Bheema Day 3 Collection: 3 ದಿನಗಳಲ್ಲಿ ಭೀಮನ ಬೊಕ್ಕಸಕ್ಕೆ ಬಂದಿದ್ದೆಷ್ಟು, ದುನಿಯಾ ವಿಜಯ್‌ ಕೆರಿಯರ್‌ನಲ್ಲೇ ದಾಖಲೆ ಬರೀತಾ ಭೀಮ?-sandalwood news duniya vijay bheema day 3 box office collection report bheema movie collection mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bheema Day 3 Collection: 3 ದಿನಗಳಲ್ಲಿ ಭೀಮನ ಬೊಕ್ಕಸಕ್ಕೆ ಬಂದಿದ್ದೆಷ್ಟು, ದುನಿಯಾ ವಿಜಯ್‌ ಕೆರಿಯರ್‌ನಲ್ಲೇ ದಾಖಲೆ ಬರೀತಾ ಭೀಮ?

Bheema Day 3 Collection: 3 ದಿನಗಳಲ್ಲಿ ಭೀಮನ ಬೊಕ್ಕಸಕ್ಕೆ ಬಂದಿದ್ದೆಷ್ಟು, ದುನಿಯಾ ವಿಜಯ್‌ ಕೆರಿಯರ್‌ನಲ್ಲೇ ದಾಖಲೆ ಬರೀತಾ ಭೀಮ?

ದುನಿಯಾ ವಿಜಯ್‌ ನಟನೆ ಮತ್ತು ನಿರ್ದೇಶನದ ಭೀಮ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಬರೀ ಅಷ್ಟೇ ಅಲ್ಲ ಗಳಿಕೆ ವಿಚಾರದಲ್ಲಿಯೂ ಒಂದಡಿ ಮುಂದಿರಿಸಿ, ವಿಜಯ್‌ ಸಿನಿಮಾ ಕೆರಿಯರ್‌ನಲ್ಲೂ ಹೊಸ ಭರವಸೆ ಮೂಡಿಸಿದೆ.

Bheema Day 3 Collection: 3 ದಿನಗಳಲ್ಲಿ ಭೀಮನ ಬೊಕ್ಕಸಕ್ಕೆ ಬಂದಿದ್ದೆಷ್ಟು, ದುನಿಯಾ ವಿಜಯ್‌ ಕೆರಿಯರ್‌ನಲ್ಲೇ ದಾಖಲೆ ಬರೀತಾ ಭೀಮ?
Bheema Day 3 Collection: 3 ದಿನಗಳಲ್ಲಿ ಭೀಮನ ಬೊಕ್ಕಸಕ್ಕೆ ಬಂದಿದ್ದೆಷ್ಟು, ದುನಿಯಾ ವಿಜಯ್‌ ಕೆರಿಯರ್‌ನಲ್ಲೇ ದಾಖಲೆ ಬರೀತಾ ಭೀಮ?

Bheema Day 3 Collection: ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌ ನಟನೆಯ ಭೀಮ ಸಿನಿಮಾ ಕಮರಿದ ಚಂದನವನಕ್ಕೆ ಗೆಲುವಿನ ಸಿಹಿಯುಣಿಸಿದೆ. ಮುಚ್ಚಿದ್ದ ಚಿತ್ರಮಂದಿರಗಳನ್ನು ಮತ್ತೆ ತೆರೆಸಿದೆ. ಜನರೇ ಕಾಣದ ಭಣಗುಡುತ್ತಿದ್ದ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಕರೆತಂದಿದೆ. ನಟನೆಯ ಜತೆಗೆ ನಿರ್ದೇಶನದಲ್ಲೂ ದುನಿಯಾ ವಿಜಯ್‌ ಭೀಮ ಸಿನಿಮಾ ಮೂಲಕ ಮತ್ತೊಂದು ಯಶಸ್ಸು ಗಳಿಸಿದ್ದಾರೆ. ಮೊದಲ ದಿನ 3.5 ಕೋಟಿ ಗಳಿಸಿದ್ದ ಈ ಸಿನಿಮಾ, ಅದಾದ ಮೇಲೆ ಶನಿವಾರ ಮತ್ತು ಭಾನುವಾರವೂ ಹೆಚ್ಚೆಚ್ಚು ಸಿನಿಮಾ ಪ್ರೇಮಿಗಳನ್ನು ಚಿತ್ರಮಂದಿರಕ್ಕೆ ಕರೆತಂದಿದೆ. ಹಾಗಾದರೆ, ವಾರಾಂತ್ಯದ ಮೂರು ದಿನಗಳಲ್ಲಿ ಭೀಮ ಗಳಿಸಿದ್ದೆಷ್ಟು?‌

