ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ಸೆಟ್ಟೇರಿದ ನಟ ಧರ್ಮ ಕೀರ್ತಿರಾಜ್ ಅಭಿನಯದ ಹೊಸ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ಸೆಟ್ಟೇರಿದ ನಟ ಧರ್ಮ ಕೀರ್ತಿರಾಜ್ ಅಭಿನಯದ ಹೊಸ ಸಿನಿಮಾ

ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ಸೆಟ್ಟೇರಿದ ನಟ ಧರ್ಮ ಕೀರ್ತಿರಾಜ್ ಅಭಿನಯದ ಹೊಸ ಸಿನಿಮಾ

ನಟ ಧರ್ಮ ಕೀರ್ತಿರಾಜ್‌ ನಾಯಕನಾಗಿ ನಟಿಸಲಿರುವ ಸಿನಿಮಾದ ಮುಹೂರ್ತ ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ನೇರವೇರಿದೆ. ರಮೇಶ್‌ ರಾಜ್‌ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ಸೆಟ್ಟೇರಿದ ನಟ ಧರ್ಮ ಕೀರ್ತಿರಾಜ್ ಅಭಿನಯದ ಹೊಸ ಸಿನಿಮಾ
ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ಸೆಟ್ಟೇರಿದ ನಟ ಧರ್ಮ ಕೀರ್ತಿರಾಜ್ ಅಭಿನಯದ ಹೊಸ ಸಿನಿಮಾ

Dharma Keerthiraj: ಸ್ಯಾಂಡಲ್‌ವುಡ್‌ ಖಳ ನಟ ಕೀರ್ತಿರಾಜ್‌ ಅವರ ಪುತ್ರ ಧರ್ಮ ಕೀರ್ತಿರಾಜ್‌ ನಾಯಕನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲವರ್‌ಬಾಯ್‌ಯಿಂದ ಹಿಡಿದು ಆಕ್ಷನ್‌ ಹೀರೋ ಆಗಿಯೂ ಕಣಕ್ಕೆ ಇಳಿದಿದ್ದಾರವರು. ಇದೀಗ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾವೊಂದು ಸೆಟ್ಟೇರಿದೆ. ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದೆ.

ರಮೇಶ್‌ ರಾಜ್‌ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಲಿತನ್ಯ ಗೋಲ್ಡ್ ಲೀಫ್ ಮೀಡಿಯಾ ವೆಂಚರ್ಸ್ ಪ್ರೈ ಲಿಮಿಟೆಡ್ ಹಾಗೂ ಸಾರ್ಥಕ್ ಕ್ರಿಯೇಟರ್ಸ್ ಬ್ಯಾನರ್‌ನಲ್ಲಿ ಜಿ.ಹೆಚ್. ಜನಾರ್ದನ್ ಹಾಗೂ ಸಿ.ಎಲ್ ಹರ್ಷವರ್ಧನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರೊಡಕ್ಷನ್ ನಂ 1 ಎಂದು ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತದಲ್ಲಿ ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ ಆರಂಭ ಫಲಕ ತೋರಿದರೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಂ. ಮುನೇಗೌಡ ಕ್ಯಾಮೆರಾ ಚಾಲನೆ ನೀಡಿದರು.

ಆಕ್ಷನ್ ಡ್ರಾಮ ಶೈಲಿಯ ಈ ಚಿತ್ರಕ್ಕೆ ನಿರ್ದೇಶಕ ರಮೇಶ್ ರಾಜ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಗ್ಯಾಂಗ್ ಲೀಡರ್, ತವರಿನ ಋಣ ಚಿತ್ರಗಳನ್ನು ನಿರ್ದೇಶಿಸಿರುವ ರಮೇಶ್ ರಾಜ್, ಅವರಿಗೆ ಇದು ಮೂರನೇ ಚಿತ್ರ. ಈಶ್ವರಿ ಸುರೇಶ್ ಛಾಯಾಗ್ರಹಣ, ಶಶಿ ಸಂಕಲನ, ಬಿ.ವಿ.ರೆಡ್ಡಿ ಸಹ ನಿರ್ದೇಶನ ಹಾಗೂ ಮಂಜುನಾಥ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ವಂಟೂರು ಶ್ರೀನಿವಾಸ್ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‌

ಧರ್ಮ ಕೀರ್ತಿರಾಜ್ ಅವರಿಗೆ ಪ್ರಿಯಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

Whats_app_banner