Darshan: ಅಣ್ಣ ದರ್ಶನ್‌ ದೊಡ್ಡ ಸ್ಟಾರ್‌ ಆದ್ರೂ, ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ತಮ್ಮ ದಿನಕರ್‌ ತೂಗುದೀಪ! ಹೀಗಿದೆ ಕಾರಣ
ಕನ್ನಡ ಸುದ್ದಿ  /  ಮನರಂಜನೆ  /  Darshan: ಅಣ್ಣ ದರ್ಶನ್‌ ದೊಡ್ಡ ಸ್ಟಾರ್‌ ಆದ್ರೂ, ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ತಮ್ಮ ದಿನಕರ್‌ ತೂಗುದೀಪ! ಹೀಗಿದೆ ಕಾರಣ

Darshan: ಅಣ್ಣ ದರ್ಶನ್‌ ದೊಡ್ಡ ಸ್ಟಾರ್‌ ಆದ್ರೂ, ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ತಮ್ಮ ದಿನಕರ್‌ ತೂಗುದೀಪ! ಹೀಗಿದೆ ಕಾರಣ

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ದಿನಕರ್‌ ತೂಗುದೀಪ ನಟನೆಯ ಕೈವ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಿನಕರ್, ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ್ದಾರೆ.

Darshan: ಅಣ್ಣ ದರ್ಶನ್‌ ದೊಡ್ಡ ಸ್ಟಾರ್‌ ಆದ್ರೂ, ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ತಮ್ಮ ದಿನಕರ್‌ ತೂಗುದೀಪ! ಹೀಗಿದೆ ಕಾರಣ
Darshan: ಅಣ್ಣ ದರ್ಶನ್‌ ದೊಡ್ಡ ಸ್ಟಾರ್‌ ಆದ್ರೂ, ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ತಮ್ಮ ದಿನಕರ್‌ ತೂಗುದೀಪ! ಹೀಗಿದೆ ಕಾರಣ

Darshan: ಸ್ಯಾಂಡಲ್‌ವುಡ್‌ ನಟ ದರ್ಶನ್‌ ಕನ್ನಡದ ಸ್ಟಾರ್‌ ಹೀರೋ. ಸಿನಿಮಾ ಕ್ಷೇತ್ರದಲ್ಲಿಯೇ ಏನಾದರೂ ಮಾಡಬೇಕೆಂದು, ಸ್ಟಾರ್‌ ಖಳನ ಮಗನೆಂಬ ಹಣೆಪಟ್ಟಿಯನ್ನು ಕಿತ್ತೆಸೆದು, ಲೈಟ್‌ ಬಾಯ್‌ ಆಗಿ ಕೆಲಸ ಮಾಡಿ, ಸಣ್ಣ ಸಣ್ಣ ಪಾತ್ರಗಳ ಮೂಲಕ ಚಂದನವನಕ್ಕೆ ಅಡಿಯಿಟ್ಟವರು ದರ್ಶನ್. ಇದೀಗ ಇದೇ ಹೀರೋ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟ. ಕೋಟಿ ಕೋಟಿ ಫ್ಯಾನ್ಸ್‌ ಸಂಪಾದಿಸಿ, ಅಭಿಮಾನಿಗಳ ಎದೆಯಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಹೀಗಿರುವ ದರ್ಶನ್‌ ಅವರ ಸಹೋದರ ದಿನಕರ್‌ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿದ್ದಾರೆ!

ದಿನಕರ್‌ ತೂಗುದೀಪ. ನಟ ದರ್ಶನ್‌ ಅವರ ಸಹೋದರ. ವಯಸ್ಸಿನಲ್ಲಿ ದರ್ಶನ್‌ಗಿಂತ 1 ವರ್ಷ 8 ತಿಂಗಳು ಚಿಕ್ಕವರು. ದರ್ಶನ್‌ ಸಿನಿಮಾ ಕ್ಷೇತ್ರದಲ್ಲಿ ಅಸಿಸ್ಟಂಟ್‌ ಕ್ಯಾಮರಾ ಮನ್‌ ಆಗಿ ಮುಂದುವರಿದರೆ, ದಿನಕರ್‌ ಓದಿನಲ್ಲಿ ಮುಂದು. ಬಿಎಸ್ಸಿ ಕಂಪ್ಯೂಟರ್‌ ಸೈನ್ಸ್‌ ಮುಗಿಸಿದ್ದಾರೆ. ಸಿನಿಮಾ ಸಹವಾಸವೇ ಬೇಡ ಎಂದು ಅಮ್ಮನ ಒತ್ತಾಯಕ್ಕೆ ಸಬ್‌ಇನ್ಸ್‌ಪೆಕ್ಟರ್‌ ಆಗಲು ಹೊರಟಿದ್ದರು ಇದೇ ದಿನಕರ್.‌ ಆದರೆ, ಮತ್ತೆ ಅದ್ಯಾವ ಸುಳಿಗಾಳಿ ಬೀಸಿತೋ ಗೊತ್ತಿಲ್ಲ. ಸಿನಿಮಾರಂಗದಲ್ಲಿಯೇ ಸಕ್ರಿಯರಾದರು.

