Darshan: ʻಹಸು ಸಾಕಿಕೊಂಡು ಇಲ್ಲೇ ಇರುತ್ತೇನೆ ಹೊರತು, ಆ ಕೆಲಸ ಮಾತ್ರ ಖಂಡಿತ ಮಾಡಲ್ಲʼ; ನಟ ದರ್ಶನ್‌
ಕನ್ನಡ ಸುದ್ದಿ  /  ಮನರಂಜನೆ  /  Darshan: ʻಹಸು ಸಾಕಿಕೊಂಡು ಇಲ್ಲೇ ಇರುತ್ತೇನೆ ಹೊರತು, ಆ ಕೆಲಸ ಮಾತ್ರ ಖಂಡಿತ ಮಾಡಲ್ಲʼ; ನಟ ದರ್ಶನ್‌

Darshan: ʻಹಸು ಸಾಕಿಕೊಂಡು ಇಲ್ಲೇ ಇರುತ್ತೇನೆ ಹೊರತು, ಆ ಕೆಲಸ ಮಾತ್ರ ಖಂಡಿತ ಮಾಡಲ್ಲʼ; ನಟ ದರ್ಶನ್‌

ವಾಮನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಕೋರುವುದರ ಜೊತೆಗೆ, ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ ನಟ ದರ್ಶನ್‌. ಕನ್ನಡ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ.

ʻಹಸು ಸಾಕಿಕೊಂಡು ಇಲ್ಲೇ ಇರುತ್ತೇನೆ ಹೊರತು, ಆ ಕೆಲಸ ಮಾತ್ರ ಖಂಡಿತ ಮಾಡಲ್ಲʼ; ನಟ ದರ್ಶನ್‌
ʻಹಸು ಸಾಕಿಕೊಂಡು ಇಲ್ಲೇ ಇರುತ್ತೇನೆ ಹೊರತು, ಆ ಕೆಲಸ ಮಾತ್ರ ಖಂಡಿತ ಮಾಡಲ್ಲʼ; ನಟ ದರ್ಶನ್‌

Darshan on Kannada Films: ಪ್ರೇಕ್ಷಕರ ಆಶೀರ್ವಾದದಿಂದ ತೋಟ ಮಾಡಿಕೊಂಡು ಇರುತ್ತೇವೆ. ಅಚ್ಚುಕಟ್ಟಾಗಿ ಹಸು ಸಾಕಿಕೊಂಡು ಅಲ್ಲೇ ಇರುತ್ತೇವೆ. ಆದರೆ, ಯಾವತ್ತಿದ್ದರೂ ನಾವು ಕನ್ನಡಕ್ಕೇ ಸಿನಿಮಾ ಮಾಡೋದು. ಕನ್ನಡ ಸಿನಿಮಾನೇ ಮಾಡೋದು ಎಂದು ದರ್ಶನ್ ‍ಹೇಳಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಧನ್ವೀರ್ ಅಭಿನಯದ ‘ವಾಮನ’ ಚಿತ್ರದ ಟ್ರೇಲರನ್ನು ನಟ ದರ್ಶನ್‍ ಗುರುವಾರ ಬಿಡುಗಡೆ ಮಾಡಬೇಕಿತ್ತು. ಆದರೆ, ರಾಜಸ್ತಾನದಲ್ಲಿ ‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವುದರಿಂದ, ದರ್ಶನ್‍ ಬರಲಾಗಲಿಲ್ಲ. ಅದರ ಬದಲು, ಟ್ರೇಲರ್ ಬಿಡುಗಡೆ ಮಾಡಿ ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಕೋರುವುದರ ಜೊತೆಗೆ, ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್‌ ಹೇಳಿದ್ದೇನು?

‘ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ. ಬಹಳಷ್ಟು ಜನ ಬೇರೆಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಕೆಲವರು ಮಾತ್ರ ನಾವು ಇಲ್ಲಿಗೆ ಸೀಮಿತ ಅಂತ ಕನ್ನಡದಲ್ಲಿ ಚಿತ್ರಗಳನ್ನು ಮಾಡುತ್ತಿದ್ದೇವೆ. ಕನ್ನಡ ಚಿತ್ರಗಳನ್ನು ನೋಡದಿದ್ದರೆ, ಇಲ್ಲಿಂದ ಬಿಟ್ಟು ಹೋಗುತ್ತೇವೆ ಎಂದರ್ಥವಲ್ಲ. ನಿಮ್ಮ ಆಶೀರ್ವಾದದಿಂದ ತೋಟ ಮಾಡಿಕೊಂಡು ಇರುತ್ತೇವೆ. ಅಚ್ಚುಕಟ್ಟಾಗಿ ಹಸು ಸಾಕಿಕೊಂಡು ಇಲ್ಲೇ ಇರುತ್ತೇವೆ. ಆದರೆ, ಯಾವತ್ತಿದ್ದರೂ ನಾವು ಕನ್ನಡಕ್ಕೇ ಸಿನಿಮಾ ಮಾಡೋದು. ಕನ್ನಡ ಸಿನಿಮಾನೇ ಮಾಡುವುದು.

