ಧ್ರುವ ಸರ್ಜಾ Martin ಚಿತ್ರದ ಟ್ರೇಲರ್‌ ಮೆಚ್ಚಿದ 21 ದೇಶಗಳ ಸಿನಿಮಾ ಪತ್ರಕರ್ತರು; ಎಲ್ಲರ ಬಾಯಲ್ಲಿ ಬಂದಿದ್ದು ಅದೊಂದೇ ಮಾತು
ಕನ್ನಡ ಸುದ್ದಿ  /  ಮನರಂಜನೆ  /  ಧ್ರುವ ಸರ್ಜಾ Martin ಚಿತ್ರದ ಟ್ರೇಲರ್‌ ಮೆಚ್ಚಿದ 21 ದೇಶಗಳ ಸಿನಿಮಾ ಪತ್ರಕರ್ತರು; ಎಲ್ಲರ ಬಾಯಲ್ಲಿ ಬಂದಿದ್ದು ಅದೊಂದೇ ಮಾತು

ಧ್ರುವ ಸರ್ಜಾ Martin ಚಿತ್ರದ ಟ್ರೇಲರ್‌ ಮೆಚ್ಚಿದ 21 ದೇಶಗಳ ಸಿನಿಮಾ ಪತ್ರಕರ್ತರು; ಎಲ್ಲರ ಬಾಯಲ್ಲಿ ಬಂದಿದ್ದು ಅದೊಂದೇ ಮಾತು

ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮಾರ್ಟಿನ್‌ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮುಂಬೈನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದೇಶಿ ಪತ್ರಕರ್ತರ ಸಮ್ಮುಖದಲ್ಲಿ ಟ್ರೇಲರ್‌ ಹೊರಬಂದಿದೆ. ಈ ಮೂಲಕ ಭಾರತೀಯ ಚಿತ್ರೋದ್ಯಮದಲ್ಲಿ ಯಾರೂ ಮಾಡದ ಹೊಸ ಸಾಹಸಕ್ಕೆ ನಿರ್ಮಾಪಕ ಉದಯ್‌ ಮೆಹ್ತಾ ಜೈ ಹಾಕಿದ್ದಾರೆ.

ಧ್ರುವ ಸರ್ಜಾ Martin ಚಿತ್ರದ ಟ್ರೇಲರ್‌ ಮೆಚ್ಚಿದ 21 ದೇಶಗಳ ಸಿನಿಮಾ ಪತ್ರಕರ್ತರು; ಎಲ್ಲರ ಬಾಯಲ್ಲಿ ಬಂದಿದ್ದು ಅದೊಂದೇ ಮಾತು..
ಧ್ರುವ ಸರ್ಜಾ Martin ಚಿತ್ರದ ಟ್ರೇಲರ್‌ ಮೆಚ್ಚಿದ 21 ದೇಶಗಳ ಸಿನಿಮಾ ಪತ್ರಕರ್ತರು; ಎಲ್ಲರ ಬಾಯಲ್ಲಿ ಬಂದಿದ್ದು ಅದೊಂದೇ ಮಾತು..

Martin Press Meet: ಭಾರತದ ಮೊಟ್ಟಮೊದಲ ಅಂತಾರಾಷ್ಟ್ರೀಯ ಮಟ್ಟದ ಪ್ರೆಸ್ ಮೀಟ್ ಹಾಗೂ ಟ್ರೈಲರ್ ಲಾಂಚ್ ಇವೆಂಟ್ ಮುಂಬಯಿ ಜೋಗೇಶ್ವರಿ ಏರಿಯಾದ ಇನ್ಫಿನಿಟಿ ಮಾಲ್ ಪಿವಿಆರ್ ಥಿಯೇಟರಿನಲ್ಲಿ ನಡೆಯಿತು. ಆ ಹಿರಿಮೆಗೆ ಕಾರಣವಾಗಿದ್ದು ಮಾರ್ಟಿನ್ ಚಿತ್ರ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಅಲ್ಲದೆ ಕೆನಡಾ, ಕೀನ್ಯಾ, ಯುಕೆ, ದುಬೈ, ಜಪಾನ್‌ ಸೇರಿದಂತೆ ಪ್ರಪಂಚದ 21 ದೇಶಗಳಿಂದ ಆಗಮಿಸಿದ ನೂರಾರು ಪತ್ರಕರ್ತರು ಈ ಬೃಹತ್ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಧ್ರುವ ಸರ್ಜಾ, ಅರ್ಜುನ್ ಸರ್ಜಾ, ನಿರ್ಮಾಪಕ ಉದಯ್ ಕೆ.ಮೆಹ್ತಾ, ನಿರ್ದೇಶಕ ಎ.ಪಿ.ಅರ್ಜುನ್, ನಾಯಕಿಯರಾದ ಅನ್ವೇಶಿ ಜೈನ್, ವೈಭವಿ ಶಾಂಡಿಲ್ಯ ವೇದಿಕೆಯಲ್ಲಿದ್ದರು.

