Friday Release: ಕನ್ನಡದ 7 ಸಿನಿಮಾಗಳು ಸೇರಿದಂತೆ ಈ ವಾರ 15 ಚಿತ್ರಗಳು ಬಿಡುಗಡೆ; ಫಾರ್ ರಿಜಿಸ್ಟ್ರೇಷನ್‌ನಿಂದ ಪ್ರೇತ ಪಿಶಾಚಿಯ ಕಥೆಯವರೆಗೆ
Upcoming Kannada Movies: ಈ ವಾರ ಕನ್ನಡದಲ್ಲಿ ಫಾರ್ ರಿಜಿಸ್ಟ್ರೇಷನ್, ಮಿ. ನಟ್ವರ್‌ಲಾಲ್, ಮತ್ಸ್ಯಗಂಧ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಬಾಲಿವುಡ್‌ನಲ್ಲಿ ಕ್ರ್ಯಾಕ್ ಮತ್ತು ಆರ್ಟಿಕಲ್ 360 ರಿಲೀಸ್ ಆಗಲಿದೆ. ಟಾಲಿವುಡ್, ಕಾಲಿವುಡ್‌ನಲ್ಲೂ ಹಲವು ಸಿನಿಮಾಗಳು ರಿಲೀಸ್ ಆಗಲಿವೆ.
ಬೆಂಗಳೂರು: ಸ್ಯಾಂಡಲ್‌ವುಡ್ ಸೇರಿದಂತೆ ಭಾರತದ ಚಿತ್ರಮಂದಿರಗಳಲ್ಲಿ ಈ ವಾರ ಕೆಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಕನ್ನಡದಲ್ಲಿ ಮಿಸ್ಟರ್ ನಟ್ವರ್‌ಲಾಲ್, ಮತ್ಸ್ಯಗಂಧ, ಧೈರ್ಯಂ ಸರ್ವತ್ರ ಸಾಧನಂ, ಫಾರ್ ರಿಜಿಸ್ಟ್ರೇಷನ್, ಒಂದು ಪಿಶಾಚಿಯ ಕಥೆ, ಪ್ರೇತ, ಕಪ್ಪು ಬಿಳುಪಿನ ನಡುವೆ ಸಿನಿಮಾಗಳು ಬಿಡುಗಡೆಯಾಗಲಿವೆ. ಹಿಂದಿಯಲ್ಲಿ ಕ್ರ್ಯಾಕ್ ಮತ್ತು ಆರ್ಟಿಕಲ್ 370 ಸಿನಿಮಾಗಳು ಬಿಡುಗಡೆಯಾಗಲಿವೆ.
ಈ ವಾರ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳು
ಫಾರ್ ರಿಜಿಸ್ಟ್ರೇಷನ್
ಫೆಬ್ರವರಿ 23ರಂದು ಫಾರ್ ರಿಜಿಸ್ಟ್ರೇಷನ್ ಎಂಬ ಕನ್ನಡ ಸಿನಿಮಾ ಬಿಡುಗಡೆಯಾಗಲಿದೆ. ಇದು ಕೊಂಚ ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಚಿತ್ರಕಥೆ, ನಿರ್ದೇಶನ ನವೀನ್ ದ್ವಾರಕನಾಥ್ ನಿರ್ವಹಿಸಿದ್ದು, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ. ಫಾರ್ ರಿಜಿಸ್ಟ್ರೇಷನ್ ಎರಡು ಸಹಪಾಠಿಗಳ ಪ್ರಯತ್ನ ಇದು. ಇಬ್ಬರು ನವೀನ್ ಅವರ ಕನಸಿನ ಕೂಸು ಇದು. ತುಂಬಾ ಹಾರ್ಡ್ ವರ್ಕ್ ಆಗಿದೆ ಎಂದು ಇತ್ತೀಚೆಗೆ ಪೃಥ್ವಿ ಅಂಬಾರ್ ಹೇಳಿದ್ದರು.
ಮಿಸ್ಟರ್ ನಟ್ವರ್‌ಲಾಲ್
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮಿ. ನಟ್ವರ್‌ಲಾಲ್ ಸಿನಿಮಾ ಬಿಡುಗಡೆಯಾಗಲಿದೆ. ಅಯೋಧ್ಯಾಪುರ ನಿರ್ದೇಶಕ ವಿ ಲವ ಅವರು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ.
ಕಪ್ಪು ಬಿಳುಪಿನ ನಡುವೆ ಸಿನಿಮಾ ಬಿಡುಗಡೆ
ಈ ವಾರ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಧರ್ಮೇಂದ್ರ ಅವರು ನಿರ್ಮಿಸಿರುವ, ವಿಭಿನ್ನ ಕಥೆಯ ಹಾರರ್ ಚಿತ್ರ "ಕಪ್ಪು ಬಿಳುಪಿನ ನಡುವೆ" ಚಿತ್ರ ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಸಂತ್ ವಿಷ್ಣು ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ನಾಯಕನಾಗಿಯೂ ಅಭಿನಯಿಸಿದ್ದಾರೆ.
- ಮತ್ಸ್ಯಗಂಧ
- ಧೈರ್ಯಂ ಸರ್ವತ್ರ ಸಾಧನಂ
- ಒಂದು ಪಿಶಾಚಿಯ ಕಥೆ
- ಪ್ರೇತ
ಇದನ್ನೂ ಓದಿ: Chaithra J Achar: ಸೈಲೆಂಟಾಗಿ ಲೆಸ್ಬಿಯನ್ ಸಿನಿಮಾದಲ್ಲಿ ನಟಿಸಿದ ಚೈತ್ರಾ ಜೆ ಆಚಾರ್; ಇಲ್ಲೇ ಇದೆ ನೋಡಿ ಆ ಚಿತ್ರ
ಈ ವಾರ ಬಿಡುಗಡೆಯಾಗಲಿರುವ ಹಿಂದಿ ಸಿನಿಮಾಗಳು
- ಕ್ರ್ಯಾಕ್
- ಆರ್ಟಿಕಲ್ 370
ಶುಕ್ರವಾರ ಬಿಡುಗಡೆಯಾಗುವ ತೆಲುಗು ಸಿನಿಮಾಗಳು
- ಸಿದ್ಧಾರ್ಥ್ ರಾಯ್
- ಸುಂದರಂ ಮಾಸ್ಟರ್
- ಮಸ್ತು ಶೇಡ್ಸ್ ಉನ್ನೈ ರಾ...
- ಮುಖ್ಯ ಗಮನಿಕ
ತಮಿಳು ಸಿನಿಮಾಗಳು
- ಬರ್ತ್‌ಮಾರ್ಕ್
- ಪಂಬಾತ್ತಂ