Movie Quiz: ಈ ಚಿತ್ರದಲ್ಲಿರುವ ಮಗು ಕನ್ನಡದ ಜನಪ್ರಿಯ ನಟಿ; ಸುಳಿವು- ಪರವಶ ನಕ್ಷತ್ರ ಎಂಬೆರಡು ಸಮಾನಾರ್ಥಕ ಪದಗಳ ಕುರಿತು ಯೋಚಿಸಿ
ಕನ್ನಡ ಸುದ್ದಿ  /  ಮನರಂಜನೆ  /  Movie Quiz: ಈ ಚಿತ್ರದಲ್ಲಿರುವ ಮಗು ಕನ್ನಡದ ಜನಪ್ರಿಯ ನಟಿ; ಸುಳಿವು- ಪರವಶ ನಕ್ಷತ್ರ ಎಂಬೆರಡು ಸಮಾನಾರ್ಥಕ ಪದಗಳ ಕುರಿತು ಯೋಚಿಸಿ

Movie Quiz: ಈ ಚಿತ್ರದಲ್ಲಿರುವ ಮಗು ಕನ್ನಡದ ಜನಪ್ರಿಯ ನಟಿ; ಸುಳಿವು- ಪರವಶ ನಕ್ಷತ್ರ ಎಂಬೆರಡು ಸಮಾನಾರ್ಥಕ ಪದಗಳ ಕುರಿತು ಯೋಚಿಸಿ

Guess this Famous Kannada Actress Name: ಈ ಫೋಟೋದಲ್ಲಿರುವ ಮಗು ನೋಡಿ ಇವರು ಯಾರೆಂದು ಹೇಳಿದರೆ ನೀವು ಥಟ್‌ ಎಂದು ಉತ್ತರ ಹೇಳಬಹುದು. ಈ ಪುಟ್ಟ ಮಗು ಕನ್ನಡದ ಜನಪ್ರಿಯ ನಟಿ. ಕೆಲವು ವರ್ಷಗಳ ಹಿಂದೆಯಂತೂ ಇವರ ಚಿತ್ರಗಳದ್ದೇ ಕಾರ್ಯಾಭಾರ. ಇವರು ಯಾರೆಂದು ಹೇಳಿನೋಡೋಣ.

Movie Quiz: ಈ ಚಿತ್ರದಲ್ಲಿರುವ ಮಗು ಕನ್ನಡದ ಜನಪ್ರಿಯ ನಟಿ
Movie Quiz: ಈ ಚಿತ್ರದಲ್ಲಿರುವ ಮಗು ಕನ್ನಡದ ಜನಪ್ರಿಯ ನಟಿ

ಕನ್ನಡ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳನ್ನು ನೋಡುವುದೇ ಸೊಗಸು. ಕೆಲವು ಚಿತ್ರತಾರೆಯರ ಬಾಲ್ಯದ ಫೋಟೋಗಳನ್ನು ನೋಡಿದಾಗ ಮುಖದ ಚಹರೆ, ಲಕ್ಷಣಗಳನ್ನು ಗಮನಿಸಿದಾಗ ಥಟ್‌ ಎಂದು ಇದು ಇವರೇ ಎಂದು ಗುರುತಿಸಲು ಸಾಧ್ಯವಾಗುತ್ತದೆ. ಇಂದು ಇಂತಹದ್ದೇ ಒಂದು ಫೊಟೋ ನೀಡಲಾಗಿದೆ. ಈ ಚಿತ್ರದಲ್ಲಿರುವ ಮಗು ಕನ್ನಡದ ನಟಿ. ಇವರು ಯಾರೆಂದು ಊಹಿಸಿ ಹೇಳಿ. ಸಾಕಷ್ಟು ಜನರು ಈಗಾಗಲೇ ಈ ಮಗು ಯಾರೆಂದು ಗುರುತಿಸಿರಬಹುದು. ಈ ಫೋಟೋದಲ್ಲಿರುವವರು ಯಾರೆಂದು ತಿಳಿದವರಿಗೆ ಅಭಿನಂದನೆಗಳು. ಆದರೆ, ಎಲ್ಲರಿಗೂ ಈ ರೀತಿ ಊಹಿಸಲು ಸಾಧ್ಯವಿದೆ ಎಂದು ಹೇಳಲಾಗದು. ನಾವೀಗ ಸುಳಿವುಗಳನ್ನು ನೋಡೋಣ.

