ಸ್ನೇಹಕ್ಕೆ ಇನ್ನೊಂದು ಹೆಸರೇ ಅವನು! ಸುದೀಪ್‌ ಮತ್ತೆ ದರ್ಶನ್‌ ಒಟ್ಟಿಗಿದ್ರೆ ಯಾವತ್ತೂ ಅಪ್ಪಿತಪ್ಪಿಯೂ ಆ ವಿಚಾರ ಮಾತನಾಡುತ್ತಿರಲಿಲ್ಲ, ಏನದು?-sandalwood news friendship day 2024 what darshan thoogudeepa said about kichcha sudeep who was his best friend mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸ್ನೇಹಕ್ಕೆ ಇನ್ನೊಂದು ಹೆಸರೇ ಅವನು! ಸುದೀಪ್‌ ಮತ್ತೆ ದರ್ಶನ್‌ ಒಟ್ಟಿಗಿದ್ರೆ ಯಾವತ್ತೂ ಅಪ್ಪಿತಪ್ಪಿಯೂ ಆ ವಿಚಾರ ಮಾತನಾಡುತ್ತಿರಲಿಲ್ಲ, ಏನದು?

ಸ್ನೇಹಕ್ಕೆ ಇನ್ನೊಂದು ಹೆಸರೇ ಅವನು! ಸುದೀಪ್‌ ಮತ್ತೆ ದರ್ಶನ್‌ ಒಟ್ಟಿಗಿದ್ರೆ ಯಾವತ್ತೂ ಅಪ್ಪಿತಪ್ಪಿಯೂ ಆ ವಿಚಾರ ಮಾತನಾಡುತ್ತಿರಲಿಲ್ಲ, ಏನದು?

ಯಾರ ದೃಷ್ಟಿಯೂ ಬೀಳದ ಸುದೀಪ್‌ ಮತ್ತು ದರ್ಶನ್‌ ಜೋಡಿ ದೂರವಾಗಿದ್ದೇಕೆ? ದರ್ಶನ್‌ ಮತ್ತು ಸುದೀಪ್‌ ಒಂದೆಡೆ ಸೇರಿದಾಗ ಯಾವ ವಿಚಾರವನ್ನು ಮಾತನಾಡುತ್ತಿರಲಿಲ್ಲ? ಸ್ನೇಹಕ್ಕೆ ಇನ್ನೊಂದು ಹೆಸರಾಗಿದ್ದ ಸುದೀಪ್‌ ಬಗ್ಗೆ ದರ್ಶನ್‌ ಮುನಿಸಿಕೊಂಡಿದ್ದೇಕೆ? ಸ್ನೇಹಿತರ ದಿನದ ನಿಮಿತ್ತ ಹೀಗೊಂದು ನೆನಪು.

ಸ್ನೇಹಕ್ಕೆ ಇನ್ನೊಂದು ಹೆಸರೇ ಅವನು! ಸುದೀಪ್‌ ಮತ್ತೆ ದರ್ಶನ್‌ ಒಟ್ಟಿಗಿದ್ರೆ ಯಾವತ್ತೂ ಅಪ್ಪಿತಪ್ಪಿಯೂ ಆ ವಿಚಾರ  ಮಾತನಾಡುತ್ತಿರಲಿಲ್ಲ, ಏನದು?
ಸ್ನೇಹಕ್ಕೆ ಇನ್ನೊಂದು ಹೆಸರೇ ಅವನು! ಸುದೀಪ್‌ ಮತ್ತೆ ದರ್ಶನ್‌ ಒಟ್ಟಿಗಿದ್ರೆ ಯಾವತ್ತೂ ಅಪ್ಪಿತಪ್ಪಿಯೂ ಆ ವಿಚಾರ ಮಾತನಾಡುತ್ತಿರಲಿಲ್ಲ, ಏನದು?

