ಕನ್ನಡ ಸುದ್ದಿ  /  ಮನರಂಜನೆ  /  ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬ: ಗಣೇಶ್‌ಗೆ ಈಗ ವಯಸ್ಸೆಷ್ಟು? ಮುಂಗಾರು ಮಳೆ ನಟನ ಈ ವಿಚಾರಗಳು ನಿಮಗೆ ತಿಳಿದಿದೆಯೇ

ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬ: ಗಣೇಶ್‌ಗೆ ಈಗ ವಯಸ್ಸೆಷ್ಟು? ಮುಂಗಾರು ಮಳೆ ನಟನ ಈ ವಿಚಾರಗಳು ನಿಮಗೆ ತಿಳಿದಿದೆಯೇ

Golden Star ganesh Birthday: ಇಂದು (ಜುಲೈ 2) ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಹುಟ್ಟುಹಬ್ಬದ ಸಂಭ್ರಮ. ಮುಂಗಾರು ಮಳೆ ಸಿನಿಮಾದ ಮೂಲಕ ಖ್ಯಾತಿ ಪಡೆದ ಗಣೇಶ್‌ ವಯಸ್ಸು, ಸಿನಿಮಾಗಳು ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬ: ಗಣೇಶ್‌ಗೆ ಈಗ ವಯಸ್ಸೆಷ್ಟು?
ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬ: ಗಣೇಶ್‌ಗೆ ಈಗ ವಯಸ್ಸೆಷ್ಟು?

ಕನ್ನಡ ನಟ ಗಣೇಶ್‌ಗೆ ಇಂದು (ಜುಲೈ 2) ಹುಟ್ಟುಹಬ್ಬದ ಸಂಭ್ರಮ. ಗಣೇಶ್‌ ಕಿಶಾನ್‌ ಅವರು ಜುಲೈ 2, 1978ರಂದು ಜನಿಸಿದರು. ವಿಕಿಪಿಡಿಯಾ ಮಾಹಿತಿ ಪ್ರಕಾರ ಈಗ ಇವರಿಗೆ 45 ವರ್ಷ ವಯಸ್ಸು. ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ, ಟಿವಿ ನಿರೂಪಕರಾಗಿ ಖ್ಯಾತಿ ಪಡೆದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಈ ವರ್ಷ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ಇಲ್ಲದ ಕಾರಣ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಎರಡು ಫಿಲ್ಮ್‌ ಫೇರ್‌ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಗಣೇಶ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಈ ವರ್ಷ ಹುಟ್ಟುಹಬ್ಬವಿಲ್ಲ

ಕೆಲವು ದಿನಗಳ ಹಿಂದೆ ಗಣೇಶ್‌ ಎಕ್ಸ್‌ನಲ್ಲಿ ಹೀಗೆ ಟ್ವೀಟ್‌ ಮಾಡಿದ್ದರು. "ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ.ಆದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ್" ಎಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಟ್ವೀಟ್‌ ಮಾಡಿದ್ದಾರೆ.

ಗಣೇಶ್‌ ನಿಕ್‌ನೇಮ್‌: ಗೋಲ್ಡನ್‌ ಸ್ಟಾರ್‌ ಗಣೇಶ್‌, ಕಾಮಿಡಿ ಟೈಮ್‌ ಗಣೇಶ್‌, ಗಣಿ.

ಟ್ರೆಂಡಿಂಗ್​ ಸುದ್ದಿ

ಪ್ರಮುಖ ಪಾತ್ರ: ಮುಂಗಾರು ಮಳೆ ಸಿನಿಮಾದಲ್ಲಿ ಪ್ರೀತಮ್‌

ನಟ ಗಣೇಶ್‌ ಎತ್ತರ, ತೂಕ

ಸ್ಟಾರ್ಸ್‌ ಅನ್‌ ಫೋಲ್ಡೆಡ್‌ ವೆಬ್‌ ತಾಣದ ಪ್ರಕಾರ ಗೋಲ್ಡನ್‌ ಸ್ಟಾರ್‌ ಗಣೇಶ್‌ 170 ಸೆಂ.ಮೀ. ಎತ್ತರ ಅಂದರೆ 5.7 ಅಡಿ ಎತ್ತರವಿದ್ದಾರೆ.