ಏಕೆಂದರೆ, ಇದು ಬಿಟ್ಟರೆ ನಮಗೆ ಬೇರೇನೂ ಗೊತ್ತಿಲ್ಲ. ನಾವು ಎಲ್ಲರೂ ನಂಬಿಕೊಂಡು ಬಂದಿರುವುದು ಕನ್ನಡ ಚಿತ್ರರಂಗವನ್ನು ಮತ್ತು ಕನ್ನಡ ಪ್ರೇಕ್ಷಕರನ್ನು. ಚಿತ್ರಮಂದಿರಗಳು ನಂಬಿಕೊಂಡಿರುವುದು ಸಹ ಕನ್ನಡ ಚಿತ್ರಗಳನ್ನು. ಇದೊಂಥರಾ ಚೈನ್‍ ಲಿಂಕ್‍. ಹುಳವನ್ನು ಕಪ್ಪೆ ತಿನ್ನುತ್ತದೆ. ಕಪ್ಪೆಯನ್ನು ಹಾವು ತಿನ್ನುತ್ತದೆ. ಹಾವನ್ನು ಹದ್ದು ತಿನ್ನುತ್ತದೆ. ಹದ್ದು ಕೆಳಗೆ ಬಿದ್ದಾಗ ಅದನ್ನು ಹುಳವೇ ತಿನ್ನುವುದು. ಅದೇ ತರಹ ಚಿತ್ರಮಂದಿರದವರು ನಮ್ಮನ್ನು ನಂಬಿಕೊಂಡಿರುತ್ತಾರೆ. ನಾವು ಅವರನ್ನು ನಂಬಿರುತ್ತೇವೆ. ಇದೆಲ್ಲವೂ ಒಂದಕ್ಕೊಂದು ಅವಲಂಬಿತವಾಗಿರುತ್ತವೆ. ಹಾಗಾಗಿ, ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ’ ಎಂದಿದ್ದಾರೆ.

ಇನ್ನು, ಧನ್ವೀರ್ ಗೌಡ ಕುರಿತು ಮಾತನಾಡಿರುವ ದರ್ಶನ್‍, ‘ಅವರು ಇದುವರೆಗೂ ನಾಲ್ಕು ಚಿತ್ರಗಳನ್ನು ಮಾಡಿದ್ದಾರೆ. ನಾಲ್ಕೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಯಾವುದೇ ಚಿತ್ರದಲ್ಲೂ ಕಥೆ ರಿಪೀಟ್‍ ಇಲ್ಲ. ವಾಮನ ಇದೊಂದು ತಾಯಿ ಸೆಂಟಿಮೆಂಟ್‍ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ಒಬ್ಬ ಮನುಷ್ಯ ಹೇಗೆ ಬದಲಾಗುತ್ತಾನೆ, ಹೇಗೆಲ್ಲಾ ಬದಲಾಗುತ್ತಾನೆ ಎನ್ನುವುದು ಚಿತ್ರದ ಕಥೆ. ಈ ಚಿತ್ರದ ‘ಮುದ್ದು ರಾಕ್ಷಸಿ’ ನನಗೆ ಬಹಳ ಇಷ್ಟವಾದ ಹಾಡು. ನನ್ನ ಹೆಂಡತಿ ಕಯ್ಯಾ ಕಯ್ಯಾ ಅಂದರೆ, ಮುದ್ದು ರಾಕ್ಷಸಿ ಎಂದು ಅವಳಿಗೆ ರೇಗಿಸುತ್ತಿರುತ್ತೇನೆ. ಇದೊಂದು ಮನರಂಜನಾತ್ಮಕ ಚಿತ್ರ. ಚಿತ್ರ ನೋಡಿ ಹರಸಿ, ಪ್ರೋತ್ಸಾಹಿಸಿ’ ಎಂದಿದ್ದಾರೆ.

ಚೇತನ್‌ ಗೌಡ ನಿರ್ಮಿಸಿರುವ ‘ವಾಮನ’ ಚಿತ್ರಕ್ಕೆ ಶಂಕರ್ ರಾಮನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಧನ್ವೀರ್ ಮತ್ತು ರೀಷ್ಮಾ ಜೊತೆಗೆ ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೊಚ್‌ ಸುಧಿ, ಭೂಷಣ್‌ ಮುಂತಾದವರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಈ ಸಿನಿಮಾ ಏಪ್ರಿಲ್‌ 10ರಂದು ತೆರೆಗೆ ಬರಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner