Darshan Thoogudeepa: ಹಿರಿಯ ಮಗನ ಕುರಿತು ಈ ಮೌನವೇಕೆ? ಸುಮಲತಾ ಅಂಬರೀಶ್‌ಗೆ ನಟ ಚೇತನ್‌ ಅಹಿಂಸಾ ಪ್ರಶ್ನೆ
ಕನ್ನಡ ಸುದ್ದಿ  /  ಮನರಂಜನೆ  /  Darshan Thoogudeepa: ಹಿರಿಯ ಮಗನ ಕುರಿತು ಈ ಮೌನವೇಕೆ? ಸುಮಲತಾ ಅಂಬರೀಶ್‌ಗೆ ನಟ ಚೇತನ್‌ ಅಹಿಂಸಾ ಪ್ರಶ್ನೆ

Darshan Thoogudeepa: ಹಿರಿಯ ಮಗನ ಕುರಿತು ಈ ಮೌನವೇಕೆ? ಸುಮಲತಾ ಅಂಬರೀಶ್‌ಗೆ ನಟ ಚೇತನ್‌ ಅಹಿಂಸಾ ಪ್ರಶ್ನೆ

ದರ್ಶನ್‌ ತೂಗುದೀಪ ಪ್ರಕರಣದ ಕುರಿತು ಕನ್ನಡ ಸಿನಿಮಾ ಉದ್ಯಮ ಮೌನವಾಗಿರುವುದಕ್ಕೆ ನಟ ಚೇತನ್‌ ಅಹಿಂಸಾ ಟಾಂಗ್‌ ನೀಡಿದ್ದಾರೆ. ಸುಮಲತಾ ಅಂಬರೀಶ್‌ ಅವರು ದರ್ಶನ್‌ ಅವರನ್ನು ಹಿರಿಯ ಮಗ ಎಂದು ಹೇಳಿದ್ದರು, ಇವರು ಯಾಕೆ ಮೌನವಾಗಿದ್ದಾರೆ ಎಂದು ಚೇತನ್‌ ಪ್ರಶ್ನಿಸಿದ್ದಾರೆ.

Darshan Thoogudeepa: ಹಿರಿಯ ಮಗನ ಕುರಿತು ಈ ಮೌನವೇಕೆ? ಸುಮಲತಾ ಅಂಬರೀಶ್‌ಗೆ ನಟ ಚೇತನ್‌ ಪ್ರಶ್ನೆ
Darshan Thoogudeepa: ಹಿರಿಯ ಮಗನ ಕುರಿತು ಈ ಮೌನವೇಕೆ? ಸುಮಲತಾ ಅಂಬರೀಶ್‌ಗೆ ನಟ ಚೇತನ್‌ ಪ್ರಶ್ನೆ

ಬೆಂಗಳೂರು: ದರ್ಶನ್‌ ತೂಗುದೀಪ ಪ್ರಕರಣದ ಕುರಿತು ಕನ್ನಡ ಸಿನಿಮಾ ಉದ್ಯಮ ಮೌನವಾಗಿರುವುದನ್ನು ನಟ ಚೇತನ್‌ ಅಹಿಂಸಾ ಪ್ರಶ್ನಿಸಿದ್ದಾರೆ. ಸುಮಲತಾ ಅಂಬರೀಶ್‌ ಅವರು ದರ್ಶನ್‌ ಅವರನ್ನು ಹಿರಿಯ ಮಗ ಎಂದು ಹೇಳಿದ್ದರು, ಇವರು ಯಾಕೆ ಮೌನವಾಗಿದ್ದಾರೆ ಎಂದು ಚೇತನ್‌ ಪ್ರಶ್ನಿಸಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಸೇರಿದಂತೆ ಹಲವು ಆರೋಪಿಗಳು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಕಸ್ಟಡಿ ಅವಧಿ ಮುಗಿದ ಕಾರಣ ಇಂದು ನ್ಯಾಯಾಲಯವು ಇವರೆಲ್ಲರನ್ನೂ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ಸಾಧ್ಯತೆಯಿದೆ.

ಚೇತನ್‌ ಅಹಿಂಸಾ ಏನಂದ್ರು?

ಕನ್ನಡ ಸಿನಿಮಾ ಉದ್ಯಮದ ಬಹುತೇಕ ವ್ಯಕ್ತಿಗಳು ದರ್ಶನ್‌ ಪ್ರಕರಣ ನಡೆದು ಒಂದು ವಾರಕ್ಕೂ ಹೆಚ್ಚು ಸಮಯವಾಗಿದ್ದರೂ ಮೌನವಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ ದರ್ಶನ್‌ ಅವರ ಸ್ಟಾರ್‌ ಪವರ್‌ ಅನ್ನು ಬಳಸಿದ ಸುಮಲತಾ ಅಂಬರೀಶ್‌ ಅವರು ದರ್ಶನ್‌ ಅವರನ್ನು ತಮ್ಮ ಹಿರಿಯ ಮಗ ಎಂದು ಕರೆದಿದ್ದರು. ತನ್ನ ಮಗನ ಇತ್ತೀಚಿನ ಘಟನೆಗಳ ಬಗ್ಗೆ ಸುಮಲತಾ ಏನು ಹೇಳುತ್ತಾರೆ? ತಲೆ ಮರೆಸಿಕೊಳ್ಳುವುದು ಒಂದು ಆಯ್ಕೆಯಾಗಿರಬಾರದು" ಎಂದು ನಟ ಚೇತನ್‌ ಅಹಿಂಸಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೊಲೆ ಕೇಸ್‌ನಲ್ಲಿ ದರ್ಶನ್‌ ಲಾಕ್‌ ಆಗ್ತಿದ್ದಂತೆ, ಅತ್ಯಾಪ್ತರೇ ನಾಪತ್ತೆ

