ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌; ದಾರಿ ತಪ್ಪಿದ ಮಗ ಎಲ್ಲಿದ್ದಾನೆ? ನಟ ಪ್ರಕಾಶ್‌ ರಾಜ್‌ ಪ್ರಶ್ನೆ, ಚೇತನ್‌ ಅಹಿಂಸಾ ಏನಂದ್ರು?
ಕನ್ನಡ ಸುದ್ದಿ  /  ಮನರಂಜನೆ  /  ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌; ದಾರಿ ತಪ್ಪಿದ ಮಗ ಎಲ್ಲಿದ್ದಾನೆ? ನಟ ಪ್ರಕಾಶ್‌ ರಾಜ್‌ ಪ್ರಶ್ನೆ, ಚೇತನ್‌ ಅಹಿಂಸಾ ಏನಂದ್ರು?

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌; ದಾರಿ ತಪ್ಪಿದ ಮಗ ಎಲ್ಲಿದ್ದಾನೆ? ನಟ ಪ್ರಕಾಶ್‌ ರಾಜ್‌ ಪ್ರಶ್ನೆ, ಚೇತನ್‌ ಅಹಿಂಸಾ ಏನಂದ್ರು?

ರಾಜ್ಯದಲ್ಲಿ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸದ್ಯ ದೊಡ್ಡ ಸಂಚಲನ ಸೃಷ್ಟಿಸಿದೆ. ರಾಜ್‌ ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿಗೂ ಹಸ್ತಾಂತರಿಸಿದೆ. ಈಗ ಇದೇ ಕೇಸ್‌ಗೆ ಸಂಬಂಧಿಸಿದಂತೆ ನಟರಾದ ಪ್ರಕಾಶ್‌ ರಾಜ್‌ ಮತ್ತು ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌; ದಾರಿ ತಪ್ಪಿದ ಮಗ ಎಲ್ಲಿದ್ದಾನೆ? ನಟ ಪ್ರಕಾಶ್‌ ರಾಜ್‌ ಪ್ರಶ್ನೆ, ಚೇತನ್‌ ಅಹಿಂಸಾ ಏನಂದ್ರು?
ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌; ದಾರಿ ತಪ್ಪಿದ ಮಗ ಎಲ್ಲಿದ್ದಾನೆ? ನಟ ಪ್ರಕಾಶ್‌ ರಾಜ್‌ ಪ್ರಶ್ನೆ, ಚೇತನ್‌ ಅಹಿಂಸಾ ಏನಂದ್ರು?

Prajwal Revanna Pendrive case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ವಿಚಾರವನ್ನು ಎಸ್‌ಐಟಿಗೆ ವಹಿಸಿದೆ ರಾಜ್ಯ ಸರ್ಕಾರ. ಇತ್ತ ಪ್ರಕರಣದ ತನಿಖೆಯನ್ನೂ ಎಸ್‌ಐಟಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ನಡುವೆ ಪ್ರಜ್ವಲ್‌ ರೇವಣ್ಣ ಮಾತ್ರವಲ್ಲದೆ ಅವರ ತಂದೆ, ಹೊಳೆನರಸೀಪುರದ ಶಾಸಕ ಎಚ್‌.ಡಿ ರೇವಣ್ಣ ಅವರ ವಿರುದ್ಧವೂ ಸಂತ್ರಸ್ತೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪದ ಅಡಿಯಲ್ಲಿ ದೂರು ನೀಡಿದ್ದಾರೆ. ಎಫ್‌ಐಆರ್‌ ಸಹ ದಾಖಲಾಗಿದೆ. ಬಗೆ ಬಗೆ ಕೋನಗಳಲ್ಲಿ ಪ್ರಕರಣದ ತನಿಖೆ ಆರಂಭವಾಗಿದೆ. ಈ ಪ್ರಕರಣದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದೂ ಸಿಎಂ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮತ್ತು ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ರಾಯಚೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್‌ ರಾಜ್‌, ಕೊಂಚ ಬಿರುಸಾಗಿಯೇ ಪ್ರತಿಕ್ರಿಯಿಸಿದ್ದಾರೆ . ಆವತ್ತು ಕಾಂಗ್ರೆಸ್‌ ಸರ್ಕಾರ ಹೆಣ್ಣುಮಕ್ಕಳಿಗೆ ಉಚಿತವಾಗಿ ಬಸ್‌ ಕೊಟ್ಟರೆ, ಹೆಣ್ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದಿದ್ದರು. ಈಗ ನಿಮ್ಮ ದಾರಿ ತಪ್ಪಿದ ಮಗ ಮಾಡಿದ್ದೇನು? ಈಗ ಆತ ಎಲ್ಲಿದ್ದಾನೆ ವಸಿ ಹೇಳಪ್ಪ ಎಂದು ಟೀಕೆ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲ ನೇಹಾ ಪ್ರಕರಣದಲ್ಲಿ ಇಷ್ಟೆಲ್ಲ ಮಾತನಾಡಿದ್ದ ನೀವು, ಈಗ ಆ ದಾರಿ ತಪ್ಪಿದ ಮಗನಿಂದಲೇ ಸಾವಿರಾರು ಹಿಂದೂ ಮಹಿಳೆಯರು ಹಾಳಾಗಿದ್ದಾರಲ್ಲ ಎಂದೂ ಪ್ರಶ್ನೆ ಮಾಡಿದ್ದಾರೆ.

ಎಲ್ಲಿದ್ದಾನೆ ಆ ನಿಮ್ಮ ದಾರಿ ತಪ್ಪಿದ ಮಗ?

