Kerebete Trailer: ಟ್ರೇಲರ್‌ನಲ್ಲೇ ರೋಚಕ ಓಟಕ್ಕಿಳಿಸಿದ ಕೆರೆಬೇಟೆ ಸಿನಿಮಾ; ಮಲೆನಾಡ ಕಥೆಗೆ ಜೀವ ತುಂಬಿದ ಗೌರಿಶಂಕರ್‌-sandalwood news gowri shankar and bindhu starrer kerebete movie trailer released kannada film industry mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kerebete Trailer: ಟ್ರೇಲರ್‌ನಲ್ಲೇ ರೋಚಕ ಓಟಕ್ಕಿಳಿಸಿದ ಕೆರೆಬೇಟೆ ಸಿನಿಮಾ; ಮಲೆನಾಡ ಕಥೆಗೆ ಜೀವ ತುಂಬಿದ ಗೌರಿಶಂಕರ್‌

Kerebete Trailer: ಟ್ರೇಲರ್‌ನಲ್ಲೇ ರೋಚಕ ಓಟಕ್ಕಿಳಿಸಿದ ಕೆರೆಬೇಟೆ ಸಿನಿಮಾ; ಮಲೆನಾಡ ಕಥೆಗೆ ಜೀವ ತುಂಬಿದ ಗೌರಿಶಂಕರ್‌

ಕೆರೆಬೇಟೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಗೌರಿಶಂಕರ್‌ ಬಿಂದು ಮುಖ್ಯಭೂಮಿಯಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಮಲೆನಾಡಿನ ಸಾಂಪ್ರದಾಯಿಕ ಕೆರೆಬೇಟೆಯೇ ಹೈಲೈಟ್‌. ಮಾರ್ಚ್‌ 15ರಂದು ಈ ಸಿನಿಮಾ ರಿಲೀಸ್‌ ಆಗಲಿದೆ.

Kerebete Trailer: ಟ್ರೇಲರ್‌ನಲ್ಲೇ ರೋಚಕ ಓಟಕ್ಕಿಳಿಸಿದ ಕೆರೆಬೇಟೆ; ಮಲೆನಾಡ ಕಥೆಗೆ ಜೀವ ತುಂಬಿದ ಗೌರಿಶಂಕರ್‌
Kerebete Trailer: ಟ್ರೇಲರ್‌ನಲ್ಲೇ ರೋಚಕ ಓಟಕ್ಕಿಳಿಸಿದ ಕೆರೆಬೇಟೆ; ಮಲೆನಾಡ ಕಥೆಗೆ ಜೀವ ತುಂಬಿದ ಗೌರಿಶಂಕರ್‌

Kerebete Trailer: 'ಕೆರೆಬೇಟೆ' ಫಸ್ಟ್ ಲುಕ್ ಮತ್ತು ಟೀಸರ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. ಇದೀಗ ಸಿನಿಮಾತಂಡ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಭಾರಿ ನಿರೀಕ್ಷೆಯ ಟ್ರೈಲರ್ ರಿಲೀಸ್ ಆಗಿದೆ. 'ಕೆರೆಬೇಟೆ' ಮಲೆನಾಡು ಭಾಗದ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡಿನ ಈ ವಿಭಿನ್ನ ಸಂಸ್ಕೃತಿಯನ್ನು ಮೊದಲ ಬಾರಿಗೆ ತೆರೆಮೇಲೆ ತರುತ್ತಿದ್ದಾರೆ ನಿರ್ದೇಶಕ ರಾಜ್‌ಗುರು. ನಾಯಕನಾಗಿ ಗೌರಿಶಂಕರ್ ಎಸ್‌ಆರ್‌ಜಿ ಕಾಣಿಸಿಕೊಂಡಿದ್ದಾರೆ. ವಿಭಿನ್ನವಾದ ಒಂದೊಳ್ಳೆ ಹಳ್ಳಿ ಸೊಗಡಿನ ಸಿನಿಮಾ ಮೂಲಕ ಗೌರಿಶಂಕರ್ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಸದ್ಯ ರಿಲೀಸ್ ಆಗಿರುವ ಟ್ರೇಲರ್ ಗಮನ ಸೆಳೆಯುತ್ತಿದೆ. ರಿಲೀಸ್‌ಗೂ ಮೊದಲು ಬೆಂಗಳೂರಿನ ಮನೆ ಮನೆಗೆ ಹೋಗಿ ತಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಹಾರೈಸಿ ಎಂದು ದೀಪ ಹಿಡಿದು ಚಿತ್ರತಂಡ ಕೇಳಿಕೊಂಡಿತ್ತು. ಬಳಿಕ ನಾಯಕ ಗೌರಿ ಶಂಕರ್ ಅವರ ಪುತ್ರಿ ಪುಟ್ಟ ಕಂದ ಈಶ್ವರಿ ಮನ ಟ್ರೈಲರ್ ರಿಲೀಸ್ ಮಾಡಿದಳು. ಟ್ರೈಲರ್‌ನಲ್ಲಿ ಮಲೆನಾಡಿನ ಕೆರೆಬೇಟೆ ಜೊತೆಗೆ 'ಅಂಟಿಕೆ ಪೆಂಟಿಗೆ..' ಸಂಸ್ಕೃತಿ ಕೂಡ ಹೈಲೆಟ್ ಆಗಿದೆ.

