ಕನ್ನಡ ಸುದ್ದಿ  /  Entertainment  /  Sandalwood News First Night With Devva Movie Teaser Released Bigg Boss Kannada Fame Pratham Film Pcp

ಒಳ್ಳೆ ಹುಡುಗ ಪ್ರಥಮ್‌ ಇವ್ರೇನ? ಫಸ್ಟ್ ನೈಟ್ ವಿತ್ ದೆವ್ವದಲ್ಲಿ ಚುಂಬನ, ಆಲಿಂಗನ; ಟೀಸರ್‌ನಲ್ಲೇ ಏನೇನಿದೆ ನೋಡಿ

First Night With Devva Movie: ಬಿಗ್‌ಬಾಸ್‌ ಕನ್ನಡ ಮಾಜಿ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್‌ ಅಭಿನಯದ ಫಸ್ಟ್‌ ನೈಟ್‌ ವಿತ್‌ ದೆವ್ವ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಪ್ರಥಮ್‌ರ ಚುಂಬನ, ರಸಿಕತನ, ಶೋಭನಾಕ್ಕೆ ಸಂಬಂಧಪಟ್ಟ ಸಾಕಷ್ಟು ದೃಶ್ಯಗಳನ್ನು ನೋಡಿದಾಗ ಒಳ್ಳೆ ಹುಡುಗ ಪ್ರಥಮ್‌ ಇವ್ರೇನಾ? ಎಂದೆನಿಸಬಹುದು.

ಒಳ್ಳೆ ಹುಡುಗ ಪ್ರಥಮ್‌ ಇವ್ರೇನ? ಫಸ್ಟ್ ನೈಟ್ ವಿತ್ ದೆವ್ವದಲ್ಲಿ ಚುಂಬನ, ಆಲಿಂಗನ; ಟೀಸರ್‌
ಒಳ್ಳೆ ಹುಡುಗ ಪ್ರಥಮ್‌ ಇವ್ರೇನ? ಫಸ್ಟ್ ನೈಟ್ ವಿತ್ ದೆವ್ವದಲ್ಲಿ ಚುಂಬನ, ಆಲಿಂಗನ; ಟೀಸರ್‌

ಬೆಂಗಳೂರು: ಪ್ರಥಮ್‌ ಅಭಿನಯದ ಫಸ್ಟ್‌ ನೈಟ್‌ ವಿತ್‌ ದೆವ್ವ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. "ನಮ್ಮ ಸಿನಿಮಾವನ್ನು ಫೇಕ್‌ ಪ್ರಚಾರದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡುವುದಿಲ್ಲ. ನೀವೆಷ್ಟು ಜನ ನೋಡ್ತಿರೋ ಅಷ್ಟೇ ನಮ್ಮ ಯೋಗ್ಯತೆ" ಎಂಬ ಆರಂಭಿಕ ಬರಹದೊಂದಿಗೆ ಆರಂಭವಾಗುವ ಈ ಟೀಸರ್‌ನಲ್ಲಿ ಫಸ್ಟ್‌ ನೈಟ್‌ಗೆ ಸಂಬಂಧಪಟ್ಟ ಸಾಕಷ್ಟು ದೃಶ್ಯಗಳಿವೆ.

"ಬಿಗ್ ಬಾಸ್" ಮೂಲಕ ಜನಪ್ರಿಯರಾದ ನಟ ಪ್ರಥಮ್ ನಾಯಕನಾಗಿ ಅಭಿನಯಿಸಿರುವ, ನವೀನ್ ಬೀರಪ್ಪ ನಿರ್ಮಾಣದ ಹಾಗೂ ಪಿ.ವಿ.ಆರ್ ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನದ "ಫಸ್ಟ್ ನೈಟ್ ವಿತ್ ದೆವ್ವ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇತ್ತೀಚಿಗೆ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ "ಬಿಗ್ ಬಾಸ್" ಸ್ಪರ್ಧಿಗಳಾದ "ತುಕಾಲಿ" ಸಂತೋಷ್ ಹಾಗೂ ನಮೃತ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ

