ಕನ್ನಡ ಸುದ್ದಿ  /  ಮನರಂಜನೆ  /  ‘ಚಿಲ್ಲಿ ಚಿಕನ್’ ಇದು ಕೇರಳ ನಿರ್ದೇಶಕ, ಗುಜರಾತ್‌ ನಿರ್ಮಾಪಕ, ಮಣಿಪುರ, ಮೇಘಾಲಯ, ಚೆನ್ನೈ ಕಲಾವಿದರ ಕನ್ನಡ ಸಿನಿಮಾ

‘ಚಿಲ್ಲಿ ಚಿಕನ್’ ಇದು ಕೇರಳ ನಿರ್ದೇಶಕ, ಗುಜರಾತ್‌ ನಿರ್ಮಾಪಕ, ಮಣಿಪುರ, ಮೇಘಾಲಯ, ಚೆನ್ನೈ ಕಲಾವಿದರ ಕನ್ನಡ ಸಿನಿಮಾ

‌ಕನ್ನಡದ ಚಿಲ್ಲಿ ಚಿಕನ್ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಸಿನಿಮಾ ಪ್ರಿಯರು ಒಂದಾಗಿದ್ದಾರೆ. ಈ ಚಿತ್ರದ ನಿರ್ದೇಶಕ ಕೇರಳದವರು, ನಿರ್ಮಾಪಕ ಗುಜರಾತಿನವರು, ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಈಗ ಇದೇ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ.

‘ಚಿಲ್ಲಿ ಚಿಕನ್’ ಇದು ಕೇರಳ ನಿರ್ದೇಶಕ, ಗುಜರಾತ್‌ ನಿರ್ಮಾಪಕ, ಮಣಿಪುರ, ಮೇಘಾಲಯ, ಚೆನ್ನೈ ಕಲಾವಿದರ ಕನ್ನಡ ಸಿನಿಮಾ
‘ಚಿಲ್ಲಿ ಚಿಕನ್’ ಇದು ಕೇರಳ ನಿರ್ದೇಶಕ, ಗುಜರಾತ್‌ ನಿರ್ಮಾಪಕ, ಮಣಿಪುರ, ಮೇಘಾಲಯ, ಚೆನ್ನೈ ಕಲಾವಿದರ ಕನ್ನಡ ಸಿನಿಮಾ

Chilli chicken Teaser: ಕೆಲಸಕ್ಕೆಂದು ಉತ್ತರ ಭಾರತದಿಂದ ಬಂದ ಐವರು ಹುಡುಗರು ಬೆಂಗಳೂರಿನಲ್ಲಿ ಚೈನೀಸ್ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮಾಡುತ್ತ, ತಾವೇ ಸ್ವಂತ ಹೋಟೆಲ್ ತೆರೆಯಲು ಮುಂದಾಗುತ್ತಾರೆ. ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಗೆಲ್ಲುತ್ತಾರಾ, ಇಲ್ವಾ? ಎನ್ನುವುದೇ ಚಿಲ್ಲಿ ಚಿಕನ್ ಚಿತ್ರದ ಕಥಾಹಂದರ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಸಿನಿಮಾದ ಟೀಸರ್‌ ಇದೀಗ ಬಿಡುಗಡೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೆಟನೋಯ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ನಿರ್ಮಾಣದ, ಪ್ರತೀಕ್ ಪ್ರಜೋಶ್ ಅವರ ನಿರ್ದೇಶನದ ಚಿಲ್ಲಿ ಚಿಕನ್‌ ಸಿನಿಮಾ ಮೂಡಿಬಂದಿದೆ. ಬೆಂಗಳೂರಲ್ಲಿ ನಡೆದ ನೈಜ ಘಟನೆ ಆಧರಿಸಿ ಈ ಸಿನಿಮಾ ನಿರ್ಮಾಣವಾಗಿದೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸೌಂಡ್ ಮಾಡುತ್ತಿವೆ. ಅದರಂತೆ ಈ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಸಿನಿಮಾ ಪ್ರಿಯರು ಒಂದಾಗಿರುವುದು ವಿಶೇಷ. ಚಿತ್ರದ ನಿರ್ದೇಶಕ ಕೇರಳದವರು, ನಿರ್ಮಾಪಕ ಗುಜರಾತಿನವರು. ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು.

ನಿರ್ಮಾಪಕ ದೀಪ್ ಭೀಮಾಜಿಹಾನಿ ಮಾತನಾಡಿ, ನಾನು ಈಗಾಗಲೇ ಹಿಂದಿಯಲ್ಲಿ ಒಂದಿಷ್ಟು ಶಾರ್ಟ್ ಫಿಲಂಗಳನ್ನು ನಿರ್ಮಿಸಿದ್ದೇನೆ. ಈ ಚಿತ್ರವನ್ನು ಕನ್ನಡದಲ್ಲಿ ಮಾತ್ರ ಮಾಡಿದ್ದೇವೆ. ಜೂನ್ ವೇಳೆಗೆ ರಿಲೀಸ್ ಮಾಡುವ ಪ್ಲ್ಯಾನ್ ಇದೆ ಎಂದರು. ನಿರ್ದೇಶಕ ಪ್ರತೀಕ್ ಪ್ರಜೋಶ್, ಹಿಂದಿಯ ಪದ್ಮಾವತ್ ಸೇರಿದಂತೆ ಮಲಯಾಳಂ, ಗುಜರಾತಿ ಭಾಷೆಯ ಹಲವು ಸಿನಿಮಾಗಳಿಗೆ ಕೆಲಸ ಮಾಡಿ, ಕೆಲ ಶಾರ್ಟ್ ಫಿಲಂ ಡೈರೆಕ್ಷನ್ ಮಾಡಿದ್ದೇನೆ. ಚಿಲ್ಲಿ ಚಿಕನ್ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ನಾನು ಮೂಲತಃ ಕೇರಳದವನು. ಇಲ್ಲಿಯ ಜನ ಹಾಗೂ ಪರಿಸರ ನನಗೆ ತುಂಬಾ ಇಷ್ಟ. ಬೆಂಗಳೂರನಲ್ಲೇ ಶಿಕ್ಷಣ ಪಡೆದಿದ್ದೇನೆ ಎಂದರು ನಿರ್ದೇಶಕ ಪ್ರತೀಕ್.‌