ಮಲೆನಾಡ ಶೈಲಿಯ ಅಂಟಿಕೆ ಪಿಂಟಿಗೆಯಿಂದನೆ ಟ್ರೈಲರ್ ಪ್ರಾರಂಭವಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ. ಮಲೆನಾಡಿನ ಹಳ್ಳಿಯಲ್ಲೇ ನಡೆಯುವ ಸಿನಿಮಾ ಇದಾಗಿದೆ. ಕೆರೆಬೇಟೆ ಜೊತೆಗೆ ಹಳ್ಳಿ ಜನರ ಕಿತ್ತಾಟ, ಹೊಡೆದಾಟ ಸೇರಿದಂತೆ ಈ ಪುಟ್ಟ ಟ್ರೈಲರ್‌ನಲ್ಲೇ ಮಲೆನಾಡಿನ ಸಂಪೂರ್ಣ ಚಿತ್ರಣ ನೋಡಬಹುದು. ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಮತ್ತು ನಿರೀಕ್ಷೆ ದುಪ್ಪಟ್ಟು ಮಾಡಿದೆ.

ನಾಯಕ ಗೌರಿ ಶಂಕರ್ ಅದ್ಭುತವಾಗಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ತನ್ನ ನಟನೆಯ ಝಲಕ್ ತೋರಿಸಿದ್ದಾರೆ. ನಾಯಕಿ ಬಿಂದು ಶಿವರಾಮ್ ಕೂಡ ತನ್ನ ಪಾತ್ರಕ್ಕೆ ಜೀವತುಂಬಿದ್ದಾರೆ. ಬಿಂದು ಅವರಿಗೆ ಇದು ಮೊದಲ ಸಿನಿಮಾ. ಹಾಗಾಗಿ ತನ್ನ ಚೊಚ್ಚಲ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರೆ. ಇನ್ನೂ ಮಲೆನಾಡಿನ ಸುಂದರ ಸಂಸ್ಕೃತಿಯನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್‌ಗುರು.

ನಿರ್ದೇಶಕ ರಾಜ್‌ಗುರು ಅವರಿಗೂ ಇದು ಚೊಚ್ಚಲ ಸಿನಿಮಾ. ಹಾಗಂತ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ಜೆಸ್ಸಿ, ರೆಮೋ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇದೀಗ ಕೆರೆಬೇಟೆ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ ಮಲೆನಾಡಿನವರೇ ಆಗಿರುವುದರಿಂದ ಕೆರೆಬೇಟೆ ನೋಡುತ್ತಾ, ಆಡುತ್ತಾ ಬೆಳೆದವರು. ಹಾಗಾಗಿ ಮಲೆನಾಡಿನ ಜೀವನ ಶೈಲಿಯನ್ನು ಅಷ್ಟೆ ನೈಜ್ಯವಾಗಿ ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ.

ಸಿನಿಮಾದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಸೇರಿ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾಗೆ ನಾಯಕ ಗೌರಿಶಂಕರ್ ಅವರ ಜನಮನ ಸಿನಿಮಾಸ್ ಬ್ಯಾನರ್‌ನಲ್ಲಿ ಅವರ ಸಹೋದರ ಜೈಶಂಕರ್ ಪಟೇಲ್ ಬಂಡವಾಳ ಹೂಡಿದ್ದಾರೆ. ಸದ್ಯ ಟ್ರೇಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಕೆರೆಬೇಟೆ ಸಿನಿಮಾ ಮುಂದಿನ ತಿಂಗಳು ಮಾರ್ಚ್ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.