Friday Release: ಈ ವಾರ ಚಿತ್ರಮಂದಿರಗಳಲ್ಲಿ 19 ಸಿನಿಮಾ ಬಿಡುಗಡೆ, ದಿಲ್‌ಖುಷ್, ಲೈನ್‌ಮ್ಯಾನ್, ಆಬ್ರಕಡಾಬ್ರ, ಯಾವುದು ನೋಡ್ತಿರಿ?
Friday Release Movies: ಈ ಶುಕ್ರವಾರ ಸೇರಿದಂತೆ ಸದ್ಯದಲ್ಲಿಯೇ 19 ಸಿನಿಮಾಗಳು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿವೆ. ಅನನ್ಯ, ಮನಸ್ಸು, ದಿಲ್‌ಖುಷ್, ಲೈನ್‌ಮ್ಯಾನ್, ಆಬ್ರಕಡಾಬ್ರ ಕನ್ನಡದಲ್ಲಿ ಬಿಡುಗಡೆಯಾದರೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ.

ಬೆಂಗಳೂರು: ಪ್ರತಿಶುಕ್ರವಾರ ಬಂತೆಂದರೆ ಈ ದಿನ ಯಾವೆಲ್ಲ ಸಿನಿಮಾಗಳು ರಿಲೀಸ್ ಆಗುತ್ತದೆ ಎಂದು ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಒಟಿಟಿಯಲ್ಲಿ ಯಾವುದೇ ರಿಲೀಸ್ ಆಗಲಿ, ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಮಜಾನೇ ಬೇರೆ ಅನ್ನುವವರಿಗೆ ಈ ವಾರ ಹಲವು ಸಿನಿಮಾಗಳು ಕಾಯುತ್ತಿವೆ. ಹಾಗಂತ, ಈ ವಾರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ. ಆದರೆ, ಕೆಲವು ಸಿನಿಮಾಗಳು ರಿಲೀಸ್ ಆದ ಬಳಿಕ ಸೂಪರ್‌ಹಿಟ್ ಆಗಿರುವ ಉದಾಹರಣೆಗಳು ಇವೆ. ಹೀಗಾಗಿ, ಮನಸ್ಸು, ದಿಲ್‌ಖುಷ್, ಲೈನ್‌ಮ್ಯಾನ್, ಆಬ್ರಕಡಾಬ್ರ ಸಿನಿಮಾಗಳಲ್ಲಿ ಯಾವುದಾದರೂ ಸಿನಿಮಾ ಸೂಪರ್‌ಹಿಟ್ ಆಗಲೂಬಹುದು.
ಈ ವಾರ ರಿಲೀಸ್ ಆಗುವ ಕನ್ನಡ ಸಿನಿಮಾಗಳು
ಆಬ್ರಕಡಾಬ್ರ (ಮಾರ್ಚ್ 25ರಂದು ಬಿಡುಗಡೆ)
ಇದು ಹಿರಿಯ ನಟ ಅನಂತ್ ನಾಗ್ ನಟನೆಯ ಬಹುನಿರೀಕ್ಷಿತ ಸಿನಿಮಾ. ರಕ್ಷಿತ್ ಶೆಟ್ಟಿ ಅವರ ಪರಮಃ ಸ್ಟುಡಿಯೋ ಮೂಲಕ ನಿರ್ಮಾಣವಾಗುತ್ತಿದೆ. ಆಬ್ರಕಡಾಬ್ರ ಎನ್ನುವುದು ಜಾದುವಿನಲ್ಲಿ ಬಳಕೆಯಲ್ಲಿರುವ ಪದ. ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಜಾದು ಮಾಡುತ್ತಾ ಎಂದು ಕಾದು ನೋಡಬೇಕಿದೆ. ಇದು ಮಾರ್ಚ್ 25ಕ್ಕೆ ಬಿಡುಗಡೆಯಾಗುವ ಸಿನಿಮಾ.
