ದರ್ಶನ್‌ ಸುದೀಪ್‌ ನಡುವೆಯೂ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ; ರಾಕ್‌ಲೈನ್‌ ವೆಂಕಟೇಶ್‌ಗೆ ಫ್ಯಾನ್ಸ್‌ ಮನವಿ
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಸುದೀಪ್‌ ನಡುವೆಯೂ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ; ರಾಕ್‌ಲೈನ್‌ ವೆಂಕಟೇಶ್‌ಗೆ ಫ್ಯಾನ್ಸ್‌ ಮನವಿ

ದರ್ಶನ್‌ ಸುದೀಪ್‌ ನಡುವೆಯೂ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ; ರಾಕ್‌ಲೈನ್‌ ವೆಂಕಟೇಶ್‌ಗೆ ಫ್ಯಾನ್ಸ್‌ ಮನವಿ

ಸ್ಯಾಂಡಲ್‌ವುಡ್‌ ನಟರಾದ ದರ್ಶನ್‌ ಮತ್ತು ಸುದೀಪ್‌ ಮತ್ತೆ ಒಂದಾಗಬೇಕೆಂಬುದು ಅವರ ಕೋಟ್ಯಂತರ ಅಭಿಮಾನಿಗಳ ಬಯಕೆ. ಆ ಆಸೆಯನ್ನು ಪೂರೈಸುವಂತೆ ಅವರ ಅಭಿಮಾನಿಗಳು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮೊರೆ ಹೋಗಿದ್ದಾರೆ. ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.

ದರ್ಶನ್‌ ಸುದೀಪ್‌ ನಡುವೆಯೂ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ; ರಾಕ್‌ಲೈನ್‌ ವೆಂಕಟೇಶ್‌ಗೆ ಫ್ಯಾನ್ಸ್‌ ಮನವಿ
ದರ್ಶನ್‌ ಸುದೀಪ್‌ ನಡುವೆಯೂ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ; ರಾಕ್‌ಲೈನ್‌ ವೆಂಕಟೇಶ್‌ಗೆ ಫ್ಯಾನ್ಸ್‌ ಮನವಿ

Sudeep Darshan: ಸೋಷಿಯಲ್‌ ಮೀಡಿಯಾದಲ್ಲೀಗ ಕಿಚ್ಚ ಸುದೀಪ್‌ ಮತ್ತು ನಟ ದರ್ಶನ್‌ ಜೋಡಿಯ ಸಾಲು ಸಾಲು ವಿಡಿಯೋಗಳೇ ಹರಿದಾಡುತ್ತಿವೆ. ಸುಮಲತಾ ಅಂಬರೀಶ್‌ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಈ ಇಬ್ಬರೂ ನಟರು ಕಾಣಿಸಿಕೊಂಡು ಫ್ಯಾನ್ಸ್‌ ವಲಯಕ್ಕೆ ಬಿಗ್‌ ಸರ್ಪ್ರೈಸ್‌ ನೀಡಿದ್ದರು. ವಿಡಿಯೋ ನೀಡಿದ ಫ್ಯಾನ್ಸ್‌ ಆದಷ್ಟು ಬೇಗ ಇಬರಿಬ್ಬರೂ ಒಂದಾಗಲಿ ಎಂದೇ ಬಯಸುತ್ತಿದ್ದಾರೆ. ಇದರ ಜತೆಗೆ ಹೊಸ ಬೇಡಿಯನ್ನೂ ಇಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಾಧ್ಯಮಗಳ ಜತೆಗಿದ್ದ ಕಂದಕವನ್ನು ದರ್ಶನ್‌ ನಿವಾರಣೆ ಮಾಡಿಕೊಂಡಿದ್ದಾರೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಎಲ್ಲ ಮಾಧ್ಯಮ ಸಂಸ್ಥೆಗಳ ಸಂಪಾದಕರುಗಳನ್ನು ಒಂದೆಡೆ ಕರೆಸಿ, ದರ್ಶನ್‌ ಜತೆಗೆ ಮಾತುಕತೆ ನಡೆಸಿ, ಸಂಧಾನ ಸಭೆ ಏರ್ಪಡಿಸಿದ್ದರು. ಈ ಸಭೆ ಫಲಪ್ರದವಾಗಿತ್ತು. ದರ್ಶನ್‌ ಮತ್ತು ಮಾಧ್ಯಮಗಳ ನಡುವಿನ ಬಿರುಕು ಸುಖಾಂತ್ಯ ಕಂಡಿತ್ತು.