ಮಾಧ್ಯಮಗಳ‌ ಪ್ರಶ್ನೆಗೆ ಉತ್ತರಿಸಿದ ಉದಯ್ ಕೆ. ಮೆಹ್ತಾ ಹೊಸ ರೀತಿಯ ಕಾನ್ಸೆಪ್ಟ್, ನಿರೂಪಣೆ ನನಗೆ ಈ ಚಿತ್ರ ಮಾಡಲು ಪ್ರೇರಣೆಯಾಯ್ತು. ಆರು ತಿಂಗಳ‌ ಹಿಂದೆ ಈ ಚಿತ್ರವನ್ನು ಪ್ಯಾನ್ ವರ್ಲ್ಡ್ ಸಿನಿಮಾ ಮಾಡಬೇಕೆಂಬ ಆಲೋಚನೆ ಬಂತು. ಅದಕ್ಕೆ ಸರಿಯಾಗಿ ಎಲ್ಲಾ ಕಡೆಯಿಂದ ಬೇಡಿಕೆಯೂ ಬಂತು. ಮೊದಲು 5 ಭಾಷೆ ಮಾಡಬೇಕೆಂಬ ಯೋಜನೆ ಮಾತ್ರ ಇತ್ತು. ಸಿನಿಮಾ ಆಗ್ತಾ ಆಗ್ತಾ ಅದು ಪ್ರಪಂಚದ ಸಿನಿಮಾ ಆಯ್ತು ಎಂದರು.

ನನಗೀಗ ಧ್ರುವ ಸರ್ಜಾ ಸ್ಫೂರ್ತಿ..

ಅರ್ಜುನ್ ಸರ್ಜಾ ಮಾತನಾಡಿ ನಾನೂ ಸಹ 44 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ ಮೊದಲಬಾರಿಗೆ ಈ ಥರದ ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಿದ್ದೇನೆ. ಇದಕ್ಕೆ ಮಾರ್ಟಿನ್ ತಂಡ ಕಾರಣ. ಧ್ರುವ ತನ್ನ ಐದನೇ ಚಿತ್ರದಲ್ಲೇ ಮ್ಯಾಜಿಕ್ ಮಾಡಿದ್ದಾನೆ. ಆತನಿಂದ ಪ್ರೇಕ್ಷಕರು‌ ತುಂಬಾ ಬಯಸುತ್ತಿದ್ದಾರೆ. ನಾನು ಕೂಡ ಈತನಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಆತನೇ ನನಗೆ ಸ್ಫೂರ್ತಿ, ಉದಯ್ ಮೆಹ್ತಾ ತುಂಬಾ ಪ್ಯಾಷನೇಟೆಡ್ ನಿರ್ಮಾಪಕರು. ಅವರಿಗೆ ಈ ಸಿನಿಮಾದಿಂದ ಅವಾರ್ಡ್, ರಿವಾರ್ಡ್ ಎರಡೂ ಸಿಗುವಂತಾಗಲಿ ಎಂದರು.

ಎಲ್ಲ ಕಡೆ ಸಲ್ಲುವ ಕಥೆ..

ಧ್ರುವ ಸರ್ಜಾ ಮಾತನಾಡಿ, ರಾಜ್ಯ ದೇಶ ಎನ್ನದೇ ಎಲ್ಲಾ ಭಾಗದ ಜನರಿಗೂ ಅರ್ಥವಾಗುವಂಥ ಯೂನಿಕ್ ಸ್ಟೋರಿ ಚಿತ್ರದಲ್ಲಿದೆ. ಯೂನಿವರ್ಸಲ್ ಥೀಮ್ ಆಗಿರೋದ್ರಿಂದ ಎಲ್ಲರಿಗೂ ಕನೆಕ್ಟ್ ಆಗುತ್ತದೆ, ಅರ್ಥವಾಗುತ್ತದೆ. ಸಸ್ಪೆನ್ಸ್, ಥ್ರಿಲ್ಲರ್, ಬಿಗ್ ಆಕ್ಷನ್ ಜೊತೆಗೆ ಸಣ್ಣ ಡ್ರಾಮಾ ಇದರಲ್ಲಿದೆ. ಕ್ಲೈಮ್ಯಾಕ್ಸ್ ಭಾಗದ ಆಕ್ಷನ್ ಮಾಡುವುದು ನನಗೆ ತುಂಬಾ ಚಾಲೆಂಜ್ ಆಗಿತ್ತು. ಇದು ದೇಶಪ್ರೇಮಿಯೊಬ್ಬನ ಸಾಹಸದ ಕಥೆ ಎಂದು‌ ಹೇಳಿದರು.

