VK 29: ಅಳಿದು ಉಳಿದವರ ಕಥೆಗೆ ಸ್ಫೂರ್ತಿಯಾಯ್ತು ‘ಚೋಮನ ದುಡಿ’ ಚಿತ್ರದ ಈ ಪಾತ್ರ; ಮಗಳ ಹೆಸರು ಬದಲಿಸಿ ಚಿತ್ರರಂಗಕ್ಕೆ ಕರೆತಂದ ದುನಿಯಾ ವಿಜಯ್‌
ಕನ್ನಡ ಸುದ್ದಿ  /  ಮನರಂಜನೆ  /  Vk 29: ಅಳಿದು ಉಳಿದವರ ಕಥೆಗೆ ಸ್ಫೂರ್ತಿಯಾಯ್ತು ‘ಚೋಮನ ದುಡಿ’ ಚಿತ್ರದ ಈ ಪಾತ್ರ; ಮಗಳ ಹೆಸರು ಬದಲಿಸಿ ಚಿತ್ರರಂಗಕ್ಕೆ ಕರೆತಂದ ದುನಿಯಾ ವಿಜಯ್‌

VK 29: ಅಳಿದು ಉಳಿದವರ ಕಥೆಗೆ ಸ್ಫೂರ್ತಿಯಾಯ್ತು ‘ಚೋಮನ ದುಡಿ’ ಚಿತ್ರದ ಈ ಪಾತ್ರ; ಮಗಳ ಹೆಸರು ಬದಲಿಸಿ ಚಿತ್ರರಂಗಕ್ಕೆ ಕರೆತಂದ ದುನಿಯಾ ವಿಜಯ್‌

ದುನಿಯಾ ವಿಜಯ್‌ ಮತ್ತು ಜಡೇಶ್‌ ಕುಮಾರ್‌ ಹಂಪಿ ಕಾಂಬಿನೇಷನ್‌ನ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಪುತ್ರಿ ಮೋನಿಕಾ ತಮ್ಮ ಹೆಸರನ್ನು ರಿತನ್ಯ ಎಂದು ಬದಲಿಸಿಕೊಂಡು ಆಗಮಿಸುತ್ತಿದ್ದಾರೆ. ಚಿತ್ರದಲ್ಲಿ ತಂದೆ ವಿಜಯ್‌ ಮಗಳಾಗಿಯೇ ನಟಿಸಲಿದ್ದಾರೆ.

VK 29: ಅಳಿದು ಉಳಿದವರ ಕಥೆಗೆ ಸ್ಫೂರ್ತಿಯಾಯ್ತು ‘ಚೋಮನ ದುಡಿ’ ಚಿತ್ರದ ಈ ಪಾತ್ರ; ಮಗಳ ಹೆಸರು ಬದಲಿಸಿ ಚಿತ್ರರಂಗಕ್ಕೆ ಕರೆತಂದ ದುನಿಯಾ ವಿಜಯ್‌
VK 29: ಅಳಿದು ಉಳಿದವರ ಕಥೆಗೆ ಸ್ಫೂರ್ತಿಯಾಯ್ತು ‘ಚೋಮನ ದುಡಿ’ ಚಿತ್ರದ ಈ ಪಾತ್ರ; ಮಗಳ ಹೆಸರು ಬದಲಿಸಿ ಚಿತ್ರರಂಗಕ್ಕೆ ಕರೆತಂದ ದುನಿಯಾ ವಿಜಯ್‌

Duniya Vijay: ನಟ ದರ್ಶನ್ ನಾಯಕರಾಗಿ ನಟಿಸಿದ್ದ ಸಾರಥಿ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್‌ ಆಗಿತ್ತು. ಆ ಸಿನಿಮಾ ನಿರ್ಮಾಣ ಮಾಡಿದ್ದು, ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್. ಈಗ ಹನ್ನೆರಡು ವರ್ಷಗಳ ಬಳಿಕ ಸಾರಥಿ ಫಿಲಂಸ್ ಹೆಸರಿನ ನಿರ್ಮಾಣ ಸಂಸ್ಥೆ ಜತೆಗೆ ಹೊಸ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಹ ಸಾಥ್ ನೀಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಜಂಟಲ್‌ಮ್ಯಾನ್‌, ಗುರುಶಿಷ್ಯರು ಸಿನಿಮಾ ಮತ್ತು ಕಾಟೇರ ಕಥೆಯ ಮೂಲಕವೇ ಗಮನ ಸೆಳೆದ ನಿರ್ದೇಶಕ ಜಡೇಶ್‌ ಕುಮಾರ್‌ ಹಂಪಿ ಈಗ ದುನಿಯಾ ವಿಜಯ್‌ ಕುಮಾರ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ದುನಿಯಾ ವಿಜಯ್ ಅವರ VK29ನೇ ಚಿತ್ರಕ್ಕೆ ಬೆಂಗಳೂರಿನ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ಶಾಸಕ ಶ್ರೀ ಗೋಪಾಲಯ್ಯ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಕಾಟೇರ ನಿರ್ದೇಶಕ ತರುಣ್ ಸುಧೀರ್ ಮೊದಲ ದೃಶ್ಯಕ್ಕೆ ಆಕ್ಷನ್ ಹೇಳಿದರು. 

