ಕನ್ನಡ ಸುದ್ದಿ  /  ಮನರಂಜನೆ  /  Amala Paul: ಅಮ್ಮನಾದ ಖುಷಿಯಲ್ಲಿ ನಟಿ ಅಮಲಾ ಪೌಲ್‌, ಕನ್ನಡದಲ್ಲಿ 2, ಇಂಗ್ಲಿಷ್‌ನಲ್ಲಿ 4 ಅಕ್ಷರವಿರುವ ಈ ಮಗುವಿನ ಹೆಸರಿನ ಅರ್ಥ ತಿಳಿಯಿರಿ

Amala Paul: ಅಮ್ಮನಾದ ಖುಷಿಯಲ್ಲಿ ನಟಿ ಅಮಲಾ ಪೌಲ್‌, ಕನ್ನಡದಲ್ಲಿ 2, ಇಂಗ್ಲಿಷ್‌ನಲ್ಲಿ 4 ಅಕ್ಷರವಿರುವ ಈ ಮಗುವಿನ ಹೆಸರಿನ ಅರ್ಥ ತಿಳಿಯಿರಿ

Amala Paul Son Name and Name Meaning: ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿಗೆ ಗಂಡು ಮಗು ಜನಿಸಿದ್ದು, ಆ ಮಗುವಿಗೆ ಇಲೈ ಎಂದು ಹೆಸರಿಟ್ಟಿದ್ದಾರೆ. ಈ ಮಗುವಿನ ಹೆಸರಿನ ಅರ್ಥವೇನು? ತಿಳಿದುಕೊಳ್ಳೋಣ ಬನ್ನಿ.

Amala Paul: ಅಮ್ಮನಾದ ಖುಷಿಯಲ್ಲಿ ನಟಿ ಅಮಲಾ ಪೌಲ್‌
Amala Paul: ಅಮ್ಮನಾದ ಖುಷಿಯಲ್ಲಿ ನಟಿ ಅಮಲಾ ಪೌಲ್‌

ಬೆಂಗಳೂರು: ಬಾಲಿವುಡ್‌ ಸೆಲೆಬ್ರಿಟಿಗಳಾದ ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ತಮಗೆ ಗಂಡು ಮಗು ಜನಿಸಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇವರಿಬ್ಬರು ಇನ್‌ಸ್ಟಾಗ್ರಾಂ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ, ಆತ್ಮೀಯರಿಗೆ ಮಗುವಿನ ಆಗಮನದ ಸುದ್ದಿ ನೀಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮಗುವಿನ ಹೆಸರನ್ನೂ ಬಹಿರಂಗ ಪಡಿಸಿದ್ದಾರೆ. ಮಗುವಿಗೆ ಇಲೈ (Ilai) ಎಂದು ನಾಮಕರಣ ಮಾಡಲಾಗಿದೆ. ಹೆಸರು ತುಂಬಾ ಮುದ್ದಾಗಿದೆ ಅಲ್ವೆ?

ಅಮಲಾ ಪೌಲ್‌ ಮಗುವಿನ ಹೆಸರು ಇಲೈ

ಅಮಲಾ ಪೌಲ್‌ ಮತ್ತು ಜಗತ್‌ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಗುವನ್ನು ಆಸ್ಪತ್ರೆಯಿಂದ ಮನೆಗೆ ತಂದ ಸುಂದರ ಕ್ಷಣದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಗುವಿನ ಮುಖವನ್ನು ತೋರಿಸದೆ ವಿಡಿಯೋ ಹಂಚಿಕೊಂಡಿದ್ದಾರೆ. ಮಗುವಿಗೆ ಇಲೈ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ. ಇವರಿಬ್ಬರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಈ ರೀತಿ ಇದೆ. "ಇವನು ಗಂಡು ಮಗು. ನಮ್ಮ ಪುಟಾಣಿ ಅದ್ಭುತವನ್ನು ನೋಡಿ. ಇಲೈ. ಜನ್ಮ ದಿನಾಂಕ: 11.06.2024" ಎಂದು ಕ್ಯಾಪ್ಷನ್‌ ಬರೆದಿದ್ದಾರೆ. ಇದಕ್ಕೆ ಹಲವು ಸೆಲೆಬ್ರಿಟಿಗಳು, ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. "ಮನೆಗೆ ಹೊಸ ಅತಿಥಿಗೆ ಸ್ವಾಗತ " "ಇಬ್ಬರಿಗೂ ಧನ್ಯವಾದ" "ಮಗುವಿನ ಹೆಸರು ಮುದ್ದಾಗಿದೆ" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