Friendship day 2024: ಕನ್ನಡ ಸಿನಿಮಾ ಅಭಿಮಾನಿಗಳ ಆ ಆಸೆ ಈಡೇರದೇ ಕೆಲ ವರ್ಷಗಳೇ ಕಳೆದಿವೆ. ಸಣ್ಣ ವಿಚಾರಕ್ಕೆ ಮುನಿಸಿಕೊಂಡಿದ್ದ ದರ್ಶನ್‌ ಮತ್ತು ಸುದೀಪ್‌, ಅದ್ಯಾವಾಗ ಒಂದಾಗ್ತಾರೆ ಅಂತ ಅವರ ಕೋಟ್ಯಂತರ ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ. ಆದರೆ, ಈ ವರೆಗೂ ಅಂಥ ಗಳಿಗೆ ಬಂದಿಲ್ಲ. ದರ್ಶನ್‌ ಮೇಲೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆತವಾದಾಗ, ಸುದೀಪ್‌ ಸಹ ಈ ವಿಚಾರವನ್ನು ಖಂಡಿಸಿ, ದರ್ಶನ್‌ ಪರ ನಿಂತಿದ್ದರು. ಸುದೀಪ್‌ ಮಾತಿಗೆ ದರ್ಶನ್‌ ಕಡೆಯಿಂದಲೂ ಧನ್ಯವಾದದ ಮಾತು ಬಂದಿತ್ತು. ಆದರೆ, ಅದು ಅಷ್ಟಕ್ಕೆ ನಿಂತಿತೇ ವಿನಃ ಮುಂದುವರಿಯಲಿಲ್ಲ.

ಒಂದಾಯ್ತು ಎನ್ನುವಷ್ಟರಲ್ಲೇ ವಿಘ್ನ..

ಇನ್ನೇನು ದರ್ಶನ್‌ ಮತ್ತೆ ಸುದೀಪ್‌ ಒಂದಾದರು ಎಂದೂ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಮಾಡಿದರು. ದ್ವೇಷ ಮರೆತು ಇಬ್ಬರ ಫ್ಯಾನ್ಸ್‌ ಖುಷಿಯಾಗಿದ್ದರು. ಆಗಲೂ, ಅದ್ಯಾವುದಕ್ಕೂ ಸೊಪ್ಪು ಹಾಕದ ದರ್ಶನ್‌, ಕಾಲಾಯ ತಸ್ಮೈ ನಮಃ ಎಂಬ ಪೋಸ್ಟ್‌ ಹಾಕಿದ್ದರು. ಅದಾದ ಬಳಿಕ Be alone , to be happy.. Be happy, to be alone.. With My Celebrities ಎಂದೂ ಬರೆದುಕೊಂಡು ನಾನು ಒಂಟಿಯಾಗಿಯೇ ಖುಷಿಯಾಗಿದ್ದೇನೆ ಎಂದಿದ್ದರು. ಅಲ್ಲಿಗೆ ಫ್ಯಾನ್ಸ್‌ ಎದೆಯಲ್ಲಿ ಚಿಗುರೊಡೆದಿದ್ದ ಆಸೆಯೊಂದು ಕಮರಿತ್ತು.

ಅದ್ಯಾವ ಗಳಿಗೆ ಇವರನ್ನು ದೂರ ಮಾಡಿತು..?

ಹಾಗಾದರೆ, ಯಾರ ದೃಷ್ಟಿಯೂ ಬೀಳದ ಈ ಜೋಡಿ ದೂರವಾಗಿದ್ದೇಕೆ. ದರ್ಶನ್‌ ಮತ್ತು ಸುದೀಪ್‌ ಒಂದೆಡೆ ಸೇರಿದಾಗ, ಯಾವ ವಿಚಾರವನ್ನು ಮಾತನಾಡುತ್ತಿರಲಿಲ್ಲ? ಸ್ನೇಹಕ್ಕೆ ಇನ್ನೊಂದು ಹೆಸರಾಗಿದ್ದ ಸುದೀಪ್‌ ಬಗ್ಗೆ ದರ್ಶನ್‌ ಮುನಿಸಿಕೊಂಡಿದ್ದೇಕೆ? ಇಲ್ಲಿದೆ ನೋಡಿ. ನಟ ದರ್ಶನ್‌ ಮತ್ತು ಸುದೀಪ್‌ ಸ್ನೇಹಕ್ಕೆ ಮುಳುವಾಗಿದ್ದು, ಸುದೀಪ್‌ ನೀಡಿದ ಆ ಒಂದು ಹೇಳಿಕೆ. "ಮೆಜೆಸ್ಟಿಕ್‌ ಸಿನಿಮಾ ಆಫರ್‌ ಮೊದಲು ನನಗೆ ಬಂದಿತ್ತು. ಅದನ್ನು ನಾನು ದರ್ಶನ್‌ಗೆ ಬಿಟ್ಟುಕೊಟ್ಟೆ" ಎಂದಿದ್ದರು. ಸುದೀಪ್‌ ಅವರ ಈ ಹೇಳಿಕೆಯೇ ದರ್ಶನ್‌ ಅವರನ್ನು ಕೆರಳಿಸಿತು. ಇನ್ಮುಂದೆ ನಾನು ಮತ್ತು ಸುದೀಪ್‌ ಸ್ನೇಹಿತರಲ್ಲ, ಚಿತ್ರರಂಗದ ಇಬ್ಬರು ಕಲಾವಿದರಷ್ಟೇ" ಎಂದಿದ್ದರು.

