VK 30: ಭೀಮ ಯಶಸ್ಸಿನ ಬೆನ್ನಲ್ಲೆ 30ನೇ ಸಿನಿಮಾದ ಅಪ್‌ಡೇಟ್‌ ನೀಡಿದ ದುನಿಯಾ ವಿಜಯ್‌; ಸಲಗನ ಬೆನ್ನೇರಿದ ಉಡ
ಕನ್ನಡ ಸುದ್ದಿ  /  ಮನರಂಜನೆ  /  Vk 30: ಭೀಮ ಯಶಸ್ಸಿನ ಬೆನ್ನಲ್ಲೆ 30ನೇ ಸಿನಿಮಾದ ಅಪ್‌ಡೇಟ್‌ ನೀಡಿದ ದುನಿಯಾ ವಿಜಯ್‌; ಸಲಗನ ಬೆನ್ನೇರಿದ ಉಡ

VK 30: ಭೀಮ ಯಶಸ್ಸಿನ ಬೆನ್ನಲ್ಲೆ 30ನೇ ಸಿನಿಮಾದ ಅಪ್‌ಡೇಟ್‌ ನೀಡಿದ ದುನಿಯಾ ವಿಜಯ್‌; ಸಲಗನ ಬೆನ್ನೇರಿದ ಉಡ

Dunia Vijay Upcoming Movie: ಸ್ಯಾಂಡಲ್‌ವುಡ್‌ ಸಲಗ ವಿಜಯ್‌ ಕುಮಾರ್‌ (ದುನಿಯಾ ವಿಜಯ್‌) ನಟನೆಯ 30ನೇ ಸಿನಿಮಾದ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಭೀಮ ಸಿನಿಮಾದ ಸಕ್ಸಸ್‌ ಸಮಯದಲ್ಲಿ ಹೊಸ ಸಿನಿಮಾದ ಅಪ್‌ಡೇಟ್‌ ದೊರಕಿದೆ.

ಭೀಮ ಯಶಸ್ಸಿನ ಬೆನ್ನಲ್ಲೆ ದುನಿಯಾ ವಿಜಯ್‌ 30ನೇ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.
ಭೀಮ ಯಶಸ್ಸಿನ ಬೆನ್ನಲ್ಲೆ ದುನಿಯಾ ವಿಜಯ್‌ 30ನೇ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು: ಸ್ಯಾಂಡಲ್‌ವುಡ್‌ ಸಲಗ ವಿಜಯ್‌ ಕುಮಾರ್‌ (ದುನಿಯಾ ವಿಜಯ್‌) ನಟನೆಯ ಭೀಮ ಸಿನಿಮಾವು ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಇದೇ ಸಮಯದಲ್ಲಿ ಭೀಮ ಮತ್ತು ಸಲಗ ತಂಡವು ವಿಜಯ್‌ ಕುಮಾರ್‌ ನಟನೆಯ ಮುಂದಿನ ಚಿತ್ರ (ವಿಕೆ 30)ದ ಪೋಸ್ಟರ್‌ ರಿಲೀಸ್‌ ಮಾಡಿದೆ. ದುನಿಯಾ ವಿಜಯ್‌ ನಟನೆಯ 30ನೇ ಸಿನಿಮಾಕ್ಕೆ ಭೀಮ ಸಿನಿಮಾದ ಅಸೋಸಿಯೇಟ್‌ ಡೈರೆಕ್ಟರ್‌ ಆಗಿದ್ದ ಆರ್‌ಆರ್‌ ವೆಟ್ರಿ ವೇಲ್‌ (ತಂಬಿ) ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ವಿವರವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಚಿತ್ರತಂಡ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಮಾಹಿತಿ ನೀಡಿದೆ.

ವಿಕೆ 30 ಪೋಸ್ಟರ್‌ ಬಿಡುಗಡೆ

ದುನಿಯಾ ವಿಜಯ್‌ ನಟನೆಯ 30ನೇ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ರೌಂಡ್‌ ಟೋಪಿ ಧರಿಸಿರುವ ವಿಜಯ್‌ ವಿಲನ್‌ ಲುಕ್‌ನಲ್ಲಿ ಕಾಣಿಸಿದ್ದಾರೆ. ವಿಜಯ್‌ ಬೆನ್ನಮೇಲೆ ಉಡವೊಂದು ಇದ್ದು, ಮುಂದಿನ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಿಸಿದೆ. "ಸಲಗ ಮತ್ತು ಭೀಮದ ಗ್ಯಾಂಗ್‌ನ ಮುಂದಿ ಸಿನಿಮಾ ವಿಕೆ 30" ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಹೆಚ್ಚಿನ ವಿವರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ನನ್ನ ಮುಂದಿನ ಸಿನಿಮಾಕ್ಕೆ ತಂಬಿ ನಿರ್ದೇಶನವಿರಲಿದೆ ಎಂದು ಭೀಮ ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿಯೂ ದುನಿಯಾ ವಿಜಯ್‌ ಹೇಳಿದ್ದರು.

ಭೀಮ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಸಕ್‌ನಿಲ್ಕ್‌.ಕಾಂನಲ್ಲಿ ಭೀಮ ಸಿನಿಮಾದ 11 ದಿನಗಳ ಕಲೆಕ್ಷನ್‌ ಲಭ್ಯವಿದೆ. ಸದ್ಯದ ಮಾಹಿತಿ ಲಭ್ಯವಿಲ್ಲ. ಹನ್ನೊಂದು ದಿನಗಳಲ್ಲಿ ದುನಿಯಾ ವಿಜಯ್‌ ನಟನೆಯ ಭೀಮ ಸಿನಿಮಾ 19.55 ಕೋಟಿ ರೂಪಾಯಿ ತಲುಪಿದೆ. ಮೂರನೇ ವಾರದಲ್ಲಿ ಇನ್ನೂ ಕೆಲವು ಕೋಟಿ ರೂಪಾಯಿಗಳನ್ನು ತನ್ನ ಗಲ್ಲಾಪೆಟ್ಟಿಗೆಗೆ ಭೀಮ ಸಿನಿಮಾ ಸೇರಿಸಿಕೊಂಡಿರಬಹುದು.

ಭೀಮ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಭೀಮ ಸಿನಿಮಾ ಒಟಿಟಿಗೆ ಯಾವಾಗ ಬರಲಿದೆ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಚಿತ್ರಬಿಡುಗಡೆಯಾಗಿ ಒಂದು ಅಥವಾ ಎರಡು ತಿಂಗಳಿನ ಬಳಿಕ ಸಿನಿಮಾಗಳು ಒಟಿಟಿಗೆ ಆಗಮಿಸಲಿದೆ. ಮೂಲಗಳ ಪ್ರಕಾರ ಇನ್ನೂ ಒಂದೆರಡು ವಾರ ಕೆಲವು ಚಿತ್ರಮಂದಿರಗಳಲ್ಲಿ ಭೀಮನ ಅಬ್ಬರ ಮುಂದುವರೆಯಲಿದೆ. ಇದಾದ ಬಳಿಕ ಒಟಿಟಿಯತ್ತ ಭೀಮ ಸಿನಿಮಾ ಮುಖಮಾಡಲಿದೆ. ಆದರೆ, ಭೀಮ ಸಿನಿಮಾಕ್ಕೆ ಒಟಿಟಿ ಪಾಟ್ನರ್‌ ಯಾರು ಎಂಬ ವಿವರವೂ ಸದ್ಯ ಲಭ್ಯವಿಲ್ಲ. ವಿಜಯ್‌ ಕುಮಾರ್‌ ನಟನೆಯ ಸಲಗ ಸಿನಿಮಾ ಸನ್‌ನೆಕ್ಸ್ಟ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಭೀಮ ಸಿನಿಮಾದ ಒಟಿಟಿ ಡೀಲ್‌ ಕೂಡ ಸನ್‌ನೆಕ್ಸ್ಟ್‌ ಜತೆಗೆ ನಡೆಯುವ ಸೂಚನೆಯಿದೆ. ಭೀಮ ಸಿನಿಮಾದಲ್ಲಿ ದುನಿಯಾ ವಿಜಯ್‌, ಅಶ್ವಿನಿ, ಕಲ್ಯಾಣಿ ರಾಜು, ಬ್ಲ್ಯಾಕ್‌ ಡ್ರ್ಯಾಗನ್‌ ಮಂಜು, ರಘು ಶಿವಮೊಗ್ಗ, ಗಿಲಿಗಿಲಿ ಚಂದ್ರು ಮುಂತಾದವರು ನಟಿಸಿದ್ದಾರೆ.

ದುನಿಯಾ ವಿಜಯ್‌ ನಟನೆಯ ಸಿನಿಮಾಗಳು

ದುನಿಯಾ ವಿಜಯ್‌ ಅವರು ಭೀಮ, ಕೋಟಿ, ವೀರ ಸಿಂಹ ರೆಡ್ಡಿ, ಸಲಗ, ಜಾನಿ ಜಾನಿ ಯೆಸ್‌ ಪಪ್ಪ, ಕನಕ, ಮಾಸ್ತಿಗುಡಿ, ದನ ಕಾಯೋನು, ರಿಂಗ್‌ ರೋಡ್‌, ಆರ್‌ಎಕ್ಸ್‌ ಸೂರಿ, ದಕ್ಷ, ಜಾಕ್ಸನ್‌, ಸಿಂಹಾದ್ರಿ, ಶಿವಾಜಿನಗರ, ಜಯಮ್ಮನ ಮಗ, ರಜನಿಕಾಂತ, ಭೀಮ ತೀರದಲ್ಲಿ, ಜರಾಸಂಧ, ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌,ವೀರ ಬಾಹು, ಐತಲಕ್ಕಡಿ, ಕಂಠೀರವ, ಕರಿ ಚಿರತೆ, ಶಂಕರ್‌ ಐಪಿಎಸ್‌, ದೇವ್ರು, ತಾಕತ್‌, ಜಂಗ್ಲಿ, ಸ್ಲಮ್‌ ಬಾಲಾ, ಅವ್ವ, ಚಂಡ, ಗೆಳೆಯ, ಯುಗ, ದುನಿಯಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Whats_app_banner