ಡ್ರಗ್‌ ದಂಧೆಯ ಕರಾಳ ಮುಖ ಅನಾವರಣ

ಡ್ರಗ್‌ ದಂಧೆಯ ಕರಾಳ ಮುಖವನ್ನು ಭೀಮ ಸಿನಿಮಾ ಮೂಲಕ ನಟ ದುನಿಯಾ ವಿಜಯ್‌ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಸಿಲಿಕಾನ್‌ ಸಿಟಿ ಬೆಂಗಳೂರಿನ ಮತ್ತೊಂದು ಮುಖದ ಅನಾವರಣವನ್ನೂ ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದಂತೆ ತೆರೆದಿಟ್ಟಿದ್ದಾರೆ. ನೈಜತೆಗೆ ಹೆಚ್ಚು ಒತ್ತು ನೀಡಿ, ರೌಡಿಸಂ ಹಿನ್ನೆಯಲ್ಲಿ ತೆರೆದುಕೊಳ್ಳುವ ಭೀಮ ಚಿತ್ರದಲ್ಲಿ ರಕ್ತದ ಹೊಳೆಯೂ ಹರಿಯುತ್ತದೆ. ಇದರ ಜತೆಗೆ ಪೊಲೀಸ್‌ ಇಲಾಖೆ, ರಾಜಕೀಯದ ಮಿಶ್ರಣವನ್ನೂ ಸಿನಿಮಾದಲ್ಲಿ ಹದವಾಗಿ ಬೆರೆಸಿದ್ದಾರೆ ನಿರ್ದೇಶಕ ದುನಿಯಾ ವಿಜಯ್. ಕಂಟೆಂಟ್‌ ವಿಚಾರದಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದ ಭೀಮ, ಕಲೆಕ್ಷನ್‌ ವಿಚಾರದಲ್ಲೂ ಮೋಡಿ ಮಾಡಿದ್ದಾನೆ.

ಮೂರು ದಿನಗಳ ಒಟ್ಟು ಕಲೆಕ್ಷನ್‌ ಎಷ್ಟು?

ಆಗಸ್ಟ್‌ 9ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿರುವ ಭೀಮ ಸಿನಿಮಾ, ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಮೊದಲ ದಿನವೇ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಪಡೆದ ಈ ಸಿನಿಮಾ, ಚಿತ್ರಮಂದಿರಗಳಲ್ಲಿಈಗಲೂ ಹೌಸ್‌ಫುಲ್‌ ಪ್ರದರ್ಶನ ಮುಂದುವರಿಸಿದೆ. ಸಲಗ ಹಿಟ್‌ ಬಳಿಕ ವಿಜಯ್‌, ಭೀಮ ಮೂಲಕ ಮತ್ತೊಂದು ಯಶಸ್ಸನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಕಲೆಕ್ಷನ್‌ ವಿಚಾರದಲ್ಲಿಯೂ ಭೀಮ ಮುಂದಡಿ ಇರಿಸಿದ್ದಾನೆ. ಶುಕ್ರವಾರ 3.9 ಕೋಟಿ, ಶನಿವಾರ 3.4 ಕೋಟಿ ಭಾನುವಾರ 3.8 ಕೋಟಿ ಗಳಿಸುವ ಮೂಲಕ 11 ಕೋಟಿಗೂ ಅಧಿಕ ಕಮಾಯಿ ಮಾಡಿದೆ.

ದುನಿಯಾ ವಿಜಯ್ ಕೆರಿಯರ್‌ಗೆ ಹೊಸ ಹುರುಪು

ಇತ್ತೀಚಿನ ದಿನಗಳಲ್ಲಿ ನಟ ದುನಿಯಾ ವಿಜಯ್‌ ಅವರ ಸಿನಿಮಾ ಕೆರಿಯರ್‌ ಗಮನಿಸಿದರೆ, ಈ ಹಿಂದಿನ ಸಲಗ ಸಿನಿಮಾ ಹಿಟ್‌ ಆಗಿದ್ದರೂ, ಕಲೆಕ್ಷನ್‌ ವಿಚಾರದಲ್ಲಿ ಭೀಮ ಮುಂದಿದ್ದಾನೆ. ಅದಕ್ಕಿಂತ ಹಿಂದೆ ಹೋದರೆ, ಅವರ ಬೇರಾವ ಸಿನಿಮಾಗಳಿಗೂ ಇಷ್ಟೊಂದು ಕ್ರೇಜ್‌ ಸೃಷ್ಟಿಯಾಗಿರಲಿಲ್ಲ. ಇದರ ಜತೆಗೆ ನಿರ್ದೇಶನದಲ್ಲಿ ಹಿಡಿತ ಸಾಧಿಸಿರುವ ವಿಜಯ್‌, ನಟನೆಯಲ್ಲಿಯ ಮತ್ತಷ್ಟು ಮಾಗಿದ್ದಾರೆ. ಅಂದಹಾಗೆ ಭೀಮ ಸಿನಿಮಾವನ್ನು ಕೃಷ್ಣ ಸಾರ್ಥಕ್‌ ಅವರ ಕೃಷ್ಣ ಕ್ರಿಯೇಷನ್ಸ್‌ ಮತ್ತು ಜಗದೀಶ್‌ ಫಿಲಂಸ್‌ ಬ್ಯಾನರ್‌ನಲ್ಲಿ ಜಗದೀಶ್‌ ಬಂಡವಾಳ ಹೂಡಿದ್ದಾರೆ.