ಕನ್ನಡ ಸುದ್ದಿ  /  ಮನರಂಜನೆ  /  ಬೆಂಕಿಯಲ್ಲಿ ಉರಿಯುತ್ತಿರುವ ಜಾತ್ರೆಯ ತೇರು; ದುನಿಯಾ ವಿಜಯ್‌ ನಟನೆಯ ಮುಂದಿನ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೆ ಕಾಟೇರ ಕಥೆಗಾರ

ಬೆಂಕಿಯಲ್ಲಿ ಉರಿಯುತ್ತಿರುವ ಜಾತ್ರೆಯ ತೇರು; ದುನಿಯಾ ವಿಜಯ್‌ ನಟನೆಯ ಮುಂದಿನ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೆ ಕಾಟೇರ ಕಥೆಗಾರ

ದುನಿಯಾ ವಿಜಯ್‌ ಮುಂದಿನ ಸಿನಿಮಾ ಸೆಟ್ಟೇರಿದೆ. ಕಾಟೇರ ಕಥೆಗಾರ ಆಕ್ಷನ್‌ ಕಟ್‌ ಹೇಳುವ ಈ ಸಿನಿಮಾದಲ್ಲಿ ವಿಜಯ್‌ ಮಗಳು ನಟಿಸಲಿದ್ದಾರೆ. ಬೆಂಕಿ ಬಿದ್ದಿರುವ ದೇಗುಲದ ತೇರಿನ ಮುಂದೆ ಹೀರೋ ನಿಂತಿರುವ ಸನ್ನಿವೇಶ ಪೋಸ್ಟರ್‌ನಲ್ಲಿ ಕಾಣಿಸುತ್ತದೆ. ಇದು ಅಳಿದವರ ಕಥೆಯಲ್ಲಿ ಅಳಿದು ಉಳಿದವರ ಕಥೆ ಎಂದು ಏನೋ ಹೊಸ ಕಥೆ ಹೇಳಲು ಹೊರಟಿದ್ದಾರೆ ಜಡೇಶ್‌ ಹಂಪಿ.

ದುನಿಯಾ ವಿಜಯ್‌ ಮುಂದಿನ ಸಿನಿಮಾದ ಪೋಸ್ಟರ್‌ ಬಿಡುಗಡೆ
ದುನಿಯಾ ವಿಜಯ್‌ ಮುಂದಿನ ಸಿನಿಮಾದ ಪೋಸ್ಟರ್‌ ಬಿಡುಗಡೆ

ಬೆಂಗಳೂರು: ದುನಿಯಾ ವಿಜಯ್‌ ನಟನೆಯ ಮುಂದಿನ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು (ಏ 11) ನಡೆದಿದೆ. ಈ ಸಿನಿಮಾದಲ್ಲಿ ತಂದೆ ದುನಿಯಾ ವಿಜಯ್‌ ಜತೆ ಮಗಳು ಮೋನಿಕಾ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸುವ ಸಮಯದಲ್ಲಿಯೇ ಮೋನಿಕಾ ತನ್ನ ಹೆಸರು ಬದಲಾವಣೆಯನ್ನೂ ಘೋಷಿಸಿದ್ದಾರೆ. ಇನ್ಮುಂದೆ ದುನಿಯಾ ವಿಜಯ್‌ ಮಗಳ ಹೆಸರು ಮೋನಿಕಾ ಅಲ್ಲ. ಆಕೆಯ ಹೆಸರು ರಿತಾನ್ಯಾ. ಅಂದಹಾಗೆ, ದುನಿಯಾ ವಿಜಯ್‌ 29ನೇ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ರಾಮ್‌ ನಟಿಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಕಿಯಲ್ಲಿ ಉರಿಯುತ್ತಿರುವ ಜಾತ್ರೆಯ ತೇರು

ವಿಜಯ್‌ ಮುಂದಿನ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ಬೆಂಕಿಯ ಮುಂದೆ ದುನಿಯಾ ವಿಜಯ್‌ ಕತ್ತಿ ಮತ್ತು ಕೊಡಲಿ ಹಿಡಿದು ಕಟುಮಸ್ತಾಗಿ ನಿಂತಿದ್ದಾರೆ. ಆ ಬೆಂಕಿಯನ್ನು ಸರಿಯಾಗಿ ನೋಡಿದರೆ ದೇಗುಲದ ಜಾತ್ರೆಯ ತೇರು ಬೆಂಕಿಯ ಕೆನ್ನಲಗೆಗೆ ಸಿಲುಕಿರುವುದು ಕಾಣಿಸುತ್ತದೆ. ಸುತ್ತಲು ಭೀತಿಯಲ್ಲಿರುವ ಜನರು, ನೆಲದ ಮೇಲೆ ಬಿದ್ದಿರುವವರನ್ನು ನೋಡಿದರೆ ಜಾತ್ರೆಯ ಸ್ಥಳವು ರಣಾರಂಗವಾಗಿರುವುದು ಖಚಿತವಾಗಿದೆ. ಊರಿನ ಜಾತ್ರೆ, ಗ್ರಾಮೀಣ ಜನರ ಬದುಕು, ಶೋಷಣೆ ಇತ್ಯಾದಿ ಹಲವು ವಿಚಾರಗಳು ದುನಿಯಾ ವಿಜಯ್‌ ಸಿನಿಮಾದಲ್ಲಿ ಇರುವ ಸೂಚನೆಯಿದೆ.

ಡೈರೆಕ್ಟರ್‌ ಕ್ಯಾಪ್‌ ತೊಟ್ಟ ಕಾಟೇರ ಕಥೆಗಾರ

ಕಾಟೇರ ಸಿನಿಮಾ ಯಶಸ್ಸು ಪಡೆದಾಗ ಎಲ್ಲರೂ "ಈ ಸಿನಿಮಾದ ಕಥೆಗಾರ ಯಾರು?" ಎಂದು ಕೇಳಿದ್ದರು. ಈ ಸಿನಿಮಾದಲ್ಲಿ ಅಂತಹ ಪವರ್‌ಫುಲ್‌ ಕಥೆಯಿತ್ತು. ಕಾಟೇರ ಕಥೆ ಬರೆದಿರುವುದು ಜಡೇಶ್‌ ಹಂಪಿ. ಇವರಿಗೆ ನಿರ್ದೇಶನದ ಅನುಭವವೂ ಇದೆ. ಇದೀಗ ದುನಿಯಾ ವಿಜಯ್‌ ಮುಂದಿನ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಜಡೇಶ್‌ ಹಂಪಿ ಈ ಹಿಂದೆ ಜಂಟಲ್‌ಮ್ಯಾನ್‌, ಗುರುಶಿಷ್ಯರು, ರಾಜಹಂಸ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇದೀಗ ವಿಜಯ್‌ ಸಿನಿಮಾಕ್ಕೆ ಕಥೆ, ಚಿತ್ರಕಥೆ ಕೂಡ ಜಡೇಶ್‌ ಹಂಪಿಯವರೇ ಬರೆಯುತ್ತಿದ್ದಾರೆ.

ದುನಿಯಾ ವಿಜಯ್‌ ಸಿನಿಮಾದ ಪೋಸ್ಟರ್‌ ಬಿಡುಗಡೆ

ದುನಿಯಾ ವಿಜಯ್‌ ನಟನೆಯ 29ನೇ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಕೈಯಲ್ಲಿ ಕತ್ತಿ, ಕೊಡಲಿ ಹಿಡಿದುಕೊಂಡು ಹಿಮ್ಮುಖವಾಗಿ ದುನಿಯಾ ವಿಜಯ್‌ ನಿಂತಿದ್ದಾರೆ. ಅವರ ಮುಂದೆ ಉರಿಯುತ್ತಿರುವ ರಥವಿದೆ. ರಥದ ಹಿಂದೆ ದೇಗುಲವಿದೆ. ಸಿನಿಮಾದ ಹೀರೋ ಈ ಬೆಂಕಿಯ ನಡುವೆ ಧೈರ್ಯದಿಂದ ನಿಂತಿದ್ದಾರೆ. ಇದು ಅಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆಯೆಂಬ ಅಡಿಬರಹವನ್ನೂ ನೀಡಲಾಗಿದೆ. ಈ ಸಿನಿಮಾದ ಮೂಲಕ ದುನಿಯಾ ವಿಜಯ್‌ ಅವರು ತನ್ನ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾಕ್ಕೆ ದರ್ಶನ್‌ ನಟನೆಯ ಸಾರಥಿ ಸಿನಿಮಾಕ್ಕೆ ನಿರ್ಮಾಪಕರಾಗಿದ್ದ ಕೆ.ವಿ. ಸತ್ಯಪ್ರಕಾಶ್‌ ಬಂಡವಾಳ ಹಾಕುತ್ತಿದ್ದಾರೆ.

ಪೋಸ್ಟರ್‌ ನೋಡಿ ಅಭಿಮಾನಿಗಳಿಗೆ ಆನಂದ

ದುನಿಯಾ ವಿಜಯ್‌ ಪೋಸ್ಟರ್‌ ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. "ಎಲ್ಲಾ ಹೀರೋಗಳಿಗೂ ಫ್ಯಾನ್ಸ್‌ ಇರ್ತಾರೆ. ಎಲ್ಲಾ ಹೀರೋಗಳ ಫ್ಯಾನ್‌ಗಳು ದುನಿಯಾ ವಿಜಯ್‌ ಫ್ಯಾನ್‌ ಆಗಿರ್ತಾರೆ" "ಅವಮಾನ ಮಾಡಿದ ನಿರ್ಮಾಪಕರ ಮುಂದೆ ಬೆಳೆದು ನಿಂತ ಸ್ಯಾಂಡಲ್‌ವುಡ್‌ ಸಲಗ" "ಬೆಂಕಿ ಪೋಸ್ಟರ್‌" "ಇದು ಖಂಡಿತಾ ಬೇರೆ ಲೆವೆಲ್‌ ಸಿನಿಮಾ" ಹೀಗೆ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

IPL_Entry_Point