Movie Quiz: ಈ ಮಗು ಫೋಟೋ ನೋಡಿ ಜನಪ್ರಿಯ ಕನ್ನಡ ಚಿತ್ರನಟ ಯಾರೆಂದು ಕಂಡುಹಿಡಿಯಿರಿ, ಸುಳಿವು- ಹೆಸರು ಕೇಳಿದ್ರೆ ಕೇಜ್ರಿವಾಲ್‌ ನೆನಪಾಗ್ತಾರೆ
ಕನ್ನಡ ಸುದ್ದಿ  /  ಮನರಂಜನೆ  /  Movie Quiz: ಈ ಮಗು ಫೋಟೋ ನೋಡಿ ಜನಪ್ರಿಯ ಕನ್ನಡ ಚಿತ್ರನಟ ಯಾರೆಂದು ಕಂಡುಹಿಡಿಯಿರಿ, ಸುಳಿವು- ಹೆಸರು ಕೇಳಿದ್ರೆ ಕೇಜ್ರಿವಾಲ್‌ ನೆನಪಾಗ್ತಾರೆ

Movie Quiz: ಈ ಮಗು ಫೋಟೋ ನೋಡಿ ಜನಪ್ರಿಯ ಕನ್ನಡ ಚಿತ್ರನಟ ಯಾರೆಂದು ಕಂಡುಹಿಡಿಯಿರಿ, ಸುಳಿವು- ಹೆಸರು ಕೇಳಿದ್ರೆ ಕೇಜ್ರಿವಾಲ್‌ ನೆನಪಾಗ್ತಾರೆ

Guess this Celebrity Name: ಈ ಚಿತ್ರದಲ್ಲಿರುವ ಮಗುವಿನ ಫೋಟೋ ನೋಡಿ ಇದು ಯಾರೆಂದು ಕಂಡುಹಿಡಿಯಲು ಪ್ರಯತ್ನಿಸಿ. ಇವರು ಕನ್ನಡದ ಜನಪ್ರಿಯ ನಟ. ಹಲವು ದಶಕದಿಂದ ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡುತ್ತ ಬಂದಿದ್ದಾರೆ.

ಈ  ಮಗು ಫೋಟೋ ನೋಡಿ ಜನಪ್ರಿಯ ಕನ್ನಡ ಚಿತ್ರನಟ ಯಾರೆಂದು ಕಂಡುಹಿಡಿಯಿರಿ
ಈ ಮಗು ಫೋಟೋ ನೋಡಿ ಜನಪ್ರಿಯ ಕನ್ನಡ ಚಿತ್ರನಟ ಯಾರೆಂದು ಕಂಡುಹಿಡಿಯಿರಿ

ಕನ್ನಡ ಚಿತ್ರರಂಗದ ಪ್ರಮುಖ ನಟರ ಬಾಲ್ಯದ ಫೋಟೋ ನೋಡುವಾಗ ನಮ್ಮ ನಿಮ್ಮ ಮನೆಯಲ್ಲಿರುವ ಪುಟ್ಟ ಮಕ್ಕಳ ನೆನಪಾಗಬಹುದು. ಈ ಮುದ್ದಾದ ಮಗುವನ್ನು ಎಲ್ಲೋ ನೋಡಿದ್ದೀವಿ ಎನಿಸಬಹುದು. ಕೆಲವೊಂದು ಫೋಟೋಗಳನ್ನು ನೋಡುವಾಗ ಈಗಲೂ ಆ ನಟಿ ಅಥವಾ ನಟಿಯರ ಈಗಿನ ಚಹರೆಗೂ ಕಾಣಿಸಬಹುದು. ಈಗಾಗಲೇ ನಟ ದರ್ಶನ್‌ ಮತ್ತು ವಿಷ್ಣುವರ್ಧನ್‌ ಬಾಲ್ಯದ ಫೋಟೋ ನೋಡಿ ನೀವು ಸರಿಯಾಗಿ ಗುರುತಿಸಿದ್ದೀರಿ. ಇಂದಿನ ಲೇಖನದಲ್ಲಿ ಕನ್ನಡದಲ್ಲಿ ಇನ್ನೊಬ್ಬರು ಖ್ಯಾತ ನಟರ ಬಾಲ್ಯದ ಫೋಟೋವನ್ನು ನೋಡಿ ಇವರು ಯಾರೆಂದು ಗುರುತಿಸುವ ಪ್ರಯತ್ನ ಮಾಡಿ ನೋಡೋಣ.