ಜನ್ಮ ಸ್ಥಳ: ಅಡಕಮಾರನಹಳ್ಳಿ, ಬೆಂಗಳೂರು

ಆರಂಭಿಕ ಶಿಕ್ಷಣ: ಬಸವೇಶ್ವರ ಇಂಗ್ಲಿಷ್‌ ಸ್ಕೂಲ್‌, ನೆಲಮಂಗಲ, ಎಲೆಕ್ಟ್ರಾನಿಕ್ಸ್‌ ಆಂಡ್‌ ಕಮ್ಯುನಿಕೇಷನ್‌ನಲ್ಲಿ ಡಿಪ್ಲೊಮಾ.

ತಂದೆಯ ಹೆಸರು: ಕಿಶನ್‌ ಬಾಲ್‌, ತಾಯಿ: ಸುಲೋಚನ, ಸಹೋದರ: ಮಹೇಶ್‌ ಮತ್ತು ಉಮೇಶ್‌

  • ಗಣೇಶ್‌ ಅವರು ಉದಯ ಟಿವಿಯಲ್ಲಿ ಕಾಮಿಡಿ ಟೈಮ್‌ ನಡೆಸಿಕೊಡುತ್ತಿದ್ದರು. ಸದಾರಮೆ, ಕದಡಿದ ನೀರು ಮುಂತಾದ ನಾಟಕಗಳಲ್ಲಿಯೂ ನಟಿಸಿದ್ದಾರೆ. ರಂಗ ಸಂಪದ ಮತ್ತು ರಂಗ ಶಿಕ್ಷಣ ಕೇಂದ್ರಗಳಲ್ಲಿ ನಟನಾ ತರಬೇತಿ ಪಡೆದಿದ್ದಾರೆ.
  • ಟಪೋರಿ ಸಿನಿಮಾದಲ್ಲಿ ಗಣೇಶ್‌ ವಿಲನ್‌ ರೋಲ್‌ ಮಾಡಿದ್ದರು. ಕೂಲ್‌- ಸಖತ್‌ ಹಾಟ್‌ ಮಗ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾಕ್ಕೆ ಇವರ ಪತ್ನಿ ಶಿಲ್ಪಾ ಬಾರ್ಕೂರ್‌ ನಿರ್ಮಾಪಕರಾಗಿದ್ದರು.
  • ಗಣೇಶ್‌ಗೆ ಈ ಹಿಂದೆ ಹುಟ್ಟುಹಬ್ಬದ ಸಂದರ್ಭದಲ್ಲಿ ಬೇರೆಬೇರೆ ವರ್ಷ ಪತ್ನಿ ಶಿಲ್ಪಾ ಬಾರ್ಕೂರ್‌ ಅವರು ಮರ್ಸಿಡಿಸ್‌ ಬೆಂಝ್‌ ಕಾರು ಮತ್ತು 20 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಉಡುಗೊರೆ ನೀಡಿದ್ದರು.
  • ಗಣೇಶ್‌ ಅವರು ಶಿಲ್ಪ ಬಾರ್ಕೂರ್‌ ಅವರನ್ನು ವಿವಾಹವಾದರು. ಇವರಿಗೆ ಚರಿತ್ರೇಯ ಗಣೇಶ್‌ ಮತ್ತು ವಿಹಾನ್‌ ಗಣೇಶ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಚಿತ್ರದ ಚಿನ್ನಮ್ಮ ಹಾಡು ಬಿಡುಗಡೆ, ಸಿನಿಮಾ ಯಾವಾಗ ರಿಲೀಸ್‌