ಯಶಸ್ವಿ 25ನೇ ದಿನ ಪೂರೈಸಿದ ಧೀರ ಸಾಮ್ರಾಟ್ ಸಿನಿಮಾ; ಸಂತೋಷ ಕೂಟದಲ್ಲಿ ಭಾವುಕರಾದ ನಿರ್ದೇಶಕ
ಕನ್ನಡ ಸುದ್ದಿ  /  ಮನರಂಜನೆ  /  ಯಶಸ್ವಿ 25ನೇ ದಿನ ಪೂರೈಸಿದ ಧೀರ ಸಾಮ್ರಾಟ್ ಸಿನಿಮಾ; ಸಂತೋಷ ಕೂಟದಲ್ಲಿ ಭಾವುಕರಾದ ನಿರ್ದೇಶಕ

ಯಶಸ್ವಿ 25ನೇ ದಿನ ಪೂರೈಸಿದ ಧೀರ ಸಾಮ್ರಾಟ್ ಸಿನಿಮಾ; ಸಂತೋಷ ಕೂಟದಲ್ಲಿ ಭಾವುಕರಾದ ನಿರ್ದೇಶಕ

Dheera Samrat Movie: ಕನ್ನಡ ಸಿನಿಮಾ "ಧೀರ ಸಾಮ್ರಾಟ್" ಯಶಸ್ವಿ 25 ದಿನಗಳನ್ನು ಪೂರೈಸಿದೆ. ಈ ಸಂಭ್ರಮದ ಸಮಯದಲ್ಲಿ ನಿರ್ಮಾಪಕ ಗುಡುಬಂಡೆ ಸಂತೋಷಕೂಟ ಏರ್ಪಡಿಸಿದ್ದಾರೆ.

ಯಶಸ್ವಿ 25ನೇ ದಿನ ಪೂರೈಸಿದ ಧೀರ ಸಾಮ್ರಾಟ್ ಸಿನಿಮಾ
ಯಶಸ್ವಿ 25ನೇ ದಿನ ಪೂರೈಸಿದ ಧೀರ ಸಾಮ್ರಾಟ್ ಸಿನಿಮಾ

ಬೆಂಗಳೂರು: ಈ ವರ್ಷ ತೆರೆಕಂಡ ಎರಡನೇ ಚಿತ್ರ "ಧೀರ ಸಾಮ್ರಾಟ್" ಯಶಸ್ವಿ 25 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ನಿರ್ಮಾಪಕ ಗುಡಿಬಂಡೆ ಸಂತೋಷ ಕೂಟ ಏರ್ಪಡಿಸಿದ್ದಾರೆ. ಈ ಸಮಯದಲ್ಲಿ ಕಲಾವಿದರು, ತಂತ್ರಜ್ಞರಿಗೆ ಪಾರಿತೋಷಕವನ್ನು ವಿತರಣೆ ಮಾಡಿಸಿದರು. ಈ ಯಶಸ್ವಿ ಸಂಭ್ರಮಾಚರಣೆ ಸಂದರ್ಭ ನಿರ್ದೇಶಕರು ಭಾವುಕರಾಗಿ ಮಾತನಾಡಿದ್ದಾರೆ.

"25 ಎನ್ನುವುದು ಸುಲುಭವಾದುದಲ್ಲ. ನಮ್ಮ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಎಲ್ಲಾ ಭಾಷೆ ಸೇರಿದಂತೆ 21 ಚಿತ್ರಗಳು ತೆರೆ ಕಂಡಿದ್ದವು. ಇದರ ಮಧ್ಯೆ ನಮ್ಮದು ಸತತ ಪ್ರದರ್ಶನ ಕಂಡಿರುವುದು ಖುಷಿಯ ವಿಚಾರ. ಮುಖ್ಯವಾಗಿ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಬೇಕು. ಸಮಸ್ಯೆ ಏನೇ ಬಂದರೂ ಅವರು ತಲೆಕೆಡಿಸಿಕೊಳ್ಳದೆ ಎಲ್ಲರನ್ನು ಹುರಿದುಂಬಿಸುತ್ತಿದ್ದರು. ಅದ್ವಿತಿಶೆಟ್ಟಿ ನಾವು ಕರೆದಾಗಲೆಲ್ಲಾ ಬಂದು ಮಾತು ಉಳಿಸಿಕೊಂಡಿದ್ದಾರೆ" ಎಂದು ನಿರ್ದೇಶಕ ಪವನ್‌ಕುಮಾರ್ ಹೇಳಿದ್ದಾರೆ.