ಈ ಚಿತ್ರದಲ್ಲಿರುವ ಪುಟ್ಟ ಮಗುವನ್ನೊಮ್ಮೆ ನೋಡಿ. ಈ ಪುಟಾಣಿ ಈಗ ಪುಟಾಣಿಯಾಗಿ ಉಳಿದಿಲ್ಲ. ಕನ್ನಡದ ಜನಪ್ರಿಯ ಚಿತ್ರನಟರಾಗಿ ಈಗಲೂ ನಮಗೆ ವಿನೂತನ ಚಿತ್ರಗಳನ್ನು ನೀಡುತ್ತ ಇದ್ದಾರೆ. ಇವರಿಗೆ ಇನ್ನೂ ವಯಸ್ಸೇ ಆಗೋದಿಲ್ವ ಅನ್ನೋ ರೀತಿಯಲ್ಲಿ ಲವಲವಿಕೆಯಿಂದ, ಸ್ಪೂರ್ತಿದಾಯಕವಾಗಿ, ವಿನೂತನ ಪಾತ್ರಗಳಲ್ಲಿ ಕಾಣಿಸಿಕೊಂಡು ಬೆರಗು ಹುಟ್ಟಿಸುತ್ತಾರೆ. ಈ ಚಿತ್ರದಲ್ಲಿರುವ ಮಗು ಯಾರೆಂದು ತಿಳಿಸಿ. ಬಹುತೇಕರಿಗೆ ಈ ಮುಖ ನೋಡಿದಾಗ ಕೆಲವು ಕನ್ನಡ ನಟರ ಮುಖ ನೆನಪಿಗೆ ಬರಬಹುದು. ಈಗಲೂ ಮುದ್ದಾದ ಮುಖ ಹೊಂದಿರುವ ಈ ನಟ ಯಾರೆಂದು ತಿಳಿಯಲು ಮುಂದೆ ಓದಿ.ʼ

ಈ ಚಿತ್ರದಲ್ಲಿರುವ ಮಗು ಯಾರೆಂದು ತಿಳಿಯಲು ಕೆಲವೊಂದು ಸುಳಿವುಗಳನ್ನು ನೋಡೋಣ. ಇವರ ಹೆಸರು ಕೇಳಿದರೆ ದೆಹಲಿಯ ಕೇಜ್ರಿವಾಲ್‌ ನೆನಪಾಗ್ತಾರೆ. ಹಾಗಂತ ಇವರು ರಾಜಕಾರಣಿಯಲ್ಲ. ಸಿನಿಮಾವೇ ಇವರಿಗೆ ಪಂಚಪ್ರಾಣ. ಇವರ ಹೆಸರಿನ ಕುರಿತು ಇನ್ನೊಂದು ಸುಳಿವು- ಇವರು ಭಗವಂತ ರಾಮ ಹೆಸರನ್ನು ಹೊಂದಿದ್ದಾರೆ. ಈ ರೀತಿಯ ಸುಳಿವುಗಳ ಮೂಲಕ ಈಗಾಗಲೇ ಈ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ನಿಮಗೆ ತಿಳಿದುಬಂದಿರಬಹುದು. ಈ ಚಿತ್ರದಲ್ಲಿರುವ ಕನ್ನಡದ ಜನಪ್ರಿಯ ನಟ ರಮೇಶ್‌ ಅರವಿಂದ್‌. ನಾವು ಹೇಳೋ ಮೊದಲೇ ಇವರೇ ರಮೇಶ್‌ ಅರವಿಂದ್‌ ಎಂದು ತಿಳಿದುಕೊಂಡವರಿಗೆ ಅಭಿನಂದನೆಗಳು.

