Shalivahana Shake: ತೆರೆಗೆ ಬರಲು ರೆಡಿಯಾಯ್ತು ಟೈಮ್‌ ಲೂಪ್‌ ಪರಿಕಲ್ಪನೆಯ ಶಾಲಿವಾಹನ ಶಕೆ ಸಿನಿಮಾ-sandalwood news girish directs and acted shalivahana shake movie trailer out movie will release on september 13th mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Shalivahana Shake: ತೆರೆಗೆ ಬರಲು ರೆಡಿಯಾಯ್ತು ಟೈಮ್‌ ಲೂಪ್‌ ಪರಿಕಲ್ಪನೆಯ ಶಾಲಿವಾಹನ ಶಕೆ ಸಿನಿಮಾ

Shalivahana Shake: ತೆರೆಗೆ ಬರಲು ರೆಡಿಯಾಯ್ತು ಟೈಮ್‌ ಲೂಪ್‌ ಪರಿಕಲ್ಪನೆಯ ಶಾಲಿವಾಹನ ಶಕೆ ಸಿನಿಮಾ

ಶೀರ್ಷಿಕೆ ಮೂಲಕವೇ ಗಮನ ಸೆಳೆಯುತ್ತಿರುವ 'ಶಾಲಿವಾಹನ ಶಕೆ' ಚಿತ್ರ ಇದೀಗ, ಟ್ರೈಲರ್ ಮೂಲಕ ನೋಡುಗರ ಮುಂದೆ ಬಂದಿದೆ. ಈ ಹಿಂದೆ ಒಂದು ಕಥೆ ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ.

ಸೆಪ್ಟೆಂಬರ್‌ 13ರಂದು ತೆರೆಗೆ ಬರಲಿದೆ ಶಾಲಿವಾಹನ ಶಕೆ ಸಿನಿಮಾ
ಸೆಪ್ಟೆಂಬರ್‌ 13ರಂದು ತೆರೆಗೆ ಬರಲಿದೆ ಶಾಲಿವಾಹನ ಶಕೆ ಸಿನಿಮಾ

Shalivahana Shake: ಶಾಲಿವಾಹನ ಶಕೆ ಸದ್ಯ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ವಿಭಿನ್ನವಾದ ಕಾನ್ಸೆಪ್ಟ್‌ ಜತೆಗೆ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ ಈ ಸಿನಿಮಾ. ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ 'ಶಾಲಿವಾಹನ ಶಕೆ' ಚಿತ್ರ ಇದೀಗ, ಟ್ರೈಲರ್ ಮೂಲಕ ನೋಡುಗರ ಮುಂದೆ ಬಂದಿದೆ. ಈ ಹಿಂದೆ ಒಂದು ಕಥೆ ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಗಿರೀಶ್ ಕಥೆಗೆ ಬಂಡವಾಳ ಹೂಡುವ ಮೂಲಕ ಜೀವ ತುಂಬಿದೆ ಸೈಡ್ ವಿಂಗ್ಸ್ ಸಿನಿಮಾಸ್ ನಿರ್ಮಾಣ ಸಂಸ್ಥೆ.

ಗಿರೀಶ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಗಿರೀಶ್‌ಗೆ ಜೋಡಿಯಾಗಿ ಕಿರುತೆರೆಯ ಖ್ಯಾತ ನಟಿ ಸುಪ್ರೀತಾ ಬಣ್ಣ ಹಚ್ಚಿದ್ದಾರೆ. ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ನಿರ್ದೇಶಕ ಮತ್ತು ನಾಯಕ ಗಿರೀಶ್, 'ಶಾಲಿವಾಹನ ಅಂದ್ರೆ ಈ ಸಿನಿಮಾದಲ್ಲಿ ಒಂದು ಹಳ್ಳಿಯ ಹೆಸರು. ಪೌರಾಣಿಕ ಹಿನ್ನಲೆ ಕೂಡ ಇದೆ. ಟ್ರೈಲರ್ ನಲ್ಲಿ ಕಾಣಿಸುವ ಶಂಖ ಪ್ರಮುಖ ಪಾತ್ರ ವಹಿಸುತ್ತದೆ. ಈಗಾಗಲೇ ಸಾಕಷ್ಟು ಟೈಮ್ ಲೂಪ್ ಸಿನಿಮಾಗಳು ಬಂದಿವೆ. ಆದರೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ಟೈಮ್ ಲೂಪ್ ಕಥೆಯನ್ನು ಪೌರಾಣಿಕ ಹಿನ್ನೆಲೆಯಲ್ಲಿ ಹಾಗೂ ಹಳ್ಳಿ ಸೊಗಡಿನೊಂದಿಗೆ ಹೇಳಿದ್ದೇವೆ' ಎಂದರು.