ನಾನು ನಿರ್ದೇಶಕರ ನಟ ಎಂದು ಮಾತನಾಡಿದ ಪ್ರಥಮ್, ಪಿ.ವಿ.ಆರ್ ಸ್ವಾಮಿ‌ ಅವರು ಬಹುಬೇಗನೇ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಕಳೆದ ನವೆಂಬರ್ ನಲ್ಲಿ ಈ ಚಿತ್ರ ಆರಂಭವಾಗಿತ್ತು. ಚಿತ್ರ ಆರಂಭವಾದ ತಕ್ಷಣ ಮೊದಲು ಬರುವ ಸನ್ನಿವೇಶವೇ ಮದುವೆ ದೃಶ್ಯ. ಮದುವೆಯನ್ನು ಬಹಳ ಆಸೆಯಿಂದ ಆದ ಹುಡುಗನಿಗೆ ತನ್ನ ಮೊದಲರಾತ್ರಿ ನಡೆಯುತ್ತಿರುವುದು ದೆವ್ವದ ಜೊತೆಗೆ ಎಂದು ತಿಳಿದಾಗ ಏನೆಲ್ಲಾ ಆಗುತ್ತದೆ? ಎಂಬುದೆ ಚಿತ್ರದ ಕಥಾಸಾರಾಂಶ ಎಂದರು.

ಈ ಚಿತ್ರದಲ್ಲಿ ನಗುವಿಗೆ ಬರವಿಲ್ಲ. ಹಾರರ್, ಕಾಮಿಡಿ, ಆಕ್ಷಮ್ ಹಾಗೂ ಸೆಂಟಿಮೆಂಟ್ ಗಳ ಸಮ್ಮಿಲ್ಲನವೇ ಈ ನಮ್ಮ ಚಿತ್ರ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ನಿಖಿತ, ಜೀವಿತ ಹಾಗೂ ಸುಶ್ಮಿತ ಮೂವರು ನಾಯಕಿಯರು. ನಿಖಿತ ನನ್ನ ಹೆಂಡತಿ ಪಾತ್ರ‌‌ ಮಾಡಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ರಮೇಶ್ ಭಟ್, ಹರೀಶ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಮಾರಂಭಕ್ಕೆ ಬಂದಿರುವ ತುಕಾಲಿ ಸಂತೋಷ್ ಹಾಗೂ ನಮೃತಾ ಅವರಿಗೆ ಧನ್ಯವಾದ ಎಂದು ಪ್ರಥಮ್‌ ಹೇಳಿದ್ದಾರೆ.

ನವೆಂಬರ್ ನಲ್ಲಿ ಆರಂಭವಾದ ಈ ಚಿತ್ರ, ನನ್ನ ತಂಡದ ಸಹಕಾರದಿಂದ ನಿಗದಿಯಂತೆ ಪೂರ್ಣವಾಗಿದೆ. ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಸಿದ್ದತೆ ನಡೆಯತ್ತಿದೆ ಎಂದು ನಿರ್ದೇಶಕ ಹಾಗೂ ಛಾಯಾಗ್ರಾಹಕ ಪಿ‌ವಿಆರ್ ಸ್ವಾಮಿ ತಿಳಿಸಿದರು. ನಿರ್ಮಾಪಕ ನವೀನ್ ಬೀರಪ್ಪ, ನಾಯಕಿರಾದ ನಿಖಿತ, ಸುಶ್ಮಿತ, ಜೀವಿತ, ನಟಿ ಪುಷ್ಪ ಸ್ವಾಮಿ, ನಟ ಹರೀಶ್ ರಾಜ್, ಸಂಗೀತ ನಿರ್ದೇಶಕ ಅದ್ವಿಕ್ ವರ್ಮ, ಕಾರ್ಯಕಾರಿ ನಿರ್ಮಾಪಕ ಅರವಿಂದ್ ಹಾಗೂ ಸಂಭಾಷಣೆ ಬರೆದು ಸಂಕಲನ ಕಾರ್ಯವನ್ನು ಮಾಡುತ್ತಿರುವ ನಾಗೇಶ್ ಚಿತ್ರದ ಕುರಿತು ಮಾತನಾಡಿದ್ದಾರೆ.

IPL_Entry_Point