ಪ್ರಕಾಶ್‌ ರಾಜ್‌ಗೆ ಜೀವ ಬೆದರಿಕೆ, ನಿಂದನೆ; ಯೂಟ್ಯೂಬ್‌ ಚಾನೆಲ್‌ ವಿರುದ್ಧ ಎಫ್‌ಐಆರ್‌ ದಾಖಲು
ಕನ್ನಡ ಸುದ್ದಿ  /  ಮನರಂಜನೆ  /  ಪ್ರಕಾಶ್‌ ರಾಜ್‌ಗೆ ಜೀವ ಬೆದರಿಕೆ, ನಿಂದನೆ; ಯೂಟ್ಯೂಬ್‌ ಚಾನೆಲ್‌ ವಿರುದ್ಧ ಎಫ್‌ಐಆರ್‌ ದಾಖಲು

ಪ್ರಕಾಶ್‌ ರಾಜ್‌ಗೆ ಜೀವ ಬೆದರಿಕೆ, ನಿಂದನೆ; ಯೂಟ್ಯೂಬ್‌ ಚಾನೆಲ್‌ ವಿರುದ್ಧ ಎಫ್‌ಐಆರ್‌ ದಾಖಲು

ಪ್ರಕಾಶ್‌ ರಾಜ್‌, ಸನಾತನ ಧರ್ಮದ ಬಗ್ಗೆ ಮಾಡಿದ್ದ ಟ್ವೀಟ್‌ ಕೂಡಾ ಹಿಂದೂಗಳನ್ನು ಕೆರಳಿಸಿತ್ತು. ಇದೀಗ ಪ್ರಕಾಶ್‌ ರಾಜ್‌, ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ನನಗೆ ಜೀವ ಬೆದರಿಕೆ ಹಾಕಿರುವುದಲ್ಲದೆ, ನನ್ನನ್ನೂ ನನ್ನ ಕುಟುಂಬವನ್ನೂ ಅಸಭ್ಯವಾಗಿ ನಿಂದಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ತಮ್ಮನ್ನು ನಿಂದಿಸಿದ ಯೂಟ್ಯೂಬ್‌ ಚಾನೆಲ್‌ ವಿರುದ್ಧ  ಪ್ರಕಾಶ್‌ ರಾಜ್‌ ದೂರು
ತಮ್ಮನ್ನು ನಿಂದಿಸಿದ ಯೂಟ್ಯೂಬ್‌ ಚಾನೆಲ್‌ ವಿರುದ್ಧ ಪ್ರಕಾಶ್‌ ರಾಜ್‌ ದೂರು (PC: Prakash Raj)

ಒಂದರ ಹಿಂದೊಂದರಂತೆ ವಿವಾದಾತ್ಮಕ ಟ್ವೀಟ್‌ ಮಾಡುತ್ತಾ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಈಗ ಯೂಟ್ಯೂಬ್‌ ಚಾನೆಲ್‌ವೊಂದರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಪ್ರಕಾಶ್‌ ರಾಜ್

ಪ್ರಕಾಶ್‌ ರಾಜ್‌ ಮೊದಲಿನಿಂದಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಸರಣಿ ಟ್ವೀಟ್‌ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ನೂತನ ಸಂಸತ್‌ ಭವನದಲ್ಲಿ ಪ್ರಧಾನಿ ಮೋದಿಯೊಂದಿಗೆ ಸಾಧು ಸಂತರು ಇದ್ದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಕಾಶ್‌ ರಾಜ್‌, ಭವಿಷ್ಯದಲ್ಲಿ ಸಂಸತ್‌ ಭವನದಲ್ಲಿ ಸಾಧು ಸಂತರು ತುಂಬಿರುತ್ತಾರೆ ಎಂದು ವ್ಯಂಗ್ಯವಾಡಿದ್ದರು.‌

ಚಂದ್ರಯಾನ, ಸನಾತನ ಧರ್ಮದ ಬಗ್ಗೆ ಟ್ವೀಟ್

ಚಂದ್ರಯಾನ 3 ಬಗ್ಗೆ ಕೂಡಾ ಪ್ರಕಾಶ್‌ ರಾಜ್‌ ಅಪಹಾಸ್ಯ ಮಾಡುವಂತೆ ಟ್ವೀಟ್‌ ಮಾಡಿದ್ದರು. ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್‌ ಲುಂಗಿ ಧರಿಸಿ ಚಂದ್ರಲೋಕದಲ್ಲಿ ಟೀ ಮಾರುತ್ತಿರುವಂತೆ ಪ್ರಕಾಶ್‌ ರಾಜ್‌ ಕಾರ್ಟೂನ್‌ ಹಂಚಿಕೊಂಡಿದ್ದರು. ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಪ್ರಕಾಶ್‌ ರಾಜ್‌ ವಿರುದ್ಧ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಚಂದ್ರಯಾನದಲ್ಲೂ ರಾಜಕೀಯ ಎಳೆ ತರಬೇಡಿ ಎಂದು ಬೈದು ಕಾಮೆಂಟ್‌ ಮಾಡಿದ್ದರು. ಚಂದ್ರಯಾನ ಯಶಸ್ವಿಯಾಗುತ್ತಿದ್ದಂತೆ ನನಗೆ ಬಹಳ ಹೆಮ್ಮೆಯಾಗುತ್ತಿದೆ ಎಂದು ಟ್ವೀಟ್‌ ಮಾಡಿದ್ದ ಪ್ರಕಾಶ್‌ ರಾಜ್‌, ನಂತರ ಸನಾತನ ಧರ್ಮದ ಬಗ್ಗೆ ಕೂಡಾ ಟ್ವೀಟ್‌ ಮಾಡಿದ್ದರು.‌

ಯೂಟ್ಯೂಬ್‌ ಚಾನೆಲ್‌ ವಿರುದ್ಧ ಎಫ್‌ಐಆರ್‌

ಪ್ರಕಾಶ್‌ ರಾಜ್‌, ಸನಾತನ ಧರ್ಮದ ಬಗ್ಗೆ ಮಾಡಿದ್ದ ಟ್ವೀಟ್‌ ಕೂಡಾ ಹಿಂದೂಗಳನ್ನು ಕೆರಳಿಸಿತ್ತು. ಇದೀಗ ಪ್ರಕಾಶ್‌ ರಾಜ್‌, ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ನನಗೆ ಜೀವ ಬೆದರಿಕೆ ಹಾಕಿರುವುದಲ್ಲದೆ, ನನ್ನನ್ನೂ ನನ್ನ ಕುಟುಂಬವನ್ನೂ ಅಸಭ್ಯವಾಗಿ ನಿಂದಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಯೂಟ್ಯೂಬ್‌ ಚಾನೆಲ್‌ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್‌ ರಾಜ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ದೂರಿನ ಆಧಾರದ ಮೇರೆಗೆ ಯೂಟ್ಯೂಬ್‌ ಚಾನೆಲ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹೆಚ್ಚಿನ ಮನರಂಜನೆ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Whats_app_banner