ದರ್ಶನ್‌ ಜತೆಗೆ ಸದಾ ನಿಲ್ಲುತ್ತಿದ್ದ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆಲವರು ಸದ್ಯಕ್ಕೆ ನಾಪತ್ತೆಯಾದಂತಿದೆ. ಅಂದರೆ, ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಲು ಅವರ್ಯಾರೂ ಇವರೆಗೂ ಮುಂದೆ ಬಂದಿಲ್ಲ. ಸುಮಲತಾ ಸೇರಿದಂತೆ ಈ ರೀತಿ ಸದ್ಯ ಸೈಲೆಂಟ್‌ ಆಗಿರುವ ದರ್ಶನ್‌ ಆಪ್ತರ ವಿವರ ಇಲ್ಲಿದೆ.

ದರ್ಶನ್‌ಗೆ ಡಿಎನ್‌ಎ ಟೆಸ್ಟ್‌ ಮಾಡಲಾಗಿದೆಯೇ?

ದರ್ಶನ್‌ ಪರ ವಕೀಲರು ಮಾಧ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ ದರ್ಶನ್‌ಗೆ ಇನ್ನೂ ಡಿಎನ್‌ಎ ಟೆಸ್ಟ್‌ ಮಾಡಲಾಗಿಲ್ಲ. ಇದು ಗುಟ್ಟಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ನ್ಯಾಯಾಲಯಕ್ಕೆ ಪೊಲೀಸರು ಪ್ರಕರಣದ ಡೈರಿ ಸಲ್ಲಿಕೆ ಮಾಡುತ್ತಾರೆ. ಈ ತನಿಖೆಯ ದಿನಚರಿಯನ್ನು ಆರೋಪಿಗಳಾಗಲೀ, ವಕೀಲರಿಗಾಗಲೀ ತೆಗೆದುಕೊಳ್ಳುವ ಹಕ್ಕು ಇರುವುದಿಲ್ಲ. ಹೀಗಾಗಿ ಡಿಎನ್‌ಎ ಟೆಸ್ಟ್‌ ಮಾಡಿದ್ದಾರೋ ಇಲ್ಲವೋ ಎನ್ನುವುದು ಗೊತ್ತಾಗುವುದಿಲ್ಲ. ಚಾರ್ಜ್‌ ಶೀಟ್‌ ಸಲ್ಲಿಕೆ ಆದಮೇಲೆ ಮಾತ್ರ ಈ ಮಾಹಿತಿ ಗೊತ್ತಾಗಲಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಸಮ್ಮತಿ ಪಡೆದೇ ಡಿಎನ್‌ಎ ಟೆಸ್ಟ್‌ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ" ಎಂದು ದರ್ಶನ್‌ ಪರ ವಕೀಲರು ಹೇಳಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಅನೇಕ ಆರೋಪಿಗಳು ಪೊಲೀಸರ ಬಂಧನದಲ್ಲಿದ್ದಾರೆ. ಇದೇ ಸಮಯದಲ್ಲಿ ಹಲವು ಜನರನ್ನು ವಿಚಾರಣೆ ಮಾಡಲಾಗಿದೆ. ಹಾಸ್ಯ ನಟ ಚಿಕ್ಕಣ್ಣ ಕೂಡ ವಿಚಾರಣೆಗೆ ಹಾಜರಾಗಿದ್ದರು. ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರನ್ನೂ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಕೊಲೆ ನಡೆದ ಮರುದಿನ ದರ್ಶನ್‌ ತಮ್ಮ ಪತ್ನಿ ಜತೆ ಪೂಜೆಯಲ್ಲಿ ಭಾಗಿಯಾಗಿದ್ದರು. ಅವರ ಅಪಾರ್ಟ್‌ಮೆಂಟ್‌ನಲ್ಲಿ ದರ್ಶನ್‌ ಶೂಗಳು ಇದ್ದವು. ವಿಜಯಲಕ್ಷ್ಮೀ ಅಪಾರ್ಟ್‌ಮೆಂಟ್‌ಗೆ ಪೊಲೀಸರು ಆಗಮಿಸಲು ಅನುಮತಿ ನೀಡಲಾಗಿರಲಿಲ್ಲ. ಖುದ್ದು ವಿಜಯಲಕ್ಷ್ಮೀ ಅವರು ಪೊಲೀಸ್‌ ವಿಚಾರಣೆಯನ್ನು ಎದುರಿಸಿದ್ದಾರೆ.

Whats_app_banner