ಸಂಧಾನ ಸಭೆ ನಡೆಯಲಿ

ಇದೀಗ ಇದೇ ರೀತಿಯ ಸಂಧಾನ ಸಭೆ ದರ್ಶನ್‌ ಮತ್ತು ಸುದೀಪ್‌ ಅವರ ನಡುವೆಯೂ ನಡೆಯಲಿ ಎಂದು ಫ್ಯಾನ್ಸ್‌ ಪಟ್ಟು ಹಿಡಿದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಯನ್ನು ಕರೆಸಿ ಇಬ್ಬರ ನಡುವಿನ ಸಮಸ್ಯೆ ಬಗೆಹರಿಸುವಂತೆ ಇಬ್ಬರ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಷ್ಟೇ ಅಲ್ಲ ಇದರ ಉಸ್ತುವಾರಿಯನ್ನು ರಾಕ್‌ಲೈನ್‌ ವೆಂಕಟೇಶ್‌ ಅವರೇ ವಹಿಸಿಕೊಳ್ಳಲಿ ಎಂದೂ ಹೇಳಿದ್ದಾರೆ.

ಕರುನಾಡಿನ ಸಿನಿಮಾ ಪ್ರೇಮಿಗಳ ಒಂದೇ ಒಂದು ಬಯಕೆಯೆಂದರೆ ಕಿಚ್ಚ ಸುದೀಪ್‌ ಮತ್ತು ನಟ ದರ್ಶನ್‌ ಒಂದಾಗಬೇಕೆಂಬುದು. ಇಡೀ ಸ್ಯಾಂಡಲ್‌ವುಡ್‌ ಸಿನಿಮಾ ಇಂಡಸ್ಟ್ರಿಯ ಆಸೆಯೂ ಇದೇ. ಆದರೆ, ಆರು ವರ್ಷ ಕಳೆದರೂ ಅದು ಸಾಧ್ಯವಾಗುತ್ತಿಲ್ಲ. ಈ ಇಬ್ಬರೂ ನಟರು ಪರಸ್ಪರ ಮುಖಾಮುಖಿಯಾಗಿದ್ದೂ ತುಂಬ ವಿರಳ. ಹೀಗಿರುವಾಗಲೇ ನಟಿ ಸುಮಲತಾ ಅವರ 60ನೇ ಬರ್ತ್‌ಡೇಯಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು.

ಮಾತಿಲ್ಲ.. ಕಥೆಯಿಲ್ಲ..

ಇಬ್ಬರನ್ನು ಒಂದೇ ಕಡೆ ನೋಡಿದ ಖುಷಿ ಅಭಿಮಾನಿಗಳಲ್ಲಿ ಕಾಣಿಸಿದೆಯಾದರೂ, ಕಿಚ್ಚ ಸುದೀಪ್ ಮತ್ತು ದರ್ಶನ್‌ ಇಬ್ಬರೂ ಪರಸ್ಪರ ಮಾತನಾಡಿದ ವಿಡಿಯೋ ಆಗಲಿ, ಉಭಯಕುಶಲೋಪರಿಯ ವಿಡಿಯೋ ಹೊರಬಿದ್ದಿಲ್ಲ. ಸುಮಲತಾ ಸುದೀಪ್‌ ಮತ್ತು ದರ್ಶನ್‌ ಇಬ್ಬರಿಗೂ ಒಂದೇ ಸ್ಪೂನಿನಲ್ಲಿ ಕೇಕ್‌ ತಿನಿಸಿದರೂ, ಅವರಲ್ಲಿ.. ಇವರಿಲ್ಲಿ, ಮಾತಿಲ್ಲ.. ಕಥೆಯಿಲ್ಲ.. ಎಂಬಂತಾಗಿತ್ತು.

ದಿಗ್ಗಜರು ಕುಚಿಕು ಕುಚಿಕು ಹಾಡೇ ಹೈಲೈಟ್‌..

ಈ ಬರ್ತ್‌ಡೇ ಪಾರ್ಟಿಯ ಕಿರು ವಿಡಿಯೋ ತುಣುಕು ಸೋಷಿಯಲ್‌ ಮೀಡಿಯಾದಲ್ಲಿ ಹೊರಬೀಳುತ್ತಿದ್ದಂತೆ, ಅಭಿಮಾನಿವಲಯದಲ್ಲಿ ಹಬ್ಬದಾಚರಣೆ ಶುರುವಾಗಿದೆ. ಇಬ್ಬರನ್ನೂ ನೋಡಿದ ಫ್ಯಾನ್ಸ್‌ ಕುಣಿದು ಕುಪ್ಪಳಿಸುತ್ತಿದ್ದಾರೆ. ದಿಗ್ಗಜರು ಸಿನಿಮಾದ ಕುಚಿಕು.. ಕುಚಿಕು.. ಹಾಡನ್ನು ಜೋಡಿಸಿ ಸಂಭ್ರಮಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಈ ಇಬ್ಬರೂ ಒಟ್ಟಿಗೆ ಮುಖಾಮುಖಿಯಾಗಿರಲಿಲ್ಲ. ಇದೀಗ ಆ ಕ್ಷಣವನ್ನು ಇಡೀ ಅಭಿಮಾನಿ ಬಳಗ ಕಣ್ತುಂಬಿಕೊಂಡು, ಸಾರ್ಥಕ ಕ್ಷಣ ಎಂದೆಲ್ಲ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

Whats_app_banner