ಹಬ್ಬ ಮುಗಿದ್ರೂ ನಿಲ್ಲದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಗಣೇಶೋತ್ಸವ! ಈ ಒಟಿಟಿಗೆ ಆಗಮಿಸುವ ಸನಿಹದಲ್ಲಿ Krishnam Pranaya Sakhi-sandalwood news golden star ganesh krishnam pranaya sakhi ott update and movie completes 25 days in theatre mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಹಬ್ಬ ಮುಗಿದ್ರೂ ನಿಲ್ಲದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಗಣೇಶೋತ್ಸವ! ಈ ಒಟಿಟಿಗೆ ಆಗಮಿಸುವ ಸನಿಹದಲ್ಲಿ Krishnam Pranaya Sakhi

ಹಬ್ಬ ಮುಗಿದ್ರೂ ನಿಲ್ಲದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಗಣೇಶೋತ್ಸವ! ಈ ಒಟಿಟಿಗೆ ಆಗಮಿಸುವ ಸನಿಹದಲ್ಲಿ Krishnam Pranaya Sakhi

Krishnam Pranaya Sakhi OTT: ಗೋಲ್ಡನ್ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ? ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಿಸಬಹುದು? ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವ ಈ ಸಿನಿಮಾದ ಒಟಿಟಿ ಬಿಡುಗಡೆಯ ಅಪ್‌ಡೇಟ್‌ ಇಲ್ಲಿದೆ.

ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವ ಈ ಸಿನಿಮಾದ ಒಟಿಟಿ ಬಿಡುಗಡೆಯ ಅಪ್‌ಡೇಟ್‌ ಇಲ್ಲಿದೆ.
ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವ ಈ ಸಿನಿಮಾದ ಒಟಿಟಿ ಬಿಡುಗಡೆಯ ಅಪ್‌ಡೇಟ್‌ ಇಲ್ಲಿದೆ. (image\ Twitter)

Krishnam Pranaya sakhi OTT: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ಕೆಲ ತಿಂಗಳಲ್ಲಿ ಒಳ್ಳೊಳ್ಳೆ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿವೆ. ಆ ಪೈಕಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸಹ ಒಂದು. ದೊಡ್ಡ ಹಿಟ್‌ನ ನಿರೀಕ್ಷೆಯಲ್ಲಿದ್ದ ನಟ ಗಣೇಶ್‌ಗೆ ಕೃಷ್ಣ ಮತ್ತೆ ಕೈ ಹಿಡಿದಿದ್ದಾನೆ. ಚಿತ್ರಮಂದಿರಗಳಲ್ಲಿ ಭರ್ತಿ 25 ದಿನಗಳನ್ನು ಪೂರೈಸಿದೆ ಕೃಷ್ಣಂ ಪ್ರಣಯ ಸಖಿ. ಈ ಖುಷಿಯನ್ನು ಅಷ್ಟೇ ಸಂಭ್ರಮದಿಂದ ಆಚರಿಸಿದೆ ಚಿತ್ರತಂಡ. ಇದರ ಜತೆಗೆ ಒಟಿಟಿ ಬಿಡುಗಡೆ ಬಗ್ಗೆಯೂ ಹೊಸ ಅಪ್‌ಡೇಟ್‌ ಸಿಕ್ಕಿದೆ.

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಚಿತ್ರ ಬಿಡುಗಡೆಯಾಗಿ ಇಪ್ಪತ್ತೈದು ದಿನಗಳಾಗಿದೆ. ಇಪ್ಪತ್ತೈದು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿರುವ ಈ ಚಿತ್ರದ ಗೆಲುವಿನ ಓಟ ಈಗಲೂ ಮುಂದುವರೆದಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ನಿರ್ಮಾಪಕರು ಪ್ರಸನ್ನ ಚಿತ್ರಮಂದಿರದಲ್ಲಿ ಸಮಾರಂಭ ಆಯೋಜಿಸಿದ್ದರು. ಚಿತ್ರದ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಗೆಲುವಿಗೆ ಕಾರಣ ತಿಳಿಸಿದ ನಿರ್ದೇಶಕ

ನಿರ್ದೇಶಕ ಶ್ರೀನಿವಾಸ್‌ರಾಜು ಮಾತನಾಡಿ, "ನನ್ನ ಸಿನಿಮಾ ಗೆಲುವಿಗೆ ಮೂರು ಮುಖ್ಯ ಪಿಲ್ಲರ್‌ಗಳು ಕಾರಣ. ಮೊದಲನೇಯದು ಚಿತ್ರರಸಿಕರು ಹಾಗೂ ಮಾಧ್ಯಮದವರು, ಎರಡನೇಯದು ನಾಯಕ ಗಣೇಶ್ ಹಾಗೂ ಮೂರನೆಯದು ನನ್ನ ಚಿತ್ರಕ್ಕೆ ಆರು ಹಿಟ್ ಹಾಡುಗಳನ್ನು ಕೊಟ್ಟ ಅರ್ಜುನ್ ಜನ್ಯ. ಈ ಗೆಲುವನ್ನು ನನ್ನ ಇಡೀ ತಂಡಕ್ಕೆ ಅರ್ಪಿಸುತ್ತೇನೆ. ಈ ಕಥೆಯನ್ನು ಗಣೇಶ್ ಅವರನ್ನ ತಲೆಯಲ್ಲಿಟ್ಟುಕೊಂಡು ಮಾಡಿದ್ದೇನೆ ಎಂದು. ಈಗಲೂ ಅದೇ ಹೇಳುತ್ತೇನೆ. ಈ ಪಾತ್ರ ಗಣೇಶ್ ಅವರಿಗಾಗಿಯೇ. ಇನ್ನು ಟ್ರೇಲರ್, ಟೀಸರ್ ಬಿಡುಗಡೆ‌ ಮಾಡದೆ ಹಾಡುಗಳ ಮೂಲಕ ಜನರನ್ನು ತಲುಪುತ್ತೇನೆ ಎಂದಿದ್ದೆ. ಅದು ನಿಜವಾಗಿದೆ" ಎಂದರು.

ಗಣೇಶ್‌ ಜಾಕೆಟ್‌ ಮೇಲೆ ಗೋಲ್ಡನ್‌ ಫ್ಯಾನ್ಸ್‌ ಬರಹ!

ನಿರ್ದೇಶಕರು ನನ್ನ ಬಗ್ಗೆ ತುಂಬಾ ಹೇಳಿದರು‌. ಆದರೆ ಯಶಸ್ಸಿನ ಸಿಂಹಪಾಲು ಅವರಿಗೆ ಸೇರಬೇಕು. ಅವರು ಈ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ್ದಾರೆ‌. ತಂತ್ರಜ್ಞರು ಹಾಗೂ ನನ್ನ ಸಹೋದ್ಯೋಗಿ ಕಲಾವಿದರ ಸಹಕಾರದಿಂದ ಇಂದು ಯಶಸ್ಸು ಕಾರಣವಾಗಿದೆ. ಇನ್ನು ಇತ್ತೀಚೆಗೆ ಈ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ದುಬೈಗೆ ಹೋಗಿದ್ದೆವು. ಪ್ರದರ್ಶನ ಮುಗಿದ ಮೇಲೆ ಶಾಪಿಂಗ್‌ಗೆ ಹೋದಾಗ, ಒಂದು ಜಾಕೆಟ್ ಕಣ್ಣಿಗೆ ಬಿತ್ತು. ರಂಗಾಯಣ ರಘು ಅವರು ಈ ಜಾಕೆಟ್ ತೆಗೆದಿಕೊ ಅಂತ ಹೇಳಿದರು. ನಾನು ಏಕೆ ಅಂದೆ. ಅದರ ಮೇಲೆ GF ಎಂದು ಬರೆದಿದೆ. GF ಎಂದರೆ ಗೋಲ್ಡನ್ ಫ್ಯಾನ್ಸ್ ಎಂದು. ಚಿತ್ರದ ಇಪ್ಪತ್ತೈದನೇ ದಿನದ ಸಮಾರಂಭಕ್ಕೆ ಈ ಜಾಕೆಟ್ ಹಾಕೊಂಡು ಹೋಗು. ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸು ಎಂದಿದ್ದರು ರಂಗಾಯಣ ರಘು. ಅದರಂತೆ ಆ ಜಾಕೆಟ್‌ ಹಾಕಿ ಬಂದಿದ್ದೇನೆ ಎಂದರು ಗಣೇಶ್.

ಯಾವ ಒಟಿಟಿಯಲ್ಲಿ ಕೃಷ್ಣಂ ಪ್ರಣಯ ಸಖಿ..

ಇನ್ನು ಕೃಷ್ಣ ಪ್ರಣಯ ಸಖಿ ಸಿನಿಮಾ ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಟ್ರೇಲರ್‌ ಬಿಡುಗಡೆ ಮಾಡದೇ ಕೇವಲ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದಿತ್ತು ಈ ಸಿನಿಮಾ. ಇದೀಗ ಚಿತ್ರಮಂದಿರದಲ್ಲಿ 25 ದಿನ ಪೂರೈಸಿರುವ ಈ ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

ಕೃಷ್ಣಂ ಪ್ರಣಯ ಸಖಿ ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ವಿಡಿಯೋ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೇನು ಸೆ. ಟ3 ಅಥವಾ ಸೆಪ್ಟೆಂಬರ್‌ 20ರಂದು ಈ ಸಿನಿಮಾ ಒಟಿಟಿಗೆ ಆಗಮಿಸುವ ಸಾಧ್ಯತೆ ಇದೆ. ಈ ಚಿತ್ರಕ್ಕೂ ಒಂದು ವಾರ ಮೊದಲೇ ತೆರೆಕಂಡಿದ್ದ ದುನಿಯಾ ವಿಜಯ್‌ ಭೀಮ ಸಿನಿಮಾ ಈಗಾಗಲೇ ಒಟಿಟಿಗೆ ಬಂದು ವಾರ ಕಳೆದಿದೆ.

mysore-dasara_Entry_Point