ಕನ್ನಡ ಸುದ್ದಿ  /  Entertainment  /  Sandalwood News Dr Vishnuvardhan Fans Arranged Mass Marriage In Dharwad Vishnu Senani Ghataka Dharwad Pcp

ಸಾಹಸಸಿಂಹ ಅಭಿನವ ಭಾರ್ಗವ ಡಾ ವಿಷ್ಣುವರ್ಧನ್ ಹೆಸರಲ್ಲಿ ಸಾಮೂಹಿಕ ವಿವಾಹ; ವಿಷ್ಣು ಸೇನಾನಿಗಳ ಸಾಮಾಜಿಕ ಕಾರ್ಯಕ್ಕೆ ಜೈಹೋ

ಸಾಹಸಸಿಂಹ ಅಭಿನವ ಭಾರ್ಗವ ಡಾ ವಿಷ್ಣುವರ್ಧನ್ ಹೆಸರಲ್ಲಿ ವಿಷ್ಣು ಸೇನಾ ಸಮಿತಿ ಧಾರವಾಡ ಘಟಕವು ಸಾಮೂಹಿಕ ವಿವಾಹ ನಡೆಸಿದೆ. ಮೃತ್ಯುಂಜಯ ಹಿರೇಮಠ ಎಂಬ ಸಾಮಾನ್ಯ ಆಟೋ ಚಾಲಕ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ವಿಶೇಷ.

ಸಾಹಸಸಿಂಹ ಅಭಿನವ ಭಾರ್ಗವ ಡಾ ವಿಷ್ಣುವರ್ಧನ್ ಹೆಸರಲ್ಲಿ ಸಾಮೂಹಿಕ ವಿವಾಹ ಆಯೋಜನೆ
ಸಾಹಸಸಿಂಹ ಅಭಿನವ ಭಾರ್ಗವ ಡಾ ವಿಷ್ಣುವರ್ಧನ್ ಹೆಸರಲ್ಲಿ ಸಾಮೂಹಿಕ ವಿವಾಹ ಆಯೋಜನೆ

ಬೆಂಗಳೂರು: ಸಾಹಸಸಿಂಹ ಅಭಿನವ ಭಾರ್ಗವ ಡಾ ವಿಷ್ಣುವರ್ಧನ್ ಅವರು ನಿಧನರಾಗಿ ಹದಿನಾಲ್ಕು ವರ್ಷ ಕಳೆದ್ರೂ ಅವರ ಅಭಿಮಾನಿಗಳಿಗೆ ಅವರ ಮೇಲೆ ದಿನದಿಂದ ದಿನಕ್ಕೆ ಅಭಿಮಾನ ಜಾಸ್ತಿಯಾಗುತ್ತಲೇ ಇದೆ. ಒಂದು ಕಡೆ ದಾದಾ ಪುಣ್ಯಭೂಮಿಯ ಹೋರಾಟ ಜೋರಾಗಿದೆ. ಇನ್ನೊಂದು ಕಡೆ ವಿಷ್ಣು ಅಭಿಮಾನಿಗಳು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಈಗ ದಾದಾ ಅಭಿಮಾನಿಗಳು ಮಾಡಿದ ಒಂದು ಕಾರ್ಯ ವಿಶೇಷ ದಾಖಲೆಯನ್ನು ಬರೆದಿದೆ. ಇದುವರೆಗೂ ಯಾವ ನಟರ ಅಭಿಮಾನಿಗಳು ಮಾಡದ ಕೆಲಸವನ್ನ ದಾದಾ ಅಭಿಮಾನಿಗಳು ಮಾಡಿದ್ದಾರೆ.

ವಿಷ್ಣುವರ್ಧನ್‌ ಹೆಸರಲ್ಲಿ ಸಾಮೂಹಿಕ ವಿವಾಹ ಆಯೋಜನೆ

ಈಗ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಎಸ್ ಎಸ್ (ವಿಷ್ಣು ಸೇನಾ ಸಮಿತಿ) ಸದಸ್ಯರು ಮತ್ತೊಂದು ಮೊದಲಿಗೆ ಸಾಕ್ಷಿಯಾಗಿದ್ದಾರೆ.. ಹೌದು ವಿಷ್ಣು ಸೇನಾ ಸಮಿತಿ ಧಾರವಾಡ ಘಟಕದ ಸದಸ್ಯರು ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಸಾಮೂಹಿಕ ವಿವಾಹವನ್ನ ಅದ್ದೂರಿಯಾಗಿಯೇ ಆಯೋಜನೆ ಮಾಡಿ, ಯಶಸ್ವಿಯಾಗಿ ಪೂರ್ತಿಗೊಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿವಾಹವಾದ ಜೋಡಿಗಳು ವಿಷ್ಣುವರ್ಧನ್ ಅವರನ್ನ ನೆನೆದು ಭಾವುಕರಾಗಿದ್ದಾರೆ. ಹಾಗೆ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಿದ ವಿಷ್ಣುವರ್ಧನ್ ಅವ್ರ ಅಭಿಮಾನಿ ಮೃತ್ಯುಂಜಯ ಹಿರೇಮಠ ಸಾಮಾನ್ಯ ಆಟೋಚಾಲಕ ಅನ್ನೋದು ವಿಶೇಷ.

ಸಾಮಾನ್ಯ ಆಟೋಚಾಲಕನಾಗಿ ವಿಷ್ಣು ಅವರ ಆದರ್ಶವನ್ನ ಇವರು ಪಾಲಿಸಿಕೊಂಡು ಬರ್ತಾಯಿದ್ದಾರೆ. ಹಾಗೆ ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಪ್ರಸಾದ್ ಅಬ್ಬಯ್ಯ ವಿಷ್ಣುವರ್ಧನ್ ಅವರ ಅಭಿಮಾನಿಗಳ ಕಾರ್ಯವನ್ನ ಹಾಡಿ ಹೊಗಳಿದರು. ವಿಷ್ಣುವರ್ಧನ್ ಅವರು ಬದುಕಿರೋವರೆಗೂ ಸಮಾಜಮುಖಿ ಕೆಲಸಗಳಲ್ಲಿ ಯಾರಿಗೂ ಗೊತ್ತಾಗದ ಹಾಗೆ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ರು.. ಈಗ ಅವರ ಆದರ್ಶವನ್ನು ಮುಂದುವರೆಸಿಕೊಂಡು ಹೋಗುತ್ತಿರೋ ಅಭಿಮಾನಿಗಳು ನಮ್ಮ ಕ್ಷೇತ್ರದಲ್ಲಿ ಇರೋದು ನಮಗೆ ಹೆಮ್ಮೆ , ಈ ಸಂಘಟನೆಗೆ ಸಪೋರ್ಟ್ ಮಾಡ್ತಿನಿ ಅಂದಿದ್ದಾರೆ ಶಾಸಕ ಪ್ರಸಾದ್ ಅಬ್ಬಯ್ಯ.

ಇದೇ ಮೊದಲ ಬಾರಿಗೆ ದಾದಾ ಅಭಿಮಾನಿಗಳು ವಿಶೇಷ ದಾಖಲೆಗೆ ಸಾಕ್ಷಿಯಾಗಿಲ್ಲ. ಈ ಹಿಂದೆ ಮೊದಲ ಬಾರಿಗೆ ಒಬ್ಬ ನಟನ ರಾಷ್ಟ್ರೀಯ ಉತ್ಸವವನ್ನ ರಾಷ್ಟ್ರ ರಾಜಧಾನಿಯಲ್ಲಿ ಅದ್ದೂರಿಯಾಗಿ ನೇರವೇರಿಸಿದ್ರು. ಅಂದರೆ ದೆಹಲಿಯಲ್ಲಿ ಡಾ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವವನ್ನ ಅದ್ದೂರಿಯಾಗಿ ನೇರವೇರಿಸಿ ನಂತ್ರ ಪ್ರತೀವರ್ಷ ಬೇರೆ ಬೇರೆ ಊರುಗಳಲ್ಲಿ ರಾಷ್ಟ್ರೀಯ ಉತ್ಸವ ನೇರವೇರಿಸುತ್ತಿದ್ದಾರೆ. ಒಬ್ಬ ನಟನ ಹೆಸರಿನಲ್ಲಿ ರಾಷ್ಟ್ರೀಯ ಉತ್ಸವ ಆಯೋಜನೆ ಮಾಡಿದ್ದು ಕೂಡ ಮೊದಲ ಬಾರಿಗೆ.

ಆ ನಂತರ ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ಕಟೌಟ್ ಜಾತ್ರೆಯನ್ನ ಕೂಡ ಅದ್ದೂರಿಯಾಗಿ ಆಯೋಜನೆ ಮಾಡಿದ್ರು..ಈ ಜಾತ್ರೆಯಲ್ಲಿ ವಿಷ್ಣುವರ್ಧನ್ ಅವರ ನೂರು ವಿಭಿನ್ನ ಕಟೌಟ್ ಗಳು ಇದ್ದಿದ್ದು ವಿಶೇಷ. ಒಟ್ಟಾರೆಯಾಗಿ ಕರುನಾಡಿನ ಯಜಮಾನ ನಿಧನರಾಗಿ ಒಂದುವರೆ ದಶಕ ಕಳೆದ್ರೂಕೂಡ ಅವರ ಆದರ್ಶವನ್ನ ಅವರ ಅಭಿಮಾನಿಗಳು ಮುಂದುವರಿಸಿಕೊಂಡು ಹೋಗ್ತಾ ಇರೋದು ನಿಜಕ್ಕೂ ಖುಷಿಯ ವಿಚಾರ.

ವರದಿ: ಮನೋಜ್ ವಿಜಯೀಂದ್ರ