Ganesh Birthday: ಒಂದೇ ಸಿನಿಮಾದಲ್ಲಿ ರಮೇಶ್‌ ಅರವಿಂದ್‌- ಗೋಲ್ಡನ್‌ ಸ್ಟಾರ್‌ ಗಣೇಶ್‌; ಮತ್ತೆ ಜತೆಯಾಗ್ತಿದ್ದಾರೆ ಸುಂದರಾಂಗ ಜಾಣರು
ಕನ್ನಡ ಸುದ್ದಿ  /  ಮನರಂಜನೆ  /  Ganesh Birthday: ಒಂದೇ ಸಿನಿಮಾದಲ್ಲಿ ರಮೇಶ್‌ ಅರವಿಂದ್‌- ಗೋಲ್ಡನ್‌ ಸ್ಟಾರ್‌ ಗಣೇಶ್‌; ಮತ್ತೆ ಜತೆಯಾಗ್ತಿದ್ದಾರೆ ಸುಂದರಾಂಗ ಜಾಣರು

Ganesh Birthday: ಒಂದೇ ಸಿನಿಮಾದಲ್ಲಿ ರಮೇಶ್‌ ಅರವಿಂದ್‌- ಗೋಲ್ಡನ್‌ ಸ್ಟಾರ್‌ ಗಣೇಶ್‌; ಮತ್ತೆ ಜತೆಯಾಗ್ತಿದ್ದಾರೆ ಸುಂದರಾಂಗ ಜಾಣರು

ಇಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ "ರಮೇಶ್‌ ಅರವಿಂದ್-‌ ಗಣೇಶ್‌" ಜತೆಯಾಗಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಖುಷಿ ತಂದಿದೆ.

Ganesh Birthday: ಒಂದೇ ಸಿನಿಮಾದಲ್ಲಿ ರಮೇಶ್‌ ಅರವಿಂದ್‌- ಗೋಲ್ಡನ್‌ ಸ್ಟಾರ್‌ ಗಣೇಶ್‌
Ganesh Birthday: ಒಂದೇ ಸಿನಿಮಾದಲ್ಲಿ ರಮೇಶ್‌ ಅರವಿಂದ್‌- ಗೋಲ್ಡನ್‌ ಸ್ಟಾರ್‌ ಗಣೇಶ್‌

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬವಾದ ಇಂದು "ರಮೇಶ್‌ ಅರವಿಂದ್-‌ ಗಣೇಶ್‌" ಜತೆಯಾಗಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಬಂದಿದೆ. ನಟ ರಮೇಶ್‌ ಅರವಿಂದ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಬಾಲ್ಯದ ಫೋಟೋದ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರದ ಫಸ್ಟ್‌ ಲುಕ್‌ ಆಗಸ್ಟ್‌ 16ರಂದು ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದೇ ಮೊದಲ ಬಾರಿಗೆ ಗಣೇಶ್‌ ಮತ್ತು ರಮೇಶ್‌ ಅರವಿಂದ್‌ ಒಂದೇ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಹಿಂದೆ ಗಣೇಶ್‌ ನಟನೆಯ ಸುಂದರಾಂಗ ಜಾಣ ಸಿನಿಮಾದಲ್ಲಿ ರಮೇಶ್‌ ಅರವಿಂದ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌ನ ಸುಂದರ ನಟರಾದ ಇವರಿಬ್ಬರು ಇದೀಗ ಹೊಸ ಸಿನಿಮಾದ ಮೂಲಕ ಚಂದನವನಕ್ಕೆ ಹೊಸ ಕಳೆ ತರುವ ಸೂಚನೆ ದೊರಕಿದೆ. ಈ ಮೂಲಕ ಗಣೇಶ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹೊಸ ಸಿನಿಮಾದ ಅಪ್‌ಡೇಟ್‌ ದೊರಕಿದೆ.

ಗಣೇಶ್-ರಮೇಶ್‌ ಸಿನಿಮಾಕ್ಕೆ ವಿಖ್ಯಾತ್‌ ನಿರ್ದೇಶನ

ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ರಮೇಶ್‌ ಅರವಿಂದ್‌ ಅವರ ಹುಟ್ಟುಹಬ್ಬದ ಸಮಯದಲ್ಲಿ ನಿರ್ಮಾಪಕ ವಿಖ್ಯಾತ್‌ ಅವರು ಮಲ್ಟಿ ಸ್ಟಾರ್‌ ಸಿನಿಮಾದ ಸೂಚನೆ ನೀಡಿದ್ದರು. ರಮೇಶ್‌ ಅರವಿಂದ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಇಬ್ಬರೂ ನಾಯಕರಾಗಿರುವ ದೇಶ ಕಾಯುವ ವೀರಯೋಧರ ಸಿನಿಮಾದ ಕುರಿತು ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ ಗಣೇಶ್‌ ಹುಟ್ಟುಹಬ್ಬದಂದು ಈ ಸಿನಿಮಾದ ಅಪ್‌ಡೇಟ್‌ ನೀಡಿದ್ದಾರೆ.

