Sandalwood News: ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್ ಮಾಡಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ; ಇದೇ ತಿಂಗಳು ಸಿನಿಮಾ ತೆರೆಗೆ
ಬಹುತೇಕ ರಂಗಭೂಮಿ ಪ್ರತಿಭೆಗಳು ಸೇರಿ ತಯಾರಿಸಿರುವ, ನಟಿಸಿರುವ ಈ ಸಿನಿಮಾಗೆ ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ.
ಟೀಸರ್, ಹಾಡುಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಸಿನಿಮಾ ಲಾಂಚ್ ಆದ ದಿನದಿಂದಲೂ ಇಲ್ಲಿಯವರೆಗೂ ಚಿತ್ರತಂಡ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಾ ಬಂದಿದೆ. ಇದೀಗ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು ಸಿನಿಪ್ರಿಯರಿಗೆ ಚಿತ್ರ ನೋಡುವ ಕುತೂಹಲ ಹೆಚ್ಚಾಗಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಪುನೀತ್ ರಾಜ್ ಕುಮಾರ್, ರಮ್ಯಾ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಶೈನಿ ಶೆಟ್ಟಿ, ಪವನ್ ಕುಮಾರ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ದೂದ್ ಪೇಡಾ ದಿಗಂತ್ ಕೂಡಾ ಹಾಸ್ಟೆಲ್ ಹುಡುಗರ ಬಳಗ ಸೇರಿದ್ದಾರೆ. ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ.
ಬಹುತೇಕ ರಂಗಭೂಮಿ ಪ್ರತಿಭೆಗಳು ಸೇರಿ ತಯಾರಿಸಿರುವ, ನಟಿಸಿರುವ ಈ ಸಿನಿಮಾಗೆ ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಪ್ರತಿ ಬಾರಿ ಏನಾದರೊಂದು ಯೂನಿಕ್ ಕಾನ್ಸೆಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರು ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನ ಈ ಚಿತ್ರಕ್ಕೆ ಇದೆ. ಜುಲೈ 21ಕ್ಕೆ ರಾಜ್ಯಾದ್ಯಂತ ಹಾಸ್ಟಲ್ ಹುಡುಗರು ತೆರೆ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳು
ಧನುಷ್ ಅಮಲಾ ಪೌಲ್ ಎಸ್‌ಜೆ ಸೂರ್ಯ ಸೇರಿದಂತೆ 14 ತಮಿಳು ನಟ ನಟಿಯರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಮಾಪಕರ ಸಂಘ ತೀರ್ಮಾನ
ಚಿತ್ರರಂಗದ ನಿಯಮಗಳ ಪ್ರಕಾರ, ಯಾವುದೇ ನಟ ಅಥವಾ ನಟಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವರನ್ನು ಸಿನಿಮಾಗಳಲ್ಲಿ ನಿರ್ಬಂಧ ವಿಧಿಸುವುದನ್ನು ರೆಡ್ ಕಾರ್ಡ್ ಎನ್ನಲಾಗುತ್ತದೆ. ಇತ್ತೀಚೆಗೆ ತಮಿಳುನಾಡಿನ ಚೆನ್ನೈನಲ್ಲಿ ತೆನಂಡಾಲ್ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ಇನ್ನಿತರ ನಿರ್ಮಾಪಕರು ಸಭೆ ನಡೆಸಿ ನಟ ಧನುಷ್ ಸೇರಿ ಇನ್ನಿತರ ನಟ-ನಟಿಯರ ವಿರುದ್ಧ ರೆಡ್ ಕಾರ್ಡ್ ಜಾರಿ ಮಾಡಲು ನಿರ್ಧರಿಸಿದೆ. ಪೂರ್ತಿ ಸ್ಟೋರಿಗೆ ಈ ಲಿಂಕ್ ಕ್ಲಿಕ್ ಮಾಡಿ
ನಟ ಸೂರಜ್‌ಗೆ ಮೊಣಕಾಲು ತೆಗೆದ ವಿಚಾರವನ್ನು ಅವರಿಗೆ 4 ದಿನಗಳ ನಂತರ ಹೇಳಲಾಯ್ತು; ಮಣಿಪಾಲ್ ಆಸ್ಪತ್ರೆ ವೈದ್ಯರು
ಅಪಘಾತದಲ್ಲಿ ಕಾಲಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಸೂರಜ್ ಅವರ ಕಾಲನ್ನು ತೆಗೆಯಬೇಕಾಯ್ತು ಎಂದು ಆಸ್ಪತ್ರೆ ವೈದ್ಯ ಅಜಯ್ ಹೆಗಡೆ ಮಾಹಿತಿ ನೀಡಿದ್ದರು. ಅಲ್ಲದೆ ಮೊಣಕಾಲು ತೆಗೆದ ವಿಚಾರವನ್ನು ಅವರಿಗೆ ನಾಲ್ಕು ದಿನಗಳ ನಂತರ ಹೇಳಲಾಯ್ತು ಎಂದು ಅಪ್‌ಡೇಟ್ ನೀಡಿದ್ದಾರೆ. ಸೂರಜ್ ಬಗ್ಗೆ ಸಂಪೂರ್ಣ ಮಾಹಿತಿಗೆ ಈ ಲಿಂಕ್ ಒತ್ತಿ.