆ
ಕನ್ನಡ ಸುದ್ದಿ  /  ಮನರಂಜನೆ  /  Kaatera: ‘ನಾನು ಗೆದ್ದ ಎತ್ತಿನ ಬಾಲ ಹಿಡಿಯಲ್ಲ, ಅದು ಮುಗಿದ ಅಧ್ಯಾಯ!’ ಕಾಟೇರ ತಂಡದ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಸ್ಪಷ್ಟನೆ

Kaatera: ‘ನಾನು ಗೆದ್ದ ಎತ್ತಿನ ಬಾಲ ಹಿಡಿಯಲ್ಲ, ಅದು ಮುಗಿದ ಅಧ್ಯಾಯ!’ ಕಾಟೇರ ತಂಡದ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಸ್ಪಷ್ಟನೆ

ಕಾಟೇರ ಯಶಸ್ವಿಯಾದ ಬಳಿಕ ಅದರ ಮುಂದುವರಿದ ಭಾಗ ಬರಬಹುದೇ? ಹೀಗೊಂದು ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Kaatera: ‘ನಾನು ಗೆದ್ದ ಎತ್ತಿನ ಬಾಲ ಹಿಡಿಯಲ್ಲ, ಅದು ಮುಗಿದ ಅಧ್ಯಾಯ!’ ಕಾಟೇರ ತಂಡದ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಸ್ಪಷ್ಟನೆ
Kaatera: ‘ನಾನು ಗೆದ್ದ ಎತ್ತಿನ ಬಾಲ ಹಿಡಿಯಲ್ಲ, ಅದು ಮುಗಿದ ಅಧ್ಯಾಯ!’ ಕಾಟೇರ ತಂಡದ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಸ್ಪಷ್ಟನೆ

Kaatera: ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದಲ್ಲಿ ಮೂಡಿಬಂದ ಕಾಟೇರ ಸಿನಿಮಾ ಕಳೆದ ವರ್ಷದ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾ. ಬಾಕ್ಸ್‌ ಆಫೀಸ್‌ನಲ್ಲಿ ನೂರಾರು ಕೋಟಿ ಗಳಿಕೆ ಕಂಡ ಸೂಪರ್‌ ಹಿಟ್‌ ಸಿನಿಮಾ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೆರಿಯರ್‌ನಲ್ಲೂ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ವಿಶೇಷಣವೂ ಕಾಟೇರ ಸಿನಿಮಾಕ್ಕೆ ಸಲ್ಲಲಿದೆ. ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಇತ್ತೀಚೆಗಷ್ಟೇ ಶತ ದಿನೋತ್ಸವ ಆಚರಿಸಿಕೊಂಡಿತ್ತು. ಈಗ ಅದೇ ಖುಷಿಯ ನಡುವೆ ಕಾಟೇರ ಪಾರ್ಟ್‌ 2 ಸಿನಿಮಾ ಬಗ್ಗೆಯೂ ದರ್ಶನ್‌ ಸ್ಪಷ್ಟನೆ ನೀಡಿದ್ದಾರೆ.

ಕಾಟೇರ ಸಿನಿಮಾ ಬಿಡುಗಡೆಯಾಗಿ, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಒಟಿಟಿಯಲ್ಲೂ ದಾಖಲೆಯ ವೀಕ್ಷಣೆ ಕಂಡಿದೆ ಈ ಸಿನಿಮಾ. ಹೀಗೆ ಅಭೂತಪೂರ್ವ ಗೆಲುವು ಕಂಡ ಈ ಸಿನಿಮಾದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ದಿಢೀರ್‌ ಸುದ್ದಿಗೋಷ್ಠಿ ಕರೆದು ಅಚ್ಚರಿ ಮೂಡಿಸಿದ್ದರು. ಒಂದಷ್ಟು ಕೌತುಕದಿಂದಲೇ, ವಿಷಯ ಏನಿರಬಹುದೆಂದು ಗಮನಿಸಿದಾಗ, ಮೆಚ್ಚುವ ಕೆಲಸವನ್ನೇ ನಿರ್ಮಾಪಕರು ಮಾಡಿದ್ದಾರೆ. ತಂಡದ ಮೂವರು ಸದಸ್ಯರಿಗೆ ಉಡುಗೊರೆ ರೂಪದಲ್ಲಿ ಕಾರ್‌ ನೀಡಿದ್ದಾರೆ!

ಕಥೆಗಾರರು, ಸಂಭಾಷಣೆಗಾರರನ್ನು ಬೆಳಸಬೇಕಿದೆ..

