ಕನ್ನಡ ಸುದ್ದಿ  /  ಮನರಂಜನೆ  /  ರಿಷಬ್‌ ಶೆಟ್ಟಿಗೆ ಥ್ಯಾಂಕ್ಸ್‌ ಹೇಳಿದ ನಟಿ ಹರಿಪ್ರಿಯಾ; ಪ್ರಗತಿ ಶೆಟ್ರಿಗೂ ಕಾಂತಾರಕ್ಕೂ ಹೇಗೆ ಟೈಮ್‌ ಕೊಡ್ತಿರಿ ಗುರೂ

ರಿಷಬ್‌ ಶೆಟ್ಟಿಗೆ ಥ್ಯಾಂಕ್ಸ್‌ ಹೇಳಿದ ನಟಿ ಹರಿಪ್ರಿಯಾ; ಪ್ರಗತಿ ಶೆಟ್ರಿಗೂ ಕಾಂತಾರಕ್ಕೂ ಹೇಗೆ ಟೈಮ್‌ ಕೊಡ್ತಿರಿ ಗುರೂ

Vasishta Simha Loveli movie Trailer: ಲವ್‌ಲೀ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂತಾರ ನಟ ರಿಷಬ್‌ ಶೆಟ್ಟಿಯನ್ನು ಹರಿಪ್ರಿಯಾ ಹೊಗಳಿದ್ದಾರೆ. ಇದೇ ಸಮಯದಲ್ಲಿ ಪತಿ ವಸಿಷ್ಠ ಸಿಂಹ ಜತೆ ಲವ್‌ ಲೀ ಸಿನಿಮಾದಲ್ಲಿ ನಟಿಸಲು ನರ್ವಸ್‌ ಆಯ್ತು ಎಂದಿದ್ದಾರೆ.

ರಿಷಬ್‌ ಶೆಟ್ಟಿಗೆ ಥ್ಯಾಂಕ್ಸ್‌ ಹೇಳಿದ ನಟಿ ಹರಿಪ್ರಿಯಾ; ಪ್ರಗತಿಗೂ ಕಾಂತಾರಕ್ಕೂ ಹೇಗೆ ಟೈಮ್‌ ಕೊಡ್ತಿರಿ ಗುರೂ
ರಿಷಬ್‌ ಶೆಟ್ಟಿಗೆ ಥ್ಯಾಂಕ್ಸ್‌ ಹೇಳಿದ ನಟಿ ಹರಿಪ್ರಿಯಾ; ಪ್ರಗತಿಗೂ ಕಾಂತಾರಕ್ಕೂ ಹೇಗೆ ಟೈಮ್‌ ಕೊಡ್ತಿರಿ ಗುರೂ

ಬೆಂಗಳೂರು: ಲವ್‌ ಲೀ ಕನ್ನಡ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ ಮನಬಿಚ್ಚಿ ಮಾತನಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿರುವುದಕ್ಕೆ ಕಾಂತಾರ ನಟ ರಿಷಬ್‌ ಶೆಟ್ಟಿಗೆ ಥ್ಯಾಂಕ್ಸ್‌ ಹೇಳಿದ್ದಾರೆ. ಇದೇ ಸಮಯದಲ್ಲಿ ತಮ್ಮ ಪತಿ ವಸಿಷ್ಠ ಸಿಂಹರ ಸಿನಿಮಾದ ಬಗ್ಗೆ ಮಾತನಾಡಲು ನರ್ವಸ್‌ ಆಗುತ್ತಿದೆ ಎಂದು ಹರಿಪ್ರಿಯಾ ಹೇಳಿದ್ದಾರೆ. ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನ ಹೇಗೆ ನಿಭಾಯಿಸಬೇಕು ಎನ್ನುವುದಕ್ಕೆ ಕಾಂತಾರ ನಟ ರಿಷಬ್‌ ಶೆಟ್ಟಿ ಯುವ ಜನಾಂಗಕ್ಕೆ ಉದಾಹರಣೆ ಎಂಬ ಮಾತನ್ನೂ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹರಿಪ್ರಿಯಾ ಹೇಳಿದ್ದೇನು?