ಸಿನಿಮಾ ನಿರ್ದೇಶಕರಾಗಬೇಕು ಎಂಬ ದೊಡ್ಡ ಆಸೆ ದಿನಕರ್‌ಗಿತ್ತು. ಹಾಗಂತ ನೇರವಾಗಿ ನಿರ್ದೇಶಕ್ಕೆ ಇಳಿಯಲ್ಲಿ. 2000ರಲ್ಲಿ ಬಿ.ಸಿ. ಗೌರಿ ಶಂಕರ್‌ ಹತ್ತಿರ ಮೂರು ವರ್ಷ ಸಹಾಯಕ ಕ್ಯಾಮರಾಮನ್‌ ಆಗಿ 9 ಸಿನಿಮಾಗಳಲ್ಲಿ ಕೆಲಸ ಮಾಡಿದರು ದಿನಕರ್. 3 ವರ್ಷ ಸಹಾಯಕ ನಿರ್ದೇಶಕರಾಗಿ ಕೆಲಸ ಆರಂಭಿಸಿದರು. ಅದಾದ ಮೇಲೆ 2006ರಲ್ಲಿ ಜೊತೆ ಜೊತೆಯಲಿ ಸಿನಿಮಾ ಮೂಲಕ ಮೊದಲ ಸಲ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನ ಮಾಡಿದರು.

ಅಣ್ಣನ ಕಾಳಜಿ ಬೇರೆಯದ್ದಾಗಿತ್ತು..

ಅಣ್ಣ ದರ್ಶನ್‌ ಅದಾಗಲೇ ಸ್ಟಾರ್‌ ಪಟ್ಟ ಪಡೆದಿದ್ದರು. ನಾನು ಸಿನಿಮಾ ಬಗ್ಗೆ ಅದೂ ಇದೂ ಅಂತ ಏನೇನೋ ಮಾತನಾಡುತ್ತಿದ್ದೆ. ಇವನಿಗೆ ಅವಕಾಶ ಕೊಟ್ಟರೆ ಸಿನಿಮಾ ಮಾಡ್ತಾನಾ ಅನ್ನೋ ಅನುಮಾನ ಇತ್ತು. ನಿರ್ಮಾಪಕರನ್ನು ಭೇಟಿ ಮಾಡಿದಾಗ, ದರ್ಶನ್‌ ಕಡೆ ಒಂದು ಮಾತು ಹೇಳಿಸಿ ಎಂಬ ಉತ್ತರ ಬರುತ್ತಿತ್ತು. ಇದನ್ನು ದರ್ಶನ್‌ ಗಮನಕ್ಕೂ ತಂದಿದ್ದೆ. ಆದರೆ, ಸಿನಿಮಾ ಸರಿ ಮಾಡಲಿಲ್ಲ ಅಂದರೆ, ಒಬ್ಬ ನಿರ್ಮಾಪಕರನ್ನು ನಾನು ಬಲಿ ಕೊಟ್ಟಂಗಾಗುತ್ತೆ. ಕಲೀಲಿ ಅಂತ ಸುಮ್ಮನಿದ್ದ. ನನ್ನ ಮೇಲೆ ಅವನಿಗಾ ಕಾನ್ಫಿಡೆನ್ಸ್‌ ಇಲ್ಲ. ಇತ್ತ ನಾನೂ ನನ್ನ ಪ್ರಯತ್ನ ಮಾಡ್ತಿದ್ದೆ.