"ನಮ್ಮ ಪ್ರತಿನಿಧಿಗಳನ್ನು ನಾವು ಆರಿಸಬೇಕು. ಹೆಣದ ರಾಜಕೀಯ ಮಾಡೋದು, ಹೆಣ್ಣಿನ ರಾಜಕೀಯ ಮಾಡೋದು, ಧರ್ಮದ ರಾಜಕೀಯ ಮಾಡೋದು.. ಅಷ್ಟಕ್ಕೂ ಮಹಾಪ್ರಭುವನ್ನೇ ಕೇಳಬೇಕು ಅನ್ಕೊಂಡೆ, ಏನಪ್ಪ ನಿಮ್ಮ ಜತೆ ಮೈತ್ರಿ ಮಾಡಿಕೊಂಡಿರೋ ಹಣ್ಣ ಇದಾನಲ್ಲ ಹಣ್ಣ (ಅಣ್ಣ), ಹೆಣ್ಮಕ್ಕಳಿಗೆ ಉಚಿತ ಬಸ್‌ ಕೊಟ್ಟರೆ ದಾರಿ ತಪ್ಪಿದ್ರು ಅಂದ್ರಲ್ಲ, ಈಗ ನಿಮ್ಮ ದಾರಿ ತಪ್ಪಿದ ಮಗ ಎಲ್ಲಿದ್ದಾನೆ ಹೇಳಪ್ಪ. ಇದೇ ಬಿಜೆಪಿಗರಿಗೆ, ಆ ದಾರಿ ತಪ್ಪಿದ ಮಗನಿರಲಿ, ನೇಹಾ ಅನ್ನೋ ಹೆಣ್ಮಗಳ ಕೊಲೆ ಪ್ರಕರಣದಲ್ಲಿ ಇಷ್ಟೆಲ್ಲ ಮಾತನಾಡುವ ನೀವು, ಈಗ ಆ ದಾರಿ ತಪ್ಪಿದ ಮಗನಿಂದ ಹಾಳಾದ 2 ಸಾವಿರಕ್ಕೂ ಅಧಿಕ ಮಹಿಳೆಯರು ಹಿಂದೂಗಳಲ್ಲವೋ? ಅವರಿಗೋಸ್ಕರ ನಿಮಗೆ ಆಕ್ರೋಶ ಬರಲ್ವಾ? ಎಂದಿದ್ದಾರೆ.

ಚೇತನ್‌ ಅಹಿಂಸಾ ಕಿಡಿ

ಮತ್ತೊಂದು ಕಡೆ ಇದೇ ವಿಚಾರವಾಗಿ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ನಡೆದ ನಿರ್ಭಯಾ ಕೇಸ್‌ಗೆ ಹೋಲಿಕೆ ಮಾಡಿದ ಕಾಂಗ್ರೆಸ್‌ ಸರ್ಕಾರವನ್ನೂ ಟೀಕಿಸಿದ್ದಾರೆ. "ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ತಪ್ಪು ಸಾಬೀತಾದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅನ್ಯಾಯಕ್ಕೊಳಗಾದ ಮಹಿಳೆಯರು ತಮ್ಮ ಕಷ್ಟಗಳನ್ನು ವಿವರಿಸಲು ಧೈರ್ಯದಿಂದ ಮುಂದೆ ಬರುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಪೆನ್ ಡ್ರೈವ್ ಸಮಸ್ಯೆಯನ್ನು 'ಸಾವಿರಾರು ನಿರ್ಭಯಾ' ಗಳಿಗೆ ಹೋಲಿಸಿ, ಅದಕ್ಕೆ ಮೋದಿ/ಬಿಜೆಪಿ ಹೊಣೆ ಹೊರಬೇಕೆಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ಪಕ್ಷದ ಮಹಿಳೆಯರು ಹಾಸ್ಯಾಸ್ಪದವಾಗಿದ್ದಾರೆ"

"ನಡೆಯುತ್ತಿರುವ ಬೃಹತ್ ಲೈಂಗಿಕ ಹಗರಣದಲ್ಲಿ 2,900 ಪೆನ್ ಡ್ರೈವ್ ಚಿತ್ರಗಳು/ವೀಡಿಯೊಗಳನ್ನು ಕಾರ್ಯರೂಪಕ್ಕೆ ತರಲು ಆರೋಪಿ ಪ್ರಜ್ವಲ್ ರೇವಣ್ಣ ನಡೆಸಿದ ಸಂಪೂರ್ಣ ನಿರ್ಭಯತೆಯು ನನ್ನ ಮನಸ್ಸನ್ನು ದಿಗ್ಭ್ರಮೆಗೊಳಿಸಿದೆ. ಪೆನ್ ಡ್ರೈವ್ ಅನ್ನು ಸಾರ್ವಜನಿಕಗೊಳಿಸಿದರೆ ಅವರ ಪಕ್ಷ/ಕುಟುಂಬ/ಅವರು ಎದುರಿಸಬೇಕಾದ ಭೀಕರ ಪರಿಣಾಮಗಳ ಬಗ್ಗೆ ಯಾವುದೇ ಭಯವಿರಲಿಲ್ಲವೇ? ಭಾರತೀಯ ಆಳುವ ರಾಜವಂಶಗಳ ದ್ವೇಷಪೂರಿತ ಅಹಂಕಾರವು ಆಶ್ಚರ್ಯಕರವಾಗಿದೆ" ಎಂದಿದ್ದಾರೆ.

Whats_app_banner