ಪರವಶ ನಕ್ಷತ್ರ ಎಂಬ ಎರಡು ಪದಗಳನ್ನು ಹೆಡ್‌ಲೈನ್‌ನಲ್ಲಿ ನೀಡಲಾಗುತ್ತು. ಈ ಎರಡು ಪದಗಳ ಸಮಾನಾರ್ಥಕ ಪದಗಳನ್ನು ನೋಡೋಣ. ಪರವಶ ಎಂಬ ಪದಕ್ಕೆ ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ, ಮೋಹಕ, ಮೋಹಿತ ಇತ್ಯಾದಿ ಹಲವು ಅರ್ಥಗಳಿವೆಯಂತೆ. ನಕ್ಷತ್ರ ಎಂಬ ಪದಕ್ಕೆ ಚುಕ್ಕಿ, ತಾರೆ ಎಂದೆಲ್ಲ ಹಲವು ಅರ್ಥಗಳಿವೆ. ಈ ಎರಡು ಪದಗಳನ್ನು ನೋಡಿದಾಗ ಈ ಚಿತ್ರದಲ್ಲಿರುವವರು ಯಾರೆಂದು ನಿಮಗೆ ತಿಳಿದುಬಂದಿರಬಹುದು.

ಬೇರೆ ಪದಗಳ ಸುಳಿವು ಬೇಕು ಎನ್ನುವವರು "ಅದ್ಭುತ, ಅದ್ಭುತವಾದ, ಅದ್ಭುತವಾದಂತ, ಅದ್ಭುತವಾದಂತಹ, ದಿವ್ಯವಾದ, ದಿವ್ಯವಾದಂತ, ದಿವ್ಯವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ" ಇತ್ಯಾದಿ ಪದಗಳನ್ನು ನೋಡಿ. ಇವಿಷ್ಟು ಪದಗಳಲ್ಲಿ ಈ ನಟಿಯ ಅರ್ಧ ಹೆಸರಿದೆ. ಈ ಚಿತ್ರದಲ್ಲಿರುವ ನಟಿ ಯಾರೆಂದು ತಿಳಿಯಲು ಈ ಪದಗಳಲ್ಲಿರುವ ದಿವ್ಯ ಎಂಬ ಪದವನ್ನು ಗಮನಿಸಿ. ದಿವ್ಯ ಎಂಬ ಕನ್ನಡ ನಟಿ ಯಾರಾದಾರೂ ಇದ್ದಾರ? ಯೋಚಿಸಿ, ಆಲೋಚಿಸಿ, ಸ್ಪಂದಿಸಿ.

ಈಗ ಬಹುತೇಕರಿಗೆ ಈ ಚಿತ್ರದಲ್ಲಿರುವ ಮುದ್ದಾದ ಮಗು ಕನ್ನಡದ ಯಾವ ನಟಿಯೆಂದು ತಿಳಿದುಬಂದಿರಬಹುದು. ಇವರು ಬೇರಾರೂ ಅಲ್ಲ ಕನ್ನಡದ ಜನಪ್ರಿಯ ನಟಿ ದಿವ್ಯ ಸ್ಪಂದನ. ಅಂದರೆ, ಮೋಹಕ ತಾರೆ ರಮ್ಯ. ಪರವಶ ನಕ್ಷತ್ರ ಎಂದರೆ ಮೋಹಕ ತಾರೆ. ಹಿಂಟ್‌ ನೋಡಿದಾಗ್ಲೆ ನಿಮಗೆ ಗೊತ್ತಾಯ್ತು ಅಲ್ವ. ವೆರಿಗುಡ್‌.

