ನಾಯಕಿ ಕೈಗೆ ಕೊಳಲು, ನಾಯಕನ ಕೈಯಲ್ಲಿ ಪಿಟೀಲು; ವರಸೆ ಬದಲಿಸಿ ಪ್ರೇಮ ಕಥೆಗೆ ಹೊರಳಿದ ನಿರ್ದೇಶಕ ಮಂಸೋರೆ
ಕನ್ನಡ ಸುದ್ದಿ  /  ಮನರಂಜನೆ  /  ನಾಯಕಿ ಕೈಗೆ ಕೊಳಲು, ನಾಯಕನ ಕೈಯಲ್ಲಿ ಪಿಟೀಲು; ವರಸೆ ಬದಲಿಸಿ ಪ್ರೇಮ ಕಥೆಗೆ ಹೊರಳಿದ ನಿರ್ದೇಶಕ ಮಂಸೋರೆ

ನಾಯಕಿ ಕೈಗೆ ಕೊಳಲು, ನಾಯಕನ ಕೈಯಲ್ಲಿ ಪಿಟೀಲು; ವರಸೆ ಬದಲಿಸಿ ಪ್ರೇಮ ಕಥೆಗೆ ಹೊರಳಿದ ನಿರ್ದೇಶಕ ಮಂಸೋರೆ

Doora theera Yaana title teaser: ನಿರ್ದೇಶಕ ಮಂಸೋರೆ ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ದೂರ ತೀರ ಯಾನ ಸಿನಿಮಾ ಮೂಲಕ ಪ್ರೇಮಕಥೆಯೊಂದಿಗೆ ಅವರ ಆಗಮನವಾಗಿದೆ. ಮುಹೂರ್ತ ಮುಗಿಸಿಕೊಂಡ ಈ ಸಿನಿಮಾ ಇನ್ನೇನು ಮುಂದಿನ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡಲಿದೆ.

ನಿರ್ದೇಶಕ ಮಂಸೋರೆ ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ದೂರ ತೀರ ಯಾನ ಸಿನಿಮಾ ಮೂಲಕ ಪ್ರೇಮಕಥೆಯೊಂದಿಗೆ ಅವರ ಆಗಮನವಾಗಿದೆ. ಮುಹೂರ್ತ ಮುಗಿಸಿಕೊಂಡ ಈ ಸಿನಿಮಾ ಇನ್ನೇನು ಮುಂದಿನ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡಲಿದೆ.
ನಿರ್ದೇಶಕ ಮಂಸೋರೆ ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ದೂರ ತೀರ ಯಾನ ಸಿನಿಮಾ ಮೂಲಕ ಪ್ರೇಮಕಥೆಯೊಂದಿಗೆ ಅವರ ಆಗಮನವಾಗಿದೆ. ಮುಹೂರ್ತ ಮುಗಿಸಿಕೊಂಡ ಈ ಸಿನಿಮಾ ಇನ್ನೇನು ಮುಂದಿನ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡಲಿದೆ.

Doora theera Yaana: ಸ್ಯಾಂಡಲ್‌ವುಡ್‌ನ ಸೂಕ್ಷ್ಮ ಸಂವೇದಿ ನಿರ್ದೇಶಕರ ಪೈಕಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಸಹ ಒಬ್ಬರು. ತಮ್ಮ ಬತ್ತಳಿಕೆಯಿಂದ ಸಾಕಷ್ಟು ಸದಭಿರುಚಿ ಸಿನಿಮಾಗಳನ್ನು ನೀಡಿರುವ ಮಂಸೋರೆ, ಇದೀಗ ಟಿಪಿಕಲ್‌ ಲವ್‌ ಸ್ಟೋರಿಯ ಜತೆಗೆ ಆಗಮಿಸುತ್ತಿದ್ದಾರೆ. ಆ ಚಿತ್ರಕ್ಕೆ ದೂರ ತೀರ ಯಾನ ಎಂಬ ಶೀರ್ಷಿಕೆ ಇಟ್ಟಿದ್ದಾರೆ.

ಡಿ ಕ್ರಿಯೇಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಚಿತ್ರಗಳನ್ನು ಕರುನಾಡ ಸಿನಿಪ್ರೇಕ್ಷಕರಿಗೆ ನೀಡಿದ್ದಾರೆ ನಿರ್ದೇಶಕ ದೇವರಾಜ್. ಮಂಸೋರೆ ನಿರ್ದೇಶನದ ಹರಿವು, ನಾತಿಚರಾಮಿ, ಆಕ್ಟ್ 1978, 19.20.21 ನಂತಹ ಜನಮೆಚ್ಚುಗೆ ಪಡೆದ ಚಿತ್ರಗಳಿಗೆ ದೇವರಾಜ್‌ ಆರ್‌ ಬಂಡವಾಳ ಹೂಡಿದ್ದಾರೆ. ಇದೀಗ ಇದೇ ಮಂಸೋರೆ ತಮ್ಮ ಮುಂದಿನ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ದೂರ ತೀರ ಯಾನ ಎಂದು ಶೀರ್ಷಿಕೆ ಇಡಲಾಗಿದೆ.

