ಮಂಕುತಿಮ್ಮನ ಕಗ್ಗಕ್ಕೆ ಸಿನಿಮಾರೂಪ: ಡಿವಿಜಿ ಮೌಲಿಕ ಕೃತಿ ಆಧರಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ, ನೀವೂ ನೋಡಿ VIDEO
ಕನ್ನಡ ಸುದ್ದಿ  /  ಮನರಂಜನೆ  /  ಮಂಕುತಿಮ್ಮನ ಕಗ್ಗಕ್ಕೆ ಸಿನಿಮಾರೂಪ: ಡಿವಿಜಿ ಮೌಲಿಕ ಕೃತಿ ಆಧರಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ, ನೀವೂ ನೋಡಿ Video

ಮಂಕುತಿಮ್ಮನ ಕಗ್ಗಕ್ಕೆ ಸಿನಿಮಾರೂಪ: ಡಿವಿಜಿ ಮೌಲಿಕ ಕೃತಿ ಆಧರಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ, ನೀವೂ ನೋಡಿ VIDEO

ನಾಡು ಕಂಡ ಖ್ಯಾತ ಸಾಹಿತಿ ಡಾ. ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಜನಪ್ರಿಯ ಪದ್ಯ ಪುಸ್ತಕ ಮಂಕುತಿಮ್ಮನ ಕಗ್ಗ, ಇದೀಗ ಸಿನಿಮಾ ರೂಪ ಪಡೆದುಕೊಂಡಿದೆ. ಈಗಾಗಲೇ ಚಿತ್ರೀಕರಣ ಕೆಲಸ ಮುಗಿಸಿರುವ ಈ ಸಿನಿಮಾ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ.

ನಾಡು ಕಂಡ ಖ್ಯಾತ ಸಾಹಿತಿ ಡಾ. ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಜನಪ್ರಿಯ ಪದ್ಯ ಪುಸ್ತಕ ಮಂಕುತಿಮ್ಮನ ಕಗ್ಗ, ಇದೀಗ ಸಿನಿಮಾ ರೂಪ ಪಡೆದುಕೊಂಡಿದೆ.
ನಾಡು ಕಂಡ ಖ್ಯಾತ ಸಾಹಿತಿ ಡಾ. ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಜನಪ್ರಿಯ ಪದ್ಯ ಪುಸ್ತಕ ಮಂಕುತಿಮ್ಮನ ಕಗ್ಗ, ಇದೀಗ ಸಿನಿಮಾ ರೂಪ ಪಡೆದುಕೊಂಡಿದೆ.

Mankutimmana kagga:‌ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಹೆಸರಾಂತ ಸಾಹಿತಿ ಡಾ. ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಜನಪ್ರಿಯ ಪದ್ಯ ಪುಸ್ತಕ ಮಂಕುತಿಮ್ಮನ ಕಗ್ಗ. ಇದೀಗ ಇದೇ ಮಂಕುತಿಮ್ಮನ ಕಗ್ಗ ಸಿನಿಮಾ ರೂಪ ಪಡೆದುಕೊಂಡಿದೆ. ಸಹಜವಾಗಿ ಸಾಹಿತ್ತಿಕ ಕೃತಿಗಳು ಸಿನಿಮಾ ರೂಪ ಪಡೆದಾಗ, ಅವುಗಳ ಮೇಲೆ ಸಾಹಿತ್ಯಾಸಕ್ತರ ಕುತೂಹಲದ ಕಣ್ಣು ಅತ್ತ ಕಡೆ ನೆಟ್ಟಿರುತ್ತದೆ. ಇದೀಗ ಈ ಚಿತ್ರದ ಮೇಲೆಯೂ ಅದೇ ನಿರೀಕ್ಷೆ ಮೂಡಿದೆ.

ಕನ್ನಡದಲ್ಲಿ ಈಗಾಗಲೇ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವ ಇರುವ ರಾಜ ರವಿಶಂಕರ್ (ವಿ.ರವಿ), ಡಿ.ವಿ.ಜಿ ಅವರ "ಮಂಕುತಿಮ್ಮನ ಕಗ್ಗ"ವನ್ನು ಚಿತ್ರದ ಮೂಲಕ ತೆರೆಗೆ ತರುತ್ತಿದ್ದಾರೆ. ಎನ್ ಎ ಶಿವಕುಮಾರ್ ನಿರ್ಮಿಸಿರುವ ಹಾಗೂ ಮೀನಾ‌ ಶಿವಕುಮಾರ್ ಸಹ ನಿರ್ಮಾಣವಿರುವ ಈ ಚಿತ್ರ ಇದೀಗ ಹಾಡಿನ ಮೂಲಕ ಎಲ್ಲರನ್ನು ರಂಜಿಸುತ್ತಿದೆ.

ಸ್ವಾಮಿದೇವನೇ ಹಾಡು ವರಮಹಾಲಕ್ಷ್ಮೀ ಹಬ್ಬದಂದು A2 music ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಹಲವು ವರ್ಷಗಳ ಹಿಂದೆ ಸೋಸಲೆ ಅಯ್ಯ ಶಾಸ್ತ್ರಿಗಳು ಬರೆದಿದ್ದ ಈ ಗೀತೆಯನ್ನು‌ ಮಂಕುತಿಮ್ಮನ ಕಗ್ಗ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ‌ಎ.ಟಿ. ರವೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೆನ್ಸಾರ್ ಮಂಡಳಿ ಸಹ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳಾಡಿದೆ. ಮಧುಗಿರಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಈ ಚಿತ್ರದಲ್ಲಿ‌‌ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ.‌ ಕಥೆ ವಿಸ್ತರಣೆ, ‌ಚಿತ್ರಕಥೆ ಹಾಗೂ ಸಂಭಾಷಣೆ ನಿರ್ದೇಶಕ ರಾಜ ರವಿಶಂಕರ್ ಅವರದು. ಸಿ. ನಾರಾಯಣ್ ಛಾಯಾಗ್ರಹಣ ಹಾಗೂ ಆರ್ ಡಿ ರವಿ ಸಂಕಲನ (ದೊರೈರಾಜ್) ಈ ಚಿತ್ರಕ್ಕಿದೆ‌.

ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಬಾಲಕ ಸೋಮಿ (ಡಿ.ವಿ.ಜಿ) ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಮ್ತೂರ್‌ ನಟಿಸಿದ್ದಾರೆ.