ಕನ್ನಡ ಸುದ್ದಿ  /  Entertainment  /  Sandalwood News Hello Daddy Actor Director Nithin Gopi Passes Away Due To Heart Attack Kannada Small Screen

Nithin Gopi: ಹಲೋ ಡ್ಯಾಡಿ ಸಿನಿಮಾ ಖ್ಯಾತಿಯ ನಿತಿನ್‌ ಗೋಪಿ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕನ್ನಡ ಚಿತ್ರರಂಗ, ಕಿರುತೆರೆ

1996 ರಲ್ಲಿ ತೆರೆ ಕಂಡಿದ್ದ ಹಲೋ ಡ್ಯಾಡಿ ಚಿತ್ರದಲ್ಲಿ ನಿತಿನ್‌ ಗೋಪಿ ಡಾ. ವಿಷ್ಣುವರ್ಧನ್‌ ಅವರ ಪುತ್ರನಾಗಿ ನಟಿಸಿದ್ದರು. ಈ ಸಿನಿಮಾದ ಶಾಲೆಗೆ ಈ ದಿನ ರಜಾ…ಹಾಡು ಇಂದಿಗೂ ಅನೇಕ ಮಕ್ಕಳಿಗೆ ಫೇಮಸ್.‌ ಮಕ್ಕಳಿಗೆ ಸ್ಕೂಲ್‌ಗೆ ರಜೆ ದೊರೆತರೆ ಈ ಹಾಡನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.

ನಿತಿನ್‌ ಗೋಪಿ ನಿಧನ
ನಿತಿನ್‌ ಗೋಪಿ ನಿಧನ (PC: Nithin Gopi FB, SRS Media Vision Entertainment YouTube)

ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಿತಿನ್‌ ಗೋಪಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿತಿನ್‌ ನಟನಾಗಿ, ಕನ್ನಡ ಕಿರುತೆರೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಅವರಿಗೆ 39 ವಯಸ್ಸಾಗಿತ್ತು.

ನಿತಿನ್‌ ಬೆಂಗಳೂರಿನ ಇಟ್ಟಮಡುವಿನ ಅಪಾರ್ಟ್‌ಮೆಂಟ್‌ನಲ್ಲಿ ತಂದೆ ತಾಯಿ ಜೊತೆ ವಾಸವಾಗಿದ್ದರು. ಇಂದು( ಶುಕ್ರವಾರ) ಬೆಳಗಿನ ಜಾವ 4 ಗಂಟೆಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ನೆರೆಹೊರೆಯವರ ಸಹಾಯದಿಂದ ಹೆತ್ತವರು ನಿತಿನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ನಿತಿನ್‌ ಕೊನೆಯುಸಿರೆಳೆದಿದ್ದಾರೆ. ನಿತಿನ್‌ ತಂದೆ, ಗೋಪಿ ಖ್ಯಾತ ಕೊಳಲು ವಾದಕರು. ನಿತಿನ್‌ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗ ಹಾಗೂ ಕಿರುತೆರೆ ಆಘಾತ ವ್ಯಕ್ತಪಡಿಸಿದೆ. ನಿತಿನ್‌ ಗೋಪಿಗೆ ಇನ್ನೂ ಮದುವೆ ಆಗಿರಲಿಲ್ಲ. ಚಿತ್ರರಂಗ, ಕಿರುತೆರೆಯಲ್ಲಿ ಹೆಸರು ಮಾಡಬೇಕೆಂಬ ಆಸೆ ನಿತಿನ್‌ಗೆ ಇತ್ತು.

1996 ರಲ್ಲಿ ತೆರೆ ಕಂಡಿದ್ದ 'ಹಲೋ ಡ್ಯಾಡಿ' ಚಿತ್ರದಲ್ಲಿ ನಿತಿನ್‌ ಗೋಪಿ ಡಾ. ವಿಷ್ಣುವರ್ಧನ್‌ ಅವರ ಪುತ್ರನಾಗಿ ನಟಿಸಿದ್ದರು. ಈ ಸಿನಿಮಾದ ಶಾಲೆಗೆ ಈ ದಿನ ರಜಾ…ಹಾಡು ಇಂದಿಗೂ ಅನೇಕ ಮಕ್ಕಳಿಗೆ ಫೇಮಸ್.‌ ಮಕ್ಕಳಿಗೆ ಸ್ಕೂಲ್‌ಗೆ ರಜೆ ದೊರೆತರೆ ಈ ಹಾಡನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.