ಆರಂಭದಲ್ಲಿ ಜೊತೆ ಜೊತೆಯಲಿ ಚಿತ್ರವನ್ನು 19ನೇ ಸಿನಿಮಾ ನಿರ್ಮಾಪಕರು ರಿಜೆಕ್ಟ್‌ ಮಾಡಿದ್ರು. ಕೊನೆಗೆ ನಾವೇ ಮಾಡೋಣ ಬಾ ಎಂದು ಕರೆದ್ರು ಅಮ್ಮ. ದರ್ಶನ್‌ ಬಿಟ್ಟು ಸಿನಿಮಾ ಮಾಡೋಕೆ ಹೊರಟೆ. ಸಿನಿಮಾ ಹಿಟ್‌ ಆಯ್ತು. ನನ್ನನ್ನೂ ಒಬ್ಬ ನಿರ್ದೇಶಕ ಅಂತ ಬಾಚಿ ತಬ್ಬಿಕೊಂಡರು. ಆ ಸಿನಿಮಾದಲ್ಲಿ ದರ್ಶನ್‌ ಹಸ್ತಕ್ಷೇಪ ಇರಲಿಲ್ಲ. ಸಿನಿಮಾ ನಿರ್ಮಾಣಕ್ಕೆ ಫಂಡ್ಸ್‌ ಕಲೆಕ್ಟ್‌ ಮಾಡಲು ಹೊರಟಿದ್ದಾಗ, ಕರೆದು 10 ಲಕ್ಷ ಕೊಟ್ಟ. ಹೀಗಿರುವಾಗ ವಿಜಯ್‌ ಕಿರಗಂದೂರು ಅವರನ್ನು ಜೊತೆ ಜೊತೆಯಲಿ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕರೆದುಕೊಂಡು ಬಂದೆ.

ಈಗಲೂ ನಾನು ಬಾಡಿಗೆ ಮನೆಯಲ್ಲಿದ್ದೇನೆ..

ಸಿನಿಮಾ ರಿಲೀಸ್‌ ಆಗಿ, ದುಡ್ಡು ಬರೋವರೆಗೂ ನನ್ನ ಬ್ಯಾಂಕ್‌ ಅಕೌಂಟ್‌ ಇರಲಿಲ್ಲ. ವಿಜಯ್‌ ಕಿರಗಂದೂರು ಅವರೇ ವಿಜಯ್‌ ಬ್ಯಾಂಕ್‌ನಲ್ಲಿ ಅಕೌಂಟ್‌ ಮಾಡಿಸಿಕೊಟ್ರು. ಈಗಲೂ ಇದೆ ಅದು. ಅದೇ ಅಕೌಂಟ್‌ಗೆ ಒಂದು ಲಕ್ಷ ಹಣ ಹಾಕಿ ಕೊಟ್ಟು. ಜತೆಗೆ ಬೆಂಗಳೂರಿನಲ್ಲಿ ಒಂದು ಸೈಟ್‌ ಕೊಡಿಸಿದ್ರು. ಈಗಲೂ ಆ ಸೈಟ್‌ ಇದೆ. ಮನೆ ಕಟ್ಟಿಲ್ಲ. ಬಾಡಿಗೆ ಮನೆಯಲ್ಲಿಯೇ ಇದ್ದೇವೆ. ನಮ್ಮ ಅಮ್ಮ ಹೇಳೋವ್ರು, ನೀನು ನಿರ್ದೇಶಕ, ಸಿನಿಮಾದಲ್ಲಿ ನೀನು ಎಷ್ಟು ನೆಮ್ಮದಿಯಿಂದ ಇರುತ್ತೀಯ ಅಷ್ಟು ನಿನ್ನ ತಲೆ ಓಡುತ್ತೆ. ಮೊದಲಿಗೆ ಆದಾಯ ಬರೋ ಹಾಗೆ ಮಾಡ್ಕೋ ಅಂದಿದ್ರು. ಅದರಂತೆ ಇದೀಗ ಅದರಿಂದ ಒಂದಷ್ಟು ಬಾಡಿಗೆ ಬರುತ್ತೆ. ಮನೆಗಾಗಿ ಜಾಗವೂ ಇದೆ. ಮಕ್ಕಳು ಓದುತ್ತಿದ್ದಾರೆ. ಹಾಗಾಗಿ ಇನ್ನೂ ಮನೆ ಮಾಡಿಕೊಂಡಿಲ್ಲ. ಸದ್ಯಕ್ಕೆ ಬಾಡಿಗೆ ಮನೆಯೇ ಎಲ್ಲ" ಎಂದಿದ್ದಾರೆ ದಿನಕರ್.

Whats_app_banner