"ನನಗೆ ನನ್ನ ಸಿನಿಮಾಕ್ಕೂ ಇಷ್ಟು ನರ್ವಸ್‌ ಆಗಿರಲಿಲ್ಲ. ನನ್ನ ಗಂಡನ ಸಿನಿಮಾಕ್ಕೆ ಇಷ್ಟೊಂದು ನರ್ವಸ್‌ ಆಗ್ತಿದೆ" ಎಂದ ಹರಿಪ್ರಿಯಾ ಬಳಿಕ ರಿಷಬ್‌ ಶೆಟ್ಟಿಗೆ ಥ್ಯಾಂಕ್ಸ್‌ ಹೇಳಿದ್ದಾರೆ. "ಗುರೂ ಥ್ಯಾಂಕ್ಸ್‌. ನನ್ನ ರಿಷಬ್‌ ಶೆಟ್ಟಿ ಪರಿಚಯ ಸುಮಾರು ಏಳೆಂಟು ವರ್ಷಗಳದ್ದು. ರಿಕ್ಕಿ ಸಿನಿಮಾದಲ್ಲಿ ನಾವು ಜತೆಯಾಗಿ ನಟಿಸಿದ್ದೇವು. ಅಲ್ಲಿಂದ ನಮ್ಮ ಪರಿಚಯ ಆರಂಭವಾಯಿತು. ಆ ಫ್ರೆಂಡ್‌ಶಿಪ್‌ ಇವತ್ತಿನವರೆಗೂ ಹಾಗೆಯೇ ಇದೆ" ಎಂದು ಹರಿಪ್ರಿಯ ಹೇಳಿದ್ದಾರೆ.

"ಇವತ್ತಿನ ಜನರೇಷನ್‌ಗೆ ರಿಷಬ್‌ ಶೆಟ್ಟಿ ಮಾದರಿ. ಪರ್ಸನಲ್‌ ಲೈಫ್‌ನ ಪ್ರೊಫೆಷನಲ್‌ ಲೈಫ್‌ನ ಹೇಗೆ ಹ್ಯಾಂಡಲ್‌ ಮಾಡಬೇಕು ಎನ್ನುವುದಕ್ಕೆ ರಿಷಬ್‌ ಶೆಟ್ಟಿ ಸೂಕ್ತ ಉದಾಹರಣೆ. ಪ್ರಗತಿಯವರಿಗೆ ಟೈಮ್‌ ಕೊಡ್ತಾರೆ, ಇಂತಹ ಒಳ್ಳೊಳ್ಳೆಯ ಸಿನಿಮಾ ನಮಗೆ ಕೊಡ್ತಾರೆ. ನಮ್ಮ ಕನ್ನಡನ ಇಡೀ ಇಂಡಿಯಾ ಮಾತನಾಡೋ ಹಾಗೇ ಮಾಡ್ತಾರೆ. ಹೇಗೆ ಟೈಮ್‌ ಮ್ಯಾನೇಜ್‌ ಮಾಡ್ತಾರೆ ಅನ್ನೋದೇ ಆಶ್ಚರ್ಯ. ಥ್ಯಾಂಕ್ಯೂ ಗುರೂ. ನಮ್ಮ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿರುವುದಕ್ಕೆ ಥ್ಯಾಂಕ್ಸ್‌" ಎಂದು ಹರಿಪ್ರಿಯಾ ಕಾಂತಾರ ನಟನಿಗೆ ಧನ್ಯವಾದ ಹೇಳಿದ್ದಾರೆ.

