ಓನರ್‌ಶಿಪ್ ಅರ್ಥದಲ್ಲಿ 'ಕರಿಮಣಿ ಮಾಲೀಕ'ನ ಎಳೆದಾಟ; ಅಪ್ರಸ್ತುತ ಸರಕಿನ ಮೇಲೆ ಯಾಕಿಷ್ಟು ವ್ಯಾಮೋಹ? ಚರ್ಚೆ
ಕನ್ನಡ ಸುದ್ದಿ  /  ಮನರಂಜನೆ  /  ಓನರ್‌ಶಿಪ್ ಅರ್ಥದಲ್ಲಿ 'ಕರಿಮಣಿ ಮಾಲೀಕ'ನ ಎಳೆದಾಟ; ಅಪ್ರಸ್ತುತ ಸರಕಿನ ಮೇಲೆ ಯಾಕಿಷ್ಟು ವ್ಯಾಮೋಹ? ಚರ್ಚೆ

ಓನರ್‌ಶಿಪ್ ಅರ್ಥದಲ್ಲಿ 'ಕರಿಮಣಿ ಮಾಲೀಕ'ನ ಎಳೆದಾಟ; ಅಪ್ರಸ್ತುತ ಸರಕಿನ ಮೇಲೆ ಯಾಕಿಷ್ಟು ವ್ಯಾಮೋಹ? ಚರ್ಚೆ

ಕರಿಮಣಿ ಮಾಲೀಕ ನೀನಲ್ಲ ಹಾಡು ಮುನ್ನೆಲೆಗೆ ಬಂದು ವೈರಲ್‌ ಆಗಿದೆ. ಇದೇ ಹಾಡಿನ ಬಗ್ಗೆ ಕೆಲವು ವಿಚಾರಗಳಿಗೆ ಚರ್ಚೆಯೂ ನಡೆಯುತ್ತಿದೆ. ನಾವೀಗ ಶೋಷಣೆ ದೂಷಣೆ ಎಲ್ಲದರ ಸಮಾನತೆಯಲ್ಲಿ ಇದ್ದೇವೆ. ಯಾರೂ ಮಾಲೀಕರು ಅಲ್ಲ, ಸೇವಕರೂ ಅಲ್ಲ. ಜಗತ್ತನ್ನೇ ಮೊಬೈಲಿನಲ್ಲಿ ಇಟ್ಟು‌ ಓಡಾಡುವ ಸಮಯದಲ್ಲಿ ಈ ಹಾಡು ಈ ಕಾಲಕ್ಕೆ ಅಪ್ರಸ್ತುತ ಅಂತನ್ನಬಹುದೇನೋ ಎನ್ನುತ್ತಿದ್ದಾರೆ.

ಓನರ್‌ಶಿಪ್ ಅರ್ಥದಲ್ಲಿ 'ಕರಿಮಣಿ ಮಾಲೀಕ'ನ ಎಳೆದಾಟ; ಅಪ್ರಸ್ತುತ ಸರಕಿನ ಮೇಲೆ ಯಾಕಿಷ್ಟು ವ್ಯಾಮೋಹ? ಚರ್ಚೆ
ಓನರ್‌ಶಿಪ್ ಅರ್ಥದಲ್ಲಿ 'ಕರಿಮಣಿ ಮಾಲೀಕ'ನ ಎಳೆದಾಟ; ಅಪ್ರಸ್ತುತ ಸರಕಿನ ಮೇಲೆ ಯಾಕಿಷ್ಟು ವ್ಯಾಮೋಹ? ಚರ್ಚೆ