ದಿಲ್ ಖುಷ್
ಕರಿಮಣಿ ಸೀರಿಯಲ್ ನಟಿ ಸ್ಪಂದನಾ ಸೋಮಣ್ಣ ನಟನೆಯ ಸಿನಿಮಾವಿದು. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಭರವಸೆ ಹುಟ್ಟಿಸಿದೆ. ಜಯಪ್ರಭ ಕಲರ್ ಫ್ರೇಮ್ಸ್ ಬ್ಯಾನರ್‌ನಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭಾ ಶೇಖರ್ ನಿರ್ಮಿಸಿರುವ ಸಿನಿಮಾ ದಿಲ್‌ಖುಷ್. ಪ್ರಮೋದ್ ಜಯ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.
ಲೈನ್‌ಮ್ಯಾನ್
ಕನ್ನಡ ಚಿತ್ರರಂಗದಲ್ಲಿ ರನ್ ಆಂಟೋನಿ ಹಾಗೂ ಟಕ್ಕರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ರಘು ಶಾಸ್ತ್ರಿ ನಿರ್ದೇಶನದ ಸಿನಿಮಾವಿದು. ರಾಮ್‌ಗೋಪಾಲ ವರ್ಮಾ ನಿರ್ದೇಶನದ 'ಕೊಂಡ' ಚಿತ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗಿದು ನಾಯಕ ನಟನಾಗಿ ಚೊಚ್ಚಲ ಚಿತ್ರ. ವಿದ್ಯುತ್‌ಗೆ ಸಂಬಂಧಿಸಿದ ಕೆಲಸ, ತೊಂದರೆ ಸರಿಪಡಿಸುವ 'ಲೈನ್ ಮ್ಯಾನ್' ಸುತ್ತ ಈ ಕಥೆ ಇರಲಿದೆ. ಈ ಚಿತ್ರದಲ್ಲಿ ಕರೆಂಟ್‌ನಿಂದ ಗುಬ್ಬಚ್ಚಿಗಳು ಸಾಯ್ತಾ ಇವೆ ಎನ್ನುವ ಕಾರಣಕ್ಕೆ ನಾಯಕ ಕರೆಂಟ್ ಕಟ್ ಮಾಡ್ತಾನ? ಇದರಿಂದ ಊರವರು ಏನು ಮಾಡ್ತಾರೆ? ಹೀಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮನಸ್ಸು
ಮಮತಾ ರಾಹುತ್, ಆಲಿಸಾ ಆಂಡ್ರಾಡೆ, ವಿಷ್ಣುವರ್ಧನ್ ಗಾಂಧಿಕೂಟ, ಆಶಾ ಜೋಯಿಸ್ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ.
ಈ ವಾರ ಬಿಡುಗಡೆಯಾಗುವ ಹಿಂದಿ ಸಿನಿಮಾಗಳು
ವಾಟ್ ಎ ಕಿಸ್ಮತ್
ಗ್ರ್ಯಾಜುಯೇಟ್ ವಿದ್ ಫಸ್ಟ್ ಕ್ಲಾಸ್
ಮ್ಯಾರೇಜ್.ಕಾಂ
ತೆಲುಗು ಸಿನಿಮಾಗಳು
ಅನನ್ಯ
ಆ ಒಕಟ್ಟಿ ಅಡಕ್ಕು
ವಂದೇ ಭಾರತ್ ಸೇವ್ ಇಂಡಿಯಾ
ಯಮಧೀರ
ಮಲಯಾಳಂ ಸಿನಿಮಾಗಳು
ಸಿಕ್ರೇಟ್ ಹೋಮ್
ನಳಿನಕಾಂತಿ
ಕುತೋಡ್
ಎನ್ನಿತ್ತುಂ ನೀಯೆನ್ನೆ ಅರಿಂಜಿಲ್ಲಲ್ಲೊ
ಕಾಫೀರ್ (ಮಾರ್ಚ್ 23)
ಶೆಹೆರಾಜೇಡ್ (ಮಾರ್ಚ್ 24)
ದಯಾಮ್ (ಮಾರ್ಚ್ 24)
ತಮಿಳು ಸಿನಿಮಾಗಳು
ರೆಬಲ್
ವಿಭಾಗ