ಈ ಚಿತ್ರದಲ್ಲಿ ರಚಿತಾರಾಮ್ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ (ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಈ ಮೂಲಕ ಹೊಸ ಹೆಸರಿನ ಜತೆಗೆ ಅವರ ಆಗಮನವಾಗಲಿದೆ. "ಡೇರ್ ಡೆವಿಲ್ ಮುಸ್ತಫಾ" ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೋಲಾರ ಸೀಮೆಯ ನೈಜ ಕತೆ

ಇದು ನಾನು ಕಂಡ, ಕೇಳಿದ ಹಾಗೂ ನೋಡಿದ ನೈಜ ಕಥೆ ಎಂದು ಮಾತನಾಡಿದ ನಿರ್ದೇಶಕ ಜಡೇಶ ಕೆ ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಕೋಲಾರ ಮೂಲದವರೇ ಆದ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. 90ರ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ಇದು. ಶಿವರಾಮ ಕಾರಂತರ ಚೋಮನ ದುಡಿ ಚಿತ್ರದಲ್ಲಿನ ಚೋಮನ ಪಾತ್ರ ನಮ್ಮ ಈ ಸಿನಿಮಾಕ್ಕೆ ಪ್ರೇರಣೆ. ಹಾಗೆಂದ ಮಾತ್ರಕ್ಕೆ ಅದಕ್ಕೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ.

ಬೆಂಗಳೂರಿನಲ್ಲಿ ಚಿತ್ರಕ್ಕಾಗಿ ಅದ್ದೂರಿ ಸೆಟ್ ಹಾಕಲಾಗುತ್ತಿದೆ. ಕೋಲಾರ ಸೇರಿ ಮೈಸೂರಿನ ಹಲವು ಭಾಗಗಳಲ್ಲೂ ಚಿತ್ರೀಕರಣ ನಡೆಯಲಿದೆ. ಚಿತ್ರದ ನಾಯಕ ವಿಜಯ್ ಕುಮಾರ್‌ ವಿಭಿನ್ನ ಪಾತ್ರದಲ್ಲಿ ಎದುರಾಗಲಿದ್ದಾರೆ. ರಚಿತಾರಾಮ್ ಈ ಚಿತ್ರದ ನಾಯಕಿ. ದುನಿಯಾ ವಿಜಯ್ ಪುತ್ರಿ ಮೋನಿಕಾ ಈ ಚಿತ್ರದ ಮೂಲಕ ರಿತನ್ಯ ಎಂದು ಹೆಸರು ಬದಲಾಯಿಸಿಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ ಎಂದರು ನಿರ್ದೇಶಕ ಜಡೇಶ್.‌

ತಂದೆ ಮಗನ ನಿರ್ಮಾಣ, ತಂದೆ ಮಗಳ ನಟನೆ

ಈ ಚಿತ್ರದ ವಿಶೇಷವೆಂದರೆ ತಂದೆ - ಮಗ ಈ ಸಿನಿಮಾ ನಿರ್ಮಿಸುತ್ತಿದ್ದರೆ, ಇಲ್ಲಿ ತಂದೆ - ಮಗಳೇ ನಟಿಸುತ್ತಿದ್ದೇವೆ. ಮಗಳು ರಿತನ್ಯ, ಮುಂಬೈನ ಅನುಪಮ್ ಖೇರ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾತರಬೇತಿ ಕಲಿತು ಬಂದಿದ್ದಾಳೆ. ಮೊದಲ ಚಿತ್ರದಲ್ಲಿ ನನ್ನ ಮಗಳಾಗಿಯೇ ಆಕೆ ಅಭಿನಯಿಸಲಿದ್ದಾಳೆ. ಚಿತ್ರೋದ್ಯಮಕ್ಕೆ ಬಂದ 3 ದಶಕಗಳು ಕಳೆದಿವೆ. ನಾಯಕನಾಗಿ ಹದಿನೆಂಟು ವರ್ಷ ಪೂರ್ಣಗೊಂಡಿವೆ. ಹೀಗಿರುವಾಗ ನನ್ನ ಮಗಳು ರಿತನ್ಯ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾಳೆ. ಮಗಳಿಗೆ ಸ್ಕ್ರಿಪ್ಟ್ ನಲ್ಲೂ ಒಳ್ಳೆಯ ಸ್ಕ್ರೀನ್‌ ಸ್ಪೇಸ್‌ ಸಿಕ್ಕಿದೆ. ನಿರ್ದೇಶಕ ಜಡೇಶ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಜಡೇಶ್ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಾಗುವುದು ಖಂಡಿತ.

ಮೋನಿಕಾ ಈಗ ರಿತನ್ಯ

ಮೊದಲ ಚಿತ್ರ ಅಪ್ಪನ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ. ಈ ಚಿತ್ರದ ಮೂಲಕ ರಿತನ್ಯ ಆಗಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ನನಗಿರಲಿ ಎಂದರವರು. ಸಾರಥಿ ಚಿತ್ರ ನನಗೆ ತುಂಬಾ ಕೀರ್ತಿ ತಂದುಕೊಟ್ಟ ಚಿತ್ರ. ಆನಂತರ ಕೆಲವು ಚಿತ್ರಗಳ ಕಥೆ ಕೇಳಿದ್ದೆ. ನಿರ್ಮಾಣಕ್ಕೆ ಇಳಿದಿರಲಿಲ್ಲ. ಜಡೇಶ್ ಹೇಳಿದ ಕಥೆ ತುಂಬ ಇಷ್ಟವಾಯಿತು. ಇಪ್ಪತ್ತೇ ದಿನಗಳಲ್ಲಿ ಸಿನಿಮಾ ಶುರುವಾಯಿತು. ನಿರ್ಮಾಣದಲ್ಲಿ ನನ್ನ ಜೊತೆಗೆ ಮಗ ಸೂರಜ್ ಗೌಡ ಇದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ನಿರ್ಮಾಪಕ ಸತ್ಯಪ್ರಕಾಶ್ ತಿಳಿಸಿದರು.

Whats_app_banner