ನನ್ನ ಕೆರಿಯರ್‌ನ ದೊಡ್ಡ ಸಿನಿಮಾ

ನಾಯಕಿ ವೈಭವಿ ಮಾತನಾಡುತ್ತ, 7 ವರ್ಷಗಳಿಂದ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದೇನೆ. ಮಾರ್ಟಿನ್ ಈಸ್ ಒನ್ ಆಫ್ ದ ಬಿಗ್ಗೆಸ್ಟ್ ಮೂವಿ ಇನ್ ಮೈ ಕರಿಯರ್. ಧ್ರುವ ತೆರೆಮೇಲೆ ಎಷ್ಟು ಅರ್ಭಟಿಸಿದ್ದಾರೋ, ಹಾರ್ಟ್ಲಿ ಅವರು ಅಷ್ಟೇ ಸಾಫ್ಟ್. ಅಲ್ಲದೆ ಇಂಥ ಸಿನಿಮಾ ಮಾಡಲು ಗಟ್ಟಿ ಗುಂಡಿಗೆ ಇರಬೇಕು.. ಅದಿದ್ದವರೇ ಇಂಥ ಸಿನಿಮಾ ಮಾಡಲು ಸಾಧ್ಯ. ಎಂದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ನನ್ನ 25 ವರ್ಷಗಳ ಸಿನಿಮಾ ಜೀವನದಲ್ಲಿ ದ ಬೆಸ್ಟ್ ಸಿನಿಮಾ ಎಂದರು. ಮತ್ತೊಬ್ಬ‌ ನಾಯಕಿ ಅನ್ವೇಶಿ ಜೈನ್ ಚಿತ್ರದ ಕುರಿತು ಮಾತನಾಡಿದರು.

ಎ.ಪಿ‌. ಅರ್ಜುನ್ ಮಾತನಾಡಿ, ನಾನು ಮಂಡ್ಯದ ಹುಡುಗ ಫಸ್ಟ್ ಸಿನಿಮಾ ಅಂಬಾರಿ, ಅದ್ದೂರಿ ಚಿತ್ರದ ಮೂಲಕ ಧ್ರುವನನ್ನು ಪರಿಚಯಿಸಿದೆ. ಆರಂಭದಲ್ಲಿ ನಾರ್ಮಲ್ ಸಿನಿಮಾ ಅಂತಲೇ ಪ್ರಾರಂಭಿಸಿದೆವು. 20 ದಿನಗಳ‌ ಶೂಟಿಂಗ್ ಆದಮೇಲೆ ಇದರಲ್ಲೇನೋ ಇದೆ ಅಂತ ಪ್ಯಾನ್ ಇಂಡಿಯಾ ಸಿನಿಮಾ ಪ್ಲಾನ್ ಮಾಡಿದೆವು. ಇಂಥ ಸಿನಿಮಾ ಮಾಡಬೇಕು ಅಂತ ಬಂದಾಗ ನಿರ್ಮಾಪಕರೂ ಮುಖ್ಯವಾಗುತ್ತಾರೆ. ಆ ವಿಷಯದಲ್ಲಿ ಮೆಹತಾ ಅವರ ಧೈರ್ಯ ಮೆಚ್ಚಲೇಬೇಕು. ಸರ್ಜಾ ಸಿನಿಮಾಗಳಲ್ಲಿ ದೇಶಾಭಿಮಾನ ಎದ್ದು ಕಾಣುತ್ತದೆ. ಇದರಲ್ಲಿ ಅದು ಹತ್ತರಷ್ಟು ಎದ್ದು ಕಾಣುತ್ತೆ ಎಂದರು. ಅಂದಹಾಗೆ, ಅಕ್ಟೋಬರ್‌ 11ರಂದು ಈ ಸಿನಿಮಾ ಹತ್ತಾರು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ವಿದೇಶಿ ಪತ್ರಕರ್ತರು ಹೇಳಿದ್ದೇನು?

ಇದು ತಮ್ಮ ಮೊದಲ ಅಂತಾರಾಷ್ಟ್ರೀಯ ಸುದ್ದಿಗೋಷ್ಠಿ. ಅದರಲ್ಲೂ ಭಾರತಕ್ಕೆ ಬಂದಿದ್ದು ಇದೇ ಮೊದಲು ಎಂದು ವಿವಿಧ ದೇಶಗಳಿಂದ ಬಂದ ಸಿನಿಮಾ ಪತ್ರಕರ್ತರು, ತಮ್ಮ ಅನುಭವವನ್ನು ಹೇಳಿಕೊಂಡರು. ಜತೆಗೆ ಮಾರ್ಟಿನ್‌ ಸಿನಿಮಾದ ಟ್ರೇಲರ್‌ ಮೂಡಿ ಬಂದ ರೀತಿ ಕಂಡು ಎಲ್ಲರೂ ಥ್ರಿಲ್‌ ಆಗಿದ್ದಾರೆ. ಆಕ್ಷನ್‌ ಮೂಲಕವೇ ಈ ಸಿನಿಮಾ ಮತ್ತೊಂದು ಹಂತಕ್ಕೆ ಮೇಲೆ ಹೋಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Whats_app_banner