ಕನ್ನಡ ಸುದ್ದಿ  /  ಮನರಂಜನೆ  /  ಚೆನ್ನಾಗಿ ದುಡಿಸಿಕೊಂಡು ಈಗ ಧಮ್ಕಿ ಹಾಕ್ತಿದ್ದಾರೆ! ನ್ಯಾಯಕ್ಕೆ ಅಂಗಲಾಚಿದ ಹೆಡ್‌ಬುಷ್‌ ಚಿತ್ರದ ನಟಿ ಪಾಯಲ್‌ ರಜಪೂತ್‌

ಚೆನ್ನಾಗಿ ದುಡಿಸಿಕೊಂಡು ಈಗ ಧಮ್ಕಿ ಹಾಕ್ತಿದ್ದಾರೆ! ನ್ಯಾಯಕ್ಕೆ ಅಂಗಲಾಚಿದ ಹೆಡ್‌ಬುಷ್‌ ಚಿತ್ರದ ನಟಿ ಪಾಯಲ್‌ ರಜಪೂತ್‌

ತೆಲುಗು ಚಿತ್ರರಂಗದಿಂದ ನನ್ನನ್ನು ನಿಷೇಧಿಸುವಂತೆ ರಕ್ಷಣ ಸಿನಿಮಾ ನಿರ್ಮಾಪಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿ ಪಾಯಲ್‌ ರಜಪೂತ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಚೆನ್ನಾಗಿ ದುಡಿಸಿಕೊಂಡು ಈಗ ಧಮ್ಕಿ ಹಾಕ್ತಿದ್ದಾರೆ! ಹೆಡ್‌ಬುಷ್‌ ಚಿತ್ರದ ನಟಿ ಪಾಯಲ್‌ ರಜಪೂತ್‌ಗೆ ಇದೆಂಥ ಸ್ಥಿತಿ
ಚೆನ್ನಾಗಿ ದುಡಿಸಿಕೊಂಡು ಈಗ ಧಮ್ಕಿ ಹಾಕ್ತಿದ್ದಾರೆ! ಹೆಡ್‌ಬುಷ್‌ ಚಿತ್ರದ ನಟಿ ಪಾಯಲ್‌ ರಜಪೂತ್‌ಗೆ ಇದೆಂಥ ಸ್ಥಿತಿ

Actress Payal Rajput: ಪಾಯಲ್‌ ರಜಪೂತ್ ಕನ್ನಡದ ಜತೆಗೆ ಸೌತ್‌ನ ಎಲ್ಲ ಭಾಷೆಗಳಲ್ಲಿಯೂ ಮಿಂಚುತ್ತಿರುವ ನಟಿ. ಬೋಲ್ಡ್‌ ಪಾತ್ರಕ್ಕೂ ಸೈ, ಡಿ ಗ್ಲಾಮ್‌ ಲುಕ್‌ನಲ್ಲೂ ಮಿಂಚಲು ಈ ನಟಿ ಯಾವತ್ತಿದ್ದರೂ ಮುಂದೆ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಹಿಟ್‌ ಸಿನಿಮಾ ನೀಡಿ ಟಾಲಿವುಡ್‌ನಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದಾರೆ ಪಾಯಲ್. ಸ್ಯಾಂಡಲ್‌ವುಡ್‌ನಲ್ಲಿಯೂ ಹೆಡ್‌ಬುಷ್‌ ಸಿನಿಮಾ ಮೂಲಕ ಪದಾರ್ಪಣೆ ಮಾಡಿ, ಮೊದಲ ಚಿತ್ರದಲ್ಲಿಯೇ ಕರುನಾಡ ಪ್ರೇಕ್ಷಕರ ಗಮನ ಸೆಳೆದಿದ್ದರು ಈ ಚೆಲುವಿ. ಆದರೆ ಈಗ ಇದೇ ನಟಿಗೆ ನಿಷೇಧದ ಬಿಸಿ ತಟ್ಟಿದೆ!

ಟ್ರೆಂಡಿಂಗ್​ ಸುದ್ದಿ

ಪಕ್ಕದ ಟಾಲಿವುಡ್‌ನಲ್ಲಿ RX 100 ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ನಾಯಕಿ ಪಾಯಲ್ ರಜಪೂತ್, ಕಳೆದ ವರ್ಷ ಬಿಡುಗಡೆ ಆಗಿದ್ದ ಮಂಗಳವಾರಂ ಸಿನಿಮಾ ಕೈ ಹಿಡಿದಿತ್ತು. ಗೆಲುವು ತಂದು ಕೊಟ್ಟಿತ್ತು. ಈಗ ಇದೇ ನಟಿಗೆ "ರಕ್ಷಣ" ಸಿನಿಮಾ ತಂಡದಿಂದ ಕಿರುಕುಳ ಎದುರಾಗಿದೆ. ಅದ್ಯಾವ ಮಟ್ಟಿಗೆ ಎಂದರೆ, ಧಮ್ಕಿ ಹಾಕುವುದರ ಜತೆಗೆ ಟಾಲಿವುಡ್‌ನಿಂದಲೇ ನಿಷೇಧ ಹೇರುವುದಾಗಿ ಬೆದರಿಕೆಗಳು ಬಂದಿವೆ. ಈ ಕುರಿತು ಇನ್‌ಸ್ಟಾದಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದಾರೆ ಪಾಯಲ್.