"ನಮ್ಮಂತಹ ಹೊಸ ಚಿತ್ರಕ್ಕೆ ಸ್ಟಾರ್ ನಟರು ಪ್ರೋತ್ಸಾಹ ನೀಡಿದರೆ ಇನ್ನಷ್ಟು ಪ್ರಚಾರ ಸಿಗುತ್ತಿತ್ತು. ಗೆಳೆಯ ಧ್ರುವಸರ್ಜಾ ಮುಹೂರ್ತಕ್ಕೆ ಆಗಮಿಸಿ, ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದಂತೆ ಶ್ರೀಮುರಳಿ ಪೋಸ್ಟರ್ ಅನಾವರಣಗೊಳಿಸಿದ್ದರು. ಅವರೆಲ್ಲರಿಗೂ ನಮ್ಮ ಕಡೆಯಿಂದ ತುಂಬು ಹೃದಯದ ಕೃತಜ್ಘತೆ ಸಲ್ಲಿಸಬೇಕು. ತಮಿಳು,ತೆಲುಗು ಡಬ್ಬಿಂಗ್ ರೈಟ್ಸ್ ಆಗಿದೆ. ಹಿಂದಿ, ಒಟಿಟಿ ಮಾತುಕತೆಯಲ್ಲಿದೆ. ಒಟ್ಟಿನಲ್ಲಿ ಒಂದು ಹಂತದಲ್ಲಿ ನಿರ್ಮಾಪಕರು ಸೇಫ್ ಆಗಿದ್ದಾರೆ" ಎಂದು ಅವರು ಹೇಳಿದರು.

ಅವಕಾಶ ವಂಚಿತರಾಗಿ, ಇನ್ನೇನು ಉದ್ಯಮ ಬಿಡಬೇಕು ಅಂತ ನಿರ್ಧಾರ ಮಾಡಿದ ಸಂದರ್ಭದಲ್ಲಿ ಈ ಸಿನಿಮಾಕ್ಕೆ ಆಫರ್ ಬಂತು. ಇದರಲ್ಲಿ ನಟಿಸುತ್ತಿರುವಾಗಲೇ ಎರಡು ಚಿತ್ರಗಳಿಗೆ ಸಹಿ ಹಾಕಿದೆ. ಒಬ್ಬ ಕಲಾವಿದೆಗೆ 25 ದಿನ ಪ್ರದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವುದು ಅಂದರೆ ಅದಕ್ಕಿಂತ ಸಂತಸ ಬೇರೆ ಇಲ್ಲ. ಇದು ಮುಂದೆ 50,100 ಆಗಲಿ, ಮತ್ತೆ ನಾವೆಲ್ಲರೂ ಸೇರೋಣ. ಅಪ್ಪ ಇದ್ದರೆ ತುಂಬ ಖುಷಿಪಡುತ್ತಿದ್ದರು ಎಂದು ಹೇಳುವಾಗ ಅವರ ಕಣ್ಣುಗಳು ಒದ್ದೆಯಾಗಿದ್ದವು.

ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಸಿನಿಮಾವು ಇನ್ನು ಪ್ರದರ್ಶನ ಕಾಣುತ್ತಿದೆ ಅಂತ ನಿರ್ಮಾಪಕ ಗುಡಿಬಂಡೆ ಮಾಹಿತಿ ನೀಡಿದ್ದಾರೆ. ನಟರಾದ ರವೀಂದ್ರನಾಥ್, ನಾಗೇಂದ್ರ ಅರಸು, ಯತಿರಾಜ್, ಇಂಚರ, ಸಂಗೀತ ನಿರ್ದೇಶಕ ವಿನುಮನಸು, ಸೆನ್ಸಾರ್ ಶಿವು ಮುಂತಾದವರು ಉಪಸ್ಥಿತರಿದ್ದರು. ನಿರ್ದೇಶಕ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್, ಕನ್ನಡಪರ ಹೋರಾಟಗಾರ, ಬಿಗ್‌ಬಾಸ್ ಸ್ಪರ್ಧಿ ರೂಪೇಶ್‌ರಾಜ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Whats_app_banner