ಈ ಬಗ್ಗೆ ಮಾತನಾಡಿದ ರಾಕ್‌ಲೈನ್‌ ವೆಂಕಟೇಶ್‌, ಚಿತ್ರರಂಗದಲ್ಲಿ ನಾವ್ಯಾರೂ ಹೊಸಬರಲ್ಲ. ಆದರೆ, ನಮ್ಮಲ್ಲಿ ಬರಹಗಾರರು ಕೊರತೆ ಇದೆ. ಅದೇ ಪಕ್ಕದ ಮಲಯಾಳಂ ಸಿನಿಮಾಗಳು ತುಂಬ ಚೆನ್ನಾಗಿ ಹೋಗುತ್ತವೆ ಎಂದರೆ, ಅಲ್ಲಿ ಗಟ್ಟೆ ಕಥೆ ಇರುತ್ತವೆ. ಕಥೆ ಬರೆಯುವವರೇ ಇದ್ದಾರೆ. ಆದರೆ, ನಮ್ಮಲ್ಲಿನ ಕಥೆಗಾರರನ್ನೂ ಹುರಿದುಂಬಿಸುವ ಕೆಲಸ ಮಾಡಬೇಕಿದೆ. ಚಿತ್ರರಂಗಕ್ಕೆ ಕಥೆಗಾರರು ಬರಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ. ಅದೇ ರೀತಿ ಸಂಭಾಷಣೆ ಬರೆಯುವವರಿಗೂ ಇದು ಒಂದು ವೇದಿಕೆ ಆಗಲಿ. ಈ ಇಬ್ಬರೂ ಒಂದು ಸಿನಿಮಾದ ಸ್ಟ್ರಾಂಗ್‌ ಪಿಲ್ಲರ್‌ಗಳು. ಅವುಗಳನ್ನು ಗಟ್ಟಿಗೊಳಿಸಬೇಕಿದೆ. ಆ ಒಂದು ಉದ್ದೇಶಕ್ಕೆ ಮೂವರಿಗೆ ಕಾರು ಉಡುಗೊರೆಯಾಗಿ ನೀಡುತ್ತಿದ್ದೇವೆ" ಎಂದಿದ್ದಾರೆ ರಾಕ್‌ಲೈನ್‌.

ಜಡೇಶ್‌, ಮಾಸ್ತಿ, ಸೂರಜ್‌ಗೆ ಕಾರು ಉಡುಗೊರೆ

ಅದರಂತೆ, ಕಥೆ ಬರೆದ ಜಡೇಶ್‌ ಕುಮಾರ್‌ ಹಂಪಿ, ಚಿತ್ರದ ಸಂಭಾಷಣೆಗಾರ ಮಾಸ್ತಿ ಹಾಗೂ ಅಪಘಾತದಲ್ಲಿ ಕಾಲು ಕಳೆದುಕೊಂಡರೂ, ಅತ್ಯುತ್ತಮ ನಟನೆ ನೀಡಿದ ನಟ ಸೂರಜ್‌ಗೆ ಕಾಟೇರ ನಿರ್ಮಾಪಕರಿಂದ ಕಾರು ಉಡುಗೊರೆಯಾಗಿ ಸಿಕ್ಕಿದೆ. ಈ ವಿಚಾರವನ್ನೇ ಎಲ್ಲರೆದುರು ಹಂಚಿಕೊಳ್ಳುವ ಉದ್ದೇಶಕ್ಕೆ ಈ ಸುದ್ದಿಗೋಷ್ಠಿ ಕರೆದಿರುವ ಬಗ್ಗೆ ರಾಕ್‌ಲೈನ್‌ ವೆಂಕಟೇಶ್‌ ಹೇಳಿಕೊಂಡಿದ್ದಾರೆ.

ಕಾಟೇರ 2 ಬಗ್ಗೆ ದರ್ಶನ್‌ ಸ್ಪಷ್ಟನೆ

ಇನ್ನು ಕಾಟೇರ ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ, ಅದರ ಮುಂದುವರಿದ ಭಾಗ ಅಥವಾ ಪ್ರೀಕ್ವೆಲ್‌ ಮೂಡಿಬರಬಹುದೇ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸುದ್ದಿಗೋಷ್ಠಿಯಲ್ಲೂ ಆ ಪ್ರಶ್ನೆ ಕೇಳಿಬಂತು. ಅದಕ್ಕೆ ಉತ್ತರ ನೀಡಿದ ದರ್ಶನ್‌, "ಇಲ್ಲ ಆ ರೀತಿಯ ಯಾವುದೇ ಪ್ಲಾನ್‌ ಇಲ್ಲ. ಅಷ್ಟಕ್ಕೂ ನಾನು ಸೀಕ್ವೆಲ್‌ಗಳನ್ನೇ ಮಾಡಲ್ಲ. ಕಾಟೇರ ಒಂದೇ ಕಥೆ. ಅದು ಅಲ್ಲಿಗೆ ಮುಗೀತು. ನಾನು ಯಾವತ್ತೂ ಪಾರ್ಟ್‌ 2 ಸಿನಿಮಾ ಮಾಡಲ್ಲ. ಅದು ಮುಗಿದು ಹೋದ ಅಧ್ಯಾಯ. ನಾನು ಯಾವತ್ತೂ ಗೆದ್ದ ಎತ್ತಿನ ಬಾಲ ಹಿಡಿಯಲ್ಲ. ಅದನ್ನೇ ಇನ್ನೂ ಎಳಿತೀವಿ ಅಂದ್ರೆ, ಅದು ಆಗದ ಮಾತು" ಎಂದಿದ್ದಾರೆ.

 ಕಾರ್‌ ಉಡುಗೊರೆಯ ಫೋಟೋಗಳು

Whats_app_banner