"ಕನ್ನಡ ಜನತೆಗೂ ಥ್ಯಾಂಕ್ಸ್‌. ಮೊದಲ ಸಾಂಗ್‌ನ ಹಿಟ್‌ ಮಾಡಿದ್ರಿ. ಎರಡನೇ ಸಾಂಗ್‌ ಅನ್ನೂ ಫೇಮಸ್‌ ಮಾಡಿದ್ರಿ. ಲವ್‌ಲೀ ಟ್ರೇಲರ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಜೂನ್‌ 14ರಂದು ಲವ್‌ ಲೀ ಸಿನಿಮಾ ರಿಲೀಸ್‌ ಆಗಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದೂ ಸಿನಿಮಾ ನೋಡಬೇಕು. ಈಗ ನಾನು ರೆಸ್ಟ್‌ನಲ್ಲಿದ್ದೇನೆ. ಆದಷ್ಟು ಬೇಗ ಕಂಬ್ಯಾಕ್‌ ಮಾಡ್ತಿನಿ. ಏನು ಮಾತನಾಡ್ತಿನಿ ಅಂತ ಗೊತ್ತಾಗ್ತಾ ಇಲ್ಲ. ತುಂಬಾ ನರ್ವಸ್‌ ಆಗಿದ್ದೀನಿ" ಎಂದು ಹೇಳಿದ್ದಾರೆ.

"ನನ್ನ ಪತಿಗೆ ಕೆಲಸ ಮೊದಲ ಲವ್‌. ಈ ಸಿನಿಮಾದ ವಿಷುವಲ್‌ ನೋಡಿದಾಗ ನನಗೆ ಖುಷಿಯಾಯ್ತು. ನಾನು ಇವರನ್ನು ಮದುವೆಯಾಗದೆ ಇರದೆ ಇದ್ದರೆ ಈ ಸಿನಿಮಾ ನೋಡಿ ಲವ್‌ ಮಾಡ್ತಾ ಇದ್ದೆ. ಇವರು ಸಿನಿಮಾದಲ್ಲಿ ಕಥೆಗೆ ಮಹತ್ವ ನೀಡಿದ್ದಾರೆ. ಲವ್‌ಲೀ ಸಿನಿಮಾಕ್ಕಾಗಿ 3 ವರ್ಷ ಇವರು ನೀಡಿದ್ದಾರೆ. ಇಡೀ ತಂಡ ಒಂದಾಗಿ ಈ ಸಿನಿಮಾಕ್ಕೆ ಕೆಲಸ ಮಾಡಿದೆ. ಎಲ್ಲರೂ ಈ ಸಿನಿಮಾಕ್ಕೆ ಸಪೋರ್ಟ್‌ ಮಾಡಿ" ಎಂದು ಹರಿಪ್ರಿಯಾ ಕೇಳಿಕೊಂಡಿದ್ದಾರೆ.

ಲವ್‌ಲೀ ಸಿನಿಮಾದಲ್ಲಿ ವಸಿಷ್ಠ ಸಿಂಹರಿಗೆ ನಾಯಕಿಯಾಗಿ ಸ್ಟೆಫಿ ಪಟೇಲ್‌ ನಾಯಕಿ. ಇವರು ಮುಂಬೈ ಬೆಡಗಿ. ಇವರಿಗೆ ಇದು ಮೊದಲ ಕನ್ನಡ ಸಿನಿಮಾ. ಅಭುವನಸ ಕ್ರಿಯೇಶನ್ಸ್‌ ಬ್ಯಾನರಿನಲ್ಲಿ ರವೀಂದ್ರ ಕುಮಾರ್‌ ಬಂಡವಾಳ ಹೂಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಈ ಸಿನಿಮಾಕ್ಕೆ ಚೇತನ್‌ ಕೇಶವ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಅಚ್ಯುತ ಕುಮಾರ್‌, ದತ್ತಣ್ಣ, ಸಮೀಕ್ಷಾ, ಮಾಳವಿಕಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಅಶ್ವಿ‌ನ್‌ ಕೆನಡಿ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನ, ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆ, ಕೆ ಕಲ್ಯಾಣ್‌ ಸಾಹಿತ್ಯವಿದೆ.

ಟಿ20 ವರ್ಲ್ಡ್‌ಕಪ್ 2024