ಕನ್ನಡದಲ್ಲಿ ನಿತಿನ್‌ ಹಲೋ ಡ್ಯಾಡಿ, ಚಿರಬಾಂಧವ್ಯ, ನಿಶಬ್ಧ, ಮತ್ತಿನಂಥ ಹೆಂಡತಿ ಸೇರಿ ಅನೇಕ ಸಿನಿಮಾಗಳಲ್ಲ ನಟಿಸಿದ್ದರು. ಜೊತೆಗೆ ಕೆಲವೊಂದು ಧಾರಾವಾಹಿಗಳಲ್ಲಿ ಕೂಡಾ ನಿರ್ದೇಶಿಸಿದ್ದರು. ಹರ ಹರ ಮಹಾದೇವ ಧಾರಾವಾಹಿಯ ಕೆಲವೊಂದು ಎಪಿಸೋಡ್‌ ಹಾಗೂ ಒಂದು ತಮಿಳು ಧಾರಾವಾಹಿಯನ್ನು ನಿರ್ದೇಶಿಸಿದ್ದರು. ಹೊಸ ಧಾರಾವಾಹಿಯನ್ನು ನಿರ್ದೇಶಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಆಸೆ ಚಿಗುರುವ ಮುನ್ನವೇ ಬಾಡಿ ಹೋಗಿದೆ. ನೂರಾರು ಕನಸು ಕಂಡಿದ್ದ ಯುವಕ ರೀತಿ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ವಿಷಾದನೀಯ.

ಚಿತ್ರರಂಗಕ್ಕೆ ಕುರಿತಾದ ಮತ್ತಷ್ಟು ಸುದ್ದಿಗಳು

ಮೆರಿ ಪಾಸ್‌ ಮಾ ಹೈ, ದೀವಾರ್‌ ಹಿಂದಿ ಸಿನಿಮಾ ಡೈಲಾಗ್‌ ಹೇಳುವ ಮೂಲಕ ವಿನೋದ್‌ ರಾಜ್‌ನನ್ನು ಹೊಗಳಿದ ಹಿರಿಯ ನಟ ಸುಂದರ್‌ ರಾಜ್‌

ವಿನೋದ್‌ ರಾಜ್‌‌ ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಕಾಳಜಿ ಮಾಡುತ್ತಿದ್ದಾರೆ. ಅವರನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ. ಲೀಲಾವತಿ ಹಾಗೂ ಅವರ ಮಗ ವಿನೋದ್‌ ರಾಜ್‌ ಈ ಸ್ಥಳದಲ್ಲಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಊಟ ನೀಡುತ್ತಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಏಷ್ಯಾ , ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರಿದ ವಿಷ್ಣುವರ್ಧನ್‌ ಕಟೌಟ್‌ ಜಾತ್ರೆ; ವೀರಕಪುತ್ರ ಶ್ರೀನಿವಾಸ್‌

ಕಳೆದ ವರ್ಷ, ಸೆಪ್ಟೆಂಬರ್‌ 18 ರಂದು ಅಭಿಮಾನಿಗಳು ಡಾ. ವಿಷ್ಣುವರ್ಧನ್‌ ಹುಟ್ಟುಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಿಸಿದ್ದರು. ಹಾಗೇ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳು ಕಳೆದ ಹಿನ್ನೆಲೆ 50 ಸೇನಾನಿಗಳು ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್‌ ನೇತೃತ್ವದಲ್ಲಿ ಡಾ. ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ ಕಟೌಟ್‌ ಜಾತ್ರೆ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಸಂಪೂರ್ಣ ಸ್ಟೋರಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point