ಕೇಜ್ರಿವಾಲ್‌ ಎಂಬ ಸುಳಿವು ನೀಡಲು ಕಾರಣ ಕೇಜ್ರಿವಾಲ್‌ ಪೂರ್ತಿ ಹೆಸರು ಅರವಿಂದ್‌ ಕೇಜ್ರಿವಾಲ್‌. ರಮೇಶ್‌ ಹೆಸರಲ್ಲೂ ಅರಿವಿಂದ್‌ ಇದ್ದಾರೆ. ಅಂದರೆ, ರಮೇಶ್‌ ಅರವಿಂದ್‌ ಎಂದಾಗ ಕೆಲವರಿಗಾದರೂ ಅರವಿಂದ್‌ ಕೇಜ್ರಿವಾಲ್‌ ನೆನಪಾಗಬಹುದು. ರಮೇಶ್‌ ಹೆಸರಿಗೆ ಶ್ರೀರಾಮಚಂದ್ರ ಎಂಬ ಅರ್ಥವಿದೆಯಂತೆ.

ರಮೇಶ್‌ ಅರವಿಂದ್‌ ವ್ಯಕ್ತಿಚಿತ್ರ

ರಮೇಶ್‌ ಅರವಿಂದ್‌ ಕನ್ನಡದ ಪ್ರತಿಭಾನ್ವಿತ ನಟ. ಇವರು ಸೆಪ್ಟೆಂಬರ್‌ 10, 1964ರಲ್ಲಿ ಜನಿಸಿದರು. ಬೆಂಗಳೂರು ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ರಮೇಶ್‌ ಓದಿನಲ್ಲಿ ಸದಾ ಮುಂದು. ರಾಂಕ್‌ ವಿದ್ಯಾರ್ಥಿಯಾಗಿದ್ದ ಇವರಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅತೀವ ಆಸಕ್ತಿ ಇತ್ತು. ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇವರು ಪಡೆದ ಅಂಕವನ್ನು ನೋಡಿದರೆ ಇವರು ಪ್ರಸಿದ್ಧ ಎಂಜಿನಿಯರ್‌ ಆಗಿರುತ್ತಿದ್ದರು. ಕಲೆಯ ಕುರಿತು ಅಪಾರ ಪ್ರೀತಿ ಇದ್ದ ರಮೇಶ್‌ ಅರವಿಂದ್‌ ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡರು.

ಸುಂದರ ಸ್ವಪ್ನಗಳು ಚಿತ್ರದ ಮೂಲಕ ಇವರು ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ಇದು ಕೆ. ಬಾಲಚಂದ್ರ ನಿರ್ದೇಶನದ ಚಿತ್ರ. ಇದಕ್ಕೂ ಮೊದಲು ಬೆಂಗಳೂರು ದೂರದರ್ಶನದಲ್ಲಿ ಆಂಕರ್‌ ಆಗಿದ್ದರು. ಅಂದರೆ, ಪರಿಚಯ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ರಾಮ ಶಾಮ ಭಾಮ ಚಿತ್ರವನ್ನು ಇವರು ನಿರ್ದೇಶಿಸಿ ನಟಿಸಿದ್ದರು. ಹೂಮಳೆ ಮತ್ತು ಅಮೃತಧಾರೆ ಚಿತ್ರಕಥೆ ರಚನೆಗೂ ನೆರವು ನೀಡಿದ್ದರು. ಉತ್ತಮ ವಿಲನ್‌ ಎಂಬ ತಮಿಳು ಚಿತ್ರ ನಿರ್ದೇಶನ ಮಾಡಿದ್ದರು. ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ.

ರಮೇಶ್‌ ಅರವಿಂದ್‌ ನಟಿಸಿದ ಚಿತ್ರಗಳು

1980ರ ದಶಕದಲ್ಲಿ ಸುಂದರ ಸ್ವಪನ್ನಗಳು, ಮನಗೀತೆ, ಮನೆಯೇ ಮಂತ್ರಾಲಯ, ಸಂಗ್ರಾಮ, ಮನಥಿಲ್‌ ಉರುತಿ ವೇದಮ್‌, ಏಳು ಸುತ್ತಿನ ಕೋಟೆ, ಗಂಡ ಮನೆ ಮಕ್ಕಳು, ಇಂದ್ರಧನುಸ್ಸು, ರುದ್ರವೀನ, ಉನಲ್‌ ಮುಡಿಯಮ್‌ ತಂಬಿ, ಪೆನ್ಮನಿ ಅವಲ್‌ ಕಣ್ಮನಿ, ಓ ಭಾರ್ಯ ಕಥ, ಆಖರಿ ಕ್ಷಣಂ, ಮಧು ಮಾಸ, ಇದು ಸಾಧ್ಯ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. 1990-2000 ದಶಕದಲ್ಲಿ ಕೆಲದಿ ಕಣ್ಮಣಿ, ಪಂಚಮ ವೇದ, ವಸಂತಕಾಲ ಪರವೈ, ಮಾರಿಕೊಝುಂಡು, ಪರಮ ಶಿವುಡು, ವರಗಲ ಬೇಟೆ, ಇದ್ಯಾ ವಾಸಲ್‌, ಅಂಬುಲ ತಂಗಚಿಕ್ಕು, ಪುಂಡ ಪ್ರಚಂಡ, ಸಿಬಿಐ ವಿಜಯ್‌, ಸಿಬಿಐ ಶಿವ, ಗರಡು ಧ್ವಜ, ಶಾಂತಿ ಕ್ರಾಂತಿ, ಕಿಲಾಡಿ ಗಂಡು, ಬೆಳ್ಳಿ ಮೋಡಗಳು, ಉರಮೈ ಒಂಜಲದುರಿಥು, ವಜ್ರಯುದ್ಧ, ಮೌನ ಮೋಝಿ, ಪ್ರಣಯದ ಪಕ್ಷಿಗಳು, ಅಭಿಜಿತ್‌, ಪುಥಿಯ ಥೆಂಡ್ರಲ್‌, ಅವನ್‌ ಅನಂತಪದ್ಮನಾಭನ್‌, ಮಹರ್ಶನ್‌, ಮುಸುಕು, ಹಂತಕ, ಡ್ಯೂಯೆಟ್‌, ಚಿನ್ನ ಪುಲ್ಲ, ಪಥಾವಿ ಪ್ರಮಾಣಂ, ಸತಿ ಲೀಲಾವತಿ, ಪಟ್ಟು ವಥಿಯರ್‌, ಅರಗಿಣಿ, ಶ್ರೀಗಂಧ, ಬಾಆಳೊಂದು ಚದುರಂಗ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

2000ರಿಂದ ಇವರು ಶ್ರೀರಸ್ತು ಶುಭಮಸ್ತು, ದೀಪಾವಳಿ, ನನ್‌ ಹೆಂಡ್ತಿ ಚೆನ್ನಾಗಿದ್ದಾಳೆ, ಮಹಾಲಕ್ಷ್ಮಿ, ಕುರಿಗಲ್‌ಸಾರ್‌ ಕುರಿಗಲ್‌, ಹೂ ಅಂತಿಯಾ ಊಹೂ ಅಂತಿಯಾ, ಪ್ರೇಮಿ ನಂಬರ್‌ ಒನ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2010ರಿಂದ ಕ್ರೇಜಿ ಕುಟುಂಬ, ಕೃಷ್ಣ ನೀ ಲೇಟ್‌ ಆಗಿ ಬಾರೋ, ನಾನು ನನ್ನ ಕನಸು, ಪ್ರೀತಿಯಿಂದ ರಮೇಶ್‌, ಹೆಂಡ್ತಿರ ದರ್ಬಾರ್‌,ಚೆಲುವೆಯೇ ನಿನ್ನ ನೋಡಲು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಶಿವಾಜಿ ಸುರತ್ಕಲ್‌, 100, ಶಿವಾಜಿ ಸುರತ್ಕಲ್‌ 2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Whats_app_banner