ಟಾಲಿವುಡ್‌ನಿಂದ ನಿಷೇಧದ ಬೆದರಿಕೆ

ಪಾಯಲ್ ರಜಪೂತ್‌ ಇತ್ತೀಚಿನ ಕೆಲ ವರ್ಷದಿಂದ ಟಾಲಿವುಡ್‌ನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಅದನ್ನೇ ಎನ್‌ಕ್ಯಾಶ್‌ ಮಾಡಿಕೊಂಡಿರುವ "ರಕ್ಷಣ" ಸಿನಿಮಾ ತಂಡ, ಕಳೆದ ನಾಲ್ಕು ವರ್ಷದ ಹಿಂದೆ ಚಿತ್ರೀಕರಣಗೊಂಡಿದ್ದ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸಿನಿಮಾ ಪ್ರಚಾರಕ್ಕೆ ಹಾಜರಾಗುವಂತೆ ನಟಿಗೆ ಚಿತ್ರತಂಡದಿಂದ ಆಹ್ವಾನ ಹೋಗಿದ್ದು, ಬಾಕಿ ಸಂಭಾವನೆ ಕೊಟ್ಟ ಬಳಿಕವಷ್ಟೇ ಪ್ರಮೋಷನ್‌ಗೆ ಬರುವುದಾಗಿ ‌ಪಾಯಲ್ ತಿಳಿಸಿದ್ದಾರೆ. ನಟಿಯ ಈ ಮಾತು ನಿರ್ಮಾಪಕರ ಕಣ್ಣು ಕೆಂಪಗಾಗಿಸಿದೆ.

ನಟಿಯ ಪೋಸ್ಟ್‌ ಹೀಗಿದೆ..

"2019 ಮತ್ತು 2020ರಲ್ಲಿ, ರಕ್ಷಣ ಸಿನಿಮಾವನ್ನು ಶೂಟಿಂಗ್‌ ಮಾಡಲಾಗಿದೆ. ಈ ಸಿನಿಮಾ ಬಿಡುಗಡೆಯೂ ತಡವಾಗುತ್ತಿದೆ. ಆದಾಗ್ಯೂ, ನನ್ನ ಇತ್ತೀಚಿನ ಸಕ್ಸಸ್‌ ಅನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನನಗೆ ನೀಡಬೇಕಾದ ಸಂಭಾವನೆಯನ್ನೂ ನೀಡದೆ, ಈಗ ಪ್ರಚಾರಕ್ಕೆ ಬರುವಂತೆ ಕೋರಿದ್ದಾರೆ. ಸದ್ಯ ನಾನು ಬೇರೆ ಸಿನಿಮಾಗಳ ಕೆಲಸದಲ್ಲಿ ಬಿಜಿಯಾಗಿರುವುದರಿಂದ ಪ್ರಮೋಷನ್‌ಗೆ ಬರಲು ಸಾಧ್ಯವಿಲ್ಲ. ಇದಕ್ಕೆ ಬಗ್ಗದ ನಿರ್ಮಾಪಕರು, ತೆಲುಗು ಚಿತ್ರರಂಗದಿಂದ ನಿಷೇಧಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ" ಎಂದು ಪಾಯಲ್ ರಜಪೂತ್ ಪೋಸ್ಟ್ ಮಾಡಿದ್ದಾರೆ.

ಹೆಸರನ್ನು ಹಾಳು ಹುನ್ನಾರ

ಕಷ್ಟಪಟ್ಟು ಒಂದಷ್ಟು ಸಿನಿಮಾ ಮಾಡಿ, ಚಿತ್ರರಂಗದಲ್ಲಿ ಹೆಸರು ಗಳಿಸಿದ್ದೇನೆ. ಆ ಹೆಸರನ್ನು ಹಾಳು ಮಾಡಲು ರಕ್ಷಣ ಚಿತ್ರದ ನಿರ್ಮಾಪಕರು ಮುಂದಾಗಿದ್ದಾರೆ. ನನಗೆ ಬಾಕಿ ಉಳಿಸಿದ ಸಂಭಾವನೆಯನ್ನು ನೀಡಿದರೆ, ಈ ಸಿನಿಮಾಕ್ಕೆ ಡಿಜಿಟಲ್‌ ಪ್ರಚಾರ ಮಾಡಿಕೊಡುವುದಾಗಿ ಪಾಯಲ್‌ ತಿಳಿಸಿದ್ದಾರೆ. ಆದರೆ, ರಾಜಿಗೂ ಚಿತ್ರದ ನಿರ್ಮಾಪಕರು ಮುಂದಾಗಲಿಲ್ಲ. ಈ ಬೇಡಿಕೆಗೆ ಒಪ್ಪದ ಚಿತ್ರತಂಡ, ಪಾಯಲ್‌ ಅವರ ಹೆಸರು ಹಾಳು ಮಾಡುವ ಯತ್ನ ನಡೆಸುತ್ತಿದೆ. ಅವರ ಒಪ್ಪಿಗೆ ಪಡೆಯದೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ. ಅನುಚಿತವಾಗಿ ಮಾತನಾಡಿದ್ದಾರೆ ಎಂದು ಪಾಯಲ್‌ ಆರೋಪಿಸಿದ್ದು, ಈ ಬಗ್ಗೆ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ

ಜೂನ್‌ 7ಕ್ಕೆ ಬಿಡುಗಡೆ..

ಪ್ರದೀಪ್ ಠಾಕೂರ್ ರಕ್ಷಣ ಸಿನಿಮಾದ ನಿರ್ದೇಶಕರು ಮತ್ತು ನಿರ್ಮಾಪಕರು. ಇತ್ತೀಚೆಗಷ್ಟೇ ಚಿತ್ರತಂಡ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಜೂನ್ 7 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ತನಿಖಾ ಥ್ರಿಲ್ಲರ್ ಚಿತ್ರದಲ್ಲಿ ಪಾಯಲ್ ರಜಪೂತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)

ಟಿ20 ವರ್ಲ್ಡ್‌ಕಪ್ 2024