ನನಗಂತೂ ಜೈಲೂಟ ತುಂಬ ಇಷ್ಟವಾಯ್ತು, ದರ್ಶನ್‌ ಅವ್ರಿಗೆ ಯಾಕೆ ಕಷ್ಟವಾಗ್ತಿದೆಯೋ ಗೊತ್ತಿಲ್ಲ! ಚೇತನ್‌ ಅಹಿಂಸಾ
ಕನ್ನಡ ಸುದ್ದಿ  /  ಮನರಂಜನೆ  /  ನನಗಂತೂ ಜೈಲೂಟ ತುಂಬ ಇಷ್ಟವಾಯ್ತು, ದರ್ಶನ್‌ ಅವ್ರಿಗೆ ಯಾಕೆ ಕಷ್ಟವಾಗ್ತಿದೆಯೋ ಗೊತ್ತಿಲ್ಲ! ಚೇತನ್‌ ಅಹಿಂಸಾ

ನನಗಂತೂ ಜೈಲೂಟ ತುಂಬ ಇಷ್ಟವಾಯ್ತು, ದರ್ಶನ್‌ ಅವ್ರಿಗೆ ಯಾಕೆ ಕಷ್ಟವಾಗ್ತಿದೆಯೋ ಗೊತ್ತಿಲ್ಲ! ಚೇತನ್‌ ಅಹಿಂಸಾ

ಒಂದಷ್ಟು ವಿಚಾರಗಳಿಂದ ಈ ಹಿಂದೆ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ನಟ ಚೇತನ್‌ ಅಹಿಂಸಾ, ಇದೀಗ ಆ ಜೈಲಿನ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲಿನ ಊಟದ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ.

ನನಗಂತೂ ಜೈಲೂಟ ತುಂಬ ಇಷ್ಟವಾಯ್ತು, ದರ್ಶನ್‌ ಅವ್ರಿಗೆ ಯಾಕೆ ಕಷ್ಟವಾಗ್ತಿದೆಯೋ ಗೊತ್ತಿಲ್ಲ! ಚೇತನ್‌ ಅಹಿಂಸಾ
ನನಗಂತೂ ಜೈಲೂಟ ತುಂಬ ಇಷ್ಟವಾಯ್ತು, ದರ್ಶನ್‌ ಅವ್ರಿಗೆ ಯಾಕೆ ಕಷ್ಟವಾಗ್ತಿದೆಯೋ ಗೊತ್ತಿಲ್ಲ! ಚೇತನ್‌ ಅಹಿಂಸಾ

Chetan Ahimsa on Darshan Case: ನಟ ಚೇತನ್‌ ಇತ್ತೀಚಿನ ಕೆಲ ವರ್ಷಗಳಿಂದ ನಟನೆಯಿಂದ ದೂರವೇ ಉಳಿದಿದ್ದಾರೆ. ಸಿನಿಮಾ ಹೊರತುಪಡಿಸಿ ಸಾಮಾಜಿಕ ಹೋರಾಟಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸರ್ಕಾರಗಳ ವಿರುದ್ಧ, ಸಮಾಜದಲ್ಲಿ ಘಟಿಸುವ ಏರಿಳಿತಗಳ ಬಗ್ಗೆ, ಸಿನಿಮಾರಂಗದಲ್ಲಿನ ಬದಲಾವಣೆಗಳ ಬಗ್ಗೆಯೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅವರು ಹಂಚಿಕೊಳ್ಳುತ್ತಲಿರುತ್ತಾರೆ. ಈ ಹಿಂದೆ ನಟ ದರ್ಶನ್‌ ಕೊಲೆ ಪ್ರಕರಣದ ಬಗ್ಗೆಯೂ ಚೇತನ್‌ ಮಾತನಾಡಿದ್ದರು. ಇದೀಗ ತಮ್ಮ ಜೈಲುವಾಸದ ಬಗ್ಗೆ ಹೇಳಿಕೊಂಡಿದ್ದಾರೆ.

ಜೈಲಿನ ದಿನಗಳನ್ನು ನೆನೆದ ಚೇತನ್‌ ಅಹಿಂಸಾ

ನಟ ದರ್ಶನ್‌ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ನಡುವೆ ಜೈಲಿನಲ್ಲಿನ ಊಟದ ವಿಚಾರವಾಗಿ ಕೊಂಚ ಬೇಸರದಲ್ಲಿದ್ದಾರೆ. ಮನೆಯ ಊಟ ಕಳಿಸಿಕೊಡಿ ಎಂದು ಮನವಿ ಮಾಡಿದರೂ, ಕೋರ್ಟ್‌ ಕಡೆಯಿಂದ ಯಾವುದೇ ಸಹಮತಿ ಸಿಕ್ಕಿಲ್ಲ. ಹಾಗಾಗಿ ಸದ್ಯ ಅವರಿಗೆ ಜೈಲೂಟವೇ ಗತಿ. ಈ ನಡುವೆ ಇದೇ ದರ್ಶನ್‌ ಪ್ರಕರಣದ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ. ತಮ್ಮ ಜೈಲಿನ ದಿನಗಳನ್ನು ನೆನೆದು, ಅಲ್ಲಿನ ಊಟದ ಬಗ್ಗೆಯೂ ಮಾತನಾಡಿದ್ದಾರೆ.

ಸಿನಿಮಾರಂಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ..