Karimani Malika Song: ಸೋಷಿಯಲ್‌ ಮೀಡಿಯಾದಲ್ಲೀಗ ಕರಿಮಣಿ ಮಾಲೀಕ ಹಾಡು ಟ್ರೆಂಡಿಂಗ್‌ನಲ್ಲಿದೆ. ಇನ್‌ಸ್ಟಾಗ್ರಾಂನಲ್ಲಿ 25 ವರ್ಷಗಳಷ್ಟು ಹಳೆಯ ಹಾಡು ಕೊಸರಿ ಮೇಲೆದ್ದಿದೆ. ಸಾವಿರಾರು ರೀಲ್ಸ್‌ಗಳಾಗಿ ಎಲ್ಲರನ್ನೂ ಕುಣಿಸಲಾರಂಭಿಸಿದೆ. ಈ ಹಾಡಿನ ಸೃಷ್ಟಿಕರ್ತರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಅಂದಿನ ಸ್ಥಿತಿಗತಿಯನ್ನು ಮತ್ತೆ ಮೆಲುಕು ಹಾಕುತ್ತಿದ್ದಾರೆ. ಹಾಡು ಹುಟ್ಟಿದ ಕಥೆ, ಸಂಗೀತ ಮೂಡಿದ ಎಳೆಯನ್ನು ಮತ್ತೊಮ್ಮೆ ತೆರೆದಿಡುತ್ತಿದ್ದಾರೆ. ಇಲ್ಲದರ ನಡುವೆ ಇದೇ ಹಾಡಿನ ಸಾಹಿತ್ಯ ಮತ್ತು ಸದ್ಯದ ಪ್ರಸ್ತುತತೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ತುಂಬ ವ್ಯತ್ಯಾಸವಿದೆ. ಹೆಣ್ಣು ಗಂಡಿನ ನಡುವಿನ ಸ್ವಾತಂತ್ರ್ಯವೂ ಇದರಲ್ಲೊಂದು. ಆಗಿನ ದಿನಗಳಲ್ಲಿ ಇದೇ ಹಾಡಿನಲ್ಲಿ ವಿಷಾದ ಮತ್ತು ವಿಪರ್ಯಾಸ ಕಾಣುತ್ತಿತ್ತು. ಮನೆಯ ಹೆಣ್ಣು ಮಕ್ಕಳು ಇದನ್ನು ಗುನುಗುತ್ತಿದ್ದ ರೀತಿಯಲ್ಲೇ ಅವರ ಆಂತರ್ಯ ಎದ್ದು ಕಾಣಿಸುತ್ತಿತ್ತು. ಆದರೆ, ಇದೀಗ ಅದು 'ಕರಿಮಣಿ ಮಾಲೀಕ' ಅನ್ನುವ ಓನರ್‌ಶಿಪ್ ಅರ್ಥದಲ್ಲಿ ಎಳೆದಾಡಲಾರಂಭಿಸಿದೆ ಎಂದು ವಿಕ್ರಮ್‌ ಹತ್ವಾರ್‌ ಎಂಬುವವರು ಈ ಹಾಡಿನ ಬಗ್ಗೆ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ ಚರ್ಚಾ ವಿಷಯವಾಗಿಯೂ ಬದಲಾಗಿದೆ.

ಡಿಗ್ರೀ ಆಫ್ ಇರ್ರಿಲವೆನ್ಸ್ ಹೆಚ್ಚಾಗಿದೆ..

'ಉಪೇಂದ್ರ' ಸಿನಿಮಾ 'ಏನಿಲ್ಲ ಏನಿಲ್ಲ' ಹಾಡು ಆ ಕಾಲದಲ್ಲಿ ಕೆಲವು ಹೆಂಗಸರಿಗಾದರು - ಕರಿಮಣಿ ಮಾಲೀಕ ನೀನು ಅಲ್ಲ - ಅನ್ನುವ ಅಭಿವ್ಯಕ್ತಿಯನ್ನು ಕೊಟ್ಟಿತ್ತು. ಮತ್ತು ಕೆಲವರಿಗೆ - ಏನು ಮಾಡೋದು, ಕರಿಮಣಿ ಮಾಲೀಕ ನೀ ನಲ್ಲ - ಅನ್ನುವ ಅನಿವಾರ್ಯ ಬಂಧನದ ಸೆಂಟಿಮೆಂಟ್ ತುಂಬಿದ ಪ್ರತಿರೋಧದ ಅಭಿವ್ಯಕ್ತಿಯೂ ಆಗಿತ್ತು. ಇಡೀ ಹಾಡಿನಲ್ಲಿ ವಿಷಾದ ಮತ್ತು ವಿಪರ್ಯಾಸವಿದೆ. ನಮ್ಮ ಮನೆಯ ಹೆಣ್ಣು ಮಕ್ಕಳು ಇದನ್ನು ಗುನುಗುತ್ತಿದ್ದ ರೀತಿಯಲ್ಲೇ ಅವರ ಆಂತರ್ಯ ಕಾಣಿಸುತ್ತಿತ್ತು.

