ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು; ಬ್ಯಾಚುಲರ್‌ ಪಾರ್ಟಿ ತಂದ ಸಂಕಷ್ಟ
ಕನ್ನಡ ಸುದ್ದಿ  /  ಮನರಂಜನೆ  /  ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು; ಬ್ಯಾಚುಲರ್‌ ಪಾರ್ಟಿ ತಂದ ಸಂಕಷ್ಟ

ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು; ಬ್ಯಾಚುಲರ್‌ ಪಾರ್ಟಿ ತಂದ ಸಂಕಷ್ಟ

FIR Against Actor Rakshit Shetty: ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ವಿರುದ್ಧ ಕಾಪಿರೈಟ್‌ ಉಲ್ಲಂಘನೆ ಆರೋಪ ಎದುರಾಗಿದ್ದು, ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಎಂಆರ್‌ಟಿ ಮ್ಯೂಸಿಕ್‌ನ ನವೀನ್‌ ಕುಮಾರ್‌ ದೂರು ದಾಖಲಿಸಿದ್ದಾರೆ.

ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು
ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು: ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ವಿರುದ್ಧ ಕಾಪಿರೈಟ್‌ ಉಲ್ಲಂಘನೆ ಆರೋಪ ಎದುರಾಗಿದ್ದು, ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ರಕ್ಷಿತ್‌ ಶೆಟ್ಟಿಯವರು ಪರಂವಃ ಸ್ಟುಡಿಯೋ ಮೂಲಕ ನಿರ್ಮಿಸಿದ ಈ ಸಿನಿಮಾದಲ್ಲಿ ಎರಡು ಹಳೆಯ ಸಿನಿಮಾಗಳ ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಬ್ಯಾಚುಲರ್‌ ಪಾರ್ಟಿ ಸಿನಿಮಾ ಸದ್ಯ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ನಿರೀಕ್ಷಿತ ಯಶಸ್ಸು ಪಡೆದಿರಲಿಲ್ಲ. ಅಭಿಜಿತ್‌ ಮಹೇಶ್‌ ನಿರ್ದೇಶನದ ಈ ಕಾಮಿಡಿ ಸಿನಿಮಾ ಜನವರಿ 26ರಂದು ಬಿಡುಗಡೆಯಾಗಿತ್ತು. ಇದೀಗ ಕಾಪಿರೈಟ್‌ ಉಲ್ಲಂಘನೆ ಆರೋಪದಡಿ ರಕ್ಷಿತ್‌ ಶೆಟ್ಟಿ ಮತ್ತು ಪರಂವಃ ಸ್ಟುಡಿಯೋ ವಿರುದ್ಧ ದೂರು ದಾಖಲಿಸಲಾಗಿದೆ. ಪೊಲೀಸರು ಈಗಾಗಲೇ ಎಫ್‌ಐಆರ್‌ ಹಾಕಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ಎಂಆರ್‌ಟಿ ಮ್ಯೂಸಿಕ್‌ನ ನವೀನ್‌ ಕುಮಾರ್‌ ದೂರು ದಾಖಲಿಸಿದ್ದಾರೆ.

ಗಾಳಿಮಾತು ಮತ್ತು ನ್ಯಾಯ ಎಲ್ಲಿದೆ ಸಿನಿಮಾದ ಟೈಟಲ್‌ ಹಾಡನ್ನು ಬಳಸಿಕೊಂಡಿರುವ ಆರೋಪ ರಕ್ಷಿತ್‌ ಶೆಟ್ಟಿ ಮೇಲಿದೆ. ವರದಿಗಳ ಪ್ರಕಾರ ಈ ಹಾಡುಗಳನ್ನು ಬಳಸಿಕೊಳ್ಳಲು ಚಿತ್ರತಂಡವು ನವೀನ್‌ ಕುಮಾರ್‌ ಜತೆ ಈ ಹಿಂದೆ ಮಾತುಕತೆ ನಡೆಸಿತ್ತಂತೆ. ಆದರೆ, ಈ ಮಾತುಕತೆ ಯಶಸ್ವಿಯಾಗಿರಲಿಲ್ಲ. ಆದರೆ, ಬಳಿಕ ಈ ಹಾಡುಗಳನ್ನು ಸದ್ದಿಲ್ಲದೆ ಬ್ಯಾಚುಲರ್‌ ಪಾರ್ಟಿಯಲ್ಲಿ ಬಳಸಿಕೊಳ್ಳಲಾಗಿದೆ. ಇತ್ತೀಚೆಗೆ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾ ವೀಕ್ಷಿಸಿರುವ ನವೀನ್‌ ಕುಮಾರ್‌ ಅವರು ತಮ್ಮ ಸಿನಿಮಾದ ಹಾಡುಗಳು ಇರುವುದನ್ನು ಕಂಡುಕೊಂಡಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬ್ಯಾಚುಲರ್‌ ಪಾರ್ಟಿ ಸಿನಿಮಾದಲ್ಲಿ ಕಾಪಿರೈಟ್‌ ಹಕ್ಕು ಪಡೆಯದೆ ನ್ಯಾಯ ಎಲ್ಲಿದೆ ಟೈಟಲ್‌ ಸಾಂಗ ಮತ್ತು ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ ಎಂಬ ಹಾಡುಗಳನ್ನು ಬಳಸಿದ್ದಾರೆ ಎಂದು ನವೀನ್‌ ಕುಮಾರ್‌ ಆರೋಪಿಸಿದ್ದಾರೆ. ಈ ಹಿಂದೆ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿಯೂ ಇದೇ ರೀತಿಯ ಸಮಸ್ಯೆ ರಕ್ಷಿತ್‌ ಶೆಟ್ಟಿಗೆ ಎದುರಾಗಿತ್ತು. ರವಿಚಂದ್ರನ್‌ ನಟನೆಯ ಶಾಂತಿ ಕ್ರಾಂತಿ ಸಿನಿಮಾದ ಹಾಡನ್ನು ಅನುಮತಿ ಪಡೆಯದೆ ಬಳಸಿದ್ದ ಆರೋಪವಿತ್ತು. ಈ ಆರೋಪವನ್ನು ರಾಜಿ ಸಂಧಾನದ ಮೂಲಕ ಬಳಿಕ ಬಗೆಹರಿಸಿಕೊಳ್ಳಲಾಗಿತ್ತು.

Whats_app_banner