‘ದರ್ಶನ್‌ಗೆ ದೂರದಲ್ಲಿ ಇರುವ ವೀಕ್ಷಕ ನಾನು! ಒಳ್ಳೆಯದನ್ನೇ ಬಯಸ್ತೀನಿ ವಿನಃ ಕೆಟ್ಟದ್ದಲ್ಲ’; ‘ಆಪ್ತಮಿತ್ರ’ನ ಬಗ್ಗೆ ಸುದೀಪ್‌ ಆಡಿದ ಮಾತುಗಳಿವು
ಕನ್ನಡ ಸುದ್ದಿ  /  ಮನರಂಜನೆ  /  ‘ದರ್ಶನ್‌ಗೆ ದೂರದಲ್ಲಿ ಇರುವ ವೀಕ್ಷಕ ನಾನು! ಒಳ್ಳೆಯದನ್ನೇ ಬಯಸ್ತೀನಿ ವಿನಃ ಕೆಟ್ಟದ್ದಲ್ಲ’; ‘ಆಪ್ತಮಿತ್ರ’ನ ಬಗ್ಗೆ ಸುದೀಪ್‌ ಆಡಿದ ಮಾತುಗಳಿವು

‘ದರ್ಶನ್‌ಗೆ ದೂರದಲ್ಲಿ ಇರುವ ವೀಕ್ಷಕ ನಾನು! ಒಳ್ಳೆಯದನ್ನೇ ಬಯಸ್ತೀನಿ ವಿನಃ ಕೆಟ್ಟದ್ದಲ್ಲ’; ‘ಆಪ್ತಮಿತ್ರ’ನ ಬಗ್ಗೆ ಸುದೀಪ್‌ ಆಡಿದ ಮಾತುಗಳಿವು

Kichcha Sudeep on Darshan Thoogudeepa: ಕಿಚ್ಚ ಸುದೀಪ್‌, ನಟ ದರ್ಶನ್‌ ತೂಗುದೀಪ ಅವರ ಜತೆಗಿನ ಈ ಹಿಂದಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ಘಟನಾವಳಿಗಳ ಬಗ್ಗೆಯೂ ಮಾತನಾಡಿದ್ದಾರೆ.

ಒಂದು ಕಾಲದ ಆಪ್ತಮಿತ್ರ, ನಟ ದರ್ಶನ್‌ ಬಗ್ಗೆ ಸುದೀಪ್‌ ಆಡಿದ ಮಾತುಗಳಿವು.
ಒಂದು ಕಾಲದ ಆಪ್ತಮಿತ್ರ, ನಟ ದರ್ಶನ್‌ ಬಗ್ಗೆ ಸುದೀಪ್‌ ಆಡಿದ ಮಾತುಗಳಿವು.

Kichcha Sudeep on Darshan: ನಟ ದರ್ಶನ್‌, ರೇಣುಕಾಸ್ವಾಮಿ ಕೊಲೆ ಆರೋಪದಡಿ ಜೈಲು ಸೇರಿದ್ದಾರೆ. ಇನ್ನೇನು ಅವರ ಬಂಧನದ ಅವಧಿಯೂ ಮುಕ್ತಾಯವಾಗಿದ್ದು, ಈಗಾಗಲೇ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಕೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಅವರ ಆಗಮನಕ್ಕೆ ಅವರ ಫ್ಯಾನ್ಸ್‌ ಕಾಯುತ್ತಿದ್ದಾರೆ. ಮತ್ತೊಂದು ಕಡೆ ಕೆಲ ಸೆಲೆಬ್ರಿಟಿಗಳು ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಿದರೆ, ಇನ್ನು ಕೆಲವರು ಮಾತನಾಡಲು ಹಿಂಜರಿದಿದ್ದಾರೆ. ಇದೆಲ್ಲ ಬೆಳವಣಿಗೆಯ ನಡುವೆ, ಇದೀಗ ಕಿಚ್ಚ ಸುದೀಪ್‌ ದರ್ಶನ್‌ ಜತೆಗಿನ ಈ ಹಿಂದಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ಘಟನೆಯ ಬಗ್ಗೆಯೂ ಮಾತನಾಡಿದ್ದಾರೆ.

ಸ್ನೇಹಿತರು ಮಾಡುವ ತಪ್ಪಿಗೆ ತಲೆ ಬಾಗಬೇಕಾಗುತ್ತದೆ

"ಎಲ್ಲ ಮಾಡಿದ್ದೇವೆ. ಒಬ್ಬ ಸ್ನೇಹಿತ ಎಂದರೆ ಅಲ್ಲಿ ಎಲ್ಲವೂ ನಿಶ್ಕಳಂಕ ಆಗಿರಬೇಕಾಗುತ್ತದೆ. ನಾನು ದೊಡ್ಡವನು, ನೀನು ದೊಡ್ಡವನು ಅನ್ನೋ ಮಾತು ಬರಲ್ಲ. ಕೆಲವೊಮ್ಮೆ ನಮ್ಮ ಸ್ನೇಹಿತರು ಮಾಡುವ ತಪ್ಪಿಗೆ ತಲೆ ಬಾಗಬೇಕಾಗುತ್ತದೆ. ಸಾಕಷ್ಟು ಮಾಡಿದ್ದೇವೆ. ಅನಾವಶ್ಯಕವಾಗಿ ಏನೆನೋ ನಡೆದಾಗ, ದೂರ ಇರೋದೇ ಒಳ್ಳೆಯದು ಅನಿಸುತ್ತೆ. ನಾನು ಇಲ್ಲಿಯವರೆಗೂ ಒಳ್ಳೆಯದೇ ಮಾಡಿದ್ದೇನೋ ಹೊರತು, ಕೆಟ್ಟದ್ದು ಬಯಸಿಲ್ಲ. ಈ ವರೆಗೂ ನಾನು ಯಾವುದೇ ಸಂದರ್ಶನದಲ್ಲಿ ಕೂತು ಕೆಟ್ಟದಾಗಿ ಮಾತನಾಡಿಲ್ಲ. ಆ ಥರ ನಾನು ಯಾವತ್ತೂ ಮಾತನಾಡಲ್ಲ" ಎಂದಿದ್ದಾರೆ ಸುದೀಪ್.

ಯಾರದೋ ಭುಜದ ಮೇಲೆ ಗನ್ ಇಟ್ಟು ಫೈರ್‌ ಮಾಡೋನು ನಾನಲ್ಲ

"ಹಾಗಂತ ನನಗೆ ನೋವುಗಳು ಇಲ್ಲ ಅಂತಲ್ಲ. ಎಲ್ಲವೂ ಒಳ್ಳೆಯದೇ ನಡೆಯುತ್ತಿರುವಾಗ ದೂರ ಯಾಕಾಗ್ತೀವಿ? ಅಲ್ವಾ. ಯಾರದೋ ಭುಜದ ಮೇಲೆ ಗನ್ ಇಟ್ಟು ಫೈರ್‌ ಮಾಡೋ ವ್ಯಕ್ತಿ ನಾನಲ್ಲ. ಅಂಥ ಕೆಲವು ಆಪಾದನೆಗಳೂ ನನ್ನ ಮೇಲೆ ಬಂತು. ಏನೇನೋ ಹೇಳಿದ್ರು. ಆದರೆ, ನಾನು ಎಲ್ಲೂ ಯಾವುದೇ ಸ್ಟೇಟ್‌ಮೆಂಟ್‌ ಮಾಡಲಿಲ್ಲ. ಕೆಲವೊಂದಷ್ಟನ್ನು ನಾವು ಮೆಂಟೇನ್‌ ಮಾಡಬೇಕಾಗುತ್ತದೆ. ಅದರಲ್ಲಿ ಸ್ನೇಹವೂ ಒಂದು" ಎಂದಿದ್ದಾರೆ.

"ಈ ಹಿಂದೆ ನಾನು ಸಂದರ್ಶನವೊಂದರಲ್ಲಿ ಹೇಳಿದ್ದೆ. ಯಾರಿಗೂ ನಾವು ಕೊಡೋ ಸ್ಥಾನವನ್ನು, ನಾವು ಯಾವತ್ತೂ ಕಿತ್ತುಕೊಳ್ಳಲ್ಲ. ಅದನ್ನು ಕಿತ್ತುಕೊಂಡರೆ ನಾವು ನಾವಾಗಿರಲ್ಲ. ಹಾಗಂತ ನಾವು ಅವರಿಂದ ಅದನ್ನೇ ಬಯಸುವುದಿಲ್ಲ. ಹಾಗಾಗಿ ನಾನು ಹೊರಬಂದೆ" ಎಂದು ಸುವರ್ಣ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ದರ್ಶನ್‌ ಬಗ್ಗೆ ಮಾತನಾಡಿದ್ದಾರೆ ಕಿಚ್ಚ ಸುದೀಪ್‌.

ದರ್ಶನ್‌ ಕೊಲೆ ಪ್ರಕರಣದ ಬಗ್ಗೆ ಸುದೀಪ್‌ ಏನಂದ್ರು?

ಈ ಮಟ್ಟಿಗೆ ಇರಲಿಕ್ಕಿಲ್ಲ ಎಂದು ನನ್ನ ತಲೆಗೆ ಬಂತು. ಸುಳ್ಳು ಸುದ್ದಿ ಇರಬಹುದೆಂದು ಅಂದುಕೊಂಡಿದ್ದೆ. ಒಂದಷ್ಟು ಅನುಮಾನಗಳು ಬಂದವು. ಯಾಕೆಂದರೆ, ಅಷ್ಟು ದೊಡ್ಡ ವ್ಯಕ್ತಿಯನ್ನ ಪೊಲೀಸರು ಅಷ್ಟು ಸುಲಭಕ್ಕೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಕೆಲವು ದಿನ ನಮಗೆ ಮೋಡ ಕವಿದ ವಾತಾವರಣ ಆಗಿತ್ತು. ಏನ್‌ ಸತ್ಯ, ಏನ್‌ ಸುಳ್ಳು ಎಂಬ ಗೊಂದಲದಲ್ಲಿದ್ದೆ. ಯಾರನ್ನು ಎಷ್ಟು ಇಷ್ಟಪಡ್ತೀರಿ, ಎಷ್ಟು ದ್ವೇಷ ಮಾಡ್ತೀರಿ ಇದು ವೈಯಕ್ತಿಕ. ಫೈಟ್‌ ಸಹ ಪರ್ಸನಲ್. ಕಾಂಪಿಟೇಷನ್‌ ಸಹ ವೈಯಕ್ತಿಕ. ಆ ವ್ಯಕ್ತಿಗೆ ತೊಂದರೆ ಆಗ್ತಿದೆ ಅಂದಾಗ ಖುಷಿ ಪಡೋ ವ್ಯಕ್ತಿ ನಾನಲ್ಲ.

ದರ್ಶನ್‌ಗೆ ಒಳ್ಳೆಯದನ್ನೇ ಬಯಸ್ತಾ ಬಂದಿದ್ದೀನಿ..

"ಎಲ್ಲೋ ಓಡಾಡಿಕೊಂಡು ಖುಷಿಯಾಗಿದ್ದಾರೆ ಅಂದರೆ, ನಾವೂ ಸಹ ನಗಾಡ್ತಾ ಇರ್ತೀವಿ. ತೊಂದರೆಗಳಾದಾ, ಒಬ್ಬ ಮನುಷ್ಯನಾಗಿ ನಮಗೆ ನೋವಾಗುವುದು ಸಹಜ. ದರ್ಶನ್‌ಗೆ ದೂರದಲ್ಲಿ ಇರುವ ವೀಕ್ಷಕ ನಾನು. ಒಳ್ಳೆಯದನ್ನು ಬಯಸುತ್ತೇನೆ ವಿನಃ ಕೆಟ್ಟದನ್ನು ಬಯಸಲ್ಲ. ನಾನು ಮತ್ತು ದರ್ಶನ್‌ ದೂರವಾಗಿ ತುಂಬ ವರ್ಷಗಳಾಯ್ತು. ನಾವಿಬ್ಬರೂ ತುಂಬ ಬೇರೆ ಬೇರೆ. ಮನುಷ್ಯತ್ವ ಅನ್ನೋದು ಒಂದಿದೆ. ಗೌರವಿಸಿದ್ದಕ್ಕೆ ಬಿಟ್ಟಿದ್ದು. ಅವರ ಬಗ್ಗೆ ಗೌರವ ಇದೆ. ಅದನ್ನು ಬಿಟ್ಟರೆ ಅವರ ವೈಯಕ್ತಿಕ ಜೀವನದಿಂದ ನಾನು ದೂರವಾಗಿ ತುಂಬ ವರ್ಷಗಳೇ ಕಳೆದಿವೆ. ಆ ಬಗ್ಗೆ ನಾನೇನೂ ಹೇಳುವುದಿಲ್ಲ" ಎಂದು ಮಾತು ಮುಗಿಸಿದ್ದಾರೆ ಸುದೀಪ್.

 

Whats_app_banner