ಈಗ ಎಲ್ಲರೂ ಅದನ್ನು ಬರೀ 'ಕರಿಮಣಿ ಮಾಲೀಕ' ಅನ್ನುವ ಓನರ್‌ಶಿಪ್ ಅರ್ಥದಲ್ಲಿ ಎಳೆದಾಡುತ್ತಿರುವಂತೆ ಅಲ್ಲ. ಮತ್ತು, ಈಗ ಅಂಥ ವಿಷಾದ, ವಿಪರ್ಯಾಸ, ಮತ್ತು ಗಂಡಸಿನ ಸಮಾಜದ ಮುಲಾಜುಗಳು ಇಲ್ಲದೆ ಹೆಣ್ಣು ಸ್ವತಂತ್ರವಾಗಿ ತನ್ನ ಜೀವನವನ್ನು ನಿರ್ವಹಿಸಲು ಬೇಕಾದ ಅವಕಾಶಗಳು ಹಿಂದಿನ ಕಾಲಕ್ಕಿಂತ ವಿಪುಲವಾಗಿದೆ. ಈ ಕಾಲಕ್ಕೆ ಈ ಹಾಡಿನ ಡಿಗ್ರೀ ಆಫ್ ಇರ್ರಿಲವೆನ್ಸ್ ಹೆಚ್ಚಾಗಿದೆ. ಪೂರ್ತಿ ತೊಡೆದು ಹೋಗಿಲ್ಲ ಅನ್ನುವುದೇ ಖೇದಕರ" ಎಂದಿದ್ದಾರೆ.

ಈ ಪೋಸ್ಟ್‌ಗೆ ಕೆಲವರು ವಿವರಣೆ ನೀಡಿ ಸರಿಯೆಂದು ಮತ್ತಷ್ಟು ವಿಷಯ ಸೇರಿಸಿದ್ದಾರೆ. ಆ ಪೈಕಿ ನೀಲಿ ಚಿಟ್ಟೆ ಎಂಬ ಫೇಸ್‌ಬುಕ್‌ ಖಾತೆಯಿಂದಲೂ ಸುದೀರ್ಘ ಬರಹ ಸಂದಾಯವಾಗಿದೆ. ಅದು ಹೀಗಿದೆ.

ಅಪ್ರಸ್ತುತ ಸರಕಿನ ಮೇಲೆ ಕೆಲವರಿಗೆ ವ್ಯಾಮೋಹ

ಮೊದಲನೆಯದು: ಇದೊಂದು ಸಿನೆಮಾ ಹಾಡು, ಅದರಲ್ಲೂ ಆ ಸಿನೆಮಾದಲ್ಲಿ ಘಟನೆಗೆ ಪೂರಕವಾಗಿ ರಚಿಸಿದ ಹಾಡು. ಈ ಸಿನೆಮಾ ಬಿಡುಗಡೆಯಾದ ಹೊಸದರಲ್ಲಿ ಟಿವಿಗೆ ರೇಡಿಯೋಗೆ ಸಂದರ್ಶನ ನೀಡಿದ ಸಂಗೀತ ನಿರ್ದೇಶಕ ಗುರು ಕಿರಣ್, ಈ ಹಾಡನ್ನ misinterpret ಮಾಡ್ತಿರೋ ಬಗ್ಗೆ ಹೇಳ್ತಾ ಅದು ನೀನಲ್ಲ ಅಲ್ಲ ನೀ ನಲ್ಲ‌ ಅಂತ ಅವರ ಡ್ರಮ್ ತಬಲಾ ಜೊತೆಗೆ ತೋರ್ಸಿದ್ದು‌ ಇನ್ನೂ ನನ್ನ ನೆನಪಿನಲ್ಲಿ ಇದೆ.

