ಟಿಕೆಟ್‌ ಮಾರಾಟದಲ್ಲೂ ಕೃಷ್ಣಂ ಪ್ರಣಯ ಸಖಿ ಚಿತ್ರದ ಹೊಸ ದಾಖಲೆ; ಮೂರು ದಿನಗಳಲ್ಲಿ ಗಣೇಶ್‌ ಸಿನಿಮಾ ಗಳಿಸಿದ್ದೆಷ್ಟು?-sandalwood news golden star ganesh starrer krishnam pranaya sakhi box office collection day 3 report mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಟಿಕೆಟ್‌ ಮಾರಾಟದಲ್ಲೂ ಕೃಷ್ಣಂ ಪ್ರಣಯ ಸಖಿ ಚಿತ್ರದ ಹೊಸ ದಾಖಲೆ; ಮೂರು ದಿನಗಳಲ್ಲಿ ಗಣೇಶ್‌ ಸಿನಿಮಾ ಗಳಿಸಿದ್ದೆಷ್ಟು?

ಟಿಕೆಟ್‌ ಮಾರಾಟದಲ್ಲೂ ಕೃಷ್ಣಂ ಪ್ರಣಯ ಸಖಿ ಚಿತ್ರದ ಹೊಸ ದಾಖಲೆ; ಮೂರು ದಿನಗಳಲ್ಲಿ ಗಣೇಶ್‌ ಸಿನಿಮಾ ಗಳಿಸಿದ್ದೆಷ್ಟು?

ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನೂ ಕರೆತರುತ್ತಿದೆ. ಈ ಮೂಲಕ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾ.

ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನೂ ಕರೆತರುತ್ತಿದೆ. ಈ ಮೂಲಕ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ.
ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನೂ ಕರೆತರುತ್ತಿದೆ. ಈ ಮೂಲಕ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ.

Krishnam pranaya sakhi box office collection: ಗೋಲ್ಡನ್‌ ಸ್ಟಾರ್‌ ಗಣೇಶ್‌ ಗೆಲುವಿನ ನಗೆ ಬೀರಿದ್ದಾರೆ. ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನೂ ಕರೆತರುತ್ತಿದೆ. ಈ ಮೂಲಕ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾ. ಹಾಗಾದರೆ, ಗಣೇಶ್‌ ಮತ್ತು ಶ್ರೀನಿವಾಸ್‌ ರಾಜು ಜೋಡಿಯ ಈ ಸಿನಿಮಾ ಮಾಡಿದ ಕಲೆಕ್ಷನ್‌ ಎಷ್ಟು? ಮುಂದೆ ಓದಿ.

ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆ ದಿನವನ್ನೇ ಎನ್‌ಕ್ಯಾಶ್‌ ಮಾಡಿಕೊಂಡ ಕೃಷ್ಣಂ ಪ್ರಣಯ ಸಖಿ, ಲಾಂಗ್‌ ವೀಕೆಂಡ್‌ನಲ್ಲಿ ಒಳ್ಳೆಯ ಕಮಾಯಿ ಮಾಡಬಹುದು ಎಂದು ನಿರ್ಧರಿಸಿತ್ತು. ಅದರಂತೆ, ಸಿನಿಮಾ ಗುರುವಾರವೇ ರಾಜ್ಯಾದ್ಯಂತ ಬಿಡುಗಡೆಯಾಗಿ, ಮೆಚ್ಚುಗೆ ಪಡೆದುಕೊಂಡಿತು. ಅದಾದ ಬಳಿಕ ಮುಂದಿನ ಇಂದಿನ ಭಾನುವಾರವೂ ಸೇರಿ ಮೂರು ದಿನಗಳೂ ಹೌಸ್‌ಫುಲ್‌ ಪ್ರದರ್ಶನವನ್ನೇ ಮುಂದುವರಿಸಿದೆ ಈ ಸಿನಿಮಾ.

ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡುವುದರ ಜತೆಗೆ ಟಿಕೆಟ್‌ ಮಾರಾಟದಲ್ಲಿಯೂ ಕೃಷ್ಣಂ ಪ್ರಣಯ ಸಖಿ ಇದೀಗ ಹೊಸ ದಾಖಲೆ ಬರೆದಿದೆ. ಬರೀ ಕರ್ನಾಟಕ, ಕನ್ನಡ ಸಿನಿಮಾ ವಿಚಾರದಲ್ಲಷ್ಟೇ ಅಲ್ಲ, ಒಟ್ಟಾರೆ ಸೌತ್‌ ಇಂಡಿಯನ್‌ ಸಿನಿಮಾಗಳ ಟಿಕೆಟ್‌ ಬುಕಿಂಗ್‌ ವಿಚಾರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಚಿತ್ರ ಹೊಸ ರೆಕಾರ್ಡ್‌ ಬರೆದಿದೆ. ಅದೇನೆಂಬುದನ್ನು ಪುಸ್ತಕೋದ್ಯಮಿ, ಪ್ರಕಾಶಕ, ಸಾಮಾಜಿಕ ಕಾರ್ಯಕರ್ತ ವೀರಕಪುತ್ರ ಶ್ರೀನಿವಾಸ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಟಿಕೆಟ್‌ ಮಾರಾಟದಲ್ಲೂ ನಿಲ್ಲದ ಓಟ

"ಬುಕ್ ಮೈ ಶೋ ಪ್ರಕಾರ ದಕ್ಷಿಣ ಭಾರತದಲ್ಲಿಯೇ ನಿನ್ನೆ (ಶನಿವಾರ) ಬಿಡುಗಡೆಯಾದ ಎಲ್ಲಾ ಸಿನಿಮಾಗಳಿಗಿಂತ (ತಂಗಲಾನ್ ಹೊರತುಪಡಿಸಿ) ಅತಿ ಹೆಚ್ಚು ಟಿಕೆಟ್ ಮಾರಾಟವಾಗಿದ್ದು ನಮ್ಮ ಕನ್ನಡದ ಸಿನಿಮಾ ಕೃಷ್ಣಂ ಪ್ರಣಯ ಸಖಿ ಸಿನಿಮಾಗೆ. ನಲ್ವತ್ತೊಂಬತ್ತು ಸಾವಿರ ಟಿಕೇಟುಗಳು ಮಾರಾಟವಾಗಿವೆ! ದುನಿಯಾ ವಿಜಯ್ ಅವರ ಭೀಮ ಸಿನಿಮಾದ್ದು ಎರಡು ವಾರದ ನಂತರವೂ ನಿಲ್ಲದ ಓಟವಾಗಿರುವಾಗಲೇ ಮತ್ತೊಂದು ಕನ್ನಡ ಸಿನಿಮಾವೂ ಗೆಲುವು ಕಾಣುತ್ತಿರುವುದು ಖುಷಿ! ಈ ಭಾನುವಾರದ ನಮ್ಮ ಆಯ್ಕೆ ಕನ್ನಡ ಸಿನಿಮಾವೇ ಆಗಿರಲಿ" ಎಂದು ಬುಕ್‌ಮೈ ಶೋನ ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಗಳಿಸಿದ್ದೆಷ್ಟು?

ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕೋಟಿ ಲೆಕ್ಕದಲ್ಲಿ ಕಲೆಕ್ಷನ್‌ ಮಾಡಿತ್ತು. ಅದಾದ ಬಳಿಕ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ, ಇದೀಗ ಒಟ್ಟಾರೆ ಮೂರು ದಿನಗಳ ಕೆಲೆಕ್ಷನ್‌ ನೋಡುವುದಾದರೆ, 5 ಕೋಟಿಯ ಸನಿಹಕೆ ಗಣೇಶ್‌ ಸಿನಿಮಾ ಬಂದು ನಿಂತಿದೆ. ಈಗಾಗಲೇ ಕನ್ನಡದಲ್ಲಿ ಕಳೆದ ವಾರ ಅಂದರೆ ಆಗಸ್ಟ್‌ 9ರಂದು ಬಿಡುಗಡೆ ಆಗಿದ್ದ ದುನಿಯಾ ವಿಜಯ್‌ ನಟನೆ ಮತ್ತು ನಿರ್ದೇಶನದ ಭೀಮ ಸಿನಿಮಾ ಸಹ ಪ್ರೇಕ್ಷಕನ ದಿಲ್‌ ಕದ್ದಿದೆ. ಈ ವರೆಗೂ ಆ ಸಿನಿಮಾ 18ಪ್ಲಸ್‌ ಕೋಟಿ ಗಳಿಕೆ ಕಂಡಿದೆ. ಇದೀಗ ಅದೇ ಹಾದಿಯಲ್ಲಿಯೇ ಗಣೇಶ್‌ ಸಿನಿಮಾ ಸಹ ಮುಂದಡಿ ಇರಿಸಿದೆ.