ನೈಜ ಘಟನೆ ಆಧರಿತ ಸಿನಿಮಾ

ಮುಂದುವರಿದು ಮಾತನಾಡುವ ಅವರು, ನಾಲ್ಕು ಜನ ಉತ್ತರ ಭಾರತೀಯರು ಸೇರಿ ಬೆಂಗಳೂರಿನಲ್ಲಿ ಚೈನೀಸ್ ರೆಸ್ಟೋರೆಂಟ್ ಪ್ರಾರಂಭಿಸಲು ಪ್ಲ್ಯಾನ್ ಮಾಡುತ್ತಾರೆ. ಅದು ಆಗುತ್ತಾ, ಇಲ್ವಾ ಅನ್ನೋದೆ ಸಿನಿಮಾ. ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರವಾಗಿದೆ.‌ ಬಹಳ ಇಂಟರೆಸ್ಟಿಂಗ್ ಆಗಿ ಕಥೆ ಸಾಗುತ್ತದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಕೊರಿಯನ್ ಮಾದರಿಯ ಕನ್ನಡ ಡ್ರಾಮಾ ಸಿನಿಮಾ ಎನ್ನಬಹುದು ಎಂದು ಹೇಳಿದರು.

ನಂತರ ನಟ ಶೃಂಗಾ ಮಾತನಾಡಿ, ಆದರ್ಶ ಎಂಬ ಹೊಟೇಲ್ ಮಾಲಿಕನ ಪಾತ್ರ ಮಾಡಿದ್ದೇನೆ. ಕಥೆ ಕೇಳಿದಾಗ ಇಷ್ಟ ಆಯ್ತು. ತುಂಬಾ ಸೂಕ್ಷ್ಮವಾದ ವಿಚಾರಗಳನ್ನು ಹ್ಯೂಮರಸ್ ಆಗಿ ಹೇಳಲಾಗಿದೆ. ಬೇರೆ ರಾಜ್ಯದಿಂದ ಬಂದ ಹುಡುಗರು ಯಾವ ರೀತಿ ಇರ್ತಾರೆ, ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ, ನಾವು ಬೇರೆಯವರನ್ನು ಹೇಗೆ ನೋಡುತ್ತೇವೆ ಮತ್ತು ಅವರು ನಮ್ಮೊಂದಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತೋರಿಸಲಾಗಿದೆ ಎಂದರು.

ಪಾತ್ರಧಾರಿಗಳು ಯಾರ್ಯಾರು?

ನಟಿ ರಿನಿ ಮಾತನಾಡಿ ನಾನು ಚೆನ್ನೈ ಮೂಲದವಳು. ತಮಿಳು, ತೆಲಗು, ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಇದರಲ್ಲಿ‌ ಉತ್ತರ ಭಾರತದ ಹುಡುಗಿ ಅನು ಪಾತ್ರ ಮಾಡಿದ್ದೇನೆ ಎಂದರು. ಮತ್ತೋರ್ವ ನಟಿ ನಿತ್ಯಶ್ರೀ ವರ್ಷ ಹೆಸರಿನಲ್ಲಿ ನಾಯಕನ ಗರ್ಲ್‌ ಫ್ರೆಂಡ್ ಆಗಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ, ವಿಕ್ಟರ್ ತೌಡಮ್, ಜಿಂಪಾ ಭುಟಿಯಾ, ಟಾಮ್‌ಥಿನ್ ಥೋಕ್‌ಚೋಮ್, ಹಿರಾಕ್ ಸೋನೊವಾಲ್ ಮುಂತಾದವರಿದ್ದಾರೆ.‌

ತಾಂತ್ರಿಕ ವರ್ಗ ಹೀಗಿದೆ

ಸಿದ್ದಾಂತ್ ಸುಂದರ್ ಅವರ ಸಂಗೀತ ಸಂಯೋಜನೆ, ಶ್ರೀಶ್ ತೋಮರ್ ಅವರ ಛಾಯಾಗ್ರಹಣ, ಆಶಿಕ್ ಕೆ.ಎಸ್ ಅವರ ಸಂಕಲನ, ತ್ರಿಲೋಕ್ ಮತ್ತು ಕೆಎಎಸ್ ಅವರ ಸಂಭಾಷಣೆ, ಸಿದ್ದಾಂತ್ ಸುಂದರ್, ಪ್ರತೀಕ್ ಪ್ರಜೋಶ್ ಮತ್ತು ಕೆಎಎಸ್ ಅವರ ಕಥೆ, ಕೆಎಎಸ್ ಮತ್ತು ಪ್ರತೀಕ್ ಪ್ರಜೋಶ್ ಅವರ ಚಿತ್ರಕಥೆ, ಮಾರ್ಟಿನ್ ಯೋ ಅವರ ಸಾಹಿತ್ಯ, ಮಾಸ್ಟರ್ ಎನ್ ಎ ಅವರ ಸಾಹಸ ಸಂಯೋಜನೆ‌ ಈ ಚಿತ್ರಕ್ಕಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024