Shiva Rajkumar: ಬಿಗ್ ಡ್ಯಾಡಿ ಬಗ್ಗೆ ಘೋಸ್ಟ್ ಚಿತ್ರತಂಡದಿಂದ ಬಿಗ್ ಅಪ್ಡೇಟ್; ಶಿವಣ್ಣನ ಬರ್ತ್ಡೇಗೆ ಕಾದಿದೆ ಸರ್ಪ್ರೈಸ್
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಬರ್ತ್ಡೇಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 12ರಂದು ಘೋಸ್ಟ್ ಸಿನಿಮಾ ತಂಡದಿಂದ ಬಿಗ್ ಡ್ಯಾಡಿ ಎಂಬ ವಿಶೇಷ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
Shiva Rajkumar: ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ (Shiva rajkumar) ನಟನೆಯ ‘ಘೋಸ್ಟ್’ (Ghost) ಸಿನಿಮಾ ಹತ್ತು ಹಲವು ಕಾರಣಕ್ಕೆ ಕುತೂಹಲ ಮೂಡಿಸುತ್ತಲೇ ಇದೆ. ಫಸ್ಟ್ ಲುಕ್ ಮೋಷನ್ ಪೋಸ್ಟರ್ನಿಂದ ಶುರುವಾದ ಈ ಕ್ಯೂರಿಯಾಸಿಟಿ, ಶಿವಣ್ಣನ ವಿಂಟೇಜ್ ಲುಕ್ಗೂ ಫ್ಯಾನ್ಸ್ ಮಾರುಹೋಗಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೂ ಈ ಸಿನಿಮಾದಲ್ಲಾಗುತ್ತಿದೆ ಎಂದಾಗ ಅಭಿಮಾನಿಗಳ ಕಣ್ಣರಳಿದ್ದವು. ತಾರಾಬಳಗದ ವಿಚಾರದಲ್ಲಿಯೂ ಈ ಸಿನಿಮಾ ನೆಕ್ಸ್ಟ್ ಲೆವೆಲ್ನಲ್ಲಿದೆ. ಇದೀಗ ಈ ಚಿತ್ರದಿಂದ ಬಿಗ್ ಅಪ್ಡೇಟ್ಗೆ ದಿನಗಣನೆ ಶುರುವಾಗಿದೆ.
ಜುಲೈ 12 ಶಿವರಾಜ್ಕುಮಾರ್ ಬರ್ತ್ಡೇ. ಹೀರೋಗಳ ಬರ್ತ್ಡೇ ಎಂದರೆ ಅಲ್ಲಿ ಹಲವು ವಿಶೇಷತೆಗಳು ಕಾಮನ್. ಅದೇ ರೀತಿ ಶಿವಣ್ಣನ ಈ ಸಲದ ಬರ್ತ್ಡೇಗೂ ಹಲವು ಸಿನಿಮಾಗಳ ಘೋಷಣೆ ಆಗಲಿವೆ. ಆದರೆ, ಅಭಿಮಾನಿಗಳ ಗಮನ ಮಾತ್ರ ಘೋಸ್ಟ್ ಚಿತ್ರದ ಮೇಲಿದೆ. ಚಿತ್ರತಂಡವೇ ಹೇಳಿಕೊಂಡಂತೆ, ಶಿವಣ್ಣನ ಹುಟ್ಟುಹಬ್ಬದ ದಿನದಂದು ಘೋಸ್ಟ್ ಚಿತ್ರದ ಬಿಗ್ ಡ್ಯಾಡಿ ವಿಡಿಯೋ ಬಿಡುಗಡೆ ಮಾಡಲಿದೆ ಸಿನಿಮಾ ತಂಡ.
ನಿರ್ದೇಶಕ ಶ್ರೀನಿ ಮತ್ತು ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಈ ವಿಡಿಯೋವನ್ನು ಅದ್ದೂರಿಯಾಗಿಯೇ ಲಾಂಚ್ ಮಾಡಲು ನಿರ್ಧರಿಸಿದ್ದಾರೆ. ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿಯೂ ತೆರೆಕಾಣಲಿರುವ ಈ ಸಿನಿಮಾ ವಿಎಫ್ಎಕ್ಸ್ ವಿಚಾರವಾಗಿಯೂ ಸುದ್ದಿಯಲ್ಲಿದೆ. ಹಲವು ಮೊದಲುಗಳಿಗೂ ನಾಂದಿ ಹಾಡಿರುವ ಈ ಸಿನಿಮಾ, ತಾಂತ್ರಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿದೆ. ಅನುಪಮ್ ಖೇರ್ ಕನ್ನಡದಕ್ಕೆ ಆಗಮಿಸಿರುವುದು ಒಂದೆಡೆಯಾದರೆ, ಇರಾನ್ನಲ್ಲಿ ಈ ಚಿತ್ರದ ವಿಎಫ್ಎಕ್ಸ್ ಕೆಲಸಗಳು ನಡೆಯುತ್ತಿವೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ, 'ಘೋಸ್ಟ್'ಗೆ ನಿರ್ದೇಶಕ ಶ್ರೀನಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನುಳಿದಂತೆ ಮಾಲಿವುಡ್ ನಟ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಮಹಾನವಮಿ ಪ್ರಯುಕ್ತ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.
Vinod Raj: ನಿರ್ಮಾಪಕರು ಸರಿಯಾಗಿದ್ದಿದ್ದರೆ ಈಗಲೂ ನಾನು ಸಿನಿಮಾರಂಗದಲ್ಲಿ ಉಳೀತಿದ್ದೆ; ಕೃಷಿಯಲ್ಲಿ ಖುಷಿ ಕಂಡ ವಿನೋದ್ ರಾಜ್ ಮಾತು
Vinod Raj: ಸಿನಿಮಾ ನಟರಾಗಿ ಗುರುತಿಸಿಕೊಂಡು, ಇದೀಗ ಅದರಿಂದ ಬಹುದೂರ ಸರಿದಿರುವ ವಿನೋದ್ ರಾಜ್, ಕಳೆದ ಕೆಲ ತಿಂಗಳ ಹಿಂದೆ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದರು. ಕುಟುಂಬ, ಮಡದಿ, ಮಕ್ಕಳು ಎಂಬಿತ್ಯಾದಿಯಾಗಿ ಸದ್ದು ಮಾಡಿದ್ದರು. ಆದರೆ, ಇದೇ ವಿನೋದ್ಗೆ ಅವರ ಆಪ್ತರು ಮತ್ತೆ ಸಿನಿಮಾಕ್ಕೆ ಬನ್ನಿ ಎಂದು ಸಲಹೆ ನೀಡದ ಉದಾಹರಣೆಗಳು ಸಾಕಷ್ಟಿವೆ. ಅದನ್ನು ಸ್ವತಃ ವಿನೋದ್ ಹೇಳಿಕೊಂಡಿದ್ದೂ ಉಂಟು. ಆದರೆ, ಸದ್ಯಕ್ಕೆ ಸಿನಿಮಾದತ್ತ ಆಗಮಿಸುವ ಯಾವ ಆಸೆಯೂ ಅವರಿಗಿಲ್ಲ. ಕೃಷಿಯಲ್ಲಿಯೇ ಖುಷಿ ಕಾಣುತ್ತ ಅಮ್ಮನೊಂದಿಗೆ ಹಳ್ಳಿ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