ಸುದೀಪ್‌ ನನ್ನ ಬೆಸ್ಟ್‌ ಫ್ರೆಂಡ್‌ ಎಂದಿದ್ದ ದರ್ಶನ್‌..

ಈ ಘಟನೆ ನಡೆಯುವುದಕ್ಕೂ ಮೊದಲು, ಸ್ನೇಹದ ಬಗ್ಗೆ ಅಂಬರೀಶ (2014) ಸಿನಿಮಾದ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್‌ ಅವರಿಗೆ ಪ್ರಶ್ನೆಯೊಂದು ಎದುರಾಗಿತ್ತು. ನಿಮ್ಮ ಬೆಸ್ಟ್‌ ಫ್ರೆಂಡ್‌ ಯಾರು ಎಂದು. ಅದಕ್ಕೆ ಎಲ್ಲರ ಸಮ್ಮುಖದಲ್ಲಿ ಜೋರಾಗಿಯೇ ಹೇಳಿಕೊಂಡಿದ್ದರು, ಸುದೀಪ್‌ ನನ್ನ ಬೆಸ್ಟ್‌ ಫ್ರೆಂಡ್‌, ಸ್ನೇಹಕ್ಕೆ ಇನ್ನೊಂದು ಹೆಸರು ಅವನು ಎಂದಿದ್ದರು. ಮುಂದುವರಿದು, ನಾವು ಭೇಟಿಯಾದಾಗಲೆಲ್ಲೆ ಒಂದು ವಿಚಾರವನ್ನು ಹೊರತುಪಡಿಸಿ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದೆವು. ಫ್ಯಾಮಿಲಿ, ಮಕ್ಕಳ ಬಗ್ಗೆ ಮಾತನಾಡ್ತೀವಿ. ಅದನ್ನೊಂದು ಬಿಟ್ಟು ಎಂದಿದ್ದರು ನಟ ದರ್ಶನ್‌.

ಅಷ್ಟಕ್ಕೂ ದರ್ಶನ್‌ ಮತ್ತು ಸುದೀಪ್‌ ಒಟ್ಟಿಗೆ ಸೇರಿದಾಗ ಸಿನಿಮಾ ವಿಚಾರವನ್ನು ಮಾತನಾಡುತ್ತಿರಲಿಲ್ಲ. ಅದರಲ್ಲೂ ಸುದೀಪ್‌ ಸಿನಿಮಾ ಬಗ್ಗೆ ದರ್ಶನ್‌ ಆಗಲಿ, ದರ್ಶನ್‌ ಸಿನಿಮಾ ಬಗ್ಗೆ ಸುದೀಪ್‌ ಮಾತನಾಡುತ್ತಿರಲಿಲ್ಲ. ಸಿನಿಮಾ ವಿಚಾರವನ್ನು ಸ್ನೇಹದಲ್ಲಿ ಬೆರೆಸದೇ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಇಬ್ಬರೂ ಶೇರ್‌ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಸ್ನೇಹಿತರು ಇದೀಗ ದೂರವಾಗಿ ವರ್ಷಗಳೇ ಕಳೆದಿವೆ. ಇತ್ತೀಚೆಗಷ್ಟೇ ಕೊಲೆ ಆರೋಪದ ಮೇಲೆ ದರ್ಶನ್‌ ಜೈಲಿನಲ್ಲಿದ್ದಾರೆ. ಈ ಬಗ್ಗೆಯೂ ಮಾಧ್ಯಮದ ಮುಂದೆ ಬಂದಾಗ, ಹೆಚ್ಚೆನೂ ಮಾತನಾಡದೆ, ಕಾನೂನು ಇದೆ, ಅದನ್ನು ಕಾನೂನೇ ನಿರ್ಧಾರ ಮಾಡಲಿದೆ ಎಂದಿದ್ದರು.