ಗಣೇಶ್‌ಗೆ ಹುಟ್ಟುಹಬ್ಬದ ಶುಭಾಶಯಗಳು

ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಉದ್ಯಮದ ಪ್ರಮುಖರು ಗಣೇಶ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಪ್ರೀತಮ್‌ ಗುಬ್ಬಿ, ಪಿಸಿ ಶೇಖರ್‌, ಕೆಆರ್‌ಜಿ ಕನೆಕ್ಟ್ಸ್‌, ನವರಸ ನಾಯಕ ಜಗ್ಗೇಶ್‌ ಸೇರಿದಂತೆ ಪ್ರಮುಖರು ಶುಭಾಶಯ ಹೇಳಿದ್ದಾರೆ. "ಗಣೇಶ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ನೂಕಾಲ ಸುಖವಾಗಿ ಬಾಳಿ" ಎಂದು ಜಗ್ಗೇಶ್‌ ವಿಶ್‌ ಮಾಡಿದ್ದಾರೆ. ಚಂದನವನದ ಚಿನ್ನದ "ಗಣಿ"ಗೆ ಹುಟ್ಟುಹಬ್ಬದ ಶುಭಾಶಯಗಳು. ಬ್ಲಾಕ್‌ಬಸ್ಟರ್‌ ವರ್ಷಗಳು ಮುಂದುವರೆಯಲಿ ಎಂದು ಕೆಆರ್‌ಜಿ ಕನೆಕ್ಟ್ಸ್‌ ಟ್ವೀಟ್‌ ಮಾಡಿದೆ.

ಗಣೇಶ್‌ ಮುಂಬರುವ ಸಿನಿಮಾ

ಗಣೇಶ್‌ ನಟನೆಯ ಬಹು ನಿರೀಕ್ಷಿತ ಕೃಷ್ಣಂ ಪ್ರಣಯ ಸಖಿ ಸಿನಿಮಾವು ಆಗಸ್ಟ್‌ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಗಣೇಶ್‌ ನಾಯಕ ನಟನಾಗಿ ನಟಿಸಿರುವ‌ ಈ ಚಿತ್ರದ ಪ್ರಮುಖಪಾತ್ರದಲ್ಲಿ ಶಶಿಕುಮಾರ್ ಅಭಿನಯಿಸಿದ್ದಾರೆ. ಬಹು ನಿರೀಕ್ಷಿತ "ಕೃಷ್ಣಂ ಪ್ರಣಯ ಸಖಿ" ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಗಣೇಶ್‌ ನಟನೆಯ ಸಿನಿಮಾಗಳು

ಟಪೋರಿ, ಹುಡುಗಿಗಾಗಿ, ಗೇಮ್‌ ಫಾರ್‌ ಲವ್‌, ಡ್ರೀಮ್ಸ್‌, ಅಬ್ಬಬ್ಬ ಎಂತಹ ಹುಡುಗ, ಬಾ ಬಾರೋ ರಸಿಕ, ಅಹಂ ಪ್ರೇಮಾಸ್ಮಿ, ಮ್ಯಾಜಿಕ್‌ ಅಜ್ಜಿ, ಮಸಾಲ, ತುಂಟ, ಅಮೃತಧಾರೆ, ಓ ಪ್ರಿಯತಮ, ಚೆಲ್ಲಾಟ, ಹುಡುಕಾಟ, ಚೆಲುವಿನ ಚಿತ್ತಾರ. ಕೃಷ್ಣ, ಗಾಳಿಪಟ, ಅರಮನೆ, ಬೊಂಬಾಟ್‌, ಸಂಗಮ, ಸರ್ಕಸ್‌, ಮಳೆಯಲ್ಲಿ ಜತೆಯಲಲ್ಲಿ, ಉಲ್ಲಾಸ ಉತ್ಸಾಹ, ಏನೋ ಒಂಥರ, ಕೂಲ್‌- ಸಕತ್‌ ಹಾಟ್‌ ಮಗ, ಮದುವೆ ಮನೆ, ಶೈಲೊ, ಮುಂಜಾನೆ, ರೋಮಿಯೊ, ರ್ಯಾಂಬೊ, ಮಿಸ್ಟರ್‌ 420, ಆಟೋ ರಾಜಾ, ಸಕ್ಕರೆ, ಶ್ರಾವಣಿ ಸುಬ್ರಹ್ಮಣ್ಯ, ದಿಲ್‌ ರಂಗೀಲಾ, ಖುಷಿ ಖುಷಿಯಾಗಿ, ಬುಗರಿ, ಸ್ಟೈಲ್‌ ಕಿಂಗ್‌, ಝೂಮ್‌, ಮುಂಗಾರು ಮಳೆ 2, ಸುಂದರಾಂಗ ಜಾಣ, ಪಟಾಕಿ, ಮುಗುಳು ನಗೆ, ಚಮಕ್‌, ರಾಂಬೋ 2, ಆರೇಂಜ್‌, 99, ಗಿಮಿಕ್‌, ಗೀತಾ, ಗಾಳಿಪಟ 2, ಟ್ರಿಪಲ್‌ ರೈಡಿಂಗ್‌, ಬಾನದಾರಿಯಲ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ ಸಿನಿಮಾವು ಇವರಿಗೆ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟ ಬ್ಲಾಕ್‌ಬಸ್ಟರ್‌ ಕನ್ನಡ ಚಿತ್ರವಾಗಿದೆ.

Whats_app_banner