ಅಮಲಾ ಪೌಲ್‌ ಮತ್ತು ಉದ್ಯಮಿ ಜಗತ್‌ ದೇಸಾಯಿ 2013ರಲ್ಲಿ ವಿವಾಹವಾಗಿದ್ದರು. ಈ ವರ್ಷ ಜನವರಿ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು. ಇದೀಗ ಜೂನ್‌ 11ರಂದು ಮಗುವಿಗೆ ಅಮಲಾ ಪೌಲ್‌ ಜನ್ಮ ನೀಡಿದ್ದು, ಅಮ್ಮನಾದ ಸಂಭ್ರಮದಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಮಲಾ ಪೌಲ್‌ ಮಗುವಿನ ಹೆಸರಿನ ಅರ್ಥವೇನು?

ಇಲೈ ಎಂದು ಕನ್ನಡದಲ್ಲಿ ಬರೆದರೆ ಕೇವಲ ಎರಡು ಅಕ್ಷರ (ಒಂದು ಒತ್ತಕ್ಷರ). ಇಂಗ್ಲಿಷ್‌ನಲ್ಲಿ ಬರೆದರೆ ನಾಲ್ಕೇ ಅಕ್ಷರ. ಈ ಪುಟಾಣಿಯ ಸಣ್ಣ, ಕ್ಯೂಟ್‌ ಹೆಸರು ಎಲ್ಲರ ಗಮನ ಸೆಳೆದಿದೆ. ಇಲೈ ಪದಕ್ಕೆ ಏರು (to ascend) ಎಂಬ ಅರ್ಥವಿದೆ. ಇಲೈ ಎಂಬ ರಾಜನೂ ಇದ್ದ.

ಅಮಲಾ ಪೌಲ್‌ ಕರಿಯರ್‌

ಅಮಲಾ ಪೌಲ್‌ ಅವರು ಮಲಯಾಳಂನ ನೀಲಥಾಮರ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು. ದೈವ ತಿರುವಮಗಲ್‌, ಆಲ್ ಯುವರ್ ಡ್ರೀಮ್ಸ್, ನಾಯಕ್, ರನ್ ಬೇಬಿ ರನ್, ಇಟಾದಾರಮೈಲ್ಟೊ, ವಿಥ್, ಬಸಂಗಾ 2, ಹ್ಯಾಪಿ ಮತ್ತು ರಾಕ್ಷಸನ್ ಹಾಗೂ ಕನ್ನಡದ ಹೆಬ್ಬುಲಿ (ಕಿಚ್ಚ ಸುದೀಪ್‌) ಮುಂತಾದ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಇವರು ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡು ಜೀವಿತಂ ದಿ ಗೋಟ್‌ ಲೈಫ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಮಲಾ ಪೌಲ್‌ ಅವರು ಬಾಲಿವುಡ್‌ಗೂ ಎಂಟ್ರಿ ನೀಡಿದ್ದಾರೆ. ಅಜಯ್‌ ದೇವಗನ್‌ ನಟನೆಯ ಆಕ್ಷನ್‌ ಥ್ರಿಲ್ಲರ್‌ ಭೋಲಾ ಸಿನಿಮಾದಲ್ಲಿ ನಟಿಸಿದ್ದಾರೆ.