HanuMan OTT release: ಕನ್ನಡದಲ್ಲಿ ಹನುಮಾನ್ ಸಿನಿಮಾ ಬಿಡುಗಡೆ ಯಾವಾಗ? ಪ್ರಶಾಂತ್ ವರ್ಮಾ ಕಡೆಯಿಂದ ಬಂತು ಹೊಸ ಸಂದೇಶ
HanuMan OTT release: ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಸೂಪರ್‌ಹೀರೋ ಹನುಮಾನ್ ಸಿನಿಮಾವು ಈಗಾಗಲೇ ಓಟಿಟಿಯಲ್ಲಿ ರಿಲೀಸ್ ಆಗಿದೆ. ಇದೀಗ ತೇಜಾ ಸಜ್ಜಾ ನಟನೆಯ ಹನುಮಾನ್ ಸಿನಿಮಾ ಕನ್ನಡ, ಮಲಯಾಳಂ, ತಮಿಳು ಭಾಷೆಗಳಲ್ಲಿಯೂ ಸ್ಟ್ರೀಮಿಂಗ್ ಆಗಲಿದೆ.
ಈ ವರ್ಷದ ಬ್ಲಾಕ್‌ಬಸ್ಟರ್ ಹನುಮಾನ್ ಸಿನಿಮಾವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಸೂಪರ್‌ಹೀರೋ ಹನುಮಾನ್ ಸಿನಿಮಾವು ಈಗಾಗಲೇ ಓಟಿಟಿಯಲ್ಲಿ ರಿಲೀಸ್ ಆಗಿದೆ. ತೇಜಾ ಸಜ್ಜಾ ನಟನೆಯ ಹನುಮಾನ್ ಸಿನಿಮಾವನ್ನು ಕನ್ನಡ, ಮಲಯಾಳಂ, ತಮಿಳು ಭಾಷೆಗಳಲ್ಲಿಯೂ ನೋಡಬಹುದಾಗಿದೆ. ಕನ್ನಡ ಭಾಷೆಯಲ್ಲಿಯೇ ನೋಡೋಣ ಎಂದು ಕಾಯುತ್ತಿರುವವರು ಇನ್ನು ಕೆಲವು ದಿನ ಕಾಯಬೇಕು. ಹನುಮಾನ್ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿದೆ.
ಹನುಮಾನ್ ಕುರಿತು ಅಪ್‌ಡೇಟ್ ನೀಡಿದ ನಿರ್ದೇಶಕರು
ಪ್ರಶಾಂತ್ ವರ್ಮಾ ಅವರು ಇಂದು ಹನುಮಾನ್ ಸಿನಿಮಾದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಏಪ್ರಿಲ್ 5ರಿಂದ ಹನುಮಾನ್ ಸಿನಿಮಾವು ತಮಿಳು, ಮಲಯಾಳಂ ಮತ್ತು ಕನ್ನಡ ವರ್ಷನ್‌ಗಳಲ್ಲಿ ರಿಲೀಸ್ ಆಗಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸೂಪರ್‌ಹೀರೋ ಸಿನಿಮಾವು ಮಹಾಶಿವರಾತ್ರಿಯಂದೇ ಬಿಡುಗಡೆಯಾಗಬೇಕಿತ್ತು. ಆದರೆ, ತಡವಾಗಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಹಿಂದಿ ಆವೃತ್ತಿಯು ಮಾರ್ಚ್ 16ರಂದು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಿತ್ತು. ತೆಲುಗು ಆವೃತ್ತಿಯು ಝೀ5ನಲ್ಲಿ ಮಾರ್ಚ್ 18ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಇದೀಗ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸೂಪರ್‌ಹೀರೋ ಸಿನಿಮಾಗಳಿಗೆ ಜಾಗತಿಕವಾಗಿ ಬೇಡಿಕೆ ಇರುವುದರಿಂದ ಹನುಮಾನ್ ಸಿನಿಮಾವನ್ನು ಇಂಗ್ಲಿಷ್, ಸ್ಪ್ಯಾನಿಷ್, ಕೊರಿಯನ್, ಚೈನೀಸ್ ಮತ್ತು ಜಪಾನೀಸ್ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಭಾರತದ ಹನುಮಾನ್ ಸಿನಿಮಾ ವಿಶ್ವಾದ್ಯಂತ ವೀಕ್ಷಕರನ್ನು ಪಡೆಯುತ್ತಿದೆ.
ಹನುಮಾನ್ ಸಿನಿಮಾವು ಪ್ರಶಾಂತ್ ವರ್ಮಾ ರಚನೆ ಮತ್ತು ನಿರ್ದೇಶನದ ಸೂಪರ್ ಹೀರೋ ಚಿತ್ರವಾಗಿದೆ. ಪ್ರೈಮ್‌ಶೋ ಎಂಟರ್‌ಟೇನ್‌ಮೆಂಟ್ ನಿರ್ಮಾಣ ಮಾಡಿದ ಹನುಮಾನ್‌ನಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹನುಮಾನ್ ಸಿನಿಮಾದ ರಿವ್ಯೂ
ತೇಜಾ ಸಜ್ಜಾ ನಟನೆಯ ಹನುಮಾನ್ ಸಿನಿಮಾದ ವಿಮರ್ಶೆಯನ್ನು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದೆ. "ಅಂಜನಾದ್ರಿ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ತನ್ನ ಸಹೋದರಿ ಅಂಜಮ್ಮ (ವರಲಕ್ಷ್ಮಿ) ಜತೆ ಜೀವನ ನಡೆಸುತ್ತಿರುವ ಮತ್ತು ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಇರುವ ವ್ಯಕ್ತಿಯೇ ಈ ಹನುಮಂತು (ತೇಜ). ಈ ಹಳ್ಳಿ ಅಭಿವೃದ್ಧಿಯಿಂದ ದೂರ. ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯ ಮತ್ತು ದೊಡ್ಡ ಹನುಮಂತನ ಪ್ರತಿಮೆ ಪ್ರಮುಖ ಆಕರ್ಷಣೆ. ಹನುಮಂತುಗೆ ತನ್ನ ಜೀವನದಲ್ಲಿ ಅಗಾಧ ಸಾಧನೆ ಮಾಡುವಂತಹ ಒಂದು ಸಂದರ್ಭ ಎದುರಾಗುತ್ತದೆ" ಪೂರ್ತಿ ವಿಮರ್ಶೆ ಇಲ್ಲಿದೆ ಓದಿ.