ನಾಯಕಿ ಸುಪ್ರೀತಾ ಮಾತನಾಡಿ, 'ಇದೊಂದು ಮಾಮೂಲಿ ಕಥೆಯಲ್ಲ ಒಂದು ವಿಭಿನ್ನವಾದ ಸಿನಿಮಾ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಳ್ಳಿ ಸೊಗಡನ್ನು ಇಟ್ಟುಕೊಂಡು ಮಾಡಿರುವ ಟೈಮ್ ಲೂಪ್ ಸಿನಿಮಾ. ಒಂದು ವೇಳೆ ಲೈಫಲ್ಲಿ ನಡೆದ ಘಟನೆಯನ್ನು ಸರಿಪಡಿಸಿಕೊಳ್ಳಲು ಉತ್ತಮ ಚಾನ್ಸ್ ಸಿಕ್ಕರೆ ಏನು ಮಾಡಬಹುದು ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳಿದ್ದೀವಿ' ಎಂದರು.

ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಖ್ಯಾತ ಕಲಾವಿದ ಸುಂದರ್ ವೀಣಾ ಮಾತನಾಡಿ, ' ಈ ಚಿತ್ರದಲ್ಲಿ ಮುಸ್ಲಿಮ್ ದರ್ವೇಸಿ ಭೂಬಯ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ಪ್ರಮುಖವಾಗಿ ಒಂದು ರಂಗತಂಡ ಆಗಿದ್ದರಿಂದ ತುಂಬಾ ಖುಷಿಯಾಯಿತು' ಎಂದರು.

ನಿರ್ಮಾಪಕ ಶೈಲೇಶ್ ಕುಮಾರ್ ಮಾತನಾಡಿ, 'ಇದೇ ಕಾಲಘಟ್ಟದಲ್ಲಿ ನಡೆಯುವ ಕಥೆ. ನಾಲ್ಕರಿಂದ ಐದು ದಿನದಲ್ಲಿ ನಡೆಯುವ ಕಥೆ ಶಾಲಿವಾಹನ ಶಕೆ' ಎಂದರು. ಈ ಸಿನಿಮಾವನ್ನು 15 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯರಾಗಿರುವ 'ಸೈಡ್ ವಿಂಗ್' ಹೆಸರಿನಲ್ಲಿ ತಮ್ಮದೆ ತಂಡ ಕಟ್ಟಿಕೊಂಡು ನಾಟಕ ಪ್ರದರ್ಶನ ಮಾಡುತ್ತಿರುವ ಶೈಲೇಶ್ ಕುಮಾರ್ ಮೊದಲ ಬಾರಿಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಸಿನಿಮಾವನ್ನು ಬಹುತೇಕ ಕುಣಿಗಲ್ ಸುತ್ತಮತ್ತ ಚಿತ್ರೀಕರಣ ಮಾಡಲಾಗಿದೆ. ಇದುವರೆಗೂ ಬಂದಿರುವ ಬಹುತೇಕ ಟೈಮ್ ಥ್ರಿಲ್ಲರ್ ಸಿನಿಮಾಗಳು ಟೆಕ್ನಾಲಜಿಯನ್ನು ಆಧರಿಸಿ ಇರುವ ಸಿನಿಮಾವಾಗಿರುತ್ತಿತ್ತು. ಆದರೆ ಇದು ಒಂದು ಹಳ್ಳಿ ಸೊಗಡಿನಲ್ಲಿ ದೇಸಿ ಕ್ಯಾರೆಕ್ಟರ್‌ಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವಾಗಿದೆ.

ಸೆ. 13ಕ್ಕೆ ಸಿನಿಮಾ ರಿಲೀಸ್‌

ಈ ಸಿನಿಮಾದಲ್ಲಿ ಚಿಲ್ಲರ್ ಮಂಜು, ಸುಂದರ್ ವೀಣಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ಸುರೇಶ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಎನ್ನುವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಶಾಲಿವಾಹನ ಶಕೆ ಇದೇ ತಿಂಗಳು 13ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿಕೊಡುತ್ತಿದೆ.