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಈ ಚಿತ್ರದ ನಾಯಕ - ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ಟೀಸರ್ ಅನಾವರಣ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಿರ್ದೇಶಕ ಮಂಸೋರೆ ಹೇಳುವುದೇನು?

"ನನ್ನ ಹಿಂದಿನ ಚಿತ್ರಗಳನ್ನು ನೀವು ನೋಡಿದ್ದೀರಾ. ಅದನ್ನು ಮೀರಿಸುವ ಪ್ರಯತ್ನ ದೂರ ತೀರ ಯಾನ ಎಂದು ಮಾತನಾಡಿದ ನಿರ್ದೇಶಕ ಮಂಸೋರೆ, "ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಅವರ ನಿರೀಕ್ಷೆಗಳು ಸಾಕಷ್ಟಿದೆ. ಹೀಗೆ ನಾವು ಬದಲಾದ ಪರಿಸ್ಥಿತಿಗೆ ಹೊಂದುಕೊಂಡು‌,‌ ಅವರಿಗೆ ಬೇಕಾದ ರೀತಿಯ ಸಿನಿಮಾ ಮಾಡಬೇಕು. ಆ ನಿಟ್ಟಿನಲ್ಲಿ‌ ಈಗ ನಾನು ಮಾಡಲು ಹೊರಟಿರುವ ಸಿನಿಮಾ ದೂರ ತೀರ ಯಾನ. ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ.

ಕಾಲೇಜು ಗೆಳೆಯನೇ ಈ ಚಿತ್ರದ ಹೀರೋ

ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ - ಹುಡುಗಿ ಹೊಸರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆಯೂ ಹೌದು. ಈಗಾಗಲೇ ಹಿಂದಿ ಸೇರಿದಂತೆ ಅನೇಕ ಭಾಷೆಗಳ ವೆಬ್ ಸಿರೀಸ್ ಗಳಲ್ಲಿ ಹಾಗೂ ನನ್ನ ನಿರ್ದೇಶನದ ಆಕ್ಟ್ 1978 ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನನ್ನ ಕಾಲೇಜು ಗೆಳೆಯ ವಿಜಯ್ ಕೃಷ್ಣ ನಾಯಕನಾಗಿ, ರುದ್ರ ಗರುಡ ಪುರಾಣ ಚಿತ್ರದ ಖ್ಯಾತಿಯ ಪ್ರಿಯಾಂಕ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದರು.

ದೂರ ತೀರ ಯಾನದಲ್ಲಿ ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜಿಸುತ್ತಿರುವ ಆರು ಹಾಡುಗಳಿರುತ್ತದೆ‌. ಶೇಖರ್ ಚಂದ್ರ ಛಾಯಾಗ್ರಹಣ, ನಾಗೇಂದ್ರ ಕೆ ಉಜ್ಜನಿ ಸಂಕಲನವಿರುವ ಈ ಚಿತ್ರಕ್ಕೆ ಚೇತನ ತೀರ್ಥಹಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ. ಸೆಪ್ಟೆಂಬರ್ ನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ತುಂಬಾ ದಿನಗಳಿಂದ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಗೆಳೆಯ ಮಂಸೋರೆ ಒಂದೊಳ್ಳೆ ಕಥೆ ಮಾಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕ ವಿಜಯಕೃಷ್ಣ. ರುದ್ರ ಗರುಡ ಪುರಾಣದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈ ಚಿತ್ರದಲ್ಲಿ ಆ ಪಾತ್ರ ಸಿಕ್ಕಿದೆ ಎಂದರು ನಾಯಕಿ ಪ್ರಿಯಾಂಕ ಕುಮಾರ್. ನಿರ್ಮಾಪಕ ದೇವರಾಜ್, ಸಂಗೀತ ನಿರ್ದೇಶಕರಾದ ಬಕೇಶ್ -ಕಾರ್ತಿಕ್, ಛಾಯಾಗ್ರಾಹಕ ಶೇಖರ್ ಚಂದ್ರ ಮುಂತಾದ ಚಿತ್ರತಂಡದ ಸದಸ್ಯರು ಹಾಗೂ ಸತ್ಯ ಹೆಗಡೆ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Whats_app_banner