"ಅವರು ಇನ್ನೂ ಆರೋಪಿ. ಕನ್ನಡ ಚಿತ್ರರಂಗದಲ್ಲಿ ಇದೊಂದು ಕಪ್ಪುಚುಕ್ಕೆ. ಇದು ದುಃಖದ ವಿಚಾರವೂ ಹೌದು. ಸಿನಿಮಾರಂಗದಲ್ಲಿ ಇಷ್ಟೊಂದು ಹೆಸರು ಮಾಡಿರುವವರು, ಇಷ್ಟೊಂದು ಪ್ರಭಾವಿಗಳು, ಸಮಾಜದಲ್ಲಿ ಹೆಸರು ಗಳಿಸಿರುವವರು, ಇಂಥ ಒಂದು ಕೆಲಸವನ್ನು ಮಾಡಬಹುದಾ? ಅನ್ನೋ ಪ್ರಶ್ನೆಗಳಿವೆ. ಅವರೇ ಕೊಲೆ ಮಾಡಿದ್ದಾರೆ, ಮಾಡಿಲ್ಲ ಅಂತ ಹೇಳೋಕೆ ನಾನು ಕಾನೂನಲ್ಲ. ಆರೋಪಗಳು ಮಾತ್ರ ಗಂಭೀರವಾಗಿವೆ. ಈ ಸ್ಟಾರ್‌ ಕಲ್ಚರ್‌ನಿಂದ ಇಷ್ಟೆಲ್ಲ ಆಗ್ತಿದೆ. ಸಿನಿಮಾರಂಗ ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದಿದ್ದಾರೆ.

ಈ ಹಿಂದೆ ಕೆಲವು ಆಕ್ಷೇಪಾರ್ಹ ಹೇಳಿಕೆ ನೀಡಿದ ಬೆನ್ನಲ್ಲೇ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅವರು ಒಟ್ಟು ಎರಡು ಬಾರಿ ಜೈಲಿಗೆ ಹೋಗಿದ್ದಾರೆ. 2022ರಲ್ಲಿ ಒಂದು ವಾರ ಜೈಲಿನಲ್ಲಿ ಕಳೆದರೆ, 2023ರಲ್ಲಿ ನಾಲ್ಕು ದಿನ ಜೈಲಿನಲ್ಲಿದ್ದರು. ಮೊದಲ ಸಲ ಹೋದಾಗ ಕೇವಲ ಆರು ಮಂದಿ ಇರುವ ಬ್ಯಾರೆಕ್‌ನಲ್ಲಿ ಅವರನ್ನು ಇರಿಸಲಾಗಿತ್ತು. ಕಳೆದ ವರ್ಷ ಹೋದಾಗ ಬರೋಬ್ಬರಿ 40 ಜನರಿರುವ ಬ್ಯಾರೆಕ್‌ಗೆ ಹಾಕಿದ್ದರು. ಟಾಯ್ಲೆಟ್‌ ಅಲ್ಲಿಯೇ ಇತ್ತು. ಅಲ್ಲಿಯೇ ಮಲಗುವುದು. ಒಂಚೂರು ಕಷ್ಟ ಆಯ್ತು ಎಂದು ಅವರು ಹೇಳಿದ್ದಾರೆ.

ಜೈಲಿನ ಪುಳಿಯೊಗರೆ ತುಂಬ ಇಷ್ಟವಾಯ್ತು..

"2022ರಲ್ಲಿಏಳು ದಿನ ಜೈಲಿಗೆ ಹೋದೆ. ಅದಾಗಿ ಕಳೆದ ವರ್ಷ ನಾಲ್ಕು ದಿನ ಜೈಲಿಗೆ ಹೋಗಿದ್ದೆ. ಮೊದಲ ಬಾರಿ ನಾನು ಜೈಲಿಗೆ ಹೋದಾಗ 6 ಜನರಿರುವ ಸೆಲ್ ನಲ್ಲಿ ಹಾಕಿದ್ರು. ಎರಡನೇ ಸಲ ಹೋದಾಗ 40 ಜನರಿರುವ ಸೆಲ್‌ಗೆ ನನ್ನನ್ನು ಹಾಕಿದ್ರು. ಆಗ ನನಗೆ ತುಂಬ ಕಷ್ಟ ಆಯ್ತು. ಆದರೆ, ಜೈಲಿನಲ್ಲಿನ ಊಟ ತುಂಬ ಇಷ್ಟ ಆಯ್ತು. ಗಟ್ಟಿ ಮುದ್ದೆ ಇದ್ದರೂ ನಾನು ಅದನ್ನು ಅಡ್ಜೆಸ್ಟ್‌ ಮಾಡಿಕೊಂಡೆ.

ನನ್ನ 39ನೇ ಹುಟ್ಟುಹಬ್ಬವನ್ನು ನಾನು ಜೈಲಿನಲ್ಲಿ ಆಚರಿಸಿಕೊಂಡೆ. ಬರ್ತ್‌ಡೇ ದಿನ ಆವತ್ತು ಜೈಲಲ್ಲಿ ಪುಳಿಯೊಗರೆ ಮಾಡಿದ್ರು. ಅದು ಬಹಳ ಚೆನ್ನಾಗಿತ್ತು. ಜೈಲೂಟ ನನಗೆ ಯಾವತ್ತೂ ಸಮಸ್ಯೆ ಅಂತ ಅನಿಸಲೇ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ರೂಢಿ ಇರುತ್ತೆ. ಯಾವುದೇ ಇನ್‌ಫ್ಲೂಯೆನ್ಸ್‌ ಇಲ್ಲದೆ ಜೈಲಿನೊಳಕ್ಕೆ ಹೋದರೆ ಕಷ್ಟ ಆಗುವ ಸಾಧ್ಯತೆ ಇದ್ದೇ ಇರುತ್ತೆ" ಎಂದಿದ್ದಾರೆ ಚೇತನ್‌ ಅಹಿಂಸಾ.

Whats_app_banner