ದಿವ್ಯ ಸ್ಪಂದನ (ರಮ್ಯಾ) ಪರಿಚಯ

ಕರ್ನಾಟಕದ ಜನಪ್ರಿಯ ನಟಿ ಮತ್ತು ರಾಜಕಾರಣಿ ದಿವ್ಯ ಸ್ಪಂದನ ಅವರು ಮೋಹಕ ತಾರೆ ರಮ್ಯಾ ಎಂದೇ ಫೇಮಸ್‌. ಇವರು ಬೆಂಗಳೂರಿನಲ್ಲಿ ಜನಿಸಿದರು. ಪುನೀತ್‌ ರಾಜ್‌ಕುಮಾರ್‌ ನಟನೆಯ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಬಳಿಕ ಇವರು ಬಹುಬೇಡಿಕೆಯ ನಟಿಯಾಗಿ ಜನಪ್ರಿಯತೆ ಪಡೆದರು.ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ.

2017ರಲ್ಲಿ ಇವರು ಕಾಂಗ್ರೆಸ್‌ನ ಸೋಷಿಯಲ್‌ ಮೀಡಿಯಾ ಮತ್ತು ಡಿಜಿಟಲ್‌ ತಂಡದ ಮುಖ್ಯಸ್ಥೆಯಾದರು. 2014ರಲ್ಲಿ ಮಂಡ್ಯದಿಂದ ಸ್ಪರ್ಧಿಸಿದ ಇವರು ಕಡಿಮೆ ಮತಗಳ ಅಂತರದಿಂದ ಸೋತರು. ತನನಂ ತನನಂ ಚಿತ್ರದ ಮೂಲಕ ಮೊದಲ ಫಿಲ್ಮ್‌ ಫೇರ್‌ ಅವಾರ್ಡ್‌ ಪ್ರಶಸ್ತಿ ಪಡೆದರು. ಕುತ್ತು ಎಂಬ ತಮಿಳುಚಿತ್ರದಲ್ಲಿ ಅಭಿನಯಿಸುವ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದರು. ರಮ್ಯಾ ಅವರಿಗೆ ಎರಡು ಫಿಲ್ಮ್‌ ಫೇರ್‌ ಪ್ರಶಸ್ತಿ ದೊರಕಿದೆ. ಒಂದು ಕರ್ನಾಟಕ ಚಲನಚಿತ್ರ ಪ್ರಶಸ್ತಿ ದೊರಕಿದೆ.

ಸಿದ್ಲಿಂಗು, ಲಕ್ಕಿ, ಕ್ರೇಜಿಲೋಕ, ಕಠಾರಿವೀರ ಸುರಸುಂದರಾಂಗಿ, ಜಾನಿ ಮೇರನಾಮ್‌, ಸಂಜು ವೆಡ್ಸ್‌ ಗೀತಾ, ಕಿಚ್ಚ ಹುಚ್ಚ, ದಂಡಂ ದಶಗುಣಂ, ಮುಸ್ಸಾಂಜೆ ಮಾತು, ಜಸ್ಟ್‌ ಮಾತ್‌ ಮಾತಲ್ಲಿ, ಬೊಂಬಾಟ್‌, ಅರಸು, ದತ್ತ, ಮೆರವಣಿಗೆ, ಜೊತೆಜೊತೆಯಲ್ಲಿ, ಜೂಲಿ, ಸೇವಂತಿ ಸೇವಂತಿ, ಅಮೃತದಾರೆ, ಗೌರಮ್ಮ, ಆಕಾಶ್‌, ರಂಗ ಎಸ್‌ಎಸ್‌ಎಲ್‌ಸಿ, ಎಕ್ಸ್‌ಕ್ಯೂಸ್‌ ಮೀ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ರಮ್ಯಾ ನಟಿಸಿದ್ದಾರೆ.

Whats_app_banner