ಎರಡನೆಯದು: ನಾವೀಗ ಶೋಷಣೆ ದೂಷಣೆ ಎಲ್ಲದರ ಸಮಾನತೆಯಲ್ಲಿ ಇದ್ದೇವೆ. ಯಾರೂ ಮಾಲೀಕರು ಅಲ್ಲ, ಸೇವಕರೂ ಅಲ್ಲ. ತಾಂತ್ರಿಕವಾಗಿ ಜಗತ್ತನ್ನೇ ಮೊಬೈಲಿನಲ್ಲಿ ಇಟ್ಟು‌ಓಡಾಡುವ ಸಮಯದಲ್ಲಿ ಈ ಹಾಡು ಈ ಕಾಲಕ್ಕೆ ಅಪ್ರಸ್ತುತ ಅಂತನ್ನಬಹುದೇನೋ, ಹಾಗೆ ಬೇಕಾದಷ್ಟು ಅಪ್ರಸ್ತುತ ಸರಕುಗಳು ಎಲ್ಲ ರಂಗಗಳಲ್ಲಿ ಇವೆ ಮತ್ತು ಹಳೆಯದರ‌ ಮೇಲೆ ವ್ಯಾಮೋಹ ಹೊಂದಿದ ಒಂದು ವರ್ಗವೆ ಇದೆ.

ಮೂರನೆಯದಾಗಿ: ಆಯ್ಕೆ ನಮ್ಮದೆ, ಭಾವಗೀತೆಗಳಲ್ಲೂ ಆ ಭಾವವು ಇರಬಹುದೇನೋ, ಅದು ಒಂದು ಥರಕ್ಕೆ ಶರಣಾಗತಿಯ ಉತ್ತುಂಗ, ಗಂಡು ಹೆಣ್ಣಿನ ನಡುವಿನ ಮಾನುಷ ಭಾವವೂ ಆಗಬಹುದು, ಅಥವಾ ದೇವರು ಮನುಜನ ನಡುವಿನ ಭಕ್ತಿ ಕೂಡ ಆಗಿರಬಹುದು, ಶರಣಸತಿ ಲಿಂಗ ಪತಿಯಲ್ಲು ಅದೇ ಭಾವವೆ ಕಾಣುತ್ತದೆ ಅಲ್ವೆ? ನಾವು ಇದಕ್ಕೆ ವಿಶ್ಲೇಷಣೆ ಕೊಡಬಹುದು ಅಥವಾ ಗಮನವನ್ನು ಕೊಡದೆ ನಕ್ಕು ಮುಂದೆ ಸಾಗುವ ಆಪ್ಶನ್ ಕೂಡ ಉಂಟು.

ಸಿನೆಮಾದ ಹಾಡುಗಳಲ್ಲಿ ಈ ಭಾವವಿರುವ ಬಹಳಷ್ಟಿವೆ ಉದಾಹರಣೆಗೆ 'ಕಂಗಳು ವಂದನೆ ಹೇಳಿವೆ' 'ದೂರ ದೂರ ಅಲ್ಲೆ ನಿಲ್ಲಿ' 'ತನು ನಿನ್ನದು ಈ ಮನ ನಿನ್ನದು' ಇಲ್ಲೆಲ್ಲ ಕಾಣುವುದು ಅದೇ ಭಾವವೆ! ಕೆಎಸ್ ನ ಅವರ ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆಯಲ್ಲಿ, ಗಂಡ ಕೂಗಿದಾಗೆಲ್ಲ ಬರುವ ಆ ಪುಟ್ಟ ನವವಧು ಕವಿಯ ನಡುವೆ ಇದ್ದದ್ದು ಅದೇ ಭಾವ ಅನ್ನಿಸಲ್ವ!ಇದೆಲ್ಲ ನನಗೆ ಅನ್ನಿಸಿದ್ದು ಅಷ್ಟೇ! ಎಂದಿದ್ದಾರೆ.

Whats_app_banner