Deepavali: ದೀಪಾವಳಿ ಸಂಭ್ರಮ ಹೆಚ್ಚಿಸುವ 5 ಕನ್ನಡ ಚಲನಚಿತ್ರ ಗೀತೆಗಳು; ದೀಪದಿಂದ ದೀಪವ ಹಚ್ಚಬೇಕು ಮಾನವ
ಕನ್ನಡ ಸುದ್ದಿ  /  ಮನರಂಜನೆ  /  Deepavali: ದೀಪಾವಳಿ ಸಂಭ್ರಮ ಹೆಚ್ಚಿಸುವ 5 ಕನ್ನಡ ಚಲನಚಿತ್ರ ಗೀತೆಗಳು; ದೀಪದಿಂದ ದೀಪವ ಹಚ್ಚಬೇಕು ಮಾನವ

Deepavali: ದೀಪಾವಳಿ ಸಂಭ್ರಮ ಹೆಚ್ಚಿಸುವ 5 ಕನ್ನಡ ಚಲನಚಿತ್ರ ಗೀತೆಗಳು; ದೀಪದಿಂದ ದೀಪವ ಹಚ್ಚಬೇಕು ಮಾನವ

Deepavali Related Kannada Film Songs: ಈ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಲು ಬೆಳಕಿನ ಹಬ್ಬಕ್ಕೆ ಸಂಬಂಧಪಟ್ಟ ಕನ್ನಡ ಚಲನಚಿತ್ರ ಗೀತೆಗಳನ್ನು ಕೇಳದಿದ್ರೆ ಹೇಗೆ? ದೀಪದಿಂದ ದೀಪವ, ಪಟ ಪಟ ಪಟಾಕಿ, ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಮುಂತಾದ ಹಾಡುಗಳನ್ನು ಕೇಳೋಣ ಬನ್ನಿ.

Deepavali: ದೀಪಾವಳಿ ಸಂಭ್ರಮ ಹೆಚ್ಚಿಸುವ 5 ಕನ್ನಡ ಚಲನಚಿತ್ರ ಗೀತೆಗಳು
Deepavali: ದೀಪಾವಳಿ ಸಂಭ್ರಮ ಹೆಚ್ಚಿಸುವ 5 ಕನ್ನಡ ಚಲನಚಿತ್ರ ಗೀತೆಗಳು

ಕನ್ನಡದ ಹತ್ತು ಹಲವು ಚಲನಚಿತ್ರಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಇರುತ್ತದೆ. ಪಟಾಕಿ ಸದ್ದು, ದೀಪಾವಳಿ ಸಂಭ್ರಮ ಒಳಗೊಂಡ ಕಥೆಗಳಿಗೆ ಬರವಿಲ್ಲ. ಇದೇ ರೀತಿ ದೀಪಾವಳಿ ಹಬ್ಬಕ್ಕೆ ಸಂಬಂಧಪಟ್ಟ ಸಾಕಷ್ಟು ಹಾಡುಗಳೂ ಇವೆ. ದೀಪದಿಂದ ದೀಪವ, ಪಟ ಪಟ ಪಟಾಕಿ, ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಸೇರಿದಂತೆ ಹಲವು ಹಾಡುಗಳನ್ನು ಕೇಳೋಣ ಬನ್ನಿ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ದೀಪಾವಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಲೇಖನಗಳಿವೆ. ದೀಪಾವಳಿ ಆಚರಣೆಯ ಮಹತ್ವ ಇತ್ಯಾದಿ ಲೇಖನಗಳಿಂದ ಹಿಡಿದು ದೀಪಾವಳಿ ಹಬ್ಬಕ್ಕೆ ಮಾಡಬಹುದಾದ ರುಚಿಕರ ಅಡುಗೆ ವೈವಿಧ್ಯದ ವಿವರವೂ ಇದೆ. ಚಲನಚಿತ್ರ ಪ್ರೇಮಿಗಳು ಈ ಸಂದರ್ಭದಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಪಟ್ಟ ಹಾಡುಗಳನ್ನು ಕೇಳೋಣ.

ದೀಪದಿಂದ ದೀಪವ ಹಚ್ಚಬೇಕು ಮಾನವ

ಡಾ. ಶಿವರಾಜ್‌ಕುಮಾರ್‌ ನಟನೆಯ ನಂಜುಡಿ ಚಿತ್ರದ ಈ ಹಾಡು ಎಷ್ಟೊಂದು ಅರ್ಥಗರ್ಭಿತ ಅಲ್ಲವೇ. ಈ ಚಿತ್ರವನ್ನು ಸ್.ಆರ್.ಬ್ರದರ್ಸ್ ನಿರ್ದೇಶನ ಮಾಡಿದ್ದರು. ಹಂಸಲೇಖ ಸಾಹಿತ್ಯವಿರುವ ಮಧುರ ಗೀತೆಯಿದು. ಮಧುಬಾಲಕೃಷ್ಣ, ನಂದಿತಾ ಈ ಹಾಡಿಗೆ ಧ್ವನಿಯಾಗಿದ್ದಾರೆ. ದೀಪದಿಂದ ದೀಪವ ಹಾಡಿನ ಲಿರಿಕ್ಸ್‌: ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು, ಮನಸಿನಿಂದ ಮನಸನು ಬೆಳಗಬೇಕು ಮಾನವ ಮೇಲು ಕೀಳು ಭೇದ ನಿಲ್ಲಲು, ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ನೀ ತಿಳಿಯೋ ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು, ಆಸೆ ಹಿಂದೆ ದುಃಖ ಎಂದರು, ರಾತ್ರಿ ಹಿಂದೆ ಹಗಲು ಎಂದರು, ದ್ವೇಷವೆಂದೂ ಹೊರೆ ಎಂದರು ಹಬ್ಬವದಕೆ ಹೆಗಲು ಎಂದರು, ಎರಡು ಮುಖದ ನಮ್ಮ ಜನುಮದ ವೇಷಾವಳಿ, ತೆಗೆದು ಹಾಲ್ಬೆಳಕ ಕುಡಿವುದೀ ದೀಪಾವಳಿ ಹೀಗೆ ಸಾಗುವ ಈ ಹಾಡು ಅತ್ಯಂತ ಅರ್ಥಪೂರ್ಣವಾಗಿದೆ.

ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ

ಶಶಿಕುಮಾರ್, ಶೃತಿ ಮತ್ತು ತಾರಾ ನಟಿಸಿದ ಮುದ್ದಿನ ಮಾವ ಚಿತ್ರದ ಈ ಹಾಡು ಮರೆಯಲಾದೀತೆ. ಹಂಸಲೇಖ ಸಾಹಿತ್ಯದ ಈ ಹಾಡಿಗೆ ಎಸ್‌ಪಿ ಬಾಲಸುಬ್ರಮಣ್ಯಂ ಮತ್ತು ಡಾ. ರಾಜ್‌ಕುಮಾರ್‌ ಧ್ವನಿಯಾಗಿದ್ದರು. ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ, ಅಳಿಯ ಮಗನಾದನು ಮಾವ ಮಗುವಾದನು, ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಅಳಿಯ ಮಗನಾದನು ಮಾವ ಮಗುವಾದನು, ಹೇ ತಾನೂ ತಂದಾನ ತಂದಾನ ತಾನ ತಂದಾನ ನಾನಾ ತಾನೂ ತಂದಾನ ತಂದಾನ ತಾನ ತಂದಾನ, ನಾನಾ ಹೆತ್ತೋರ ಆಸೆಯ ಮನ್ನಣೆ ಮಾಡಿ ಕೊಟ್ಟೋರ ಹೆಣ್ಣನು ಮುದ್ದಾಗಿ ನೋಡಿ, ಇದ್ದಗ ಹೋಳಿಗೆ ತಿನ್ನುತ ಹಾಡಿ ಕಣ್ಣಲಿ ಕಂಬನಿ ಮುತ್ತಗಿ ಮಾಡಿ ಸಲಹೊ ಅಳಿಮಯ್ಯ, ರಾಮನಿಗು ಮೇಲು ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು, ಕಾಲು ಚಂದನ ನೆತ್ತಿ ಮಲ್ಲಿಗೆ ಸುತ್ತಿ ಮನೆ ಮಗನಿಗೆ ಆರತಿ ಎತ್ತಿ, ಬಾಳು ಬನವಾಯಿತು ಇರುಳು ಬೆಳಕಾಯಿತು ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಹೀಗೆ ಸಾಗುವ ಹಾಡನ್ನು ಕೇಳಿರಿ.

ನಾಡಿನಿಂದ ಈ ದೀಪಾವಳಿ

ನಂದದೀಪಾ ಚಿತ್ರದ ಈ ಹಾಡು ಈ ದೀಪಾವಳಿ ಹಬ್ಬದ ಸಮಯದಲ್ಲಿ ನೆನಪಿಸಿಕೊಳ್ಳಲು ಸೂಕ್ತವಾಗಿದೆ. ಡಾ. ರಾಜಕುಮಾರ್, ಹರಿಣಿ ಮತ್ತು ಲೀಲಾವತಿ ನಟಿಸಿದ ಈ ಚಿತ್ರದ ಹಾಡನ್ನು ಎಸ್. ಜಾನಕಿ ಮತ್ತು ಪಿ ಲೀಲಾ ಮಧುರ ಕಂಠದಲ್ಲಿ ಹಾಡಿದ್ದರು.

ಇನ್ನಷ್ಟು ದೀಪಾವಳಿ ಗೀತೆಗಳು

ಆಂಟಿ ಪ್ರೀತ್ಸೆ ಎಂಬ ಸಿನಿಮಾದ ಸ್ನೇಹ ದೀಪಾವಳಿ ಎಂಬ ಹಾಡನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಚೆಲ್ಲಾಟ ಸಿನಿಮಾದ ಪಟ ಪಟ ಪಟಾಕಿ ಹಾಡು ಕೂಡ ಈ ಪಟಾಕಿ ಸಿಡಿಸುವ ಸಂದರ್ಭದ ಬೆಳಕಿನ ಹಬ್ಬಕ್ಕೆ ಸೂಕ್ತವಾಗಿದೆ. ಈ ಐದು ಹಾಡುಗಳು ಕೆಲವು ಉದಾಹರಣೆಗಳಷ್ಟೇ. ಇಂತಹ ಹಲವು ಹಾಡುಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸೊಗಡಿದೆ.