ಕೃಷ್ಣಂ ಪ್ರಣಯ ಸಖಿ ಮತ್ತೊಂದು ಹಾಡು ಬಿಡುಗಡೆ; ಕೃಷ್ಣ ಜನ್ಮಾಷ್ಟಮಿಗೆ ಒಳ್ಳೆ ಸಾಂಗ್‌, ಶ್ರೀ ಕೃಷ್ಣಂ ಜಗತ್ ಕಾರಣಂ ಆಲಿಸೋಣ ಬನ್ನಿ-sandalwood news golden star ganesh movie krishnam pranaya sakhi sri krishnam song lyrics fans loved it pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕೃಷ್ಣಂ ಪ್ರಣಯ ಸಖಿ ಮತ್ತೊಂದು ಹಾಡು ಬಿಡುಗಡೆ; ಕೃಷ್ಣ ಜನ್ಮಾಷ್ಟಮಿಗೆ ಒಳ್ಳೆ ಸಾಂಗ್‌, ಶ್ರೀ ಕೃಷ್ಣಂ ಜಗತ್ ಕಾರಣಂ ಆಲಿಸೋಣ ಬನ್ನಿ

ಕೃಷ್ಣಂ ಪ್ರಣಯ ಸಖಿ ಮತ್ತೊಂದು ಹಾಡು ಬಿಡುಗಡೆ; ಕೃಷ್ಣ ಜನ್ಮಾಷ್ಟಮಿಗೆ ಒಳ್ಳೆ ಸಾಂಗ್‌, ಶ್ರೀ ಕೃಷ್ಣಂ ಜಗತ್ ಕಾರಣಂ ಆಲಿಸೋಣ ಬನ್ನಿ

Krishnam Pranaya Sakhi Songs: ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್‌ 14 ಅಂದರೆ ನಾಳೆ ಬಿಡುಗಡೆಯಾಗಲಿದೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಈ ಸಿನಿಮಾದ "ಶ್ರೀ ಕೃಷ್ಣಂ ಜಗತ್ ಕಾರಣಂ, ಜಗದೇಕ ಜಗನ್ಮೋಹನಂ, ಶ್ರೀ ಕೃಷ್ಣಂ ಜಗತ್ ಪಾಲಕಂ, ಜಯಜಯಹೆ ಜಗನ್ನಾಯಕಂ" ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಕೃಷ್ಣಂ ಪ್ರಣಯ ಸಖಿ ಮತ್ತೊಂದು ಹಾಡು ಬಿಡುಗಡೆ; ಕೃಷ್ಣ ಜನ್ಮಾಷ್ಟಮಿಗೆ ಒಳ್ಳೆ ಸಾಂಗ್‌
ಕೃಷ್ಣಂ ಪ್ರಣಯ ಸಖಿ ಮತ್ತೊಂದು ಹಾಡು ಬಿಡುಗಡೆ; ಕೃಷ್ಣ ಜನ್ಮಾಷ್ಟಮಿಗೆ ಒಳ್ಳೆ ಸಾಂಗ್‌

ಬೆಂಗಳೂರು: ಕೃಷ್ಣಂ ಪ್ರಣಯ ಸಖಿ ಸಿನಿಮಾ (Krishnam Pranaya Sakhi Release) ಆಗಸ್ಟ್‌ 14 ಅಂದರೆ ನಾಳೆ ಬಿಡುಗಡೆಯಾಗಲಿದೆ. ಇಂದು ಸಂಜೆ ಕೆಲವು ಥಿಯೇಟರ್‌ಗಳಲ್ಲಿ ಪ್ರೀಮಿಯಂ ಶೋ ಇರಲಿದೆ. ಈ ಸಿನಿಮಾಕ್ಕೆ ಸಂಬಂಧಪಟ್ಟಂತೆ ಯಾವುದೇ ಟ್ರೇಲರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿಲ್ಲ. ಆದರೆ, ಆ ಸಿನಿಮಾದ ಆರು ಹಾಡುಗಳನ್ನು ಬಿಡುಗಡೆ (Krishnam Pranaya Sakhi Movie Songs) ಮಾಡಿದೆ. ಹಾಡುಗಳ ಮೂಲಕವೇ ಪ್ರೇಕ್ಷಕರಿಗೆ ಸಿನಿಮಾದ ಆಮಂತ್ರಣ ನೀಡಿದೆ. ಸಿನಿಮಾ ಬಿಡುಗಡೆಯ ದಿನ ಇದೀಗ ಮತ್ತೊಂದು ಕೃಷ್ಣಂ ಪ್ರಣಯ ಸಖಿ ಹಾಡು ಬಿಡುಗಡೆಯಾಗಿದೆ. "ಶ್ರೀ ಕೃಷ್ಣಂ ಜಗತ್ ಕಾರಣಂ, ಜಗದೇಕ ಜಗನ್ಮೋಹನಂ, ಶ್ರೀ ಕೃಷ್ಣಂ ಜಗತ್ ಪಾಲಕಂ, ಜಯಜಯಹೆ ಜಗನ್ನಾಯಕಂ" ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಶ್ರೀ ಕೃಷ್ಣಂ ಜಗತ್ ಕಾರಣಂ ಹಾಡಿನ ಬಗ್ಗೆ

ಇದು ಚಿತ್ರತಂಡ ಬಿಡುಗಡೆ ಮಾಡಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಆರನೇ ಹಾಡು. ಈ ಹಿಂದೆ ಮೈ ಮ್ಯಾರೇಜ್‌ ಈಸ್‌ ಫಿಕ್ಸಡ್‌, ಚಿನ್ನಮ್ಮ ಚಿನ್ನಮ್ಮ, ದ್ವಾಪರ ದಾಟಲು, ಹೇ ಗಗನ, ನಿನ್ನ ಹೆಗಲು ಎಂಬ ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಎಲ್ಲಾ ಹಾಡುಗಳು ಹಿಟ್‌ ಮೇಲೆ ಹಿಟ್‌ ಆಗಿದ್ದವು. ಕೃಷ್ಣಂ ಪ್ರಣಯ ಸಖಿ ಸಿನಿಮಾದ ಬಹುತೇಕ ಹಾಡುಗಳು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿವೆ. ಇದೀಗ ಶ್ರೀ ಕೃಷ್ಣಂ ಜಗತ್ ಕಾರಣಂ ಎಂಬ ಭಕ್ತಿಗೀತೆಯಂತಹ ಸುಂದರ ಚಿತ್ರಗೀತೆಯನ್ನು ಬಿಡುಗಡೆ ಮಾಡಲಾಗಿದೆ.

ಕೃಷ್ಣಂ ಪ್ರಣಯ ಸಖಿ ಸಿನಿಮಾದ ಶ್ರೀ ಕೃಷ್ಣಂ ಜಗತ್ ಕಾರಣಂ ಹಾಡಿಗೆ ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದಾರೆ. ರಕ್ಷಿತಾ ಸುರೇಶ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ಎಂದಿನಂತೆ ಈ ಹಾಡಿಗೆ ಅರ್ಜುನ್‌ ಜನ್ಯ ಸಂಗೀತವಿದೆ. ಶರಣ್‌ ರಾವ್‌ ಅವರ ಕೀ ಮತ್ತು ರಿದಮ್‌ ಇದೆ. ಐಶ್ವರ್ಯಾ ರಂಗರಾಜನ್‌, ಪೃಥ್ವಿ ಭಟ್‌, ಸಾಕ್ಷಿ ಕಲ್ಲೂರ್‌,ಸುರಭಿ ಭಾರದ್ವಾಜ್‌ ಈ ಹಾಡಿಗೆ ಸಹಗಾಯಕಿ ಗಾಯಕರಾಗಿದ್ದಾರೆ.

ಶ್ರೀ ಕೃಷ್ಣಂ ಜಗತ್ ಕಾರಣಂ ಹಾಡಿನ ಲಿರಿಕ್ಸ್‌

ಶ್ರೀ ಕೃಷ್ಣಂ ಜಗತ್ ಕಾರಣಂ
ಜಗದೇಕ ಜಗನ್ಮೋಹನಂ
ಶ್ರೀ ಕೃಷ್ಣಂ ಜಗತ್ ಪಾಲಕಂ

ಜಯಜಯಹೆ ಜಗನ್ನಾಯಕಂ
ಜಗತ್ ಪಾದುಕಂ ಜಗದ್ ರಕ್ಷಕಂ
ಜಗದ್ ವಂದಿತಂ ಜಗದ್ ಚಾಲಕಂ

ಗೋವಿಂದ ಗೋಪಾಲ
ಮಥುರಾಪುರೀ ಬಾಲ
ಆನಂದ ಲೋಲಾ ಕೃಷ್ಣಾ ....

ಶ್ರೀ ಕೃಷ್ಣಂ ಜಗತ್ ಕಾರಣಂ
ಜಗದೇಕ ಜಗನ್ಮೋಹನಂ
ಶ್ರೀ ಕೃಷ್ಣಂ ಜಗತ್ ಪಾಲಕಂ
ಜಯಜಯಹೇ ಜಗನ್ನಾಯಕಂ

ಆತುರ ಪಡದಂತೆ ಆಯುಧ ಇರದಂತೆ
ಯುದ್ಧವ ನೀ ಗೆದ್ದೇ ಲೀಲಾಮಯಾ
ನೀನಿಲ್ಲದೇನಿಲ್ಲ ನಿನ್ನಿಂದಲೇ ಎಲ್ಲ
ಈ ಸತ್ಯವಾ ನುಡಿದೆ ಗೀತಾಮಯಾ

ನೀನಾದೆ ಪುರುಷೋತ್ತಮಾ
ಹರಿ ನೀನೇ ಲೋಕೋತ್ತಮಾ
ಜಗದ್ ಪೋಷಕಂ ಜಗದ್ ವೀಕ್ಷಕಂ
ಜಗದ್ ಶಾಸಕಂ ಜಗದ್ ಪ್ರೇರಕಂ

ನಾ ನಿನ್ನ ನೆನಪಲ್ಲಿ
ನೀ ನನ್ನ ಮನದಲ್ಲಿ
ಇರುವಂತೆ ಹರಸು ಕೃಷ್ಣಾ..

ಅಂಡಾಂಡ ಬ್ರಹ್ಮಾಂಡ
ತುಂಬಿದೆ ನಿನ್ನಲ್ಲಿ
ನಾ ನಿನ್ನಲೊಂದಾದೇ
ಭಗವಂತನೇ...

ವೇಣು ಸ್ವರ ಸಂಚಾರಿ
ದಶರೂಪ ಅವತಾರಿ
ನೀನಿರುವೆ ನನಗಾಗಿ
ಪರಮಾತ್ಮನೇ...

ಓಂಕಾರ ನಿನ್ನ ರೂಪವೋ
ಶ್ರೀಂಕಾರ ಪ್ರತಿರೂಪವೋ
ಜಗದ್ ಶೋಭಿತಂ ಜಯಂ ವರ್ಧಿತಂ
ಜಗದ್ ಚೇತನಂ ಜಗದೀಶ್ವರಂ

ಜಗವನ್ನೆ ನಡೆಸೋನೆ
ಜಗವೆಲ್ಲ ನಿನದೇನೇ
ಮರಿಬೇಡ ನನ್ನ ಕೃಷ್ಣಾ
ಮರಿಬೇಡ ನನ್ನಾ ಕೃಷ್ಣಾ

ಶ್ರೀ ಕೃಷ್ಣಂ ಜಗತ್ ಕಾರಣಂ
ಜಗದೇಕ ಜಗನ್ಮೋಹನಂ
ಶ್ರೀ ಕೃಷ್ಣಂ ಜಗತ್ ಪಾಲಕಂ
ಜಯಹೇ..... ಜಗನ್ನಾಯಕಂ…
ಜಗತ್ ಕಾರಣಂ

ಶ್ರೀ ಕೃಷ್ಣಂ ಜಗತ್ ಕಾರಣಂ ಲಿರಿಕಲ್‌ ವಿಡಿಯೋ

ಶ್ರೀ ಕೃಷ್ಣಂ ಜಗತ್ ಕಾರಣಂ ಹಾಡಿಗೆ ಅಭಿಮಾನಿಗಳ ಪ್ರತಿಕ್ರಿಯೆ

"ಅಣ್ಣಾ ಒಂದ್ ಆದ ಮೇಲೆ ಒಂದು ಸಾಂಗ್ ಎಲ್ಲವು ಹಿಟ್‌. ಆದರೆ, ಸಿನಿಮಾಗೆ ತುಂಬಾ ಕಾಯ್ತಾ ಇದ್ದೇವೆ. ನಮ್ಮ ಗೋಲ್ಡನ್‌ ಸ್ಟಾರ್‌ ಅಭಿಮಾನಿಗಳಿಗೆ ಗೋಲ್ಡನ್‌ ಹಬ್ಬ" " ಕೃಷ್ಣ ಜನ್ಮಾಷ್ಟಮಿಗೆ ಒಂದು ಒಳ್ಳೆ ಹಾಡು.. ನಾನು ನನ್ನ ಫ್ಯಾಮಿಲಿ ಸಿನಿಮಾ ನೋಡೋದು ಫಿಕ್ಸ್ ನಾಳೆ" "ತುಂಬಾ ದಿನಗಳ ಬಳಿಕ ಗಣೇಶ್‌ ಸಿನಿಮಾ ನೋಡಲು ಟಾಕೀಸ್‌ಗೆ ಹೋಗುತ್ತಿದ್ದೇನೆ. ಯಾಕೆಂದರೆ, ಈ ಹಾಡುಗಳೇ ಅದ್ಭುತ" "ಇನ್ನೊಂದು ಪ್ರೇಮಲೋಕ ಸಿನೆಮಾ ಆಗ್ತಾ ಇದೆ ಅನ್ಸುತ್ತೆ....ಒಂದೇ ಮೂವಿನಲ್ಲಿ ಸಾಕಷ್ಟು ಹಾಡುಗಳು" "ಪಕ್ಕಾ ಮ್ಯೂಸಿಕಲ್‌ ಹಿಟ್‌ ಮೂವಿ" ಎಂದೆಲ್ಲ ಯೂಟ್ಯೂಬ್‌ನಲ್ಲಿ ಶ್ರೀ ಕೃಷ್ಣಂ ಜಗತ್‌ ಕಾರಣಂ ಹಾಡಿಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.